12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

Written By:

ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ಸಿದ್ಧಗೊಂಡಿರುವ ಮಾರುತಿ ಸುಜುಕಿ ಡಿಜೈರ್ ಹತ್ತು ಹಲವು ವಿನೂತನ ವೈಶಿಷ್ಯ್ಟಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಹೊಸ ಕಾರಿನ ಪ್ರಮುಖ ವಿಚಾರಗಳ ಬಗೆಗೆ ವಿಸ್ತೃತ ಮಾಹಿತಿಗಳು ಇಂತಿವೆ.

To Follow DriveSpark On Facebook, Click The Like Button
12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ವಿಶೇಷ ಹೊರ ವಿನ್ಯಾಸ

ಸುಧಾರಿತ ತಂತ್ರಜ್ಞಾನಗಳೊಂದಿಗೆ ಸಿದ್ಧಗೊಂಡಿರುವ ಮಾರುತಿ ಸುಜುಕಿ ಡಿಜೈರ್ ಕಾರು ಹೊಸ ವಿನ್ಯಾಸಗಳಿಂದಾಗಿ ಸಾಕಷ್ಟು ಆಕರ್ಷಕಣೆ ಹೊಂದಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ತಕ್ಕಂತೆ ಸಿದ್ಧಗೊಂಡಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಸುರಕ್ಷತೆಗೆ ಹೆಚ್ಚಿನ ಒತ್ತು

ವಿನೂತನ ಮಾರುತಿ ಸುಜುಕಿ ಡಿಜೈರ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಏರ್‌ಬ್ಯಾಗ್ ಹಾಗೂ ಎಬಿಎಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ತೂಕದಲ್ಲಿ ಕಡಿತ

ಹೌದು.. ನೂತನ ಮಾದರಿಯ ಮಾರುತಿ ಸುಜುಕಿ ಡಿಜೈರ್ ಕಾರು, ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಕರ್ಷಕವಾಗಿದೆ. ಜೊತೆಗೆ ಹೊಸ ಕಾರಿನ ತೂಕದಲ್ಲಿ ಸಾಕಷ್ಟು ಕಡಿತಗೊಳಿಸಲಾಗಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ವಿವಿಧ ನಮೂನೆಗಳಲ್ಲಿ ಲಭ್ಯ

ವಿವಿಧ ಮಾದರಿಗಳಲ್ಲಿ ಅಭಿವೃದ್ಧಿ ಹೊಂದಿರುವ ಮಾರುತಿ ಸುಜುಕಿ ಡಿಜೈರ್ ಕಾರು, ಎಕ್ಸ್‌ಐ, ಎಲ್‌ಡಿಐ, ವಿಎಕ್ಸ್‌ಐ, ವಿಡಿಐ, ಝಡ್‌ಎಕ್ಸ್‌ಐ, ಝಡ್‌ಡಿಐ ಆವೃತ್ತಿಗಳಲ್ಲಿ ಲಭ್ಯವಿರಲಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಪ್ರೋಜೆಕ್ಟರ್ ಹೆಡ್‌ಲೈಟ್

ಹೊಸ ಮಾದರಿಯ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಸಂಪೂರ್ಣವಾಗಿ ಎಲ್ಇಡಿ ಲೈಟ್‌ಗಳ ವ್ಯವಸ್ಥೆ ಹೊಂದಿದ್ದು, ಡೇ ಲೈಟ್‌ಗಳ ಅಳವಡಿಕೆ ಕೂಡಾ ಇದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಕಾರಿನ ಒಳವಿನ್ಯಾಸದಲ್ಲಿ ಬದಲಾವಣೆ

ಬ್ಲ್ಯಾಕ್ ಮತ್ತು ಬ್ರೇಜ್ ಬಣ್ಣಗಳೊಂದಿಗೆ ಕಾರಿನ ಇಂಟಿರಿಯರ್ ವಿನ್ಯಾಸಗೊಳಿಸಲಾಗಿದ್ದು, ಸ್ಟೇರಿಂಗ್ ವಿನ್ಯಾಸ ಸಾಕಷ್ಟು ಬದಲಾವಣೆ ತರಲಾಗಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಇನ್ಫೋಟೈನ್‌ಮೆಂಟ್ ವ್ಯವಸ್ಥೆ

ಕಾರಿನಲ್ಲಿ ಎಲ್ಲ ಮಾಹಿತಿ ನೀಡಬಲ್ಲ 7-ಇಂಚಿನ ಇನ್ಪೋಟೈನ್‌ಮೆಂಟ್ ಡಿಸ್‌ಫೈ ವ್ಯವಸ್ಥೆ ಕಲ್ವಿಸಲಾಗಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಹೆಚ್ಚುವರಿ ಸೌಲಭ್ಯಗಳು

ಧೀರ್ಘ ಕಾಲದ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಸಿ ಹಾಗೂ ಕಾರಿನ ಸೀಟುಗಳನ್ನು ದೊಡ್ಡದಾಗಿ ವಿನ್ಯಾಸ ಮಾಡಲಾಗಿದೆ. ಇದರಿಂದ ಕಾರಿನ ಪ್ರಯಾಣ ಯಾವುದೇ ಕಾರಣಕ್ಕೂ ಬೇಸರ ತರಿಸದು.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ದೊಡ್ಡದಾದ ಕಾರಿನ ಡಿಕ್ಕಿ

ಹೌದು.. ಹೊಸ ರೂಪ ಪಡೆದುಕೊಂಡಿರುವ ಮಾರುತಿ ಸುಜುಕಿ ಡಿಜೈರ್ ಕಾರಿನ ಹಿಂಬದಿಯ ಡಿಕ್ಕಿ ವಿನ್ಯಾಸದ ಅಳತೆ ಇತರೆ ಮಾದರಿಗಳಿಂತ ಭಿನ್ನವಾಗಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಎಎಮ್‌ಡಿ ಗೇರ್‌ಬಾಕ್ಸ್ ವ್ಯವಸ್ಥೆ

5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಹೊಂದಿರುವ ಮಾರುತಿ ಸುಜುಕಿ ಡಿಜೈರ್ ಕಾರು, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಕೂಡಾ ಹೊಂದಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಎಂಜಿನ್ ಸಾಮರ್ಥ್ಯ

ಡೀಸೆಲ್ ಮಾದರಿಯು ಕಾರು 1.3-ಲೀಟರ್ ಎಂಜಿನ್ ಹಾಗೂ ಪೆಟ್ರೋಲ್ ಮಾದರಿಯು ಕಾರು 1.2-ಲೀಟರ್ ಎಂಜಿನ್ ಹೊಂದಿದ್ದು, ಡೀಸೆಲ್ ಮಾದರಿ 75 ಬಿಎಚ್‌ಪಿ ಹಾಗೂ ಪೆಟ್ರೋಲ್ ಮಾದರಿ 83 ಬಿಎಚ್‌ಪಿ ಉತ್ಪಾದಿಸುತ್ತವೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಹೆಸರಿನಲ್ಲಿ ಬದವಾವಣೆ

ಹೊಸ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿರುವ ಮಾರುತಿ ಸುಜುಕಿ ಡಿಜೈರ್ ಕಾರು ಇನ್ಮುಂದೆ ಮಾರುತಿ ಸುಜುಕಿ ಡಿಜೈರ್ ಎಂಬುವುದಾಗಿ ಮಾತ್ರ ಪ್ರಚಾರ ಪಡೆಯಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಮಾರುತಿ ಸಂಸ್ಥೆಯು, ಸ್ವಿಫ್ಟ್ ಹೆಸರನ್ನು ತೆಗೆದು ಹಾಕಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಗಮನಸೆಳೆಯುವ ಕಾರಿನ ಬೆಲೆಗಳು

ಸುಧಾರಿತ ತಂತ್ರಜ್ಞಾನಗಳ ವ್ಯವಸ್ಥೆ ಹೊಂದಿದ್ದರು ಹೊಸ ಕಾರಿನ ಬೆಲೆಗಳು ಮಧ್ಯಮ ವರ್ಗಗಳ ಗಮನಸೆಳೆಯುವಂತಿವೆ. ಡಿಜೈರ್ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆ ರೂ.5.5ಲಕ್ಷದಿಂದ ರೂ. 8ಲಕ್ಷ ತನಕ ಇರಲಿವೆ ಎನ್ನಲಾಗಿದೆ.

12 ಹೊಸ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ ವಿನೂತನ ಮಾರುತಿ ಸುಜುಕಿ ಡಿಜೈರ್

ಬಿಡುಗಡೆಗೆ ಕ್ಷಣಗಣನೆ

ಹತ್ತು ಹಲವು ವಿನ್ಯಾಸಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜುಗೊಂಡಿರುವ ಹೊಸ ಮಾದರಿಯ ಮಾರುತಿ ಸುಜುಕಿ ಡಿಜೈರ್ ಕಾರು, ಇದೇ ಮೇ 16ಕ್ಕೆ ಬಿಡುಗಡೆಯಾಗಲಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

English summary
Read in Kannada about 12 Major Changes in The New Maruti Suzuki Dzire.
Story first published: Tuesday, April 25, 2017, 17:44 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark