ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಕಿಕ್ಸ್ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಇದೀಗ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ ಕಿಕ್ಸ್ ಕ್ರಾಸ್‍ಓವರ್ ಎಸ್‍‍ಯುವಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಇದೀಗ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಮಾಹಿತಿಗಳ ಪ್ರಕಾರ ಇದೇ ವರ್ಷದಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದ್ದು ಈ ಕಾರಿನ ವಿಶೇಷವೇನೆಂದರೆ ನಿಸ್ಸಾನ್ ಸಂಸ್ಥೆಯು 5 ವರ್ಷಗಳ ನಂತರ ತಮ್ಮ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ನಿಸ್ಸಾನ್ ಕಿಕ್ಸ್ ಈಗಾಗಲೆ ಜಾಗತಿಕ ಮಾರುಕಟ್ಟೆಯಲ್ಲಿ ವಿ ಪ್ಲಾಟ್‍‍ಫಾರ್ಮ್ ಆಧಾರಿತ ಕ್ರಾಸ್ಓವರ್ ಎಸ್‍ಯುವಿ ಕಾರ್ ರೂಪದಲ್ಲಿ ಮಾರಾಟಗೊಳ್ಳುತ್ತಿದೆ. ಆದರೆ ಭಾರತಕ್ಕೆ ಬರಲಿರುವ ಕಿಕ್ಸ್ ಕಾರುಗಳು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ ಎನ್ನಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಕಾರು ರೆನಾಲ್ಟ್ ಕ್ಯಾಪ್ಚುರ್ ಕಾರಿನಲ್ಲಿ ಬಳಸಿರುವ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 104 ಬಿಹೆಚ್‍‍ಪಿ ಮತ್ತು 142ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍‍ಪಿ ಮತ್ತು 240ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂಗಿದೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಜಾಗತಿಕವಾಗಿ ನಿಸ್ಸಾನ್ ಕಿಕ್ಸ್ ಆಲ್ ವೀಲ್ ಡ್ರೈವ್ ಅನ್ನು ಪಡೆದಿದ್ದು, ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಕಾರು ಕೂಡ ಆಲ್ ವೀಲ್ ಡ್ರೈವ್ ಅನ್ನು ಪಡೆದುಕೊಂಡಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಇನ್ನು ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಕ್ರೋಮ್ ಆಕ್ಸೆಂಟ್‍‍ನೊಂದಿಗೆ ಹನಿಕಾಂಬ್ ಫ್ರಂಟ್ ಗ್ರಿಲ್, ಬೋಲ್ಡ್ ಬಂಪಅರ್ ಮತ್ತು ಎಲ್ಇಡಿ ಹೆಡ್‍‍ಲ್ಯಾಂಪ್‍ಗಳನ್ನು ಪಡೆದುಕೊಂಡಿದ್ದು, ಡ್ಯುಯಲ್ ಪೆಯಿಂಟ್ ಸ್ಕೀಮ್‍‍ನಲ್ಲಿ ಫ್ಲೋತಿಂಗ್ ರೂಫ್ ಅನ್ನು ಒದಗಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಇದಲ್ಲದೇ ಈ ಕಾರು ಫ್ಲೇರ್ಡ್ ವ್ಹೀಲ್ ಆರ್ಚೆಸ್, ಬಾಡಿ ಕ್ಲೇಡಿಂಗ್, ಅಗಲವಾದ ಅಲಾಯ್ ಚಕ್ರಗಳು ಮತ್ತು ಎತ್ತರವಾದ ಗ್ರೌಂಡ್ ಕ್ಲಿಯರೆನ್ಸ್, ಬೂಮರಂಗ್ ಆಕಾರದಲ್ಲಿರುವ ಟೈಲ್ ಲ್ಯಾಂಪ್ಸ್ ಅನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಬಿಡುಗಡೆಗೊಳ್ಳಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಒಳಭಾಗದಲ್ಲಿ ರೇನಾಲ್ಟ್ ಕ್ಯಾಪ್ಚುರ್‍‍ನಿಂದ ಪಡೆದಿರುವ ಡ್ಯಾಶ್‍‍ಬೋರ್ಡ್ ಮತ್ತು ಸೀಟಿಂಗ್ ವ್ಯವಸ್ಥೆಯನ್ನು ಪಡೆದುಕೊಂಡಿದ್ದು, ಡ್ಯುಯಲ್ ಟೋನ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಜೊತೆಗೆ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಲೆಧರ್‍‍ನಿಂದ ಸುತ್ತುವರೆದ ಸ್ಟೀರಿಂಗ್ ವ್ಹೀಲ್, ಮಲ್ಟಿ ಇನ್ಫರ್ಮೇಷನ್ ಡಿಸ್ಪ್ಲೇಯ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‍‍ಬ್ಯಾಗ್ ಹಾಗು 360 ಡಿಗ್ರಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ನಿಸ್ಸಾನ್ ಸಂಸ್ಥೆಯ ಹೊಸ ಎಸ್‍‍ಯುವಿ ಕಾರು..

ಬರಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.5 ಲಕ್ಷದಿಂದ ರೂ. 14.5 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಹ್ಯುಂಡೈ ಕ್ರೆಟಾ, ಮಾರುತಿ ಎಸ್-ಕ್ರಾಸ್ಓವರ್, ಹೋಂಡಾ ಬಿಆರ್- ವಿ ಮತ್ತು ರೆನಾಲ್ಟ್ ಕ್ಯಾಪ್ಚುರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

Source : Powerstroke

More from DriveSpark

Article Published On: Monday, August 20, 2018, 9:49 [IST]
English summary
2018 Nissan Kicks SUV for India spied.
Read more on nissan suv new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+