ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳ ವಿಶೇಷತೆ ಏನು?

ಸದ್ಯ ಆಟೋ ಉದ್ಯಮದಲ್ಲಿ ನಂ.1 ಸ್ಥಾನಕ್ಕೇರಿರುವ ರೆನಾಲ್ಟ್ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಸದ್ಯದಲ್ಲೇ ಮತ್ತಷ್ಟು ಹೊಸ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಅವುಗಳ ವಿಶೇಷತೆ, ವಿನ್ಯಾಸಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

By Praveen

ವಿಶೇಷ ಕಾರು ಮಾದರಿಗಳನ್ನು ಪರಿಚಯಿಸುವ ಮೂಲಕ ಸದ್ಯ ಆಟೋ ಉದ್ಯಮದಲ್ಲಿ ನಂ.1 ಸ್ಥಾನಕ್ಕೇರಿರುವ ರೆನಾಲ್ಟ್ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ಸದ್ಯದಲ್ಲೇ ಮತ್ತಷ್ಟು ಹೊಸ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿದ್ದು, ಅವುಗಳ ವಿಶೇಷತೆ, ಬೆಲೆ, ವಿನ್ಯಾಸಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲದೆ.

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ಉತ್ತಮ ಕಾರ್ಯಕ್ಷಮತೆಯಿಂದಾಗಿ ಭಾರತೀಯ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ರೆನಾಲ್ಟ್ ಸಂಸ್ಥೆಯು, ಮುಂಬರುವ ದಿನಗಳಲ್ಲಿ ಹೊಸ ನಮೂನೆಯ ಕಾರುಗಳನ್ನು ಪರಿಚಯಿಸುತ್ತಿರುವುದು ಭಾರತೀಯ ಆಟೋ ಉದ್ಯಮ ವಲಯದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿವೆ. ಈ ಹಿನ್ನೆಲೆ ಬಿಡುಗಡೆಗೊಳ್ಳಲಿರುವ ಹೊಸ ಕಾರುಗಳ ಮಾಹಿತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ರೆನಾಲ್ಟ್ ಕ್ಯಾಪ್ಚರ್

ಆಲ್ ವಿಲ್ಹ್ ಡ್ರೈವ್ ಮಾಡುವಂತಹ ಸೌಲಭ್ಯ ಪಡೆದುಕೊಂಡಿರುವ ಮೊಟ್ಟ ಮೊದಲ ಕ್ಯಾಪ್ಚರ್ ಎಸ್‌ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಜ್ಜುಗೊಂಡಿರುವ ರೆನಾಲ್ಟ್ ಸಂಸ್ಥೆಯು ಹೊಸ ಕಾರಿನ ಮೂಲಕ ಮತ್ತೊಂದು ದಾಖಲೆ ನಿರ್ಮಾಣದ ತವಕದಲ್ಲಿದೆ.

Recommended Video

Tata Nexon Price And Features Variant-wise - DriveSpark
ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ಪ್ರಸ್ತುತ ಕ್ಯಾಪ್ಚರ್ ಎಂಜಿನ್ ಮಾದರಿಯೂ ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದ್ದು, 1.5-ಲೀಟರ್ ಹೆಚ್4ಕೆಎಲ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಡಿಸಿಐ ಡೀಸೆಲ್ ಎಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ಜೊತೆಗ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಡಿಎನ್‌ಎ ಡಿಸೈನ್‌ವುಳ್ಳ ರೆನೋ ಕ್ಯಾಪ್ಚರ್‌ ಕ್ರಾಸ್‌ಓವರ್‌ ಮಾದರಿಯು ಫ್ರೆಂಚ್‌ ಶೈಲಿಯನ್ನು ಹೊಂದಿದ್ದು, ಈಗಾಗಲೇ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಆರಂಭವಾಗಿದೆ.

ಬಿಡುಗಡೆಯ ದಿನಾಂಕ(ಅಂದಾಜು)- ಅಕ್ಟೋಬರ್ ಕೊನೆಯ ವಾರ

ಬೆಲೆ(ಅಂದಾಜು)- ರೂ.12 ಲಕ್ಷದಿಂದ ರೂ.15 ಲಕ್ಷ

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ರೆನಾಲ್ಟ್ ಆರ್‌ಬಿಸಿ ಎಂಪಿವಿ

ರೆನಾಲ್ಟ್ ಉತ್ಪಾದಿತ ಕಾರು ಮಾದರಿಗಳಲ್ಲಿ ಆರ್‌ಬಿಸಿ ಎಂಪಿವಿ ಕೂಡಾ ಪ್ರಮುಖವಾಗಿದ್ದು, ತನ್ನ ಹೊರನೋಟದಿಂದಲೇ ಎಸ್‌ಯುವಿ ಪ್ರಿಯರನ್ನು ಸೆಳೆಯುವ ಗುಣ ಹೊಂದಿದೆ. ಜೊತೆಗೆ ಟೊಯೊಟೊ ಇನೋವಾಗೆ ಪ್ರತಿಸ್ಪರ್ಧಿಯಾಗಿ ಆರ್‌ಬಿಸಿ ಎಂಪಿವಿಯನ್ನು ಅಭಿವೃದ್ಧಿಗೊಳಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ಹೀಗಾಗಿ ಹೊಸ ಕಾರಿನ ಬೆಲೆಯನ್ನು 8 ರಿಂದ 12 ಲಕ್ಷಕ್ಕೆ ನಿಗದಿಗೊಳಿಸುವ ಸಾಧ್ಯತೆಗಳಿದ್ದು, 2018ರ ಮೊದಲ ತ್ರೈಮಾಸಿಕ ಅವಧಿಗೆ ಭಾರತೀಯ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ರೆನಾಲ್ಟ್ ಡಸ್ಟರ್ ಫೇಸ್‌ಲಿಫ್ಟ್

ಪ್ರಸ್ತುತ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೆನಾಲ್ಟ್ ಡಸ್ಟರ್ ಮಾದರಿಯು ಗ್ರಾಹಕರ ಬೇಡಿಕೆಯಂತೆ ಫೇಸ್‌ಲಿಫ್ಟ್ ಅಂಶಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಯಾವುದೇ ತಾಂತ್ರಿಕ ಅಂಶಗಳಲ್ಲಿ ಬದಲಾವಣೆಗಳಿಲ್ಲದೇ ಕೇವಲ ಹೊರ ವಿನ್ಯಾಸಗಳ ಜೋಡಣೆಯಲ್ಲಿ ಬದಲಾವಣೆ ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ಫೇಸ್‌ಲಿಫ್ಟ್ ಅಂಶಗಳನ್ನು ಹೊಂದಿರುವ ಡಸ್ಟರ್ ಕಾರುಗಳು 1.5-ಲೀಟರ್ ಡೀಸೆಲ್ ಮತ್ತು 1.2-ಲೀಟರ್ ಪೆಟ್ರೋಲ್ ಇಗ್ನಿಸ್ ಎಂಜಿನ್ ಪಡೆದುಕೊಂಡಿದ್ದು, ಪ್ರಸಿದ್ಧ ಡಾಸಿಯಾ ಡಿಸೈನ್ ಮುಖ್ಯಸ್ಥ ಲೌರೆನ್ಸ್ ವಾನ್ ದೆ ಅಕ್ರೆರ್ ಅವರಿಂದ ಹೊರ ವಿನ್ಯಾಸಗಳನ್ನು ಪೂರ್ಣಗೊಳಿಸಲಾಗಿದೆ.

ಬಿಡುಗಡೆಯ ದಿನಾಂಕ(ಅಂದಾಜು)- 2019

ಬೆಲೆ(ಅಂದಾಜು)- ರೂ. 9 ಲಕ್ಷದಿಂದ ರೂ.13 ಲಕ್ಷ

ಬಿಡುಗಡೆಗೆ ಸಜ್ಜುಗೊಂಡ ರೆನಾಲ್ಟ್ ವಿನೂತನ ಕಾರು ಆವೃತ್ತಿಗಳು ಯಾವವು?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ರೆನಾಲ್ಟ್ ಉತ್ಪಾದಿತ ಕ್ಯಾಪ್ಚರ್, ಡಸ್ಟರ್ ಫೇಸ್‌ಲಿಫ್ಟ್ ಮತ್ತು ಆರ್‌ಬಿಸಿ ಎಂಪಿವಿ ಮಾದರಿಗಳು ಸಾಕಷ್ಟು ಸುಧಾರಿತ ಅಂಶಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಟೊಯೊಟಾ ಎಸ್‌ಯುವಿ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ತವಕದಲ್ಲಿವೆ ಎನ್ನಬಹುದು.

Article Published On: Tuesday, September 26, 2017, 17:42 [IST]
English summary
Read in Kannada about Upcoming Renault Cars In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+