ಹ್ಯುಂಡೈ ಕ್ರೆಟಾ ಕಾರಿಗೆ ಸ್ಪರ್ಧೆ ನೀಡಲು ಬರ್ತಿದೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್
ಜರ್ಮನಿಯ ವಾಹನ ತಯಾರಕ ಕಂಪೆನಿಯಾದ ಫೋಕ್ಸ್‌ವ್ಯಾಗನ್ ತನ್ನ ಜಾಗತಿಕ ಉತ್ಪನ್ನದ ಪಟ್ಟಿಗೆ 19 ಹೊಸ ಎಸ್‌ಯುವಿ ಕಾರುಗಳನ್ನು ಪರಿಚಯಿಸಲಿದೆ ಎಂಬ ಮಾಹಿತಿ ನೀಡಿದೆ.
ಜರ್ಮನಿಯ ವಾಹನ ತಯಾರಕ ಕಂಪೆನಿಯಾದ ಫೋಕ್ಸ್‌ವ್ಯಾಗನ್ ತನ್ನ ಜಾಗತಿಕ ಉತ್ಪನ್ನದ ಪಟ್ಟಿಗೆ 19 ಹೊಸ ಎಸ್‌ಯುವಿ ಕಾರುಗಳನ್ನು ಪರಿಚಯಿಸಲಿದೆ ಎಂಬ ಮಾಹಿತಿ ನೀಡಿದೆ.

ಈ 19 ಎಸ್‌ಯುವಿಗಳಲ್ಲಿ, ಅತಿ ಚಿಕ್ಕ ಎಸ್‌ಯುವಿಯಾಗಿ ಟಿ-ಕ್ರಾಸ್ ವಾಹನವು ಬಿಡುಗಡೆಯಾಗಲಿದೆ. ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಈ ಕಾಂಪ್ಯಾಕ್ಟ್ ಎಸ್‌ಯುವಿ ಕಾರಿನ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸುತ್ತದೆ ಎಂದು ಆಟೋಕಾರ್ ಇಂಡಿಯಾ ವರದಿ ಮಾಡಿದೆ.

ಟಿ-ರೋಕ್ ಎಸ್‌ಯುವಿಗೆ ಹೋಲಿಕೆ ಹೊಂದಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿ ಟಿ-ಕ್ರಾಸ್ ಕಾರು, ಪರಿಕಲ್ಪನೆಯ ಶೈಲಿ ಮತ್ತು ಹೆಸರನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ.

ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರು, ಯಾಂತ್ರಿಕ ಘಟಕ, ಬಾಹ್ಯ ಮತ್ತು ಒಳಾಂಗಣ ಅಂಶಗಳನ್ನು ಹೊಸ ಪೊಲೊ ಮತ್ತು ವರ್ಟಸ್ ಕಾರುಗಳೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದೆ. ಈ ಕಾರು ಸುಮಾರು 4.1 ಮೀಟರ್ ಉದ್ದವಿರಲಿದ್ದು, ಸುಮಾರು 2.5 ಮೀಟರ್‌ಗಳಷ್ಟು ವೀಲ್ ಬೇಸ್ ಹೊಂದಿದೆ.

ಟಿ-ಕ್ರಾಸ್ ಪರಿಕಲ್ಪನೆಯ ಆವೃತ್ತಿಯಲ್ಲಿ ಅಳವಡಿಸಿರುವ ಎಂಜಿನ್ ಈ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರು 1 ಲೀಟರ್ 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳಲಿದ್ದು, ಈ ಎಂಜಿನ್ 175 ಎನ್ಎಂ ತಿರುಗುಬಲದಲ್ಲಿ 110 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಮುಂದಿನ ಚಕ್ರಗಳಿಗೂ ಶಕ್ತಿ ಕಳುಹಿಸುವ 7-ಸ್ಪೀಡ್ ಡುಯಲ್ ಕ್ಲಚ್ ಗೇರ್‌ಬಾಕ್ಸ್ ಸೌಲಭ್ಯ ಪಡೆದುಕೊಂಡಿರುವ ಈ ಫೋಕ್ಸ್‌ವ್ಯಾಗನ್ ಕಾರು ನಾಲ್ಕು ದೊಡ್ಡ ಸಿಲಿಂಡರ್ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುವ ಸಾಧ್ಯತೆ ಇದೆ.

ಫೋಕ್ಸ್‌ವ್ಯಾಗನ್ ಸಂಸ್ಥೆಯು, ದಕ್ಷಿಣ ಅಮೆರಿಕದಂತಹ ಉದಯೋನ್ಮುಖ ಮಾರುಕಟ್ಟೆಗಳಿಗೆ 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ನೀಡಲು ಸಾಧ್ಯತೆ ಇದೆ ಹಾಗು ವೆಚ್ಚವನ್ನು ಕಡಿಮೆಗೊಳಿಸಲು ಕೆಲವು ವಿಶೇಷತೆಗಳನ್ನು ಕಡಿಮೆಗೊಳಿಸುವ ಸಂಭವವಿದೆ.

ಭಾರತದಲ್ಲಿ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರು, ಹ್ಯುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್, ಜೀಪ್ ರೆನೆಗಡೆ ಮತ್ತು ರೆನಾಲ್ಟ್ ಕ್ಯಾಪ್ಟರ್ ಕಾರುಗಳ ಜೊತೆ ಸ್ಪರ್ಧೆ ನೆಡೆಸಲಿದೆ. ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ತ್ವರಿತವಾಗಿ ಬೆಳವಣಿಗೆಯಾಗುತ್ತಿದ್ದು, ಇದಕ್ಕೆ ಉತ್ತಮ ಉದಾಹರಣೆ ಟಿ-ಕ್ರಾಸ್ ಎನ್ನಬಹುದು.


Click it and Unblock the Notifications








