ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ದಕ್ಷಿಣ ಏಷಿಯಾದ ದೇಶಗಳಲ್ಲಿ ಒಂದಾದ ಪಾಕಿಸ್ತಾನ, ಭಾರತ ದೇಶಕ್ಕಿಂತ ವಿಸ್ತಾರದಲ್ಲಿ ಚಿಕ್ಕ ದೇಶವಾದರೂ ಕಾರು ಮಾರುಕಟ್ಟೆಯಲ್ಲಿಯೂ ಕೂಡಾ ಕಡಿಮೆಯೆ ಇದೆ.

By Rahul Ts

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಒಂದಾದ ಪಾಕಿಸ್ತಾನವು ಭಾರತಕ್ಕಿಂತ ವಿಸ್ತಾರದಲ್ಲಿ ಚಿಕ್ಕ ದೇಶವಾಗಿದ್ದು, ಕಾರು ಮಾರುಕಟ್ಟೆಯಲ್ಲಿಯೂ ಕೂಡಾ ಅಷ್ಟಕ್ಕಷ್ಟೇ. ಆದ್ರೆ ಭಾರತದಲ್ಲಿ ದೊರೆಯದ ಕೆಲವು ಉತ್ತಮ ಕಾರು ಮಾದರಿಗಳು ಮಾತ್ರ ಪಾಕಿಸ್ತಾನ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದರೆ ನೀವು ನಂಬಲೇಬೇಕು.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಹಾಗಾದ್ರೆ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ ಕೆಲವು ಕಾರುಗಳು ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರುಗಳ ಬಗೆಗಿನ ಸಂಪೂರ್ಣ ಮಾಹಿತಿ ಕೆಳಗಿನ ಸ್ಲೈಡರ್‍‍ಗಳಲ್ಲಿದ್ದು, ಸದ್ಯ ಮಾರಾಟವಾಗುತ್ತಿರುವ ಈ ಕಾರುಗಳು ಎಂಜಿನ್ ಸಾಮರ್ಥ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ಭಾರತದಲ್ಲಿ ಲಭ್ಯವಿರುವ ಕಾರುಗಳಿಂತಲೂ ಉತ್ತಮವಾಗಿವೆ ಎನ್ನಬಹುದು.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಟೊಯೊಟಾ ಹಿಲಕ್ಸ್

ಭಾರತದಲ್ಲಿ ಪಿಕ್ ಅಪ್ ಟ್ರಕ್‍‍ಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಲಿಲ್ಲವಾದರೂ ದೇಶದಲ್ಲಿ ಹೆಚ್ಚು ಕಣಿಸಿಕೊಳ್ಳುವ ಇಸುಜು ವಿ-ಕ್ರಾಸ್ ಪಿಕ್ ಅಪ್ ಟ್ರಕ್ ಕೂಡಾ ಕಡಿಮೆ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಆದ್ದರಿಂದ ಮಾರಾಟದ ದೃಷ್ಟಿಯಿಂದ ಟೊಯೊಟಾ ಸಂಸ್ಥೆಯು ತಮ್ಮ ಹಿಲಕ್ಸ್ ಪಿಕ್ ಅಪ್ ಟ್ರಕ್ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿಲ್ಲ ಎನ್ನಬಹುದು.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಟೊಯೊಟಾ ಸಂಸ್ಥೆಯ ಹಿಲಕ್ಸ್ ಪಿಕ್ ಅಪ್ ಟ್ರಕ್‌ಗಳು ಫಾರ್ಚೂನರ್ ಕಾರಿನ ಆಧಾರದ ಮೇಲೆ ನಿರ್ಮಿತವಾಗಿದ್ದು, ಪಾಕಿಸ್ತಾನದಲ್ಲಿ ದೊರೆಯುತ್ತಿರುವ ಟೊಯೊಟಾ ಹಿಲಕ್ಸ್ ಪಿಕ್ ಅಪ್ ಟ್ರಕ್‌ಗಳು 2755ಸಿಸಿ, 4 ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಪಡೆದಿದ್ದು, 130 ಬಿಹೆಚ್‍‍ಪಿ ಮತ್ತು 420ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಟೊಯೊಟಾ ಅವನ್ಜಾ

ಭಾರತದಲ್ಲಿ ದೊರೆಯುತ್ತಿರುವ ಇನ್ನೊವಾ ಕ್ರಿಸ್ಟಾ ಕಾರಿಗಿಂತಲೂ ಅವನ್ಜಾ ಎಮ್‍‍ಪಿವಿ ಕಾರು ಗಾತ್ರದಲ್ಲಿ ಕಡಿಮೆಯಿದ್ದು, ಪಾಕಿಸ್ತಾನದಲ್ಲಿ ಮಾತ್ರ ಲಭ್ಯವಿದೆ ಈ ಕಾರು. ಅವನ್ಜಾ ಕಾರು 7 ಆಸಗಳನ್ನು ಹೊಂದಿದ್ದು, ದಕ್ಷಿಣ ಏಷಿಯಾದ ಮಾರುಕಟ್ಟೆಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಅವನ್ಜಾ ಎಮ್‍‍ಪಿವಿ ಕಾರು ಮಾರುತಿ ಎರ್ಟಿಗಾ ಕಾರನ್ನು ಹೋಲಲಿದ್ದು, ಈ ಕಾರಿನಲ್ಲಿ ಅಳವಡಿಸಲಾಗಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 103 ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸಬಲ್ಲದು.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಸುಜುಕಿ ಜಿಮ್ನಿ

ಮಾರುತಿ ಜಿಪ್ಸಿ ಮಾದರಿಯಲ್ಲೇ ಉದ್ದವಾಗ ವ್ಹೀಲ್‍‍ಬೇಸ್ ಅನ್ನು ಹೊಂದಿರುವ ಮೊದಲಿನ ತಲೆಮಾರಿನ ಜಿಮ್ನಿ ಕಾರಿನ ವರ್ಷನ್ ಎನ್ನಲಾಗಿದ್ದು, ಹೊಸ ಜಿಮ್ನಿ ಕಾರು ಇನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿಲ್ಲವಾದರೂ ಈಗಾಗಲೇ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಜಿಮ್ನಿ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರಾಗಿದ್ದು 4 ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಪಡೆದುಕೊಂಡಿದೆ. ಇನ್ನು ಈ ಕಾರಿನಲ್ಲಿ ಜಿಪ್ಸಿಯಲ್ಲಿ ಬಳಸಲಾದ ಜಿ13 1.3 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 80ಬಿಹೆಚ್‍‍ಪಿ ಮತ್ತು 110ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಬಿಎಮ್‍ಡಬ್ಲ್ಯೂ ಎಮ್2

ದೇಶಿಯ ಮಾರುಕಟ್ಟೆಯಲ್ಲಿ ಬಿಎಮ್‍ಡಬ್ಲ್ಯೂ ಸಂಸ್ಥೆಯ 2 ಸಿರೀಸ್ ಕಾರುಗಳು ಇನ್ನು ಬಿಡುಗಡೆಗೊಳಿಸಲಿಲ್ಲವಾದರೂ, ಪಾಕಿಸ್ತಾನದಲ್ಲಿ ಬಿಎಮ್‍ಡಬ್ಲ್ಯೂ 2 ಸರಣಿಯ ಎಲ್ಲಾ ಕಾರುಗಳು ಈಗಾಗಲೆ ಮಾರಾಟಗೊಳ್ಳುತ್ತಿದೆ. ಬಿಎಮ್‍ಡಬ್ಲ್ಯೂ ಎಮ್2 ಕಾರು ಸಂಸ್ಥೆಯ 1 ಸಿರೀಸ್ ಕಾರಿನ ಮುಂದುವರಿದ ಕಾರು ಮಾದರಿಯಾಗಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಬಿಎಮ್‍ಡಬ್ಲ್ಯೂ ಎಮ್2 ಕೂಪೆ ಕಾರು 3.0 ಲೀಟರ್ ಸ್ಟ್ರೈಟ್ 6 ಎಂಜಿನ್ ಅನ್ನು ಪಡೆದಿದ್ದು, 370ಬಿಹೆಚ್‍‍ಪಿ ಮತ್ತು 465 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಮಾಹಿತಿಗಳ ಪ್ರಕಾರ ಬಿಎಮ್‍ಡಬ್ಲ್ಯೂ ಸಂಸ್ಥೆಯು ತಮ್ಮ ಎಮ್2 ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದ್ದು, ಈ ಬಗ್ಗೆ ಸಂಸ್ಥೆಯು ಅಧಿಕೃತ ಮಾಹಿತಿಯನ್ನು ಹೊರಹಾಕಲಿಲ್ಲ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಹೋಂಡಾ ಸಿವಿಕ್

ಪ್ರಸ್ತುತ ತಲೆಮಾರಿನ ಸಿವಿಕ್ ಕಾರುಗಳು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳ್ಳಲಿದ್ದು, ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಹತ್ತನೇ ತಲೆಮಾರಿನ ಸಿವಿಕ್ ಕಾರುಗಳು ಮಾರಾಟಗೊಳ್ಳುತ್ತಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಈ ಕಾರನ್ನು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಪಾಕಿಸ್ತಾನದಲ್ಲಿ ದೊರೆಯುತ್ತಿರುವ ಹತ್ತನೆಯ ತಲೆಮಾರಿನ ಸಿವಿಕ್ ಕಾರು 1.8 ಲೀಟರ್ ಎಂಜಿನ್ ಅನ್ನು ಹೊಂದಿದ್ದು, ಭಾರತಕ್ಕೆ ಬರಲಿರುವ ಎಂಟನೆಯ ತಲೆಮಾರಿನ ಸಿವಿಕ್ ಕಾರಾಗಲಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಹೋಂಡಾ ಹೆಚ್‍ಆರ್-ವಿ

ಹೋಂಡಾ ಹೆಚ್‍ಆರ್-ವಿ ಕಾರು ಬಿಆರ್-ವಿ ಮತ್ತು ಸಿಆರ್-ವಿ ಕಾರುಗಳ ನಡುವೆ ಸ್ಥಾನವನ್ನು ಪಡೆದಿದ್ದು, ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಈಗಾಗಲೇ ಯಶಸ್ವಿಯಾಗಿ ಮಾರಾಟವಾಗುತ್ತಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಅಂತಾರಾಷ್ಟ್ರಿಯ ಮಾರುಕಟ್ಟೆಗಳಲ್ಲಿ ಹೆಚ್‍ಆರ್-ವಿ ಕಾರು ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಸಹಾಯದಿಂದ 118-ಬಿಹೆಚ್‍‍ಪಿ ಮತ್ತು 145-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಸುಜುಕಿ ವಿಟಾರಾ

ಭಾರತಕ್ಕೆ ಬರವ ಮೊದಲೇ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರುಗಳಲ್ಲಿ ಸುಜುಕಿ ವಿಟಾರಾ ಎಸ್‍‍ಯುವಿ ಕಾರುಗಳು ಕೂಡಾ ಒಂದಾಗಿದ್ದು, ಹ್ಯುಂಡೈ ಕ್ರೆಟಾ ಕಾರಿಗಿಂತ ಗಾತ್ರದಲ್ಲಿ ಕಡಿಮೆ ಇದ್ದು, ಬಲಿಷ್ಠ ಎಂಜಿನ್ ಪಡೆದಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಸುಜುಕಿ ವಿಟಾರಾ ಎಸ್‍ಯುವಿಗಳು 185-ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿದ್ದು, 1.6-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 115-ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಕಿಯಾ ಸ್ಪೋರ್ಟೇಜ್

ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥಯಾದ ಕಿಯಾ ತಮ್ಮ ಕಾರುಗಳನ್ನು ಭಾರತಕ್ಕೆ ಪರಿಚಯಿಸುವ ಯೋಜನೆಯಲಿದ್ದು, ಪಾಕಿಸ್ತಾನದಲ್ಲಿ ಈಗಾಗಲೇ ತಮ್ಮ ಕಾರುಗಳನ್ನು ಮಾರಾಟ ಮಾಡುತ್ತಿವೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ ಜಾಗತಿಕವಾಗಿ ಮೆಚ್ಚುಗೆ ಪಡೆದ ಕಾರುಗಳಲ್ಲಿ ಒಂದಾದ ಕಿಯಾ ಸ್ಪೋರ್ಟೇಜ್ ಕಾರು 2.4 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 182-ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಕಿಯಾ ರಿಯೊ

ಸ್ಪೋರ್ಟೇಜ್ ಕಾರಲ್ಲದೇ ಕಿಯಾ ಸಂಸ್ಥೆಯು ರಿಯೊ ಕಾರನ್ನು ಕೂಡಾ ಪಾಕಿಸ್ತಾನದಲ್ಲಿ ಮಾರಾಟ ಮಾಡುತ್ತಿದೆ. ಈ ಕಾರು 1.2 ಲೀಟರ್ ಮತ್ತು 1.4 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ದೊರೆಯುತ್ತಿವೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಈ ಕಾರಿನಲ್ಲಿ ಬಳಸಲಾಗಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 83 ಬಿಹೆಚ್‍ಪಿ ಮತ್ತು 1.4 ಲೀಟರ್ ಪೆಟ್ರೋಲ್ ಎಂಜಿನ್ 99 ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಟೊಯೊಟಾ ಹಿಯಾಸ್

ಟೊಯೊಟಾ ಹಿಯಾಸ್ ವ್ಯಾನ್ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟಗೊಳ್ಳುತ್ತಿದೆ. 13 ಆಸನವುಳ್ಳ ಕಮರ್ಶಿಯಲ್ ವೆಹಿಕಲ್ ಆದ ಹಿಯಾಸ್ ವ್ಯಾನ್, 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದೆ.

ಪಾಕಿಸ್ತಾನದಲ್ಲಿ ಸಿಗುವ ಈ ಕಾರುಗಳು ಭಾರತದಲ್ಲಿ ಸಿಗೋದಿಲ್ಲ.!!

ಹಿಯಾಸ್ ವ್ಯಾನ್ ಪಾಕಿಸ್ತಾನದ ಮಾರುಕಟ್ಟೆಯಲ್ಲಿ ದೊರೆಯುವ ಮೊದಲೇ ಭಾರತದ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುವ ಅವಕಾಶವಿದ್ದು, ಆದ್ರೆ ಇದೀಗ ಟೊಯೊಟಾ ಸಂಸ್ಥೆಯು ತಮ್ಮ ಐಷಾರಾಮಿ ಆಲ್ಫ್ರಾಡ್ ವ್ಯಾನ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲ್ಲಿದೆ.

Most Read Articles

Kannada
Read more on off beat suv mpv sedan coupe
English summary
10 INTERESTING cars Pakistan gets but India doesn’t.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X