ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಹ್ಯುಂಡೈ ಮೋಟರ್ಸ್ ಸಂಸ್ಥೆಯು 2020ರ ವೇಳೆಗೆ 8 ಹೊಸ ಕಾರುಗಳನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಅವುಗಳಲ್ಲಿ 5 ಹೊಸ ತಲೆಮಾರಿನ ಕಾರುಗಳಾಗಿದ್ದು, ಮಾರುತಿ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರಿಗೆ ಪೈಪೋಟಿಯಾಗಿ ಮುಂದಿನ ತಲೆಮಾರಿನ ಗ್ರ

By Rahul Ts

ಹ್ಯುಂಡೈ ಮೋಟರ್ಸ್ ಸಂಸ್ಥೆಯು 2020ರ ವೇಳೆಗೆ 8 ಹೊಸ ಕಾರುಗಳನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಅವುಗಳಲ್ಲಿ 5 ಹೊಸ ತಲೆಮಾರಿನ ಕಾರುಗಳಾಗಿದ್ದು, ಮಾರುತಿ ಸ್ವಿಫ್ಟ್ ಹ್ಯಾಚ್‍ಬ್ಯಾಕ್ ಕಾರಿಗೆ ಪೈಪೋಟಿಯಾಗಿ ಮುಂದಿನ ತಲೆಮಾರಿನ ಗ್ರ್ಯಾಂಡ್ ಐ10 ಕಾರನ್ನು ಕೂಡಾ ಪರಿಚಯಿಸುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಮೊದಲ ಬಾರಿಗೆ ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಮೊದಲ ಬಾರಿಗೆ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್‍‍ನ ವೇಳೆ ಕಾಣಿಸಿಕೊಂಡಿದೆ. 2013ರಲ್ಲಿ ಬಿಡುಗಡೆಗೊಂಡ ಈ ಕಾರು ಎಅರ್ಡು ವರ್ಷಗಳ ಹಿಂದೆ ಜಾಗತಿಕವಾಗಿ ನವೀಕರಣವನ್ನು ಪಡೆದುಕೊಂಡಿತ್ತು. ಇದೀಗ ಸಂಸ್ಥೆಯು ಈ ಕಾರಿಗೆ ಹೊಸ ಫ್ಲಾಟ್‍‍ಫಾರ್ಮ್ ಅನ್ನು ಹೊಸ ಚಾಸಿಸ್‍‍ನ ಅಡಿಯಲ್ಲಿ ನಿರ್ಮಿಸುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಭಾರತದಲ್ಲಿ ಟೆಸ್ಟಿಂಗ್‍ ನಡೆಸುತಿರುವ ಹೊಸ ಹ್ಯುಂಡೈ ಗ್ರಾಂಡ್ ಐ10 ಕಾರು ಪ್ರೊಟೊಟೈಪ್ ಉತ್ಪಾದನಾ ಸಿದ್ಧ ಮಾದರಿಯಂತೆ ಕಾಣುತ್ತದೆ. ಪ್ರಸ್ತುತ ಗ್ರ್ಯಾಂಡ್ ಐ10 ಗೆ ಹೋಲಿಸಿದರೆ (ಬಹುಶಃ 2018 ಸ್ಯಾಂಟ್ರೊವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಕಾಣುತ್ತದೆ) ಹೊಸ ಗ್ರ್ಯಾಂಡ್ ಐ10 ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿರಲಿದ್ದು, ಹಿಂದಿನ ತಲೆಮಾರಿನ ಗ್ರಾಂಡ್ ಐ10 ಕಾರಿಗಿಂತ ಅಧಿಕ ಸುತ್ತಳತೆಯನ್ನು ಹೊಂದಿರಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ಮುಂಭಾಗದಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಅಕ್ಕ್ಸೆಂಟ್ ಮತ್ತು ಸ್ಪೋರ್ಟಿ ಬಂಪರ್‍‍‍ಗಳನ್ನು ನೀಡಲಾಗಿದೆ. ಆದರೆ ಕೊರಿಯಾ ದೇಶದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ಹೊರಭಾಗದಲ್ಲಿ ಎಲ್ಇಡಿ ಡಿಆರ್‍ಎಲ್ ಅನ್ನು ಪಡೆದುಕೊಂಡಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಭಾರತದಲ್ಲಿ ಕಾಣಿಸಿಕೊಂಡ ಕಾರಿನಲ್ಲಿ ಹ್ಯಾಲೊಗನ್ ಹೆಡ್‍‍ಲ್ಯಾಂಪ್ಸ್ ಅನ್ನು ಪಡೆದುಕೊಂಡಿದೆ. ಅಲ್ಲದೇ ಹಿಂಭಾಗದಲ್ಲಿಯು ಬದಲಾವಣೆಯನ್ನು ಕಾಣಬಹುದಾಗಿದ್ದು, ಅಗಲವಾದ ಟೈಲ್‍‍ಲ್ಯಾಂಪ್ಸ್, ಹೊಸ ಬಾಗಿಲುಗಳು ಮತ್ತು ಕಾರಿನ ಟಾಪ್ ಸ್ಪೆಕ್ ಮಾಡಲ್‍‍ನಲ್ಲಿ 15 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಅಳವಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಕಾರಿನ ಹೊರ ಭಾಗವು ಈ ಬಾರಿ ವಿಶಾಲವಾಗಿರಲಿದ್ದು, ಸೌರರ್ಯವಂತವಾದ ಲೆಗ್‍ರೂಂ ಮತ್ತು ಹೆಡ್‍‍ರೂಂ ಅನ್ನು ನೀಡಲಾಗಿದೆ. ಇದಲ್ಲದೇ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಹೊಸ ಇನ್ಸ್ಟ್ರೂಮೆಂಟ್ ಕ್ಲಸ್ಟರ್‍‍ನೊಂಡಿಗೆ ಮಲ್ಟಿ ಇನ್ಫಾರ್‍‍ಮೇಶನ್ ಡಿಸ್ಪ್ಲೆ, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಆಯ್ಕೆಯನ್ನು ಸಪೋರ್ಟ್ ಮಾಡಬಲ್ಲ ಟಚ್‍‍‍ಸ್ಕ್ರೀನ್ ಇನ್ಫೋ‍‍ಟೈನ್ಮೆಂಟ್ ಸಿಸ್ಟಮ್ ಅನ್ನು ನೀಡಲಿದೆ ಎಂಬ ಭರವಸೆ ಇದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಮುಂದಿನ ತಲೆಮಾರಿನ ಹೊಸ ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನ ತಾಂತ್ರಿಕ ಅಂಶಗಳಾ ಬಗ್ಗೆ ಮಾಹಿತಿ ಇನ್ನು ಬಹಿರಂಗಗೊಂಡಿಲ್ಲ. ಆದರೆ ಹಿಂದಿನ ತಲೆಮಾರಿನಲ್ಲಿ ಬಳಸಲಾದ ಎಂಜಿನ್ ಅನ್ನು ಬಳಸಲಾಗಲಿದೆ ಎಂಬ ಭರವಸೆಯಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಹಿಂದಿನ ತಲೆಮಾರು ಹ್ಯುಂಡಿ ಗ್ರ್ಯಾಂಡ್ ಐ10 ಕಾರಿನ 1.2 ಲೀಟರ್ 4ಸಿಸ್ಲೆಂಡರ್ ಕಪ್ಪಾ ಪೆಟ್ರೋಲ್ ಎಂಜಿನ್‍‍ಗಳು, 83 ಬಿಹೆಚ್‍‍ಪಿ ಮತ್ತು 113.6 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಲ್ಲದೇ 1.2 ಲೀಟರ್ ಯು2 ಸಿಆರ್‍‍ಡಿಐ ಡೀಸೆಲ್ ಎಂಜಿನ್‍‍ಗಳು 75ಬಿಹೆಚ್‍ಪಿ ಮತ್ತು 190ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮುಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10..

ಹೊಸ ಕಾರಿನ ಬೆಲೆಗಳನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.5 ರಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಈ ಕಾರಿನ ಸ್ಗೆಮೇಂಟ್‍‍ನಲ್ಲಿ ಹಿಂದಿನ ತಲೆಮಾರಿನ ಹ್ಯುಂಡೈ ಗ್ರ್ಯಾಂಡ್ ಐ10 ಕಾರು ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ.

More from DriveSpark

Article Published On: Thursday, August 30, 2018, 10:44 [IST]
English summary
2019 Hyundai Grand i10 (new gen) spied – Maruti Swift rival launch next year.
Read more on hyundai hatchback i10
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+