ಟೊಯೊಟಾ ಫಾರ್ಚೂನರ್ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ನಿಸ್ಸಾನ್ ಟೆರ್ರಾ ಕಾರು..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ 7 ಸೀಟರ್ ಟೆರ್ರಾ ಎಸ್‍ಯುವಿ ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸುತ್ತಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ತಮ್ಮ 7 ಸೀಟರ್ ಟೆರ್ರಾ ಎಸ್‍ಯುವಿ ಕಾರನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ತಯಾರಿ ನಡೆಸುತ್ತಿದೆ. ಕಳೆದ ತಿಂಗಳು 5 ಸೀಟರ್ ಟೆರ್ರಾ ಎಸ್‍ಯುವಿ ಕಾರನ್ನು ಚೀನಾದ ಮಾರುಕಟ್ಟೆಗೆ ಪರಿಚಯಿಸಿದ ನಿಸ್ಸಾನ್ ಕಳೆದ ವಾರ ಫಿಲಿಫೈನ್ಸ್ ನಲ್ಲಿ ತಮ್ಮ 7 ಆಸನವುಳ್ಳ ಟೆರ್ರಾ ಎಸ್‍ಯುವಿ ಕಾರನ್ನು ಅನಾವರಣಗೊಳಿಸಿದೆ.

ಫಿಲಿಫೈನ್ಸ್ ನಲ್ಲಿ ನಡೆದ ನಿಸ್ಸಾನ್ ಟೆರ್ರಾ ಅಂತರಾಷ್ಟ್ರೀಯ ಆವಿಷ್ಕಾರದಲ್ಲಿ ಭವಿಷ್ಯದಲ್ಲಿ ಟೆರ್ರಾ ಎಸ್‍ಯುವಿ ಕಾರನ್ನು ಪರಿಚಯಿಸುವ ಪಟ್ಟಿಯನ್ನು ವಿವರಿಸಿದ್ದು, ಥಾಯ್‍ಲ್ಯಾಂಡ್, ಇಂಡೋನೇಶಿಯಾ, ಮಯನ್ಮಾರ್ ಮತ್ತು ವಿಯಾಟ್ನಮ್ ಎಂಬ ಹಲವು ಏಷಿಯನ್ ದೇಶಗಳಿವೆ.

ನಿಸ್ಸಾನ್ ಟೆರ್ರಾ ಎಸ್‍ಯುವಿ ಮೂರನೆ ತಲೆಮಾರಿಗೆ ಸಂಬಂದಿಸಿದ ನಿಸ್ಸಾನ್ ನವಾರ ಆಧಾರಿತ ಎಮ್‍ಪಿವಿ ಪ್ಲಾಟ್‍ಫಾರ್ಮ್ ಮೇಲೆ ನಿರ್ಮಿಸಲಾಗಿದೆ. ಮತ್ತು ಡಿಜೈನ್ ಪ್ರಕಾರ ಇನ್ನಿತರೆ ಮಾಡಲ್‍ಗಳ ಜೊತೆ ಹೋಲಿಸಿದರೆ ವಿಭಿನ್ನವಾಗಿರಲಿದೆ.

ನಿಸ್ಸಾನ್ ಲೈನ್‍ಅಪ್‍ನಲ್ಲಿ ಒಳ್ಳೆಯ ಸಾಧನೆಯನ್ನು ಪಡೆದುಕೊಂಡಿರುವ ಎಕ್ಸ್ ಟೆರ್ರಾ ಬಾಡಿಯನ್ನು ವಿನ್ಯಾಸಗೊಳಿಸಲಾಗಿದೆ. ಎಕ್ಸ್ ಟೆರ್ರಾ ನಿಸ್ಸಾನ್ ಪಲಾಡಿನ್ ಹೆಸರಿನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಅಳತೆಯಲ್ಲಿ ಮತ್ತು ಬಾಡಿ ಸ್ಟೈಲ್ ಪರವಾಗಿ ಇದು 7 ಸೀಟರ್ ಪ್ರೀಮಿಯಮ್ ಎಸ್‍ಯುವಿ ಸೆಗ್ಮೆಂಟ್ ಕಾರುಗಳ ಸರಣಿಯಲ್ಲಿ ಬರಲಿದೆ.

ನಿಸ್ಸಾನ್ ಟೇರ್ರಾ 4.9 ಮೀಟರ್ ಉದ್ದ, 1.9 ಮೀಟರ್ ಎತ್ತರ ಮತ್ತು 1.8 ಮೀಟರ್ ಅಗಲವನ್ನು ಹೊಂದಿದೆ. ಅದೇ ವಿಧಾನದಲ್ಲಿ ಗ್ರೌಂಡ್ ಕ್ಲಿಯರೆನ್ಸ್ 225ಎಂಎಂ ಮತ್ತು 2.9 ಮೀಟರ್ ವೀಲ್‍ಬೇಸ್ ಅನ್ನು ಪಡೆದುಕೊಂಡಿರಲಿದೆ.

ಚೈನೀಸ್ ವರ್ಷನ್ ನಿಸ್ಸಾನ್ ಟೆರ್ರಾ ಕಾರುಗಳು 181 ಬಿಹೆಚ್‍ಪಿ ಮತ್ತು 251ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಕ್ಯೂಆರ್25 2.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದೆ. ಆದರೆ ಫಿಲಿಫೈನ್ಸ್ ವರ್ಷನ್ ನಿಸ್ಸಾನ್ ಟೇರ್ರಾ ಕಾರಿನಲ್ಲಿ 187ಬಿಹೆಚ್‍ಪಿ ಮತ್ತು 450ಎನ್ಎಮ್ ಟಾರ್ಕ್ ಉತ್ಪಾದಿಸುವ ವೈಡಿ25 2.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಇನ್ನು ಗೇರ್‍ಭಾಕ್ಸ್ ವಿಚಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದಲ್ಲದೆ ಆಯ್ಕೆಯಲ್ಲಿ ರಿಯರ್ ಡಿಫರೆನ್ಷಿಯಲ್ ಲಾಕಿಂಗ್ ಫೀಚರ್ ಉಳ್ಳ 4 ವೀಲ್ ಡ್ರೈವ್ ಸಿಸ್ಟಂ ಕೂಡಾ ಅಳವಡಿಸಲಾಗಿದೆ.

ನಿಸ್ಸಾನ್ ಟೆರ್ರಾ ಎಸ್‍ಯುವಿ ಕಾರಿನಲ್ಲಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಡ್ಯುಯಲ್ ಟೋನ್ ಅಲಾಯ್ ವೀಲ್ಸ್, ಪುಷ್-ವಟನ್ ಸ್ಟಾರ್ಟ್/ಸ್ಟಾಪ್, ಸ್ಮಾರ್ಟ್ ಇನ್‍ಸೈಡ್ ರಿಯರ್ ವ್ಯೂ ಮಿರರ್, ರಿಯರ್ ಕ್ಯಾಮೆರಾ ವ್ಯೂನೊಂದಿಗೆ 4 ದಿಕ್ಕುಗಳಲ್ಲಿರುವ ಕ್ಯಾಮೆರಾ ವ್ಯೂ ಅನ್ನು ಡಿಸ್ಪ್ಲೇ ಮಾಡುತ್ತದೆ.

ಜೀರೊ ಗ್ರಾವಿಟಿ ಉಳ್ಳ ಫ್ರಂಟ್ ಸೀಟ್, ಒನ್ ಟಚ್ ರಿಮೋಟ್ ಫೋಲ್ಡ್ ಮತ್ತು ಥಂಬುಲ್ ಸೆಕೆಂಡ್ ರೋ ಸೀಟ್‍ಗಳು, 6 ಏರ್‍ಬ್ಯಾಗ್‍ಗಳು, ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಹಿಲ್ ಡೆಸ್ಸೆಂಟ್ ಕಂಟ್ರೋಲ್, ಲೇನ್ ಡಿಪಾರ್ಚುರ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ವಾರ್ನಿಂಗ್ ಎಂಬ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಪ್ರಸ್ಥುತ ಹಲವು ಅಂತರಾಷ್ಟೀಯ ಮಾರುಕಟ್ಟೆಗಳಲ್ಲಿ ಮಾರಾಟವಗುತ್ತಿರುವ ನಿಸ್ಸಾನ್ ಟೆರ್ರಾ 7 ಸೀಟರ್ ಕಾರು ಇಂಡಿಯಾದಲ್ಲಿ ಬಿಡುಗಡೆಯ ಬಗ್ಗೆ ಮಾಹಿತಿ ಬಹಿರಂಗಗೊಳಿಸಲಿಲ್ಲವಾದರೂ, ಮಾರುಕಟ್ಟೆಯಲ್ಲಿರುವ ಅವಕಾಶಗಳನ್ನು ಕಂಡರೆ ಮುಂದಿನ ವರ್ಷದಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡುವ ಅವಕಾಶಗಳಿವೆ.

ನಿಸ್ಸಾನ್ ಟೆರ್ರಾ 7ಸೀಟರ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಈಗಾಗಲೆ ಮಾರುಕಟ್ಟೆಯಲ್ಲಿರುವ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಮಿಟ್ಸುಬಿಶಿ ಪಜೆರೊ ಸ್ಪೋರ್ಟ್, ಇಸುಜು ಎಮ್‍ಯುಎಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








