2018ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಕುರಿತು ಸುಳಿವು ನೀಡಿದ ಟಾಟಾ ಮೋಟಾರ್ಸ್

ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆ ಕಾರುಗಳ ಬೆಲೆಯನ್ನು ಏರಿಕೆ ಮಾಡುವ ಕುರಿತು ಟಾಟಾ ಮೋಟಾರ್ಸ್ ಸುಳಿವು ನೀಡಿದ್ದು, 2018ರ ಜನವರಿ 1ರಿಂದಲೇ ಹೊಸ ಬೆಲೆಗಳನ್ನು ಪರಿಷ್ಕಣೆಯಾಗುವ ಸಾಧ್ಯತೆಗಳಿವೆ.

By Praveen

ಬಲ್ಲ ಮೂಲಗಳ ಪ್ರಕಾರ ಜನವರಿ 1ರಿಂದಲೇ ಎಲ್ಲ ಕಾರುಗಳ ಬೆಲೆಗಳು ಪರಿಷ್ಕರಣೆಗೊಳ್ಳಲಿದ್ದು, ಪ್ರವೇಶ ಮಟ್ಟದ ಕಾರುಗಳು ರೂ. 25 ಸಾವಿರ ಹಾಗೂ ಉನ್ನತ ಮಟ್ಟದ ಕಾರುಗಳು ರೂ.60 ಸಾವಿರ ಹೆಚ್ಚುವರಿ ಬೆಲೆಯನ್ನು ಪಡೆದುಕೊಳ್ಳಲಿವೆ ಎನ್ನಲಾಗಿದೆ.

2018ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಕುರಿತು ಸುಳಿವು ನೀಡಿದ ಟಾಟಾ ಮೋಟಾರ್ಸ್

ಹೀಗಾಗಿ ಟಾಟಾ ಮೋಟಾರ್ಸ್ ಉತ್ಪಾದಿತ ನ್ಯಾನೋ, ಟಿಗೋರ್, ಟಿಯಾಗೋ, ಇಂಡಿಕಾ, ಬೊಲ್ಟ್, ಇಂಡಿಗೋ, ಜೆಸ್ಟ್, ಸುಮೊ ಗೊಲ್ಡ್, ಸಫಾರಿ ಸ್ಟಾರ್ಮ್, ನೆಕ್ಸನ್ ಮತ್ತು ಹೆಕ್ಸಾ ಕಾರುಗಳ ಬೆಲೆಗಳು ದುಬಾರಿಯಾಗಲಿದ್ದು, ಉತ್ಪಾದನಾ ವೆಚ್ಚ ಹೆಚ್ಚಳ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಟಾಟಾ ಹೇಳಿಕೊಂಡಿದೆ.

Recommended Video

TVS Apache RR 310 Launched In India - DriveSpark
2018ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಕುರಿತು ಸುಳಿವು ನೀಡಿದ ಟಾಟಾ ಮೋಟಾರ್ಸ್

ಈ ಬಗ್ಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಪ್ರಯಾಣಿಕ ಕಾರುಗಳ ವಿಭಾಗದ ಅಧ್ಯಕ್ಷ ಮಾಯಾಂಕ್ ಪರೀಕ್ "ಬದಲಾದ ಮಾರುಕಟ್ಟೆ ಸನ್ನಿವೇಶ ಮತ್ತು ಹೆಚ್ಚುತ್ತಿರುವ ಬಿಡಿಭಾಗಗಳ ಉಪಯೋಗ ಮತ್ತು ಸರಕು ವೆಚ್ಚವನ್ನು ಆಧರಿಸಿ ಬೆಲೆ ಹೆಚ್ಚಳ ಮಾಡುತ್ತಿದ್ದೇವೆ" ಎಂದಿದ್ದಾರೆ.

2018ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಕುರಿತು ಸುಳಿವು ನೀಡಿದ ಟಾಟಾ ಮೋಟಾರ್ಸ್

ಆದ್ರೆ ಟಾಟಾ ಉತ್ಪಾದಿತ ಹೊಸ ಉತ್ಪನ್ನಗಳಾದ ಟಿಯಾಗೋ ಮತ್ತು ನೆಕ್ಸನ್ ಕಾರುಗಳ ಬೆಲೆಯಲ್ಲಿ ಮಹತ್ವದ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ಪ್ರತಿಸ್ಪರ್ಧಿ ಮಾದರಿಗಳಾದ ಹ್ಯುಂಡೈ ಕ್ರೇಟಾ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಬೆಲೆಗಳಿಂತಲೂ ಆಕರ್ಷಕ ಬೆಲೆಗಳನ್ನ ನಿಗದಿ ಮಾಡಲಿದೆ.

2018ರ ಜನವರಿಯಿಂದ ಕಾರುಗಳ ಬೆಲೆ ಹೆಚ್ಚಳ ಕುರಿತು ಸುಳಿವು ನೀಡಿದ ಟಾಟಾ ಮೋಟಾರ್ಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಉತ್ಪಾದನಾ ವೆಚ್ಚ ಹೆಚ್ಚಳ ಮತ್ತು ಬಿಡಿಭಾಗಗಳ ಬಳಕೆ ಹೆಚ್ಚಳ ಹಿನ್ನೆಲೆ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಸ್ಕೋಡಾ, ಹೋಂಡಾ, ಇಸುಝು ಮತ್ತು ಟೊಯೊಟೊ ಸಂಸ್ಥೆಗಳು ಈಗಾಗಲೇ ಬೆಲೆ ಹೆಚ್ಚಳ ಮಾಡುವ ಕುರಿತು ಪ್ರಕಟಣೆ ಹೊರಡಿಸಿದ್ದು, ಇದೀಗ ಟಾಟಾ ಮೋಟಾರ್ಸ್ ಸಂಸ್ಥೆ ಕೂಡಾ ಇದೇ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ಎನ್ನಬಹುದು.

Most Read Articles

Kannada
English summary
Read in Kannada about Tata Motors To Hike Prices From January 2018.
Story first published: Monday, December 11, 2017, 18:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X