ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ವಾಯು ಮಾಲಿನ್ಯ ಜೊತೆಗೆ ಶಬ್ಧ ಮಾಲಿನ್ಯದ ಸಮಸ್ಯೆಯು ಕೂಡಾ ಅತಿಯಾಗುತ್ತಿದೆ. ಹೀಗಾಗಿ ವಾಹನ ದಟ್ಟಣೆ ಸಮಸ್ಯೆ ಇರುವ ಶಾಲಾ-ಕಾಲೇಜು, ಕೋರ್ಟ್ ಮುಂಭಾಗದ ರಸ್ತೆಗಳಲ್ಲಿ ಸೈಲೆಂಟ್ ಜೋನ್ ಘೋಷಣೆ ಮಾಡಲಾಗುತ್ತಿದ್ದು, ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡ ವಿಧಿಸಲು ಸಿದ್ದತೆ ನಡೆಸಲಾಗುತ್ತಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಹೌದು, ಹೆಚ್ಚುತ್ತಿರುವ ಶಬ್ದಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಮುಂಬೈ ಮಾಹಾನಗರದಲ್ಲಿ ಹೊಸ ಕಾಯ್ದೆಯೊಂದನ್ನು ಜಾರಿಗೊಳಿಸಲು ಸಿದ್ದತೆ ನಡೆಸಲಾಗುತ್ತಿದ್ದು, ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಉಂಟು ಮಾಡಿದ್ದೆ ಆದಲ್ಲಿ ಅಂತವರಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

5 ವರ್ಷ ಜೈಲು ಇಲ್ಲವೇ 1 ಲಕ್ಷ ದಂಡ.!

ಮುಂಬೈನಲ್ಲಿ ಈಗಾಗಲೇ 110 ಸ್ಥಳಗಳನ್ನು ಸೈಲೆಂಟ್ ಜೋನ್‌ಗಳನ್ನು ಗುರುತಿಸಿರುವ ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳು, ಶಾಲಾ-ಕಾಲೇಜುಗಳು ಮತ್ತು ಕೋರ್ಟ್ ಆವರಣಗಳಲ್ಲಿ ಹಾರ್ನ್ ಹಾಕುವ ವಾಹನ ಸವಾರರಿಗೆ ಶಾಕ್ ಕಾದಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ನಿಯಮ ಉಲ್ಲಂಘನೆ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ಇಲ್ಲವೆ ರೂ. 1 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಈ ಕಠಿಣ ಕಾಯ್ದೆ ಜಾರಿಗೆ ಬರಲಿದೆ ಎನ್ನಲಾಗಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಸೈಲೆಂಟ್ ಜೋನ್ ನಿಯಮ ಪ್ರಕಾರ, ವಾಹನ ಸವಾರರು ನಿಶ್ಯಬ್ಧ ವಲಯಗಳಲ್ಲಿ ಹಗಲಿನ ವೇಳೆ 50 ಡೆಸಿಬಲ್‌‌ಗಿಂತ ಕಡಿಮೆ ಮತ್ತು ರಾತ್ರಿ ವೇಳೆ 40 ಡೆಸಿಬಲ್‌ಗಿಂತ ಕಡಿಮೆ ಹಾರ್ನ್ ಮಾಡಲು ಮಾತ್ರವೇ ಅವಕಾಶವಿದ್ದು, ನಿಗದಿತ ಮಟ್ಟದ ಡೆಸಿಬಲ್ ದಾಟಿದ್ದಲ್ಲಿ ಶಿಕ್ಷೆ ಖಾಯಂ ಆಗಲಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಇದು ಸೈಲೆಂಟ್ ಜೋನ್‌ಗಳಲ್ಲಿ ಡೆಸಿಬಲ್ ಪ್ರಮಾಣವಾದ್ರೆ ಸಾರ್ವಜನಿಕ ಸ್ಥಳಗಳಲ್ಲಿ ಹಗಲಿನ ವೇಳೆ 75 ಡೆಸಿಬಲ್ ಮತ್ತು ರಾತ್ರಿ ವೇಳೆ 70 ಡೆಸಿಬಲ್ ಪ್ರಮಾಣವನ್ನು ನಿಗದಿಗೊಳಿಸಲಾಗಿದ್ದು, ಒಟ್ಟಿನಲ್ಲಿ ಶಬ್ದಮಾಲಿನ್ಯ ತಡೆಗಾಗಿ ಕರ್ಕಶ ಶಬ್ದಮಾಡುವ ವಾಹನ ಸವಾರರಿಗೆ ಕಠಿಣ ಶಿಕ್ಷೆ ಅಂತು ತಪ್ಪಿದಲ್ಲ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಇದು ಕೇವಲ ಮುಂಬೈನಲ್ಲಿ ಮಾತ್ರವಲ್ಲ ಹೆಚ್ಚುತ್ತಿರುವ ಶಬ್ದಮಾಲಿನ್ಯಕ್ಕೆ ತಡೆ ಹಾಕುವ ಸಂಬಂಧ ಮುಂಬರುವ ದಿನಗಳಲ್ಲಿ ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲೂ ಈ ಕಠಿಣ ಕಾಯ್ದೆ ಜಾರಿಗೆ ಬರುವ ಸಾಧ್ಯತೆಗಳಿದ್ದು, ಆಸ್ಪತ್ರೆ, ಕೋರ್ಟ್ ಮತ್ತು ಶಾಲಾ ಮುಂಭಾಗದ ರಸ್ತೆಗಳಲ್ಲಿ ಉಂಟಾಗುವ ಹಾರ್ನ್ ಕಿರಿಕಿರಿ ತಪ್ಪಲಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಇದರ ಜೊತೆಗೆ ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿ ದುಷ್ಕೃತ್ಯವೆಸಗುವವರ ಸಂಖ್ಯೆ ಅತಿಯಾಗುತ್ತಿದ್ದು, ಇದಕ್ಕೆ ಲಗಾಮು ಹಾಕುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯವು ನಂಬರ್ ಪ್ಲೇಟ್ ವಿನ್ಯಾಸದಲ್ಲಿ ಹೊಸ ಬದಲಾವಣೆಗೆ ಮುಂದಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಕೇಂದ್ರ ಸಾರಿಗೆ ಇಲಾಖೆಯು ವಾಹನಗಳ ಸುರಕ್ಷತೆಗಾಗಿ ಹಲವು ಹೊಸ ನಿಯಮಗಳನ್ನು ಕಡ್ಡಾಯಗೊಳಿಸುತ್ತಿದ್ದು, ಇದೀಗ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅನ್ನು ಎಲ್ಲಾ ವಾಹನಗಳು ಕಡ್ಡಾಯವಾಗಿ ಹೊಂದಿರಬೇಕೆಂಬ ನಿಯಮವನ್ನು ಜಾರಿ ಮಾಡಲು ಮುಂದಾಗಿರುವುದು ವಾಹನ ಮಾಲೀಕರಿಗೆ ಹತ್ತು ಹಲವು ಪ್ರಯೋಜನಗಳಿವೆ ಎನ್ನಬಹುದು.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಎಚ್‌ಎಸ್‌ಆರ್‌ಪಿ ಇಲ್ಲವಾದ್ರೆ ಜೈಲು ವಾಸ.!

ಹೊಸ ನಿಯಮವನ್ನು ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರೀ ಪ್ರಮಾಣದ ದಂಡ ಇಲ್ಲವೇ ಜೈಲು ವಾಸ ವಿಧಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು, ಮೊದಲ ಹಂತವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ನಿಯಮವನ್ನು ಕಡ್ಡಾಯಗೊಳಿಸುತ್ತಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಅಕ್ಟೋಬರ್ 13ರಿಂದಲೇ ಹೊಸ ನಿಯಮ ಅನ್ವಯ!

ರಾಜಧಾನಿ ದೆಹಲಿಯಲ್ಲಿ ಮೊದಲ ಹಂತವಾಗಿ ಎಚ್‌ಎಸ್‌ಆರ್‌ಪಿ(ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್) ಅಳವಡಿಕೆಯನ್ನು ಅಕ್ಟೋಬರ್ 13ರಿಂದಲೇ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದ್ದು, ದೆಹಲಿಯೊಂದರಲ್ಲೇ ಬರೋಬ್ಬರಿ 40 ಲಕ್ಷಕ್ಕೂ ಹೆಚ್ಚು ವಾಹನಗಳಲ್ಲಿ ಎಹೆಚ್ಎಸ್ಆರ್‌ಪಿ ಸೌಲಭ್ಯವಿಲ್ಲದಿರುವುದು ವಾಹನಗಳ ದತ್ತಾಂಶ ಸಂಗ್ರಹಣೆಗೂ ತೊಡಕಾಗಿ ಪರಿಣಮಿಸಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಕೇಂದ್ರ ಸರ್ಕಾರವು 2001ರಲ್ಲೇ ಮೋಟಾರ್ ವೆಹಿಕಲ್ ಆ್ಯಕ್ಟ್ ಅನ್ವಯ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಬೇಕೆಂಬ ನಿಯಮವನ್ನು ಜಾರಿಗೊಳಿಸಿದ್ದರೂ ಇದುವರೆಗೆ ಅದು ಯಾವ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿಯೇ ಈ ಕಾಯ್ದೆಗೆ ಹೊಸ ತಿದ್ದುಪಡಿ ತರುವ ಮೂಲಕ ಇದೀಗ ದೇಶಾದ್ಯಂತ ಹಂತ ಹಂತವಾಗಿ ಜಾರಿಗೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಹೊಸ ನಂಬರ್ ಪ್ಲೇಟ್‌ಗೆ ರೇಟ್ ಫಿಕ್ಸ್.!

ಈ ಹಿಂದೆ ಈ ನಿಯಮ ಜಾರಿಗೆ ಬಂದಾಗ ಹೊಸ ವೈಶಿಷ್ಟ್ಯತೆಗಳನ್ನು ಹೊಂದಿದ್ದ ನಂಬರ್ ‌ಪ್ಲೇಟ್‌ಗಳು ದುಬಾರಿಯಾಗಿದ್ದವು. ಇದೇ ಕಾರಣಕ್ಕಾಗಿ ವಾಹನ ಸವಾರರು ಹೊಸ ನಿಯಮಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಆದ್ರೆ ಕೇಂದ್ರ ಸಾರಿಗೆ ಇಲಾಖೆಯ ಈ ಬಾರಿ ನಿಗದಿ ಮಾಡಿರುವ ದರಗಳು ಅಷ್ಟೇನು ದುಬಾರಿ ಇಲ್ಲ ಎನ್ನಬಹುದು.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಇದಕ್ಕಾಗಿ ದೆಹಲಿಯಲ್ಲಿ 13 ಕಡೆಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಳವಡಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಆನ್‌ಲೈನ್ ಮೂಲಕ ಹಣ ಪಾವತಿ ನಂತರ ಇಲ್ಲಿ ನಿಮ್ಮ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಪಡೆದುಕೊಳ್ಳಬಹುದು.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಇದಕ್ಕಾಗಿ ಅಕ್ಟೋಬರ್ 2ರ ತನಕ ಡೆಡ್‌ಲೈನ್ ನೀಡಿರುವ ಕೇಂದ್ರ ಸಾರಿಗೆ ಇಲಾಖೆಯು ಅಕ್ಟೋಬರ್ 13ರ ನಂತರ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಇಲ್ಲದಿರುವ ವಾಹನಗಳಿಂದ ದಂಡ ವಸೂಲಿ ಮಾಡುವ ಬಗ್ಗೆ ಅಭಿಯಾನ ಮಾಡುತ್ತಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಹೊಸ ಕಾಯ್ದೆಯಿಂದ ಏನು ಲಾಭ?

ವಾಹನಗಳ ಮೇಲೆ ಸೂಕ್ತ ನಿಗಾ ಇಡಲು ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅವಶ್ಯಕತೆಯಿದ್ದು, ಡಿಕೋಡಿಂಗ್ ಮಾದರಿಯಲ್ಲಿರುವ ಹೊಸ ನಂಬರ್ ಪ್ಲೇಟ್‌ನಲ್ಲಿ ವಾಹನದ ಪ್ರತಿಯೊಂದು ದಾಖಲೆ ಸಹ ಸಂಗ್ರಹವಾಗಿರುತ್ತೆ. ಜೊತೆಗೆ ಹೊಸ ನಂಬರ್ ಪ್ಲೇಟ್ 5 ವರ್ಷಗಳ ವಾರಂಟಿ ಹೊಂದಿರುತ್ತೆ ಎನ್ನಬಹುದು.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಹೊಸ ವಾಹನ ಮಾಲೀಕರಿಗೆ ಚಿಂತೆಯಿಲ್ಲ..!

ಹೊಸ ಮೋಟಾರ್ ವೆಹಿಕಲ್ ಕಾಯ್ದೆ ಪ್ರಕಾರ, ಇಷ್ಟು ದಿನಗಳ ಕಾಲ ವಾಹನ ಮಾಲೀಕರೆ ಆಯ್ಕೆ ಮಾಡುತ್ತಿದ್ದ ನಂಬರ್ ಪ್ಲೇಟ್‌ಗಳನ್ನು ಇನ್ಮುಂದೆ ವಾಹನ ಉತ್ಪಾದನಾ ಸಂಸ್ಥೆಗಳೆ ಪೂರೈಕೆ ಮಾಡಬೇಕಿದ್ದು, ಈ ಮೂಲಕ ಎಂಟ್ರಿ ಲೆವೆಲ್ ಕಾರುಗಳ ಜೊತೆಗೆ ಹೈ ಎಂಡ್ ಕಾರುಗಳಲ್ಲೂ ಏಕರೂಪದ ನಂಬರ್ ಪ್ಲೇಟ್‌ ಜೋಡಣೆ ಇರಲಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಇನ್ನೊಂದು ಪ್ರಮಖ ವಿಚಾರ ಅಂದ್ರೆ, ಕಾರು ಉತ್ಪಾದಕರೇ ಪೂರೈಸುವ ನಂಬರ್ ಪ್ಲೇಟ್‌ಗಳು ಹೊಸ ಸುರಕ್ಷಾ ನೀತಿ ಅಡಿಯಲ್ಲೇ ಅಭಿವೃದ್ಧಿಪಡಿಸಿದ ಉತ್ಪನ್ನವಾಗಿದ್ದು, ಇದು ಕೇಂದ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಪ್ರಮಾಣಿಕೃತಗೊಂಡಿರುತ್ತದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಈ ಮೂಲಕ ಕಾರುಗಳ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿಗೆ ಬ್ರೇಕ್ ಬೀಳಲಿದ್ದು, ಪೂರ್ಣ ಪ್ರಮಾಣದ ಸುರಕ್ಷೆ ಸಿಗಲಿದೆ ಎನ್ನುವುದು ಕೇಂದ್ರ ಸಾರಿಗೆ ಇಲಾಖೆಯ ಅಭಿಪ್ರಾಯವಾಗಿದೆ. ಜೊತೆಗೆ ಹೊಸ ಕಾರುಗಳಿಗಾಗಿ ನಂಬರ್ ಪ್ಲೇಟ್‌ಗಳನ್ನು ಖರೀದಿಸಲು ಹೆಚ್ಚುವರಿ ಬೆಲೆ ತೆರಬೇಕಾಗಿದ್ದ ಕಾರು ಮಾಲೀಕರಿಗೂ ಇದರಿಂದ ಕೊಂಚ ರಿಲೀಫ್ ಸಿಗಲಿದೆ.

ಸೈಲೆಂಟ್ ಜೋನ್‌ಗಳಲ್ಲಿ ಹಾರ್ನ್ ಹಾಕಿ ಕಿರಿಕಿರಿ ಮಾಡಿದ್ರೆ 5 ವರ್ಷ ಜೈಲು ಶಿಕ್ಷೆ ಅಂತೆ..!

ಒಟ್ಟಿನಲ್ಲಿ ಹೊಸ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರುವುದರಿಂದ ಹಲವು ಲಾಭಗಳಿದ್ದು, ವಾಹನಗಳ ದತ್ತಾಂಶ ಸಂಗ್ರಹಣೆ ಸೇರಿದಂತೆ ನಕಲಿ ನಂಬರ್ ಪ್ಲೇಟ್‌ಗಳ ಹಾವಳಿ ಬ್ರೇಕ್ ಹಾಕಬಹುದಾಗಿದೆ. ಹೀಗಾಗಿ ಮೊದಲ ಹಂತವಾಗಿ ದೆಹಲಿಯಲ್ಲಿ ಜಾರಿಗೊಳ್ಳುತ್ತಿರುವ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಕಡ್ಡಾಯ ಅಳವಡಿಕೆಯು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಜಾರಿಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on traffic rules auto news
English summary
Attract Jail Term Of 5 Years For Flouting Noise Pollution Norms In Silent Zones.
Story first published: Saturday, September 22, 2018, 18:14 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more