ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ತಮ್ಮ ಇಟಿಯಾಸ್ ಲಿವಾ ಕಾರಿನ ಲಿಮಿಟೆಡ್ ಎಡಿಷನ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಡ್ಯುಯಲ್ ಟೋನ್ ಬಣ್ಣ ಮತ್ತು ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ.

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ತಮ್ಮ ಇಟಿಯಾಸ್ ಲಿವಾ ಕಾರಿನ ಲಿಮಿಟೆಡ್ ಎಡಿಷನ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಹೊಸ ಡ್ಯುಯಲ್ ಟೋನ್ ಬಣ್ಣ ಮತ್ತು ಹೊಸ ವಿನ್ಯಾಸವನ್ನು ಪಡೆದುಕೊಂಡಿದೆ. ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರುಗಳು ಕೇವಲ ಸೂಪರ್‍ ವೈಟ್ ಬಣ್ಣದಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರುಗಳು ಪೆಟ್ರೋಲ್ ಹಾಗು ಡೀಸೆಲ್ ಮಾದರಿಯಲ್ಲಿ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 6.50 ಲಕ್ಷ ಮತ್ತು ಡೀಸೆಲ್ ಮಾದರಿಯ ಕಾರಿನ ಬೆಲೆಯನ್ನು ರೂ. 7.65 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಟೊಯೋಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರುಗಳ ಹೊರಭಾಗದಲ್ಲಿ ಸ್ಪೋರ್ಟಿ ರೆಡ್ ಮತ್ತು ಡ್ಯುಯಲ್ ಟೋನ್ ಗ್ರಿಲ್, ಸ್ಪೋರ್ಟಿ ರೆಡ್ ಫ್ರಂಟ್ ಫಾಗ್ ಬೆಜೆಲ್, ಸ್ಪೋರ್ಟಿ ರೆಡ್ ಡೋರ್ ಹ್ಯಾಂಡಲ್ಸ್, ಡೈಮಂಡ್ ಕಟ್ ಅಲಾಯ್ ವ್ಹೀಲ್ಸ್, ಬೂಟ್‍‍ನ ಮೇಲೆ ಸ್ಪೋರ್ಟಿ ರೆಡ್ ಗಾರ್ನಿಷ್ ಮತ್ತು ಬದಿಗಳಲ್ಲಿ ಸ್ಪೋರ್ಟಿ ಡೆಕಲ್ಸ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಎಂಜಿನ್ ಸಾಮರ್ಥ್ಯ

ಲಿಮಿಟೆಡ್ ಎಡಿಷನ್ ಇಟಿಯಾಸ್ ಲಿವಾ ಪೆಟ್ರೋಲ್ ಮಾದರಿಯ ಕಾರುಗಳು 1197ಸಿಸಿ, 1.2 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 80ಬಿಹೆಚ್‍‍ಪಿ ಮತ್ತು 104 ಎನ್ಎಮ್ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪ್ರತೀ ಲೀಟರ್‍‍ಗೆ 18.16 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಇನ್ನು ಡೀಸೆಲ್ ಮಾದರಿಯ ಕಾರುಗಳು 1364ಸಿಸಿ 1.4 ಲೀಟರ್ ಡೀಸೆಲ್, 4 ಸಿಲೆಂಡರ್ ಎಂಜಿನ್ ಸಹಾಯದಿಂದ 68ಬಿಹೆಚ್‍‍ಪಿ ಮತ್ತು 170ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿ ಪಡೆದಿದ್ದು, ಪ್ರತೀ ಲೀಟರ್‍‍ಗೆ 23.59 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರುಗಳು 3884ಎಮ್ಎಮ್ ಉದ್ದ, 1695ಎಮ್ಎಮ್ ಅಗಲ, 1510 ಎಮ್ಎಮ್ ಎತ್ತರ, 2460ಎಮ್ಎಮ್ ವ್ಹೀಲ್‍‍ಬೇಸ್ ಮತ್ತು 45 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರಿನ ಒಳಭಾಗದಲ್ಲಿ ಸ್ಪೋರ್ಟಿ ಬ್ಲಾಕ್ ಇಂಟೀರಿಯರ್, ಡೋರ್ ಆರ್ಮ್‍‍ರೆಸ್ಟ್ ಮತ್ತು ಡ್ಯಾಶ್ ಬೋರ್ಡ್‍ ಅನ್ನು ಪಿಯಾನೊ ಬ್ಲಾಕ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇನ್ನು ಸೀಟ್‍‍ಗಳನ್ನು ಸ್ಪೋರ್ಟಿ ಗ್ರೇ ಹಾಗು ಬ್ಲಾಕ್ ಫ್ಯಾಬ್ರಿಕ್‍‍ನಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಈ ಕಾರಿನಲ್ಲಿ 3 ಸ್ಪೋಕ್ ಸ್ಪೋರ್ಟಿ ಲೆಧರ್‍‍ನಿಂದ ಸಜ್ಜುಗೊಳಿಸಲಾದ ಸ್ಟೀರಿಂಗ್ ವ್ಹೀಲ್, ಗೇರ್ ಶಿಫ್ಟ್ ಕ್ನಾಬ್ ಮತ್ತು ಎಸಿ ರಿಂಗ್‍‍ಗಳ ಮೇಲೆ ಸ್ಪೋರ್ಟಿ ರೆಡ್ ಅಕ್ಸೆಂಟ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಇದಲ್ಲದೆ ಪವರ್ ವಿಂಡೊಸ್, ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ರಿಯರ್ ಡೀಫಾಗರ್, ವಾಯ್ಸ್ ರಿಕಗ್ನಿಷನ್, ಬೂಟೂತ್ ಮತ್ತು ರೊಮೋಟ್ ಕಂಟ್ರೋಲ್ ಆಯ್ಕೆಯನ್ನು ಒದಗಿಸಲಬಲ್ಲ 6.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇಟಿಯಾಸ್ ಲಿವಾ ಲಿಮಿಟೆಡ್ ಎಡಿಷನ್ ಕಾರು..

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ರಿವರ್ಸ್ ಸೆನ್ಸಾರ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ಬಜರ್ ಸೀಟ್ ಬೆಲ್ಟ್ ವಾರ್ನಿಂಗ್, ಹೆಡ್‍‍ಲ್ಯಾಂಪ್ ಆನ್ ವಾರ್ನಿಂಗ್, ಚೈಲ್ಡ್ ರೆಸ್ಟ್ರೈಂಟ್ ಸಿಸ್ಟಮ್ ಐಎಸ್ಒಫಿಕ್ಸ್, ಇಮ್ಮೊಬಿಲೈಜರ್ ಮತ್ತು ಕೀಲೆಸ್ ಎಂಟ್ರಿ ಅಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

More from DriveSpark

Article Published On: Tuesday, August 7, 2018, 16:57 [IST]
English summary
2018 Toyota Etios Liva special edition launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+