ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಭಾರತದಲ್ಲಿ ವಾಹನ ಮಾರಾಟ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರ ಆಯ್ಕೆಯಲ್ಲಿಯೂ ಸಹ ಹಲವಾರು ಬದಲಾಣೆಗಳಾಗಿವೆ. ಹೀಗಾಗಿ ಕಾರು ಉತ್ಪಾದನಾ ಸಂಸ್ಥೆಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರುಗಳನ್ನು ಹೊರತರುತ್ತಿದ್ದು, ಇದೇ ತಿಂಗಳು ಅಕ್ಟೋಬರ್ ಅವಧಿಯಲ್ಲಿ ಪ್ರಮುಖ ಮೂರು ಜನಪ್ರಿಯ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ದೇಶದಲ್ಲಿ ಸದ್ಯ ಕಾರು ಉತ್ಪಾದನೆಯಲ್ಲಿ ಜನಪ್ರಿಯತೆ ಸಾಧಿಸಿರುವ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮ ವಿನೂತನ ಕಾರು ಆವೃತ್ತಿಗಳನ್ನು ಬಿಡುಗಡೆಗೊಳಿಸಲು ವೇದಿಕೆ ಸಜ್ಜುಗೊಳ್ಳುತ್ತಿದ್ದು, ಕೆಳಗೆ ನೀಡಲಾಗಿರುವ ಹೊಸ ಕಾರುಗಳು ಬಹುತೇಕ ಇದೇ ತಿಂಗಳು ಬಿಡುಗಡೆಯಾಗುವುದು ಖಚಿತವಾಗಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಹ್ಯುಂಡೈ 2018 ಸ್ಯಾಂಟ್ರೋ

ದೇಶದ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿರುವ ಸ್ಯಾಂಟ್ರೋ ಆವೃತ್ತಿಯು ಆಟೋ ಉದ್ಯಮದಲ್ಲಿ ಹಲವು ವಿಶೇಷತೆಗಳಿಗೆ ಕಾರಣವಾಗಿರುವುದಲ್ಲದೇ ಕಾರು ಪ್ರಿಯರ ಹಾಟ್ ಫೆವರಿಟ್ ಆಗಿರುವುದು ಬಹುತೇಕರಿಗೆ ಗೊತ್ತಿರುವ ಗೊತ್ತಿರುವ ವಿಚಾರ. ಇದೀಗ ಮತ್ತೊಮ್ಮೆ ಸಂಚಲನ ಸೃಷ್ಠಿಸಲು ಸಜ್ಜಾಗಿರುವ ಸ್ಯಾಂಟ್ರೋ ಕಾರು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊತ್ತು ಬರುತ್ತಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಇದೇ ತಿಂಗಳು 23ರಂದು ಹೊಸ ಸ್ಯಾಂಟ್ರೋ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ 9 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಸ್ಯಾಂಟ್ರೋ ಕಾರುಗಳು ಡಿಲೈಟ್, ಎರಾ, ಮ್ಯಾಗ್ಮಾ, ಮ್ಯಾಗ್ಮಾ ಎಎಂಟಿ, ಸ್ಪೋರ್ಟ್ಜ್, ಸ್ಪೋಟ್ಜ್ ಎಎಂಟಿ, ಆಸ್ಟ್ರಾ, ಮ್ಯಾಗ್ಮಾ ಸಿಎನ್‌ಜಿ, ಸ್ಪೋರ್ಟ್ಜ್ ಸಿಎನ್‌ಜಿ ಎನ್ನುವ ಪ್ರಮುಖ 9 ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದ್ದು, ಕಾರಿನಲ್ಲಿರುವ ವಿಶೇಷತೆಗಳಿಗೆ ಅನುಗುಣವಾಗಿ ಬೆಲೆ ಪಡೆದುಕೊಂಡಿವೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 3,87,627ಕ್ಕೆ ಮತ್ತು ಹೈ ಎಂಡ್ ಮಾದರಿಯು ರೂ.5,38,571 ಬೆಲೆ ಹೊಂದಿದ್ದು, ಎಬಿಎಸ್, ಡ್ಯುಯಲ್ ಏರ್‌ಬ್ಯಾಗ್, ಅಲಾಯ್ ಚಕ್ರಗಳು, ಪಾರ್ಕಿಂಗ್ ಸೆನ್ಸಾರ್, ಎಸಿ ವೆಂಟ್ಸ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಮಹೀಂದ್ರಾ ವೈ400 ಎಸ್‌ಯುವಿ

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಸುಧಾರಿತ ಮಾದರಿಯ ಎಸ್‌ಯುವಿ ಕಾರುಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ವೈ400 ಎನ್ನುವ ಕೋಡ್‌ನೆಮ್ ಆಧಾರದಲ್ಲಿ ಸಿದ್ದಗೊಳಿಸಲಾಗಿರುವ ಪ್ರೀಮಿಯಂ ಎಸ್‌ಯುವಿಯನ್ನು ನವೆಂಬರ್ 19ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಮಹೀಂದ್ರಾ ಹೊಸ ಕಾರು ಎಕ್ಸ್‌ಯುವಿ 500 ಕಾರಿಗಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದ್ದು, ಹೊಸ ಕಾರಿಗೆ ಎಕ್ಸ್‌ಯುವಿ700 ಎಂದು ನಾಮಕರಣ ಮಾಡುವ ಸಾಧ್ಯತೆಗಳಿವೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಮಹೀಂದ್ರಾ ಸಂಸ್ಥೆಯು ವೈ400 ಕಾರನ್ನು ಕ್ವಾಡ್ ಫ್ರೇಮ್ ತಂತ್ರಜ್ಞಾನದಡಿ ನಿರ್ಮಾಣ ಮಾಡಿದ್ದು, ಸ್ಯಾಂಗ್‌ಯಾಂಗ್‌ ಸಂಸ್ಥೆಯ ಜಿ4 ರೆಕ್ಸ್‌ಸ್ಟನ್ ಕಾರುಗಳ ರೀತಿಯಲ್ಲಿ ಕೆಲವು ಹೊರ ವಿನ್ಯಾಸಗಳಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ವೈ400 ಕಾರು ಮಾದರಿಯು 7 ಸೀಟರ್ ಮಾದರಿಯಾಗಿದ್ದು, ಆಪ್ ರೋಡ್ ಕೌಶಲ್ಯದೊಂದಿಗೆ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪ್ರಿಮಿಯಂ ಲೆದರ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಹೊಸ ಮಹೀಂದ್ರಾ ವೈ400 ಕಾರುಗಳು ಯೂರೊ 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಳ್ಳಬಹುದು ಎನ್ನಲಾಗಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 183-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿರುವ ಮಹೀಂದ್ರಾ ಹೊಸ ಕಾರು 7 ಆಸನಗಳೊಂದಿಗೆ ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಐಷಾರಾಮಿ ಮಾದರಿಯಾಗಿದ್ದು, ಬೆಲೆಗಳು ಕೂಡಾ ತುಸು ದುಬಾರಿ ಎನ್ನಿಸಲಿವೆ. ಕೆಲವು ಮಾಹಿತಿ ಪ್ರಕಾರ ಹೊಸ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.23 ಲಕ್ಷದಿಂದ ರಿಂದ ರೂ. 27 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಮಾರುತಿ ಸುಜುಕಿ ಎರ್ಟಿಗಾ ಫೇಸ್‌ಲಿಫ್ಟ್

ದೇಶದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಬಿಡುಗಡೆಗೊಳಿಸಿದ್ದು, ಇದೀಗ ಎರ್ಟಿಗಾ ಫೇಸ್‍‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಮಾಹಿತಿಗಳ ಪ್ರಕಾರ, ಎರ್ಟಿಗಾ ಹೊಸ ಕಾರು ನವೆಂಬರ್ 21ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದ್ದು, ವಿನೂತನ ವಿನ್ಯಾಸಗಳನ್ನು ಹೊತ್ತು ಬರುತ್ತಿರುವ ಹೊಸ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಎರ್ಟಿಗಾ ಕಾರು ಈ ಬಾರಿ ಹಲವು ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿರಲಿದೆ.

MOST READ: ಸೇವೆಗೆ ಸಿದ್ದವಾದ ದೇಶದ ಮೊದಲ ಐಷಾರಾಮಿ ಹಡಗು 'ಅಂಗ್ರಿಯಾ' ವಿಶೇಷತೆ ಏನು?

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಕಾರಿನ ಸೈಡ್‍ ಪ್ರೋಫೈಲ್‌ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದ್ದು, ಒಟ್ಟಾರೆಯಾಗಿ ಈ ಕಾರು ಎಂಪಿವಿ ಕಾರಿಗಿಂತಲೂ ಎಸ್‍‍ಯುವಿ ಮಾದರಿಯ ವಿನ್ಯಾಸವನ್ನು ಪಡೆದಿರಲಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಹಳೆಯ ಮಾದರಿಯ ಎರ್ಟಿಗಾ ಕಾರಿಗೆ ಹೋಲಿಕೆ ಮಾಡಿದ್ದಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಕಾರು 110ಎಂಎಂ ಉದ್ದ, 50ಎಂಎಂ ಅಗಲ ಮತ್ತು 5ಎಂಎಂ ಎತ್ತರ ಅಧಿಕವಾದ ಸುತ್ತಳತೆಯನ್ನು ಪಡೆದುಕೊಂಡಿದ್ದು, ಈ ಬದಲಾವಣೆಯು ಮೂರನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಮಾಹಿತಿಗಳ ಪ್ರಕಾರ, ಹೊಸ ಎರ್ಟಿಗಾ ಕಾರುಗಳಲ್ಲಿ ಈ ಹಿಂದಿನ 1.3-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಹಾಗೆಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಖರೀದಿಗೆ ಲಭ್ಯವಿರಲಿದೆ. ವಿಶೇಷ ಅಂದ್ರೆ, ಎರಡು ಮಾದರಿಯ ಎಂಜಿನ್‍ಗಳನ್ನು ಸಹ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಹೈಬ್ರಿಡ್ ಸಿಸ್ಟಮ್ ಅನ್ನು ಒದಗಿಸುವುದು ಖಚಿತವಾಗಿದೆ.

ಮುಂದಿನ ಒಂದು ತಿಂಗಳ ಅವಧಿಯಲ್ಲಿ ಬಿಡುಗಡೆಯಾಗಲಿರುವ 3 ಬಹುನೀರಿಕ್ಷಿತ ಕಾರುಗಳಿವು..!

ಹೊಸ ಎರ್ಟಿಗಾ ಎಂ‍ಪಿವಿ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 7 ಲಕ್ಷಕ್ಕೆ ಆರಂಭಿಕ ಬೆಲೆ ಹಾಗೂ ಟಾಪ್ ಎಂಡ್ ಮಾದರಿಯು ರೂ. 9.99 ಲಕ್ಷ ಬೆಲೆಯನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು, ಸದ್ಯ ಹೊಸಗಾಗಿ ಮಾರುಕಟ್ಟೆಗೆ ಬಂದಿರುವ ಮಹೀಂದ್ರಾ ಮರಾಜೊ ಎಂಪಿವಿ ಕಾರಿಗೆ ಇದು ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Here we list out 3 exciting new cars to be launched in India by next one months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X