ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

2030ರ ವೇಳೆಗೆ ಭಾರತದಲ್ಲಿರುವ ಪ್ರತಿಯೊಂದು ವಾಹನವನ್ನೂ ಸಹ ಎಲೆಕ್ಟ್ರಿಕ್ ಎಂಜಿನ್ ಹೊಂದುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಭಾರತ ಸರ್ಕಾರದ ಹೊಂದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

By Girish

2030ರ ವೇಳೆಗೆ ಭಾರತದಲ್ಲಿರುವ ಪ್ರತಿಯೊಂದು ವಾಹನವನ್ನೂ ಸಹ ಎಲೆಕ್ಟ್ರಿಕ್ ಎಂಜಿನ್ ಹೊಂದುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಭಾರತ ಸರ್ಕಾರದ ಹೊಂದಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಭಾರತದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

ಈ ಹೊಸ ಕ್ರಾಂತಿಗೆ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಮತ್ತು ಸುಜುಕಿ ಕೈ ಜೋಡಿಸಿವೆ. ಹೌದು, ಟೊಯೊಟಾ ಮತ್ತು ಸುಜುಕಿ 2020ರ ಹೊತ್ತಿಗೆ ಭಾರತೀಯ ಮಾರುಕಟ್ಟೆಯಲ್ಲಿ ಜಂಟಿ ಸಹಭಾಗಿತ್ವದಲ್ಲಿ ವಿದ್ಯುತ್ ವಾಹನಗಳನ್ನು ಪ್ರಾರಂಭಿಸಲು ತಿಳುವಳಿಕೆ ಪತ್ರ(MoU)ಕ್ಕೆ ಸಹಿ ಹಾಕಿವೆ.

ಭಾರತದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

ಹೊಸದಾಗಿ ಸಹಿಯ ಒಪ್ಪಂದದ ಪ್ರಕಾರ, ಸುಜುಕಿ ವಿದ್ಯುತ್ ವಾಹನಗಳನ್ನು ತಯಾರಿಸಲಿದೆ ಮತ್ತು ಇದಕ್ಕೆ ಟೊಯೊಟಾ ಸಂಸ್ಥೆಯು ತಾಂತ್ರಿಕ ಬೆಂಬಲವನ್ನು ನೀಡುತ್ತದೆ ಎಂಬ ಮಾಹಿತಿ ಬಂದಿದೆ.

ಭಾರತದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

ಭಾರತದಲ್ಲಿ ವಿದ್ಯುತ್ ವಾಹನಗಳ ಬಗ್ಗೆ ಟೊಯೊಟಾ ಮತ್ತು ಸುಜುಕಿ ಎರಡೂ ಸಂಸ್ಥೆಗಳು ವಿಸ್ತೃತ ಅಧ್ಯಯನವನ್ನು ನೆಡೆಸಲಿವೆ ಹಾಗು ವಾಹನಗಳ ಮಾರಾಟ ನಂತರದ ಸೇವೆಗಳಾದ ಚಾರ್ಜಿಂಗ್ ಕೇಂದ್ರಗಳು ಮತ್ತು ಮಾನವ ಸಂಪನ್ಮೂಲವನ್ನು ಸ್ಥಾಪಿಸುವುದರ ಬಗ್ಗೆಯೂ ಈ ಅಧ್ಯಯನ ಒಳಗೊಂಡಿರಲಿದೆ.

ಭಾರತದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

ಸುಜುಕಿ ಸಂಸ್ಥೆಯು ಗುಜರಾತ್‌ನಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಉತ್ಪಾದನಾ ಸ್ಥಾವರವನ್ನು ಸ್ಥಾಪಿಸುವುದಾಗಿ ಈಗಾಗಲೇ ಘೋಷಿಸಿದೆ. ಈ ಮೂಲಕ ಬ್ಯಾಟರಿ, ಎಲೆಕ್ಟ್ರಿಕ್ ಮೋಟರ್ ಮತ್ತು ಇತರ ಅವಶ್ಯಕ ಘಟಕಗಳನ್ನು ಒಳಗೊಂಡಿರುವ ವಿಭಾಗಗಳನ್ನು ಈ ಉತ್ಪಾದನಾ ಸ್ಥಾವರ ಹೊಂದುವ ನಿರೀಕ್ಷೆ ಇದೆ.

ಭಾರತದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

ಆದರೆ, ಭಾರತದಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಸ್ಟೇಷನ್ ನಿರ್ಮಾಣ ಮಾಡುವುದು ಪ್ರಮುಖ ಸವಾಲು ಎನ್ನಬಹುದು. ಭಾರತದಲ್ಲಿ ಬೆಲೆ ನಿಗದಿಯೂ ಸಹ ಎಲೆಕ್ಟ್ರಿಕ್ ವಾಹನಗಳ ಯಶಸ್ಸಿಗೆ ಪ್ರಮುಖ ಅಂಶ ಎನ್ನಬಹುದು. ಸುಜುಕಿ ಸಂಸ್ಥೆಯು ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಪ್ರಯತ್ನವನ್ನು ನೆಡೆಸಲಿದೆ.

ಭಾರತದಲ್ಲಿ ವಿದ್ಯುತ್ ವಾಹನಗಳ ಉತ್ಪಾದನೆಗೆ ಕೈಜೋಡಿಸಿದ ಟೊಯೊಟಾ ಮತ್ತು ಸುಜುಕಿ

ಭಾರತೀಯ ಮಾರುಕಟ್ಟೆಗೆ ವಿದ್ಯುತ್ ವಾಹನಗಳನ್ನು ಅಭಿವೃದ್ಧಿಪಡಿಸಲು ಕೈಜೋಡಿಸುವ ಮೊಟ್ಟ ಮೊದಲ ಕಾರ್ಯಕ್ಕೆ ಟೊಯೊಟಾ ಮತ್ತು ಸುಜುಕಿ ಒಂದಾಗುತ್ತಿರುವುದು ಒಳ್ಳೆಯ ವಿಚಾರವಾಗಿದೆ. ಕಂಪೆನಿಗಳು 2020ರಲ್ಲಿ ತಮ್ಮ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದ್ದು, ಜನರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Toyota and Suzuki have signed a memorandum of understanding (MoU) to create a joint strategy to launch electric vehicles in the Indian market by 2020.
Story first published: Saturday, November 18, 2017, 16:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X