ಮಾರುತಿ ಡಿಜೈರ್ ಕಾರಿನ ಬುಕಿಂಗ್ ಅವಧಿ ಎಷ್ಟು ಗೊತ್ತೆ ?
ಮಾರುತಿ ಸುಜುಕಿ ಇತ್ತೀಚೆಗೆ ಭಾರತದಲ್ಲಿ ಮೂರನೇ ಸರಣಿಯ ಮಾರುತಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಸದ್ಯ ಯಶಸ್ವಿಯಾಗಿದ್ದು, ಭಾರತದ ಅಗ್ರ ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಾರುತಿ ಸುಜುಕಿ ಇತ್ತೀಚೆಗೆ ಭಾರತದಲ್ಲಿ ಮೂರನೇ ಸರಣಿಯ ಮಾರುತಿ ಡಿಜೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು. ಈ ಕಾರು ಸದ್ಯ ಯಶಸ್ವಿಯಾಗಿದ್ದು, ಭಾರತದ ಅಗ್ರ ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೆಪ್ಟೆಂಬರ್ ತಿಂಗಳ ಮಾರಾಟ ಅಂಕಿ ಅಂಶ ಬಿಡುಗಡೆಯಾಗಿದ್ದು, ಹೊಸ ಮಾರುತಿ ಡಿಜೈರ್ ಭಾರತದ ಅಗ್ರ ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಈ ಕಾರು ಭಾರತದಲ್ಲಿ ಉತ್ತಮ ಮಾರಾಟವಾಗುವ ಸೆಡಾನ್‌ಗಳಲ್ಲಿ ಒಂದಾಗಿದೆ.

ಮೇ 2017ರಲ್ಲಿ, ಮಾರುತಿ ಸುಜುಕಿ ಮುಂದಿನ ತಲೆಮಾರಿನ ಡಿಜೈರ್ ಕಾರನ್ನು ಪ್ರಾರಂಭಿಸಿತ್ತು. ಈ ಕಾಂಪ್ಯಾಕ್ಟ್ ಸೆಡಾನ್ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ದು, ಅಂದಿನಿಂದಲೂ ಇಲ್ಲಿಯವರೆಗೆ 95,000 ಕಾರುಗಳು ಮಾರಾಟಗೊಂಡಿವೆ.
Recommended Video


ಹೊಸ ಮಾರುತಿ ಡಿಜೈರ್ ಕೇವಲ ಆಗಸ್ಟ್ 2017ರಲ್ಲಿ ಮಾತ್ರವಲ್ಲದೇ ಸೆಪ್ಟೆಂಬರ್‌ನಲ್ಲಿಯೂ ಸಹ ಭಾರತದಲ್ಲಿ ಅಗ್ರ ಮಾರಾಟವಾಗುವ ಸೆಡಾನ್ ಕಾರಾಗಿ ಹೊರ ಹೊಮ್ಮಿದೆ. ಬಿಡುಗಡೆಯಾದ ತಿಂಗಳೊಂದಿಗೆ ಹೋಲಿಸಿದರೆ, ಹಬ್ಬದ ಋತುವಿನಲ್ಲಿ ಹೊಸ ಡಿಜೈರ್ ಮಾರಾಟವು ಮೂರು ಪಟ್ಟು ಹೆಚ್ಚಾಗಿದೆ.

2017ರ ಆಗಸ್ಟ್ ಮತ್ತು ಸೆಪ್ಟೆಂಬರ್ ಸೇರಿ ಕಂಪೆನಿಯು ಸುಮಾರು 60,000 ಡಿಜೈರ್ ಕಾರುಗಳನ್ನು ಮಾರಾಟ ಮಾಡಿದ್ದು, ಇನ್ನು 3 ತಿಂಗಳುಗಳ ಕಾಲ ಕಾಯುವ ಕಾಲಾವಧಿಯನ್ನು ಈ ಕಾರು ಪಡೆದುಕೊಂಡಿರುವುದನ್ನು ಗಮನಿಸಿದರೆ, ಈ ಕಾರನ್ನು ಭಾರತೀಯರು ಎಷ್ಟರ ಮಟ್ಟಿಗೆ ಇಷ್ಟಪಟ್ಟಿದ್ದಾರೆ ಎಂಬುದು ತಿಳಿದು ಬರಲಿದೆ.

ಮೂರೂ ಪೀಳಿಗೆಯ ಡಿಜೈರ್ ಆವೃತಿಗಳನ್ನು ಗಣನೆಗೆ ತೆಗೆದುಕೊಂಡರೆ, ಹೊಸ ಪೀಳಿಗೆಯ ಮಾರುತಿ ಡಿಜೈರ್ ಕಾರು ಬೆಸ್ಟ್ ಕಾರು ಎಂಬ ಮಾತುಗಳು ವಾಹನೋದ್ಯಮದಲ್ಲಿ ಕೇಳಿಬರುತ್ತಿದ್ದು, ಈ ಕಾರನ್ನು ಹೊಸ HEARTEC ವಿನ್ಯಾಸ ತತ್ತ್ವಶಾಸ್ತ್ರದ ಆಧಾರದ ಮೇಲೆ ನಿರ್ಮಿಸಲಾಗಿದೆ.

ಹಿಂದಿನ ಮಾದರಿಗಳೊಂದಿಗೆ ಹೋಲಿಸಿದರೆ ಹೊಸ ಆವೃತಿ ತುಂಬಾ ನಯಗೊಂಡಿರುವ ಮತ್ತು ಸ್ಟೈಲಿಶ್ ಕಾರಾಗಿದ್ದು, ಹೊಸ ಪ್ಲ್ಯಾಟ್ ಫಾರಂನೊಂದಿಗೆ ಸರಿಸುಮಾರು 105 ಕೆಜಿ ತೂಕ ಹಗುರವಾಗಿದೆ ಇದೆ ಸಮಯದಲ್ಲಿ ಈ ಕಾಂಪ್ಯಾಕ್ಟ್ ಸೆಡಾನ್ ಕಾರು ಹೆಚ್ಚು ಕಠಿಣವಾಗಿದೆ.

ಮಾರುತಿ ಡಿಜೈರ್ ಪೆಟ್ರೋಲ್ ಮತ್ತು ಡೀಸಲ್ ಇಂಜಿನ್ ಆಯ್ಕೆಗಳೊಂದಿಗೆ ಬಿಡುಗಡೆಗೊಂಡಿದ್ದು, 1.2-ಲೀಟರ್ ಕೆ-ಸೀರೀಸ್ ಪೆಟ್ರೋಲ್ ಎಂಜಿನ್ 82 ಬಿಎಚ್‌ಪಿ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ ಮತ್ತು 1.3 ಲೀಟರ್ ಡಿಡಿಎಸ್ ಡೀಸೆಲ್ ಎಂಜಿನ್ 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು ಸಹ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ಮತ್ತು ಆಯ್ಕೆಯ ಸ್ವಯಂಚಾಲಿತ ಗೇರ್‌ಬಾಕ್ಸ್ ಪಡೆದುಕೊಳ್ಳಲಿವೆ.


Click it and Unblock the Notifications