ಮೊದಲ ಬ್ಯಾಚ್‌ನ ಟಿಗೊರ್ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಪೂರ್ಣಗೊಳಿಸಿದ ಟಾಟಾ ಮೋಟರ್ಸ್
ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಗುಜರಾತ್‌ನಲ್ಲಿರುವ ಸನಾಂಡ್ ಸ್ಥಾವರದಿಂದ ಟಿಗೊರ್ ಎಲೆಕ್ಟ್ರಿಕ್ ವೆಹಿಕಲ್(ಇವಿ) ಕಾರನ್ನು ಉತ್ಪಾದನೆ ಪ್ರಾರಂಭಿಸಿತ್ತು. ಈಗ ಈ ಕಾರಿನ ಮೊದಲ ಬ್ಯಾಚ್‌ನ ಉತ್ಪಾದನೆ ಪೂರ್ಣಗೊಂಡಿದೆ.
ಟಾಟಾ ಮೋಟಾರ್ಸ್ ಕಂಪನಿಯು ಇತ್ತೀಚೆಗೆ ಗುಜರಾತ್‌ನಲ್ಲಿರುವ ಸನಾಂಡ್ ಸ್ಥಾವರದಿಂದ ಟಿಗೊರ್ ಎಲೆಕ್ಟ್ರಿಕ್ ವೆಹಿಕಲ್(ಇವಿ) ಕಾರನ್ನು ಉತ್ಪಾದನೆ ಪ್ರಾರಂಭಿಸಿತ್ತು. ಈಗ ಈ ಕಾರಿನ ಮೊದಲ ಬ್ಯಾಚ್‌ನ ಉತ್ಪಾದನೆ ಪೂರ್ಣಗೊಂಡಿದೆ.

ಸರಕಾರದ ಪ್ರಯತ್ನದ ಭಾಗವಾಗಿ ಇಇಎಸ್ಎಲ್ ಟೆಂಡರ್‌ನ ಈ ಕಾರ್ಯಕ್ರಮಕ್ಕೆ ದೇಶದ ಅತಿದೊಡ್ಡ ವಾಹನ ತಯಾರಕ ಕಂಪನಿಯು ಕೈಜೋಡಿಸಿದ್ದು, ಟಾಟಾ ಮೋಟರ್ಸ್ ಕಂಪನಿಯು ಭಾರತದಲ್ಲಿ ಮೊದಲ ಬ್ಯಾಚ್‌ನ 10,000 ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಗುರಿಯನ್ನು ತಲುಪಿದೆ.

ಟಿಗೊರ್ ಕಾರು ಒಂದು ಶುದ್ಧ ಎಲೆಕ್ಟ್ರಿಕ್ ವಾಹನವಾಗಿದೆ. ಈ ಕಾರು ಶೂನ್ಯ ಹೊರಸೂಸುವಿಕೆಯನ್ನು ಹೊಂದಿರುವ ಸ್ಟೈಲ್ ಬ್ಯಾಕ್ ಕಾರು ಆಗಿದ್ದು, ಅಸ್ತಿತ್ವದಲ್ಲಿರುವ ಇಂಟರ್ನಲ್ ಕಂಬಶ್ಚನ್ ಎಂಜಿನ್ ಮಾದರಿಯನ್ನು ಹೋಲುತ್ತದೆ.

ಇಇಎಸ್ಎಲ್ ಗಾಗಿ ಟಿಗೊರ್ ಇವಿ ಕಾರು ಬೇಸ್, ಪ್ರೀಮಿಯಂ ಮತ್ತು ಹೈ ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಗೋಡಿದೆ ಮತ್ತು 'ಪರ್ಲ್‌ಎಸೆಂಟ್ ವೈಟ್' ಮತ್ತು ನೀಲಿ ಡೆಕಲ್ಸ್ ಎಂಬ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಟಿಗೊರ್ ಎಲೆಕ್ಟ್ರಿಕ್ ವಾಹನಕ್ಕೆ ಎಲೆಕ್ಟ್ರಾ ಇವಿ ಸಂಸ್ಥೆಯು ಎಲೆಕ್ಟ್ರಿಕ್ ಡ್ರೈವ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಸಾಕಷ್ಟು ಅಭಿವೃದ್ಧಿ ಮಾಡಲಾದ ವಿದ್ಯುತ್ ಡ್ರೈವ್ ವ್ಯವಸ್ಥೆಯನ್ನು ಹೊಂದಿರುವ ಪವರ್‌ಟ್ರೈನ್ ಅಳವಡಿಸಲಾಗಿದೆ. ಇದು ವಿದ್ಯುತ್ ಸರಬರಾಜು ಮಾಡಲು ಸಹಾಯಕವಾಗಿದೆ.

ಈ ಟಿಗೊರ್ ಇ.ವಿ ಕಾರು ಸಿಂಗಲ್ ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಒಳಗೊಂಡಿದೆ ಮತ್ತು ಹೊಸ ಎಲೆಕ್ಟ್ರಿಕ್ ಆವೃತಿಯ ಟಿಗೊರ್ ಕಾರು ತನ್ನ ಮುಂಭಾಗದ ಗ್ರಿಲ್ ಮೇಲೆ 'ಇವಿ' ಬ್ಯಾಡ್ಜ್ ಪಡೆಯಲಿದೆ.

2030ರ ಹೊತ್ತಿಗೆ ಶುದ್ಧ ವಿದ್ಯುತ್ ವಾಹನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ಸರ್ಕಾರ ಮುಂದಾಗಿದ್ದು, ಈ ವಿಚಾರಕ್ಕೆ ಸಂಪೂರ್ಣ ಸಹಕಾರ ನೀಡುವ ದೃಷ್ಟಿಯಿಂದ ಟಾಟಾ ಸಂಸ್ಥೆಯು ಈ ಒಪ್ಪಂದಕ್ಕೆ ಸಹಿ ಹಾಕಿದೆ.

ಈ 2030ರ ಮಿಷನ್ ತಲುಪುವ ನಿಟ್ಟಿನಲ್ಲಿ ಎಲೆಕ್ಟ್ರಾ ಇ.ವಿ ಕಂಪನಿಯೂ ಸಹ ಕಾರ್ಯಪ್ರವೃತ್ತವಾಗಿದೆ. ಆದರೆ ವಿದ್ಯುತ್ ವಾಹನಗಳಿಗೆ ಮೂಲಸೌಕರ್ಯ ಒದಗಿಸದ ಹೊರತು ಯಾವುದೇ ರೀತಿಯ ಮಿಷನ್ ಪೂರ್ಣಗೊಳಿಸುವುದು ಅಸಾಧ್ಯ ಎನ್ನಬಹುದು. ಆದಕಾರಣ, ಸರ್ಕಾರವು ದೇಶದಾದ್ಯಂತ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸವ ಕಡೆ ಹೆಚ್ಚು ಗಮನಹರಿಸಬೇಕಾಗಿದೆ.


Click it and Unblock the Notifications








