ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ತಮ್ಮ ಬಹು ನಿರೀಕ್ಷಿತ ಮರಾಜೊ ಎಮ್‍ಪಿವಿ ಕಾರನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದು, ಈಗಾಗಲೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ತಮ್ಮ ಬಹು ನಿರೀಕ್ಷಿತ ಮರಾಜೊ ಎಮ್‍ಪಿವಿ ಕಾರನ್ನು ಬಿಡುಗಡೆಗೊಳಿಸುವ ತವಕದಲ್ಲಿದ್ದು, ಈಗಾಗಲೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಆದರೆ ಇದೇ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್‍‍ನೊಂದಿಗೆ ಕಾಣಿಸಿಕೊಂಡಿದ್ದು, ಟೊಯೊಟಾ ಇನ್ನೊವಾ ಕ್ರಿಸ್ಟಾ ಕಾರಿಗಿಂತಾ ಹೆಚ್ಚು ಸ್ಟೈಲಿಷ್ ಆಗಿದೆ.

ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ಮಹೀಂದ್ರಾ ಸಂಸ್ಥೆಯು ಶಾರ್ಕ್ ಮೀನಿನ ವಿನ್ಯಾಸದಲ್ಲಿ ಮರಾಜೊ ಕಾರನ್ನು ತಯಾರು ಮಾಡಲಾಗುತ್ತಿದ್ದು, ಶಾರ್ಕ್‍‍ನ ಕಣ್ಣಿನಂತಯೆ ಈ ಕಾರಿನ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಆನ್ನು ಕೂಡ ವಿನ್ಯಾಸಗೊಳಿಸಲಾಗಿದೆ. ಮತ್ತು ಶಾರ್ಕ್ ಹಲ್ಲುಗಳ ಹಾಗಿರುವ ಫ್ರಂಟ್ ಗ್ರಿಲ್, ಶಾರ್ಕ್‍‍ನಂತೆಯೆ ಮಸ್ಕ್ಯುಲರ್ ಬಾಡಿ ಹಾಗು ಶಾರ್ಕ್‍‍ನ ಬಾಲದಂತೆಯೆ ಟೈಲ್ ಲೈಟ್ ಅನ್ನು ವಿನ್ಯಾಸದಗೊಳಿಸಲಾಗಿದೆ.

ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ನಾರ್ತ್ ಅಮೆರಿಕದಲ್ಲಿರುವ ಮಹೀಂದ್ರಾ ಡಿಸೈನ್ ಸೇಂಟರ್‌ನಲ್ಲಿ ಹೊಸ ಕಾರಿನ ವಿನ್ಯಾಸಗಳನ್ನ ಸಿದ್ದಪಡಿಸಲಾಗಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯ ಗುಣಲಕ್ಷಣಗಳನ್ನ ಹೊಂದಿರುವ ಮರಾಜೊ ಕಾರು ಭಾರತದಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಲ್ಲೂ ಬಿಡುಗಡೆಯ ಸುಳಿವು ನೀಡಿದೆ.

ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೇ, ಎತ್ತರವಾದ ಏಳು ಲೆದರ್ ಸೀಟ್‍‍ಗಳು, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಮರಾಜೊ ಕಾರುಗಳು 1.6-ಲೀಟರ್ ಎಂಜಿನ್ ಸಹಾಯದಿಂದ 125-ಬಿಹೆಚ್‍ಪಿ ಮತ್ತು 305-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ. ಆದ್ರೆ ಪೆಟ್ರೋಲ್ ವರ್ಷನ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡದ ಮಹೀಂದ್ರಾ ಸಂಸ್ಥೆಯು ಹೊಸ ಕಾರಿನ ಬಿಡುಗಡೆ ನಂತರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ಇದರೊಂದಿಗೆ ಎಂಪಿವಿ ಬೇಸ್ ಮಾಡೆಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್‍, ಇಬಿಡಿ ಮತ್ತು ಡ್ಯುಯಲ್ ಏರ್‍‍ಬ್ಯಾಗ್‍‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍‍ನಲ್ಲೂ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍‍ಬ್ಯಾಗ್‍‍ಗಳನ್ನು ಕೂಡಾ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ಸದ್ಯ ಹೊಸ ಕಾರಿನ ಅಧಿಕೃತ ಹೆಸರನ್ನು ಮಾತ್ರವೇ ಬಹಿರಂಗ ಪಡಿಸಿರುವ ಮಹೀಂದ್ರಾ ಸಂಸ್ಥೆಯು ದೀಪಾವಳಿ ಹೊತ್ತಿಗೆ ಮರಾಜೊ ಕಾರನ್ನ ಬಿಡುಗಡೆ ಮಾಡಲಿದ್ದು, ಎಂಪಿವಿ ಕಾರು ಪ್ರಿಯರನ್ನ ಆಕರ್ಷಣೆ ಎಲ್ಲಾ ಗುಣಲಕ್ಷಣಗಳನ್ನು ಪಡೆದುಕೊಂಡಿದೆ.

ಸ್ಟೈಲಿಷ್ ಎಲ್ಇಡಿ ಫಾಗ್ ಲೈಟ್ ಡಿಆರ್‍‍ಎಲ್ ಪಡೆಯಲಿರುವ ಮಹೀಂದ್ರಾ ಮರಾಜೊ..

ಒಟ್ಟಿನಲ್ಲಿ ಮಹೀಂದ್ರಾ ಹೊಸ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ, ಟಾಟಾ ಹೆಕ್ಸಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದ್ದು, ಇನ್ನು ಕಾರಿನ ಬೆಲೆಯ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದ್ರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ ಕಾರು 11 ರಿಂದ 17 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

More from DriveSpark

Article Published On: Tuesday, August 14, 2018, 19:01 [IST]
English summary
2018 Mahindra Marazzo LED fog light DRL spied.
Read more on mahindra mpv new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+