ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ತಾವು ಮುಂದಿನ ವರ್ಷ ಬಿಡುಗಡೆಗೊಳಿಸಲಿರುವ ಹೊಸ ವ್ಯಾಗನಾರ್ ಕಾರನ್ನು ಪರೀಕ್ಷಿಸುತ್ತಿರುವ ಕಾರ್ಯದಲ್ಲಿದ್ದು, ಈ ಕಾರು ಹ್ಯುಂಡೈ ಸಂಸ್ಥೆಯು ಅಕ್ಟೋಬರ್ 23ರಂದು ಬಿಡುಗಡೆಗೊಳಿಸಲಿರುವ ಹೊಸ ತಲೆಮಾರಿನ ಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡಲಿದೆ.

ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ಹೊಸದಾಗಿ ಬಿಡುಗಡೆಗೊಳ್ಳಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಪ್ರಸ್ಥುತ ತಲೆಮಾರಿನ ಸ್ಥಾನವನ್ನು ಭರತೀ ಮಾಡಲಿದೆ. ಈ ಆರು ಇನ್ನಿತರೆ ದೇಶಗಳಲ್ಲಿ ಈಗಾಗಲೆ ಮಾರಾಟಗೊಳ್ಳುತ್ತಿರುವ ಮಾದರಿಯನ್ನು ಆಧರಿಸಲಿದ್ದು, ಸುಜುಕಿ ಸಂಸ್ಥೆಯ ಹಾರ್ಟ್‍‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಬಳಸಲಿದೆ.

ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಲ್-ಬಾಯ್ ವಿನ್ಯಾವನ್ನು ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ವ್ಯಾಗನಾರ್ ಕಾರು ಕೂಡಾ ಪಡೆದುಕೊಳ್ಳಾಲಿದೆ. ಈ ಕಾರಿನಲ್ಲಿ ಹೊಸ ಕ್ರೋಮ್ ಗ್ರಿಲ್, ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಅಗಲವಾದ ಬಂಪರ್‍‍ಗಳು ಮತ್ತು ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ಇದು ಕಾರಿನ ಹೊರ ವಿನ್ಯಾಸವಾದರೆ ಒಳವಿನ್ಯಾಸದಲ್ಲಿ ಪ್ರಸ್ಥುತ ತಲೆಮಾರಿನ ಕಾರಿಗಿಂತಾ ವಿಭಿನ್ನವಾದ ಅಪ್ಡೇಟ್‍ ಅನ್ನು ಪಡೆದುಕೊಳ್ಳಲಿದೆ. ಕಾರಿನ ಒಳಭಾಗದ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಪ್ರೀಮಿಯಮ್ ಅನುಭವವನ್ನು ನೀಡಲು ಡ್ಯಾಶ್‍‍ಬೋರ್ಡ್‍‍ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ಅಷ್ಟೆ ಅಲ್ಲದೆ ಕೀಲೆಸ್ ಎಂಟ್ರಿ, ಟಿಲ್ಟ್ ಟೆಲಿಸ್ಕೋಪಿಕ್ ಅಡ್ಜಸ್ಟಬಲ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕಂಟ್ರೋಲ್ ಮತ್ತು ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಪಡೆದುಕೊಳ್ಳಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍‍ಗಳನ್ನು ನೀಡಲಾಗಿದೆ.

ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ಎಂಜಿನ್ ಸಾಮರ್ಥ್ಯ

ಬಿಡಗಡೆಗೊಳ್ಳಲಿರುವ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರುಗಳು ಪ್ರಸ್ತುತ ತಲೆಮಾರಿನ ಕಾರಿನಲ್ಲಿ ಬಳಸಲಾದ ಎಂಜಿನ್ ಆನ್ನೆ ಅಳಾವಡಿಸಲಾಗಿದ್ದು, 1.0 ಕೆ ಸಿರೀಸ್ ಎಂಜಿನ್ ಸಹಾಯದಿಂದ 67ಬಿಹೆಚ್‍‍ಪಿ ಮತ್ತು 91ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಪ್ರತೀ ಲೀಟರ್‍‍ಗೆ ನಗರ ಪ್ರದೇಶದಲ್ಲಿ 16 ಮತ್ತು ಹೆದ್ದಾರಿಗಳಲ್ಲಿ 22 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

ಹೊಸ ಪ್ರೀಮಿಯಮ್ ಫೀಚರ್‍‍‍ಗಳನ್ನು ಪಡೆಯಲಿದೆ ಮಾರುತಿ ಸುಜುಕಿ ವ್ಯಾಗನಾರ್

ಪ್ರಸ್ಥುತ ತಲೆಮಾರಿನ ವ್ಯಾಗನಾರ್ ಕಾರು ರೂ. 4.1 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಬಿಡುಗಡೆಗೊಳ್ಳಲಿರುವ ಹೊಸ ಕಾರು ಇನ್ನು ಕೊಂಚ ಅಧಿಕ ಬೆಲೆಯನ್ನು ಪಡೆಯಲಿದೆ ಎನ್ನಲಾಗಿದೆ. ಇನ್ನು ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್ ಮತ್ತು ಹೊಸ ಹುಂಡೈಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Friday, September 28, 2018, 10:31 [IST]
English summary
2019 Maruti WagonR will get premium features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+