ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ?

Written By:

ಮುಂಬರುವ ಆರ್ಥಿಕ ವರ್ಷದಲ್ಲಿ ಮಹೀಂದ್ರಾ ಸಂಸ್ಥೆಯಿಂದ ಎರಡು ಪ್ರಮುಖ ಕಾರುಗಳು ಬಿಡುಗಡೆಯಾಗಲು ಸಜ್ಜುಗೊಂಡಿದ್ದು, ಈ ನಿಟ್ಟಿನಲ್ಲಿ ವಿನೂತನವಾಗಿ ಅಭಿವೃದ್ಧಿ ಹೊಂದುತ್ತಿರುವ ಹೊಸ ಕಾರುಗಳ ಮಾಹಿತಿ ಇಲ್ಲಿದೆ.

ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ?

ಪ್ರಯಾಣಿಕರ ವಾಹನ ವಿಭಾಗಕ್ಕೆ ಮತ್ತಷ್ಟು ಹೊಸ ಕಾರುಗಳನ್ನು ಪರಿಚಯಿಸಲು ಉದ್ದೇಶಿಸಿರುವ ಮಹೀಂದ್ರಾ ಸಂಸ್ಥೆಯು ಮುಂದಿನ 2018-19ರ ಆರ್ಥಿಕ ವರ್ಷದಲ್ಲಿ ಮತ್ತೇರಡು ವಿನೂತನ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ.

ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ?

ಮಹೀಂದ್ರಾ ಕಂಪ್ಯಾಕ್ಟ್ ಕೆಯುವಿ100 ಮತ್ತು ಹೊಸ ಮಾದರಿಯ ಎಸ್‌ಯುವಿ ಆವೃತ್ತಿಯಾದ ಎಕ್ಸ್‌ಯುವಿ500 ಬಿಡುಗಡೆ ಸಜ್ಜುಗೊಂಡಿದ್ದು, ಮುಂದಿನ ವರ್ಷಕ್ಕೆ ಖರೀದಿಗೆ ಲಭ್ಯವಾಗಲಿವೆ.

ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ?

ಈ ಬಗ್ಗೆ ಮಾತನಾಡಿರುವ ಮಹೀಂದ್ರಾ ಮೋಟಾರ್ಸ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಪವನ್ ಗೋಯಾಂಕ್, ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಮಾದರಿಗಳನ್ನು ಉತ್ಪಾದನೆ ಮಾಡಲಾಗಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಹೊಸ ಉತ್ಪನ್ನಗಳು ಯಶಸ್ವಿಯಾಗುವ ನೀರಿಕ್ಷೆ ಇದೆ ಎಂದಿದ್ದಾರೆ.

ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ?

ಇನ್ನು ಪ್ರಸಕ್ತ ವರ್ಷದ ಪ್ರಯಾಣಿಕರ ವಾಹನ ವಿಭಾಗದ ಕಾರು ಮಾರಾಟ ವಿಭಾಗದಲ್ಲಿ ಮಾರುತಿ ಸುಜುಕಿಗಿಂತ ಶೇ.3 ರಷ್ಟು ಹಿನ್ನಡೆ ಅನುಭವಿಸಿರುವ ಮಹೀಂದ್ರಾ ಸಂಸ್ಥೆ, ಮುಂದಿನ ಅವಧಿಯಲ್ಲಿ ಚೇತರಿಸಿಕೊಳ್ಳುವ ನೀರಿಕ್ಷೆಯಲ್ಲಿದೆ.

ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ?

ಹೀಗಾಗಿ ಹೊಸ ಮಾದರಿಯ ಕಾರುಗಳ ಬಿಡುಗಡೆ ಮಹೀಂದ್ರಾ ಸಂಸ್ಥೆಗೆ ಅವಶ್ಯಕತೆಯಿದ್ದು, ಸದ್ಯದಲ್ಲೇ ಬಿಡುಗಡೆಗಾಗಿ ಸಿದ್ದಗೊಂಡಿರುವ 2017ರ ಟೊಯೊಟಾ ಇನೋವಾ ಮತ್ತು ಟಾಟಾ ಹೆಕ್ಸಾ ಹೊಸ ಕಾರುಗಳನ್ನು ಹಿಂದಿಕ್ಕುವ ನಿಟ್ಟಿನಲ್ಲಿ ಹೊಸ ತಂತ್ರ ರೂಪಿಸಬೇಕಿದೆ.

ಮಹೀಂದ್ರಾ ಬಿಡುಗಡೆ ಮಾಡಲಿರುವ ಮುಂಬರುವ ಕಾರುಗಳು ಯಾವವು ಗೊತ್ತಾ?

ಈಗಾಗಲೇ ಪ್ರಯಾಣಿಕರ ಕಾರು ಮಾರಾಟ ವಿಭಾಗದಲ್ಲಿ ಶೇ.8ರಷ್ಟು ಪಾಲನ್ನು ಹೊಂದಿರುವ ಮಹೀಂದ್ರಾ ಸಂಸ್ಥೆಯು, ಕಂಪ್ಯಾಕ್ಟ್ ಕೆಯುವಿ100 ಮತ್ತು ಎಕ್ಸ್‌ಯುವಿ500 ಆವೃತ್ತಿಗಳ ಬಿಡುಗಡೆ ಮೂಲಕ ಕಾರು ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುವ ನೀರಿಕ್ಷೆ ಕೂಡಾ ಇದೆ.

English summary
Read in Kannada about Mahindra To Launch Two New Vehicles In The Next Two Years.
Story first published: Monday, July 17, 2017, 17:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark