ಹೋಂಡಾ ಸಂಸ್ಥೆಯ ಜನಪ್ರಿಯ ಕಾರು ಹೋಂಡಾ ಸಿಟಿ ಎನ್ನುವವರು ಈ ಲೇಖನ ಓದಿ

ಜಪಾನ್ ಮೂಲದ ಕಾರು ತಯಾರಿಕಾ ಕಂಪನಿಯಾದ ಹೋಂಡಾ ಈಗಾಗಲೇ ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದ್ದು, ಜುಲೈ ತಿಂಗಳಿನ ಮಾರಾಟ ಅಂಕಿಅಂಶಗಳನ್ನು ಅನಾವರಣಗೊಳಿಸಿದೆ.

By Girish

ಜಪಾನ್ ಮೂಲದ ಕಾರು ತಯಾರಿಕಾ ಕಂಪನಿಯಾದ ಹೋಂಡಾ ಈಗಾಗಲೇ ಭಾರತದಲ್ಲಿ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದ್ದು, ಜುಲೈ ತಿಂಗಳಿನ ಮಾರಾಟ ಅಂಕಿಅಂಶಗಳನ್ನು ಅನಾವರಣಗೊಳಿಸಿದೆ.

ಹೋಂಡಾ ಸಂಸ್ಥೆಯ ಜನಪ್ರಿಯ ಕಾರು ಹೋಂಡಾ ಸಿಟಿ ಎನ್ನುವವರು ಈ ಲೇಖನ ಓದಿ

ಹೋಂಡಾ ಕಾರ್ ಇಂಡಿಯಾ ಲಿಮಿಟೆಡ್(HCIL) ಸಂಸ್ಥೆ ತನ್ನ ಮಾಸಿಕ ಮಾರಾಟ ಅಂಕಿಅಂಶವನ್ನು ಬಿಡುಗಡೆಗೊಳಿಸಿದ್ದು, ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ಸಂಸ್ಥೆಯು 3,052 ಕಾರುಗಳನ್ನು ಹೆಚ್ಚಿಗೆ ಮಾರಾಟ ಮಾಡುವ ಮೂಲಕ ಹೆಚ್ಚು ಪ್ರಗತಿ ಕಂಡಿದೆ.

ಹೋಂಡಾ ಸಂಸ್ಥೆಯ ಜನಪ್ರಿಯ ಕಾರು ಹೋಂಡಾ ಸಿಟಿ ಎನ್ನುವವರು ಈ ಲೇಖನ ಓದಿ

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಹೋಂಡಾ ಸಂಸ್ಥೆಯ ಮಾರಾಟ ಶೇಕಡಾ 22% ರಷ್ಟು ಹೆಚ್ಚಿಗೆಯಾಗಿದ್ದು, ಈ ಬೆಳವಣಿಗೆ ಕಂಪನಿಗೆ ಧನಾತ್ಮಕ ಶಕ್ತಿ ತುಂಬುವಲ್ಲಿ ಸಫಲವಾಗಲಿದೆ ಎನ್ನಬಹುದು.

ಹೋಂಡಾ ಸಂಸ್ಥೆಯ ಜನಪ್ರಿಯ ಕಾರು ಹೋಂಡಾ ಸಿಟಿ ಎನ್ನುವವರು ಈ ಲೇಖನ ಓದಿ

ಆಶ್ಚರ್ಯವೆಂದರೆ, ಹೋಂಡಾದ ಜನಪ್ರಿಯ ಸೆಡಾನ್ ಸಿಟಿ ಕಾರು ಮಾರಾಟವಾಗುವ ಟಾಪ್ ಹೋಂಡಾ ಕಾರುಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಹೋಂಡಾ ಡಬ್ಲ್ಯೂಆರ್-ವಿ ಕಾರಿಗೆ ಬಿಟ್ಟುಕೊಟ್ಟಿದೆ.

ಹೋಂಡಾ ಸಂಸ್ಥೆಯ ಜನಪ್ರಿಯ ಕಾರು ಹೋಂಡಾ ಸಿಟಿ ಎನ್ನುವವರು ಈ ಲೇಖನ ಓದಿ

ಹೋಂಡಾ ಕಾರು ಜುಲೈ ತಿಂಗಳಿನಲ್ಲಿ 4,894 ಡಬ್ಲ್ಯೂಆರ್ -ವಿ ಕಾರುಗಳನ್ನು ಮಾರಾಟ ಮಾಡಿದ್ದು, ಹೋಂಡಾ ಸಿಟಿ ಕಾರಿಗೆ ತೀವ್ರಮಟ್ಟದಲ್ಲಿ ಪೈಪೋಟಿ ನೀಡಿದೆ. ಹೋಂಡಾ ಸಿಟಿ ಸೆಡಾನ್ ಕಾರು 4,854 ಗಳಷ್ಟು ಮಾರಾಟವಾಗುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಹೋಂಡಾ ಸಂಸ್ಥೆಯ ಜನಪ್ರಿಯ ಕಾರು ಹೋಂಡಾ ಸಿಟಿ ಎನ್ನುವವರು ಈ ಲೇಖನ ಓದಿ

"ನಾವು ಕಳೆದ ತಿಂಗಳಿನಿಂದ ಡಬ್ಲ್ಯೂಆರ್-ವಿ ಕಾರಿನ ಉತ್ಪಾದನೆಯನ್ನು ಹೆಚ್ಚಿಗೆ ಮಾಡಿದ್ದು, ಇದರಿಂದಾಗಿ ಈ ಕಾರಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಆದಷ್ಟು ಬೇಗ ಕಾರು ದೊರಕುವಂತಾಗಿದೆ" ಎಂದು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಸಿಇಓ ಮತ್ತು ಅಧ್ಯಕ್ಷರಾದ ಯೊಇಚಿರೊ ಏನೊ ತಿಳಿಸಿದ್ದಾರೆ.

ಹೋಂಡಾ ಸಂಸ್ಥೆಯ ಜನಪ್ರಿಯ ಕಾರು ಹೋಂಡಾ ಸಿಟಿ ಎನ್ನುವವರು ಈ ಲೇಖನ ಓದಿ

ಕಳೆದ ವರ್ಷ ಹೋಲಿಕೆ ಮಾಡಿದರೆ, ಪ್ರಸಕ್ತ ವರ್ಷದಲ್ಲಿ ಹೋಂಡಾ ಸಂಸ್ಥೆ ಶೇಕಡಾ 21% ರಷ್ಟು ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಹೋಂಡಾ ಸಂಸ್ಥೆ ಕೇವಲ 45,880 ವಾಹನಗಳನ್ನು ಮಾರಾಟ ಮಾಡಿದ್ದು, ಈ ವರ್ಷ ತನ್ನ ಮಾರಾಟವನ್ನು 55,647 ಕಾರುಗಳಿಗೆ ಹೆಚ್ಚಿಸಿಕೊಂಡಿದೆ.

Most Read Articles

Kannada
Read more on ಹೋಂಡಾ honda
English summary
Honda Cars India Ltd. (HCIL) registered monthly domestic sales of 17,085 units in July 2017. The Japanese carmaker sold 3,052 units more compared to July 2016, registering a growth of 22 percent.
Story first published: Thursday, August 3, 2017, 13:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X