ಹೇಗಿದೆ ನೋಡ್ರಿ ಸ್ವಾಮಿ- ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ಕೊಯಮತ್ತೂರು ಮೂಲದ ಮಾಡಿಫೈ ಕಾರು ನಿರ್ಮಾಣ ಸಂಸ್ಥೆ ಅಭಿವೃದ್ಧಿ ಮಾಡಿರುವ ಕಾರೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

ನಗರ ಪ್ರದೇಶಗಳಲ್ಲಿ ಕಾರು, ಬೈಕ್‌ಗಳನ್ನು ಮಾಡಿಫೈ ಮಾಡಿಸುವುದು ಹೊಸತೆನಲ್ಲ. ಆದರೂ ಕೆಲ ಬಾರಿ ಮಾಡಿಫೈ ವಾಹನ ತಯಾಕರು ಮೂಲ ವಾಹನಗಳಿಂತಲೂ ಅದ್ಭುತ ರೀತಿಯಲ್ಲಿ ಹೊಸ ಹೊಸ ನಮೂನೆಯ ವಾಹನಗಳ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದು, ಕೊಯಮತ್ತೂರು ಮೂಲದ ಮಾಡಿಫೈ ಕಾರು ನಿರ್ಮಾಣ ಸಂಸ್ಥೆ ಅಭಿವೃದ್ಧಿ ಮಾಡಿರುವ ಕಾರೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ಮಹೀಂದ್ರಾ ಆ್ಯಂಡ್ ಮಹೀಂದ್ರಾ ನಿರ್ಮಾಣದ ಬೊಲೆರೊ ಜೀಪ್ ಎಂಜಿನ್ ಬಳಸಿಕೊಂಡು ಐಷಾರಾಮಿ ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್ ಎಸ್‌ಯಿವಿ ಅಭಿವೃದ್ಧಿ ಮಾಡಲಾಗಿದ್ದು, ಕೋಟಿ ಬದಲಾಗಿ ಕೇವಲ 7 ಲಕ್ಷ ಖರ್ಚು ಮಾಡಿದಲ್ಲಿ ಲಗ್ಷುರಿ ಎಸ್‌ಯುವಿ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ಕೊಯಮತ್ತೂರು ಮೂಲದ ಜೀಪ್ ಸ್ಟುಡಿಯೋ ಎನ್ನುವ ಮಾಡಿಫೈ ಕಾರು ನಿರ್ಮಾಣ ಸಂಸ್ಥೆಯು ಕಳೆದ ಕೆಲ ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದು, ಬೊಲೆರೊ ಕಾರನ್ನು ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್‌ಗೆ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ.

ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ಸದ್ಯ ಜೀಪ್ ಸ್ಟುಡಿಯೋ ಕಾರ್ ಮಾಡಿಫೈ ಬಗ್ಗೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್ ವಿನ್ಯಾಸ ಕಂಡ ಹಲವರು ತಮಗೂ ಇದೇ ಮಾದರಿಯಲ್ಲಿ ಮಾಡಿಫೈ ಮಾಡಿಕೊಡುವಂತೆ ಬೇಡಿಕೆಗಳು ಬರುತ್ತಿವೆ.

Recommended Video

Bangalore City Police Use A Road Roller To Crush Loud Exhausts
ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ಇನ್ನು ಬೊಲೆರೊ ಕಾರನ್ನು ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್‌ಗೆ ಬದಲಾಯಿಸಲು ಜೀಪ್ ಸ್ಟುಡಿಯೋ ಸಿಬ್ಬಂದಿಯು 2 ತಿಂಗಳ ಕಾಲ ಶ್ರಮವಹಿಸಿದ್ದು, ಮಾಡಿಫೈ ಕಾರಿಗೆ ಮೂಲ ಕಾರಿನ ರೂಪ ನೀಡುವ ಉದ್ದೇಶದಿಂದ ಸಾಕಷ್ಟು ಎಚ್ಚರಿಕೆಯಿಂದ ಬಿಡಿಭಾಗಗಳನ್ನು ಅಭಿವೃದ್ಧಿಗೊಳಿಸಿದ್ದಾರೆ.

ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ಹೀಗಾಗಿ ಕಾರು ಮಾಡಿಫೈ ಮಾಡಲು ಬರೋಬ್ಬರಿ 7.35 ಲಕ್ಷ ವ್ಯಯಿಸಲಾಗಿದ್ದು, ಎಂಜಿನ್ ಹೊರತು ಪಡಿಸಿ ಇನ್ನುಳಿದ ಎಲ್ಲ ಬಿಡಿಭಾಗಗಳು, ಒಳ ವಿನ್ಯಾಸ ಮತ್ತು ಬಾಡಿ ಕಿಟ್ ಸಂಪೂರ್ಣ ಬದಲಾವಣೆಯೊಂದಿಗೆ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ.

ಬೊಲೆರೊದಲ್ಲೇ ನಿರ್ಮಾಣವಾಯ್ತು ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‌ಯುವಿ

ಇದರಿಂದಾಗಿ ಜೀಪ್ ಸ್ಟುಡಿಯೋ ನಿರ್ಮಾಣ ಮಾಡಿರುವ ಬೊಲೆರೊ ಜೀಪ್ ಮಾಡಿಫೈ ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್‌ಗೆ ಸಾಕಷ್ಟು ಬೇಡಿಕೆ ಬಂದಿದ್ದು, ಆಸಕ್ತ ಗ್ರಾಹಕರು ತಮ್ಮ ಬೊಲೆರೊ ವಾಹನವನ್ನು ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್‌ಗೆ ಬದಲಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ- 9843128999

More from DriveSpark

Article Published On: Wednesday, December 13, 2017, 17:12 [IST]
English summary
Read in Kannada about Convert Your Mahindra Bolero to Mercedes-Benz G-Wagen for Rs 7.35 Lakh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+