ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

By Praveen Sannamani

ದೇಶದಲ್ಲಿ ಇಂದು 72ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡಿದ್ದು, ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಕಾರುಗಳ ಖರೀದಿ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿರುವುದು ಕಾರು ಯೋಜನೆಯಲ್ಲಿರುವ ಗ್ರಾಹಕರಿಗೆ ಹಬ್ಬವೇ ಸರಿ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳಾದ ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ, ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ತಮ್ಮ ಪ್ರಮುಖ ಕಾರು ಮಾದರಿಗಳ ಖರೀದಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಕೆಲವು ಕಾರುಗಳ ಖರೀದಿ ಮೇಲೆ ಎಕ್ಸ್‌ಚೆಂಜ್ ಆಫರ್ ಮತ್ತು ಉಚಿತ ವಿಮೆ ಸಹ ದೊರೆಯಲಿದೆ. ಹಾಗಾದ್ರೆ ಯಾವ ಕಾರುಗಳ ಮೇಲೆ ಎಷ್ಟು ಡಿಸ್ಕೌಂಟ್ ದೊರೆಯಲಿದೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಸುಜುಕಿ ಸಿಯಾಜ್

ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಇದೇ ತಿಂಗಳು 18ರಂದು ಬಿಡುಗಡೆ ಸಜ್ಜಾಗುತ್ತಿದ್ದು, ಈ ಹಿನ್ನೆಲೆ ಹಿಂದಿನ ತಲೆಮಾರಿನ ಸಿಯಾಜ್ ಕಾರುಗಳ ಖರೀದಿ ಮೇಲೆ ಮಾರುತಿ ಸುಜುಕಿ ಸಂಸ್ಥೆಯು ರೂ. 80 ಸಾವಿರ ಡಿಸ್ಕೌಂಟ್ ಹಾಗೂ 7 ವರ್ಷದೊಳಗಿನ ಕಾರುಗಳ ಎಕ್ಸ್‌ಚೆಂಜ್ ಮೇಲೆ ರೂ. 50 ಸಾವಿರ ಆಫರ್ ದೊರೆಯಲಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಮಾರುತಿ ಸುಜುಕಿ ಇಗ್ನಿಸ್

ಸ್ಪೋರ್ಟಿ ಲುಕ್ ಹೊಂದಿರುವ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಇಗ್ನಿಸ್ ಕಾರುಗಳ ಮೇಲೆ ಮಾರುತಿ ಸಂಸ್ಥೆಯು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ ರೂ.35 ಸಾವಿರ ಡಿಸ್ಕೌಂಟ್ ಹಾಗೂ ರೂ. 25 ಸಾವಿರ ಎಕ್ಸ್‌ಚೆಂಜ್ ಆಫರ್ ದೊರೆಯಲಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಸಿಎನ್‌ಜಿ ವ್ಯಾಗನ್ ಆರ್

ಮಾರುತಿ ಸುಜುಕಿ ನಿರ್ಮಾಣದ ಜನಪ್ರಿಯ ಕಾರುಗಳಲ್ಲಿ ಅತಿ ಮಾರಾಟಗೊಳ್ಳುವ ವ್ಯಾಗನ್ ಆರ್ ಕಾರುಗಳ ಮೇಲು ಉತ್ತಮ ಆಫರ್ ಘೋಷಣೆ ಮಾಡಲಾಗಿದೆ. ಸಿಎನ್‌ಜಿ ವರ್ಷನ್ ಮೇಲೆ ರೂ.35 ಸಾವಿರ ಡಿಸ್ಕೌಂಟ್ ಮತ್ತು 7 ವರ್ಷದೊಳಗಿನ ಕಾರು ಮಾದರಿಗಳ ಎಕ್ಸ್‌ಚೆಂಜ್ ಮೇಲೆ ರೂ. 20 ಸಾವಿರ ಆಫರ್ ದೊರೆಯಲಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಸಿಟಿ

ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ಹೋಂಡಾ ಸಿಟಿ ಕಾರುಗಳ ಖರೀದಿ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ ರೂ.20 ಆಫರ್ ಮತ್ತು ಮೊದಲ ವರ್ಷದ ಕಾರು ವಿಮೆಯನ್ನು ಉಚಿತವಾಗಿ ನೀಡಲಾಗುತ್ತಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಜಾಝ್ ಹ್ಯಾಚ್‌ಬ್ಯಾಕ್

ಹೋಂಡಾ ಸಂಸ್ಥೆಯ ಜನಪ್ರಿಯ ಹ್ಯಾಚ್‌ಬ್ಯಾಕ್ ಮಾದರಿಯಾಗಿರುವ ಜಾಝ್ ಕಾರುಗಳ ಮೇಲೆ ಅತ್ಯುತ್ತಮ ಖರೀದಿ ಆಫರ್ ಲಭ್ಯವಿದೆ. ಫೇಸ್‌ಲಿಫ್ಟ್ ಹೊರತುಪಡಿಸಿ ಹಳೆಯ ಮಾದರಿಯ ಜಾಝ್ ಕಾರುಗಳ ಮೇಲೆ ಬರೋಬ್ಬರಿ ರೂ.75,000 ಡಿಸ್ಕೌಂಟ್ ಮತ್ತು ಬ್ರಿಯೋ ಕಾರುಗಳ ಖರೀದಿ ಮೇಲೆ ಒಂದು ವರ್ಷದ ಉಚಿತ ವಿಮೆ ಪಡೆದುಕೊಳ್ಳಬಹುದು.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹೋಂಡಾ ಬಿಆರ್-ವಿ

ಕ್ರಾಸ್ಒವರ್ ಬಿಆರ್-ವಿ ಕಾರುಗಳ ಖರೀದಿ ಮೇಲೆ ಗರಿಷ್ಠ 1 ಲಕ್ಷ ಆಫರ್ ದೊರೆಯಲಿದ್ದು, ಇದರಲ್ಲಿ ಮೊದಲ ವರ್ಷದ ಉಚಿತ ವಿಮೆ, ಎಕ್ಸ್‌ಚೆಂಜ್ ಮೇಲೆ ರೂ.50 ಸಾವಿರ, ಮತ್ತು ರೂ.16 ಸಾವಿರ ಮೌಲ್ಯ ಆಕ್ಸೆರಿಸ್ ಲಭ್ಯವಾಗಲಿವೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ಹೋಂಡಾ ಐಷಾರಾಮಿ ಎಸ್‌ಯುವಿ ಮಾದರಿಯಾದ ಸಿಆರ್-ವಿ ಕಾರುಗಳ ಮೇಲೆ ರೂ. 1.50 ಲಕ್ಷ ಡಿಸ್ಕೌಂಟ್ ಲಭ್ಯವಿದ್ದು, ಮುಂದಿನ ತಿಂಗಳು ನೆಕ್ಸ್ಟ್ ಜನರೇಷನ್ ಸಿಆರ್-ವಿ ಕಾರುಗಳ ಬಿಡುಗಡೆ ಹಿನ್ನೆಲೆಯಲ್ಲಿ ಸಿಆರ್-ವಿ ಮೇಲೆ ಭರ್ಜರಿ ಆಫರ್ ನೀಡುತ್ತಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹ್ಯುಂಡೈ ಕಾರುಗಳು ಮೇಲಿನ ಆಫರ್

ದೇಶದ ಎರಡನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಹ್ಯುಂಡೈ ಸಂಸ್ಥೆಯು ವೆರ್ನಾ ಸೆಡಾನ್ ಕಾರುಗಳ ಮೇಲೆ ರೂ. 20 ಸಾವಿರ ಆಫರ್ ಮತ್ತು ರೂ. 20 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದ್ದು, ಎಕ್ಸ್‌ಸೆಂಟ್ ಕಾರುಗಳ ಖರೀದಿ ಮೇಲೆ ರೂ. 40 ಸಾವಿರ ಡಿಸ್ಕೌಂಟ್ ಮತ್ತು ರೂ.45 ಸಾವಿರ ಎಕ್ಸ್‌ಚೆಂಜ್ ಆಫರ್ ಲಭ್ಯವಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಹ್ಯುಂಡೈ ಐ10 ಕಾರುಗಳ ಮೇಲೂ ಸಹ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಆಫರ್‌ಗಳು ಲಭ್ಯವಿದ್ದು, ರೂ. 50 ಸಾವಿರ ಡಿಸ್ಕೌಂಟ್, ರೂ. 20 ಸಾವಿರ ಎಕ್ಸ್‌ಚೆಂಜ್ ಆಫರ್ ಹಾಗೂ ಐ20 ಎಲೈಟ್ ಕಾರುಗಳ ಮೇಲೆ ರೂ.20 ಸಾವಿರ ಎಕ್ಸ್‌ಚೆಂಜ್ ಆಫರ್ ಪಡೆದುಕೊಂಡಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಜೊತೆಗೆ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಆಫರ್ ಪರಿಚಯಿಸಿರುವ ಹ್ಯುಂಡೈ ಸಂಸ್ಥೆಯು ಲಭ್ಯವಿರುವ ಡಿಸ್ಕೌಂಟ್ ಹೊರತು ಪಡಿಸಿ, ರೂ.5 ಸಾವಿರದಿಂದ ರೂ.30 ಸಾವಿರದ ತನಕ ವಿವಿಧ ಕಾರುಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಟಾಟಾ ಕಾರುಗಳ ಮೇಲಿನ ಆಫರ್

ದೇಶಿಯ ಕಾರು ಉತ್ಪಾದನಾ ಸಂಸ್ಥೆಯಾದ ಟಾಟಾ ಮೋಟಾರ್ಸ್ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ ಟಿಯಾಗೋ ಕಾರುಗಳ ಮೇಲೆ ರೂ.10 ಸಾವಿರ ಎಕ್ಸ್‌ಚೆಂಜ್ ಮತ್ತು ಮೊದಲ ವರ್ಷದ ಉಚಿತ ಕಾರು ವಿಮೆ ನೀಡಲಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಅದೇ ರೀತಿಯಾಗಿ ಟಿಗೋರ್ ಕಾರುಗಳ ಮೇಲೂ ಸಹ ರೂ.10 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ, ಹೆಕ್ಸಾ ಕಾರುಗಳ ಮೇಲೆ ರೂ.5 ಸಾವಿರ ಡಿಸ್ಕೌಂಟ್ ಮತ್ತು ರೂ. 15 ಸಾವಿರ ಎಕ್ಸ್‌ಚೆಂಜ್ ಆಫರ್ ನೀಡುತ್ತಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಮಹೀಂದ್ರಾ ಕಾರುಗಳ ಮೇಲಿನ ಆಫರ್

ದೇಶದ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಮಹೀಂದ್ರಾ ಸಂಸ್ಥೆಯು ಸಹ ಗ್ರಾಹಕರಿಗೆ ಹೆಚ್ಚಿನ ಮಟ್ಟದ ಆಫರ್ ನೀಡುತ್ತಿದ್ದು, ಕೆಯುವಿ100, ಟಿಯುವಿ300, ಥಾರ್, ಸ್ಕಾರ್ಪಿಯೋ ಮತ್ತು ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರುಗಳ ಮೇಲೂ ಡಿಸ್ಕೌಂಟ್ ಆಫರ್ ಮತ್ತು ಎಕ್ಸ್‌ಚೆಂಜ್ ಆಫರ್ ನೀಡಲಾಗುತ್ತಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಪ್ರತಿ ಕಾರುಗಳ ಮೇಲೂ ರೂ. 20 ಸಾವಿರ ಡಿಸ್ಕೌಂಟ್ ಮತ್ತು ರೂ. 20 ಸಾವಿರ ಎಕ್ಸ್‌ಚೆಂಜ್ ಆಫರ್ ಮತ್ತು ಕೆಲವು ಕಾರುಗಳ ಮೇಲೆ ಮೊದಲ ವರ್ಷದ ಆಫರ್ ಲಭ್ಯವಿದ್ದು, ಆಫ್ ರೋಡ್ ಕಾರು ಮಾದರಿಯಾದ ಥಾರ್ ಮೇಲೆ ರೂ.46 ಸಾವಿರ ಡಿಸ್ಕೌಂಟ್ ಮತ್ತು ರೂ.10 ಸಾವಿರ ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ.

ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ- ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ವಿ.ಸೂ: ಮೇಲೆ ನೀಡಲಾಗಿರುವ ಡಿಸ್ಕೌಂಟ್ ಆಫರ್‌ಗಳು ಮತ್ತು ಎಕ್ಸ್‌ಚೆಂಜ್ ಆಫರ್‌ಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಿರಲಿದ್ದು, ಹೆಚ್ಚಿನ ಮಾಹಿತಿ ನಿಮ್ಮ ಹತ್ತಿರದ ಕಾರು ಡೀಲರ್ಸ್‌ಗಳ ಬಳಿ ಈ ಬಗ್ಗೆ ಚರ್ಚೆ ಮಾಡಿ ವ್ಯವಹಾರ ಮುಂದುವರಿಸಿ..

Source: carandbike

Article Published On: Wednesday, August 15, 2018, 13:00 [IST]
English summary
Best Discounts On Cars. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+