ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ 2016ರಲ್ಲಿ ತಮ್ಮ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರನ್ನು ಬಿಡುಗುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪದೆದಿದೆ. ಕಾಂಪ್ಯಾಕ್ಟ್ ಎಸ್‍‍ಯುವಿ ಕಾರುಗಳ ಸರಣಿಯಲ್ಲಿ ಲೇಟಾಗಿ ಬಿಡುಗಡೆಗೊಂಡರು ಫೋರ್ಡ್ ಇಕೊಸ್ಪೋರ್ಟ್ ಮತ್ತು ಟಾಟಾ ನೆಕ್ಸಾನ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

ಅಧಿಕವಾಗಿ ಮಾರಾಟಗೊಂಡ ಭಾರತ ದೇಶದ ಬೆಸ್ಟ್ ಸೆಲ್ಲಿಂಗ್ ಕಾಂಪ್ಯಾಕ್ಟ್ ಎಸ್‍‍ಯುವಿ ವಿಟಾರಾ ಬ್ರೆಝಾ ಕಾರು ಇತ್ತೀಚೆಗಷ್ಟೆ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ಬಿಡುಗಡೆಗೊಂಡಿದ್ದು, ಹೊಸದಾಗಿ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲಿ ವಿನೂತನ ಪೆಟ್ರೋಲ್ ಎಂಜಿನ್ ಅನ್ನು ಹೊತ್ತು ಬರಲಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

ಬಿಡುಗಡೆಗಾಗಿ ಸಿದ್ದಗೊಂಡಿರುವ ಹೊಸ ವಿಟಾರಾ ಬ್ರೆಝಾ ಕಾಂಪ್ಯಾಕ್ಟ್ ಎಸ್‍ಯುವಿ ಪೆಟ್ರೋಲ್ ಮಾದರಿಯ ಕಾರುಗಳ ಬಗ್ಗೆ ನಿಮಗೆ ತಿಳಿಯದ 5 ಮುಖ್ಯವಾದ ವಿಷಯಗಳ ಬಗ್ಗೆ ಪೂರ್ತಿ ವಿವರಗಳು ಇಲ್ಲಿವೆ ನೋಡಿ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

5. ಹೊಸ 1.5 ಲೀಟರ್ ಪೆಟೋಲ್ ಎಂಜಿನ್

ಪೆಟ್ರೋಲ್ ಮಾದರಿಯ ವಿಟಾರಾ ಬ್ರೆಝಾ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿದೆ. ಈ ವಿನೂತನ ಕೆ15ಬಿ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ 104 ಬಿಹೆಚ್‍‍ಪಿ ಮತ್ತು 138ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

ಭಾರತದ ಮಾರುಕಟ್ಟೆಯಲ್ಲಿ ಪ್ರಸ್ಥುತ ಸಿಯಾಜ್ ಮತ್ತು ಎರ್ಟಿಗಾ ಕಾರುಗಳಲ್ಲಿ ಬಳಸಲಾಗುತ್ತಿರುವ ಕೆ14 1.4 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಭರ್ತಿ ಮಾಡಲಿದ್ದು, ಹೊಸ ತಲೆಮಾರಿನ ಮಾರಿತು ಎರ್ಟಿಗಾ ಎಮ್‍ಪಿವಿ ಮತ್ತು ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಾಲಿಯೂ ಕೂಡಾ ಇದೇ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

4. ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್

ಮಾರುತಿ ಸುಜುಕಿ ತಮ್ಮ ವಿಟಾರಾ ಬ್ರೆಝಾ ಡೀಸೆಲ್ ಎಸ್‍‍‍ಯುವಿ ಆಟೋಮ್ಯಾಟಿಕ್ ವೇರಿಯಂಟ್‍ ಕಾರು ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ನೆಕ್ಸಾನ್ ಎಎಮ್‍ಟಿ ವೇರಿಯಂಟ್ ಕಾರುಗಳಿಗೆ ಪೈಪೋಟಿ ನೀಡುತಿದ್ದು, ಈಗಾಗಲೆ ಲಭ್ಯವಿರುವ ನೆಕ್ಸಾನ್ ಪೆಟ್ರೋಲ್ ಎಎಮ್‍ಟಿ ಮತ್ತು ಫೋರ್ಡ್ ಇಕೊಸ್ಪೋರ್ಟ್ ಪೆಟ್ರೋಲ್ ಎಎಮ್‍ಟಿ ಕಾರುಗಳಿಗೆ ಪೈ‍‍ಪೋಟಿ ನೀಡಲು ವಿಟಾರಾ ಬ್ರೆಝಾ ಕೂಡ ಪೆಟ್ರೋಲ್ ಎಎಮ್‍ಟಿ ಟ್ರಾನ್ಸ್ ಮಿಷನ್ ಅನ್ನು ಪಡೆಯಲಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

ಹೊಸದಾಗಿ ಬರಲಿರುವ ವಿಟಾರಾ ಬ್ರೆಝಾ ಪೆಟ್ರೋಲ್ ಆಧಾರಿತ ಕಾರುಗಳು 4 ಸ್ಪೀಡ್ ಆಟೋಮಾಟಿಕ್ ಗೇರ್‍‍ಬಾಕ್ಸ್ ಅನ್ನು ಪಡೆಯುವ ಅವಕಾಶವಿದ್ದು, ವಿಟಾರಾ ಬ್ರೆಝಾ ಪೆಟ್ರೋಲ್ ಎಎಮ್‍ಟಿ ಮಾದರಿಯ ಎಸ್‍‍ಯುವಿ ಕಾರು ಬಿಡುಗಡೆಗೊಂಡಲ್ಲಿ ಗ್ರಾಹಕರು ಎರಡು ಎಂಜಿನ್ ಮತ್ತು ಎರಡು ಮಾದರಿಯ ಗೇರ್‍‍ಬಾಕ್ಸ್ ಆಯ್ಕೆಗಳಲ್ಲಿ ಯಾವುದನ್ನಾದರೂ ಖರೀದಿ ಮಾಡಬಹುದು.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

3. ಹೈಬ್ರಿಡ್

ಮಾಹಿತಿಗಳ ಪ್ರಕಾರ ಬರಲಿರುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸುಜುಕಿ ಸಂಸ್ಥೆಯ ಮೈಕ್ರೋ-ಹೈಬ್ರಿಡ್ ಟೆಕ್ನಾಲಜಿಯನ್ನು ಪಡೆಯಲಿದೆ ಎನ್ನಲಾಗಿದ್ದು, ಈ ಹೈಬ್ರಿಡ್ ಟೆಕ್ನಾಲಜಿಯನ್ನು ಮೊದಲ ಬಾರಿಗೆ ಸಿಯಾಜ್ ಡೀಸೆಲ್ ಮಾದರಿಯ ಕಾರಿನಲ್ಲಿ ಅಳವಡಿಸಲಾಗಿತ್ತು.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯನ್ನು ಪಡೆದ ಕಾರುಗಳು ಸಾಧಾರಣ ಕಾರುಗಳಿಗಿಂತ ಹೆಚ್ಚು ಮೈಲೇಜ್ ನೀಡಲಿದ್ದು, ಮಾರುತಿ ಸುಜುಕಿ ಸಂಸ್ಥೆಯಲ್ಲಿನ ಹೈಬ್ರಿಡ್ ಟೆಕ್ನಾಲಜಿಯನ್ನು ಅಳವಡಿಸಿರುವ ಕಾರುಗಳಿಗೆ ಹೆಚ್ಚು ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಸಂಸ್ಥೆಯು ವಿಟಾರಾ ಬ್ರೆಝಾ ಪೆಟ್ರೋಲ್ ಎಂಜಿನ್ ಕಾರುಗಳಿಗು ಕೂಡ ಹೈಬ್ರಿಡ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

2. ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್

ಪ್ರಯಾಣಿಕರ ಸುರಕ್ಷತೆಗಾಗಿ ಹೆಚ್ಚು ಒತ್ತು ನೀಡುವ ಕಾಂಪ್ಯಾಕ್ಟ್ ಎಸ್‍‍ಯ್ವಿ ಕಾರುಗಳಿಗೆ ಬೇಡಿಕೆಯು ಹೆಚ್ಚುತ್ತಿದ್ದು, ಇದನ್ನು ಪರಿಗಣಿಸಿ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ವಿಟಾರಾ ಬ್ರೆಝಾ ಕಾರಿನಲ್ಲಿಯು ಕೂಡ ಎಬಿಎಸ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ಸ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಎಂಬ ಮೂರು ಮುಖ್ಯವಾದ ಸೇಫ್ಟಿ ಫೀಚರ್‍‍ಗಳನ್ನು ಎಲ್ಲಾ ವೇರಿಯಯಂಟ್‍‍ಗಳಲ್ಲಿ ಅಳವಡಿಸಲಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

ಈ ಮೂರು ಸೇಫ್ಟಿ ಫೀಚರ್‍‍ಗಳು ವಿಟಾರಾ ಬ್ರೆಝಾ ಪೆಟ್ರೋಲ್ ವರ್ಷನ್ ಕಾರುಗಳಲ್ಲಿ ತಪ್ಪದೆ ಅಳವಡಿಸಲಾಗಿದ್ದು, ಶೀಘ್ರದಲ್ಲೆ ಕೇಂದ್ರ ಸರ್ಕಾರದಿಂದ ಆದೀಶಿಸಲಾಗಿರುವ ಹೊಸ ಸೇಫ್ಟಿ ಫೀಚರ್‍‍ಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

1. ಟೊಯೊಟಾ ಶೋರಂ‍ಗಳಲ್ಲಿಯು ಕೂಡಾ ಲಭ್ಯ

ಸುಜುಕಿ ಮತ್ತು ಟೊಯೊಟಾ ಸಂಸ್ಥೆಯು ದೇಶಿಯವಾಗಿ ಭಾಗಸ್ವಾಮ್ಯವನ್ನು ಪಡೆದುಕೊಂಡಿದ್ದು, ಈ ನಿಟ್ಟಿನಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ವಿಟಾರಾ ಬ್ರೆಝಾ, ಬಲೆನೊ ಮತ್ತು ಸಿಯಾಜ್ ಕಾರುಗಳನ್ನು ಟೊಯೊಟಾ ಡೀಲರ್‍‍ಗಳ ಮುಖಾಂತರ ಮಾರಾಟಮಾಡಲಾಗುತ್ತಿದೆ.

ಹೊಸ ಎಂಜಿನ್ ಹೊತ್ತು ಬರಲಿದೆ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು..

ಇದೇ ಮಾದರಿಯಲ್ಲಿ ಮಾರುತಿ ಸುಜುಕಿ ಕರೊಲ ಆಲ್ಟಿಸ್ ಸೆಡಾನ್ ಮತ್ತು ಟೊಯೊಟಾ ಫಾರ್ಚ್ಯೂನರ್ ಎಸ್‍‍ಯುವಿ ಕಾರುಗಳನ್ನು ಮಾರುತಿ ಬ್ರ್ಯಾಂಡ್ ಹೆಸರಿನಲ್ಲಿ ತಮ್ಮ ಡೀಲರ್‍‍ಗಳ ಬಳಿ ಮಾರಾಟಮಾದುತ್ತಿವೆ. ಈ ನಿಟ್ಟಿನಲ್ಲಿ ವಿಟಾರಾ ಬ್ರೆಝಾ ಪೆಟ್ರೋಲ್ ಎಂಜಿನ್ ಆಧಾರಿತ ಕಾರುಗಳು ಕೂಡ ಇಲ್ಲಿ ದೊರೆಯುವ ಅವಕಾಶಗಳಿವೆ ಎನ್ನಲಾಗಿದೆ.

Article Published On: Saturday, June 9, 2018, 12:12 [IST]
English summary
Read In Kannada:5 Things You Dont Know About The Upcoming Maruti Brezza Petrol Compact SUV
Read more on maruti suzuki suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+