ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಹೊಸ ಮಾಡಲ್ ಕಾರುಗಳು ಯಶಸ್ವಿಯನ್ನು ಪಡೆದುಕೊಂಡಿದೆ

By Rahul Ts

ಈ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಹೊಸ ಮಾಡಲ್ ಕಾರುಗಳು ಯಶಸ್ವಿಯನ್ನು ಪಡೆದುಕೊಂಡಿದೆ. 2018ರ ಮೊದಲ ಎರಡು ತ್ರೈಮಾಸಿಕ ಅವಧಿಯಲ್ಲಿ ಪ್ಯಾಸ್ಸೆಂಜರ್ ಕಾರುಗಳ ಸರಣಿಯಲ್ಲಿ ಹೊಸ ಕಾರಿನ ಮಾದರಿಗಳು ಬಿಡುಗಡೆಗೊಂಡು ಸಂಸ್ಥೆಯ ಮಾರಾಟ ಶ್ರೇಣಿಯನ್ನು ಹೆಚ್ಚಿಸಲು ಸಹಕಾರಿಯಾಗಿದ್ದವು.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಈ ನಿಟ್ಟಿನಲ್ಲಿ ವಾಹನ ತಯಾರಕ ಸಂಸ್ಥೆಗಳು ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲ್ಲು ಮತ್ತು ತಮ್ಮ ಎದುರಾಳಿ ವಾಹನ ತಯಾರಕ ಸಂಸ್ಥೆಗಳಿಗೆ ಪೈಪೋಟಿ ನೀಡಲು ಈ ವರ್ಷ ಬಿಡುಗಡೆಗೊಳಿಸಲಿರುವ ಕಾರುಗಳ ಪಟ್ಟಿ ಮತ್ತು ಅದರ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಹ್ಯುಂಡೈ ಸ್ಯಾಂಟ್ರೊ

ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಮೊದಲಿಗೆ ಬಿಡುಗಡೆ ಮಾಡಿದ ಕಾರು ಸ್ಯಾಂಟ್ರೊ. ಸ್ಯಾಂಟ್ರೊ ಹ್ಯಾಚ್‍‍ಬ್ಯಾಕ್ ಕಾರಿನಿಂದ ಹೆಚ್ಚು ಯಶಸ್ವಿಯನ್ನು ಪಡೆದಿದ್ದು, ಭಾರತ ದೇಶದಲ್ಲಿನ ಎರಡನೆಯ ಅತೀ ದೊಡ್ಡ ಪ್ಯಾಸ್ಸೆಂಜರ್ ಕಾರ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಪ್ರಸ್ಥುತ ಮಾರುಕಟ್ಟೆಯಲ್ಲಿ ಚಿಕ್ಕ ಹ್ಯಾ‍‍ಚ್‍ಬ್ಯಾಕ್ ಕಾರುಗಳಿಗೆ ಬೇಡಿಕೆಯು ಹೆಚ್ಚಾಗುತಿದ್ದು, ಈ ಹಿಂದೆ ಮಾರುಕಟ್ಟೆಯಿಂದ ಮರೆಯಾಗಿದ್ದ ಸ್ಯಾಂಟ್ರೊ ಕಾರನ್ನು ರೀಲಾಂಚ್ ಮಾಡಲು ಸಂಸ್ಥೆಯು ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ. ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ನವೀಕರಿಸಿ ಸ್ಯಾಂಟ್ರೊ ಕಾರನ್ನು ಮಾರುತಿ ಆಲ್ಟೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪೈಪೋಟಿ ನೀಡುವಂತೆ ಸಜ್ಜುಗೊಳಿಸಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಮುಂದಿನ ತಲೆಮಾರಿನ ಹ್ಯುಂಡೈ ಸ್ಯಾಂಟ್ರೊ ಕಾರು ತಾಂತ್ರಿಕವಾಗಿ 1.1 ಲೀಟರ್, 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದ್ದು, ಹ್ಯುಂಡೈ ಗ್ರ್ಯಾಂಡ್ ಐ10 ಕಾರಿನಲ್ಲಿಯೂ ಕೂಡಾ ಇದೇ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯ ಅವಧಿ : ಜುಲೈ/ಆಗಸ್ಟ್

ಬೆಲೆ (ಅಂದಾಜು) : ರೂ. 3 ಲಕ್ಷ

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

ಅಮೆರಿಕ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಜೀಪ್ ಕಳೆದ ವರ್ಷ ಕಂಪಾಸ್ ಮಧ್ಯಮ ಗಾತ್ರದ ಪ್ರೀಮಿಯಂ ಎಸ್‍‍ಯುವಿ ಕಾರಿನೊಂದಿಗೆ ಹೆಚ್ಚು ಜನಪ್ರೀಯತೆಯನ್ನು ಪಡೆದಿದ್ದು, ಈ ನಿಟ್ಟಿನಲ್ಲಿ ಜೀಪ್ ಕಂಪಾಸ್‍‍ನ ಮುಂದುವರಿದ ಭಾಗವಾದ ಟ್ರಯಲ್‍ಹಾವ್ಕ್ ಕಾರನ್ನು ಬಿಡುಗಡೆಗೊಳಿಸಲು ಸಿದ್ಧವಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ರೆಗ್ಯೂಲರ್ ವರ್ಷನ್ ಕಂಪಾಸ್ ಕಾರಿಗಿಂತ ಹೆಚ್ಚು ಲಕ್ಷಣಗಳನ್ನು ಮತ್ತು ಸಾಮರ್ಥ್ಯವನ್ನು ಪಡೆದಿರುವ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಎಸ್‍‍ಯುವಿ ತಮ್ಮ ಗ್ರಾಹಕರಿಗಾಗಿ ದೇಶದಲ್ಲಿನ ಎಲ್ಲಾ ಜೀಪ್ ಡೀಲರ್‍‍ಗಳ ಬಳಿ ಪ್ರದರ್ಶಿಸಲಾಗಿದೆ. ಸಾಧಾರಣ ಜೀಪ್ ಕಂಪಾಸ್‍‍ಗಿಂತಲು ಟ್ರೈಲ್‍ಹಾವ್ಕ್ ವರ್ಷನ್ ಕಾರು ಇನ್ನಷ್ಟು ಆಫ್ ರೋಡ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್ ಎಸ್‍‍ಯುವಿ ತಾಂತ್ರಿಕವಾಗಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಸಹಾಯದಿಂದ 170ಬಿಹೆಚ್‍‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 9 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಜೀಪ್ ಯಾಕ್ಟೀವ್ ಲೋ-ರೇಂಜ್ 4 ವ್ಹೀಲ್ ಡ್ರೈವಿಂಗ್ ಸಿಸ್ಟಂ, ಹಿಲ್ ಡೆಸ್ಸೆಂಟ್ ಮತ್ತು ನ್ಯೂ ರಾಕ್ ಮೋಡ್ ಎಂಬ ಫೀಚರ್‍‍ಗಳನ್ನು ಪಡೆದುಕೊಂಡಿರಲಿದೆ.

ಬಿಡುಗಡೆಯ ಅವಧಿ : ಜೂನ್/ಜುಲೈ 2018

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಮಹೀಂದ್ರಾ ಯು321

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಕೆಲ ದಿನಗಳ ಹಿಂದಷ್ಟೆ ತಮ್ಮ ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಇದೀಗ ಸಂಸ್ಥೆಯು ಎಂಪಿವಿ ಕಾರನ್ನು ಇದೇ ವರ್ಷದಲ್ಲಿ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಮಹಿಂದ್ರಾ ಯು321 ಎಂಪಿವಿ ಕಾರು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ LED ಡೇಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಮಹಿಂದ್ರಾ ಯು321 ಕಾರುಗಳು 2.0 ಲೀಟರ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಮತ್ತು 320ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ.

ಬಿಡಿಗಡೆಯ ಅವಧಿ : ಸೆಪ್ಟೆಂಬರ್ 2018

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಮಹೀಂದ್ರಾ ಎಸ್201

ಕಳೆದ ಎರಡು ಮಾಡಲ್‍‍ಗಳಲ್ಲಿ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರುಗಳಿಗೆ ಬೇದಿಕೆಯು ಹೆಚ್ಚಾಗುತಿದ್ದು ದೇಶಿಯವಾಗಿ ಮಾರಾಟವಾಗುತ್ತಿರುವ ಪ್ಯಾಸ್ಸೆಂಜರ್ ಕಾರುಗಳಲ್ಲಿ ಕಾಂಪ್ಯಾಕ್ಟ್ ಎಸ್‍‍ಯುವಿ ಭಾಗವು ಹೆಚ್ಚಾಗಿಯೆ ಇದೆ. ಈ ನಿಟ್ಟಿನಲ್ಲಿ ಕಾಂಪ್ಯಾಕ್ಟ್ ಎಸ್‍‍ಯುವಿ ಕಾರುಗಳ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಮಾರುತಿ ವಿಟಾರಾ ಬ್ರಿಜ್ಜಾ ಕಾರಿಗೆ ಪೈಪೋಟಿ ನೀಡಲು ಮಹೀಂದ್ರಾ ಸಂಸ್ಥೆಯು ಎಸ್201 ಕಾಂಪ್ಯಾಕ್ಟ್ ಎಸ್‍‍ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜುಗೊಳಿಸುತ್ತಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಸದ್ಯ ಸ್ಯಾಂಗ್‌ಯಾಂಗ್‌ ಸಂಸ್ಥೆಯ ಜೊತೆಗೂಡಿ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಮಹೀಂದ್ರಾ ಸಂಸ್ಥೆಯು ಸ್ಯಾಂಗ್‌ಯಾಂಗ್‌ ಸಂಸ್ಥೆಯ ಕಂಪ್ಯಾಕ್ಟ್ ಎಸ್‌ಯುವಿ ಟಿವೊಲಿ ಮಾದರಿಯಲ್ಲೇ ಹೊಸ ಕಾರನ್ನು ಅಭಿವೃದ್ಧಿ ಮಾಡಲಾಗಿದೆ ಎನ್ನಲಾಗಿದೆ. ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲಾಗುತ್ತಿದ್ದು, ತಮಿಳುನಾಡಿನ ಹೊಸರು ಬಳಿ ಹೊಸ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಮಾಹಿತಿಗಳ ಪ್ರಕಾರ ಮಹೀಂದ್ರಾ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು 1.5-ಲೀಟರ್ ಡಿಸೇಲ್ ಎಂಜಿನ್ ಮತ್ತು 1.2-ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಪೆಡೆದುಕೊಳ್ಳುವ ಸಾಧ್ಯತೆಗಳಿದ್ದು, ಎರಡು ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಣೆ ಹೊಂದಿರಲಿವೆ.

ಬಿಡುಗಡೆಯ ಅವಧಿ : ಅಕ್ಟೊಬರ್/ನವೆಂಬರ್ 2018

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಮಾರುತಿ ಸುಜುಕಿ ಎರ್ಟಿಗಾ

ದೇಶಿಯ ಮಾರುಕಟ್ಟೆಯ ನಂ.1 ಕಾರು ಉತ್ಪಾದನಾ ಮತ್ತು ಮಾರಾಟ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ಸದ್ಯ ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರು ಮಾದರಿಯನ್ನು ಬಿಡುಗಡೆಗೊಳಿಲಿದ್ದು, ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಈ ಹಿಂದಿನ ಮಾದರಿಗಿಂತ ಉದ್ದಳತೆಯಲ್ಲಿ ಹೆಚ್ಚಿನ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಎರ್ಟಿಗಾ ಫೇಸ್‌ಲಿಫ್ಟ್ ಕಾರುಗಳ ಕ್ಯಾಬಿನ್ ಸ್ಪೆಸ್ ಕೂಡಾ ಮೂಲ ಮಾದರಿಗಿಂತ ಹೆಚ್ಚಿರಲಿವೆ ಎನ್ನಲಾಗಿದೆ. ಜೊತೆಗೆ ಕಾರಿನ ವಿಂಡ್‌ಸ್ಕ್ರೀನ್ ಅಳತೆಯಲ್ಲೂ ಬದಲಾವಣೆ ತರಲಾಗಿದ್ದು, ಹೊಸ ವಿನ್ಯಾಸದ ಅಲಾಯ್ ಚಕ್ರಗಳು ಮತ್ತು ಗುರುತರ ಬಾಡಿ ವಿನ್ಯಾಸಗಳು ಎರ್ಟಿಗಾ ಫೇಸ್‌ಲಿಫ್ಟ್ ಎಂಪಿವಿ ಕಾರಿನ ಲುಕ್ ಹೆಚ್ಚಿಸಿವೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಸದ್ಯ ಎರ್ಟಿಗಾ ಮಾದರಿಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, ಎರ್ಟಿಗಾ ಫೇಸ್‌ಲಿಫ್ಟ್ ಮಾದರಿಗಳು ಹೊಸದಾಗಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಪಡೆಯಲಿವೆ.

ಬಿಡುಗಡೆಯ ಅವಧಿ : ಆಗಸ್ಟ್ 2018

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಟಾಟಾ ಟಿಗೊರ್ ಜೆಟಿಪಿ

ಟಾಟಾ ಮೋಟಾರ್ಸ್ ಈ ವರ್ಷದ ಪ್ರಾರಂಭದಲ್ಲಿ ನಡೆದ ಆಟೋ ಎಕ್ಸ್ ಪೋ 2018ರಲ್ಲಿ ತಮ್ಮ ಟಿಗೊ ಜೆಟಿಪಿ ಪರ್ಫಾರ್ಮೆನ್ಸ್ ಸೇಡಾನ್ ಕಾರನ್ನು ಅನಾವರಾಣಗೊಳಿಸಿದ್ದು, ಟಾಟಾ ಮೋಟಾರ್ ಈ ಟಿಗೊರ್ ಜೆಟಿಪಿ ಕಾರನ್ನು ತಾಂತ್ರಿಕವಾಗಿ ಜಯೆಮ್ ಆಟೊ‍‍ನಿಂದಿಗೆ ಕೈಜೋಡಿಸಿ ಅಭಿವೃದ್ಧಿ ಮಾಡಲಾಗಿದೆ. ಈ ಕಾರು ಬಿಡುಗಡೆಗೊಂಡಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಡಿಮೆ ಬೆಲೆಯ ಪರ್ಫಾರ್ಮೆನ್ಸ್ ಕಾರಾಗಿ ಗುರುತಿಸಿಕೊಳ್ಳುತ್ತದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಟಾಟಾ ಟಿಗೊರ್ ಜೆ‍ಟಿಪಿ ಕಾರಿನಲ್ಲಿ ಕೇಳಭಾಗದ ಸಸ್ಪೆಂಷನ್ ಸಿಸ್ಟಮ್, ಹ್ಸ ಏರ್ ಇಂಟೇಕರ್, ಬ್ಯಾನೆಟ್ ಮೇಲೆ ಏರ್ ಸ್ಕೂಪ್ಸ್, ಸ್ಮೋಕ್ಡ್ ಹೆಡ್‍‍ಲ್ಯಾಂಪ್ ಮತ್ತು ಬಾಡಿ ಕಿಟ್ ಎಂಬ ಆಧೂನಿಕ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ, ಈ ಬಾಡಿ ಕಿಟ್‍‍ನೊಂದಿಗೆ ಸೈಡ್-ಸ್ಕರ್ಟ್ಸ್ ಮತ್ತು ರಿಯರ್ ಡಿಫ್ಯೂಸರ್ ಎಂಬುದನ್ನು ಕೂಡ ಅಳವಡಿಸಲಾಗಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಈ ಕಾರು 1.2 ಲೀಟರ್ ಟರ್ಬೋಚಾರ್ಜ್ಡ್ ಪೆಂಟ್ರೋಲ್ ಎಂಜಿನ್ ಸಹಾಯದಿಂದ 108ಬಿಹೆಚ್‍‍ಪಿ ಮತ್ತು 150ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಯ ಅವಧಿ : ಆಗಸ್ಟ್ 2018

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಟಾಟಾ ಟಿಯಾಗೊ ಜೆಟಿಪಿ

ದೇಶದ ಅತಿ ದೊಡ್ಡ ವಾಹನ ನಿರ್ಮಾಣ ಸಂಸ್ಥೆಯಾದ ಟಾಟಾ ಮೋಟಾರ್ಸ್ ಮುಂಬರುವ ಉತ್ಸವ ದಿನಗಳಲ್ಲಿ ಹೊಚ್ಚ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಂಡುಬಂದಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದಾಗ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಕ್ರೀಡಾತ್ಮಕ ಬಂಪರ್ ಜತೆಗೆ ಹೊಸತಾದ ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಅಗಲವಾದ ಲೋವರ್ ಗ್ರಿಲ್ ಇರಲಿದೆ. ಕಪ್ಪು ವರ್ಣ ಸುತ್ತುವರಿದ ಹೆಡ್‌ಲ್ಯಾಂಪ್ ಜತೆಗೆ ಜೆಟಿಪಿ ಲಾಂಛನ ಸಹ ಪ್ರಮುಖ ಆಕರ್ಷಣೆಯಾಗಲಿದೆ. ಹಿಂದುಗಡೆಯೂ ರೂಫ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ಲುಕ್ ನೀಡಲಿದೆ.

ಈ ವರ್ಷದಲ್ಲಿ ಬಿಡುಗಡೆಗೊಳ್ಳಲಿರುವ 7 ಹೊಸ ಕಾರುಗಳಿವು..

ಟಿಯಾಗೊ ಜೆಟಿಪಿ ಹಾಗೂ ಟಿಗೋರ್ ಜೆಟಿಪಿ ಮಾದರಿಗಳು ನೆಕ್ಸನ್ ಎಸ್‌ಯುವಿಗೆ ಸಮಾನವಾದ 1.2 ಲೀಟರ್ ಟರ್ಬೊಚಾರ್ಜ್ಡ್ ರವೊಟಾರ್ನ್ ಪೆಟ್ರೋಲ್ ಎಂಜಿನ್‌ಗಳನ್ನು ಪಡೆಯಲಿದೆ. ಇದು 150 ಎನ್‌ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಬಿಡುಗಡೆಯ ಅವಧಿ : ಆಗಸ್ಟ್ 2018

Most Read Articles

Kannada
English summary
7 most awaited cars of 2018
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X