"ಎಲೆಕ್ಟ್ರಿಕ್ ಕಾರು ಚಲಾಯಿಸಲು ಕಲ್ಲಿದ್ದಲಿನಿಂದ ಉತ್ಪಾದಿಸಿದ ವಿದ್ಯುತ್ ಉಪಯೋಗಿಸಿ" - ಗಡ್ಕರಿ

Written By:

ಭಾರತದಲ್ಲಿ 'ವಿದ್ಯುತ್ ಕಾರುಗಳನ್ನು ಚಲಾಯಿಸಲು ಕಲ್ಲಿದ್ದಲಿನಿಂದ ಉತ್ಪಾದಿಸುವ ಅಗ್ಗದ ವಿದ್ಯುತ್ ಬಳಸಿಕೊಳ್ಳಬೇಕು' ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ.

ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಆಯೋಜಿಸಿದ್ದ ಐಎಸ್‌ಬಿ ಲೀಡರ್‌ಶಿಪ್ ಶೃಂಗಸಭೆಯಲ್ಲಿ ಈ ವಿಚಾರವನ್ನು ಸಚಿವ ನಿತಿನ್ ಗಡ್ಕರಿ ಪ್ರಸ್ತಾಪಿಸಿದ್ದು , ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಶಕ್ತಿಯ ಮಿತಿ ಹೆಚ್ಚಿಗೆ ಇರುವುದರಿಂದ ಬ್ಯಾಟರಿ ಶಕ್ತಿಯ ಸಹಾಯದಿಂದ ಚಲಿಸುವ ಕಾರುಗಳು ಕಲ್ಲಿದ್ದಲಿನಿಂದ ಉತ್ಪಾದಿಸುವ ಶಕ್ತಿಯನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.

"ಈಗ ಭಾರತದಲ್ಲಿ ಕಲ್ಲಿದ್ದಲು ಹೆಚ್ಚಿನ ಮಟ್ಟದಲ್ಲಿ ದೊರಕುತ್ತಿದ್ದು, ಇದು ತುಂಬಾ ಅಗ್ಗವಾಗಿದೆ. ಆದ್ದರಿಂದ ಜನರು ಇದರ ಲಾಭ ಪಡೆಯಬೇಕು ಮತ್ತೆ ಇದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು" ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಪರಮಾಣು, ಗಾಳಿ ಮತ್ತು ಜಲವಿದ್ಯುತ್ ಸೇರಿದಂತೆ ವಿದ್ಯುತ್ ಉತ್ಪಾದನೆಯ ಇತರ ಪ್ರಕಾರಗಳಿಗೆ ಹೋಲಿಸಿದರೆ ಕಲ್ಲಿದ್ದಲಿಗಿಂತ ಕಡಿಮೆ ಮಾಲಿನ್ಯ ಉತ್ಪಾದನೆ ಮಾಡುತ್ತದೆ, ಆದರೆ ಸಚಿವರ ಈ ಹೇಳಿಕೆ ವಿವಾದ ಸೃಷ್ಟಿಸಿದೆ.

ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಬಳಸಿ, ಉತ್ಪಾದಿಸಿದ ವಿದ್ಯುತ್ತನ್ನು ಎಲೆಕ್ಟ್ರಿಕ್ ಮೋಟಾರ್‌ ವಾಹನಗಳನ್ನು ಚಲಾಯಿಸಲು ಉಪಯೋಗಿಸುವುದರಿಂದ ಮಾಲಿನ್ಯ ಕಡಿಮೆಯಾಗುತ್ತದೆ, ಎನ್ನುವುದು ಎಷ್ಟರಮಟ್ಟಿಗೆ ಸರಿ ಎಂದು ತಜ್ಞರ ಪ್ರೆಶ್ನೆಯಾಗಿದೆ.

ಕಲ್ಲಿದ್ದಲನ್ನು ಹೆಚ್ಚು ಕೊಳಕು ಉತ್ಪಾದಿಸುವ ವಿದ್ಯುತ್ ಉತ್ಪಾದಿಸುವ ಪ್ರಕಾರ ಎಂದು ಪರಿಗಣಿಸಲಾಗಿದೆ, ಮತ್ತು ಅತ್ಯಂತ ಅಪ್ರಯೋಜನಕಾರಿಯಾದ ಉತ್ಪಾದನೆಯ ಸ್ವರೂಪವಾಗಿದೆ. ಈ ಪ್ರಕಾರದ ವಿದ್ಯುತ್ ಉತ್ಪಾದನೆಗೆ ವಿದ್ಯುತ್ ಸ್ಥಾವರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲಿದ್ದಲು ಬಳಕೆಯಾಗುತ್ತಿದೆ.

ಇತ್ತೀಚೆಗೆ ಅಸಂಬದ್ಧ ಹೇಳಿಕೆಗಳ ಮೂಲಕ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ನಿತಿನ್ ಗಡ್ಕರಿ, ಮತ್ತೊಂದು ಹೇಳಿಕೆ ನೀಡುವ ಮೂಲಕ 'ನಾನಿರುವುದೇ ಹೀಗೆ' ಎಂಬಂತೆ ಬಿಂಬಿಸಿಕೊಳ್ಳುವುತ್ತಿರುವುದು ಮೋದಿಗೆ ಮುಂದೆ ತಲೆನೋವಾಗಿ ಪರಿಣಮಿಸದೇ ಇರಲಾರದು.

English summary
The minister for road transport and highways, Nitin Gadkari, now wants automakers in India to use the’ cheap power generated here by coal to be used to run electric cars’.
Story first published: Monday, September 25, 2017, 13:21 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark