ದುಬಾರಿ ಬೆಲೆಯ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿಸಿದ ನಟ ಬಾಬಿ ಡಿಯೋಲ್
ಲಗ್ಷುರಿ ಕಾರ್ ಕಲೆಕ್ಷನ್‌ಗೂ ಬಾಲಿವುಡ್ ತಾರೆಯರಿಗೂ ಎಲ್ಲಿಲ್ಲದ ನಂಟು ಅಂದ್ರೆ ತಪ್ಪಾಗುವುದಿಲ್ಲ. ಮಾರುಕಟ್ಟೆಯಲ್ಲಿ ಲಗ್ಗೆಯಿಡುವ ಪ್ರತಿಯೊಂದು ದುಬಾರಿ ಕಾರುಗಳು ಸಹ ಬಾಲಿವುಡ್‌ನ ಬಹುತೇಕ ತಾರೆಗಳ ಕಾರ್ ಕಲೆಕ್ಷನ್‌ನಲ್ಲಿ ಸ್ಥಾನಪಡೆದಿದ್ದು, ಇದೀಗ ಬಾಬಿ ಡಿಯೋಲ್ ಸಹ ತಮ್ಮ ಕನಸಿನ ರೇಂಜ್ ರೋವರ್ ಸ್ಪೋರ್ಟ್ ವೆರಿಯೆಂಟ್ ಖರೀದಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ಅಂಗಳದಿಂದ ದೂರವೇ ಉಳಿದಿದ್ದ ನಟ ಬಾಬಿ ಡಿಯೋಲ್ ಸದ್ಯ ನಟ ಸಲ್ಮಾನ್ ಖಾನ್ ನಟನೆಯ ರೇಸ್ 3ನಲ್ಲಿ ಅಭಿನಯಿಸುವ ಮೂಲಕ ಸಿನಿರಂಗದಲ್ಲಿ ಮತ್ತೆ ತಮ್ಮ ಖಾತೆ ತೆರಿದಿದ್ದು, ಇದೇ ವೇಳೆ ತಮ್ಮ ನೆಚ್ಚಿನ ರೇಂಜ್ ರೋವರ್ ಸ್ಪೋಟ್ ಕಾರು ಖರೀದಿಸುವ ಮೂಲಕ ಬಿ ಟೌನ್‌ನಲ್ಲಿ ಭಾರೀ ಸುದ್ಧಿಯಾಗಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ಅಂಗಳದಿಂದ ದೂರವೇ ಉಳಿದಿದ್ದ ನಟ ಬಾಬಿ ಡಿಯೋಲ್ ಸದ್ಯ ನಟ ಸಲ್ಮಾನ್ ಖಾನ್ ನಟನೆಯ ರೇಸ್ 3ನಲ್ಲಿ ಅಭಿನಯಿಸುವ ಮೂಲಕ ಸಿನಿರಂಗದಲ್ಲಿ ಮತ್ತೆ ತಮ್ಮ ಖಾತೆ ತೆರಿದಿದ್ದು, ಇದೇ ವೇಳೆ ತಮ್ಮ ನೆಚ್ಚಿನ ರೇಂಜ್ ರೋವರ್ ಸ್ಪೋಟ್ ಕಾರು ಖರೀದಿಸುವ ಮೂಲಕ ಬಿ ಟೌನ್‌ನಲ್ಲಿ ಭಾರೀ ಸುದ್ಧಿಯಾಗಿದ್ದಾರೆ.

ಇನ್ನು ನಟ ಬಾಬಿ ಡಿಯೋಲ್ ಖರೀದಿಸಿರುವ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಕುರಿತಾಗಿ ಹೇಳುವುದಾದರೇ, ದೆಹಲಿ ಎಕ್ಸ್‌ಶೋರಂ ಪ್ರಕಾರ 1.20 ಕೋಟಿ ಬೆಲೆ ಹೊಂದಿರುವ ಈ ಹೊಸ ಕಾರು ಐಷಾರಾಮಿ ಜೊತೆ ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಯಾಗಿದೆ ಎನ್ನಬಹುದು.

ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿರುವ ರೇಂಜ್ ರೋವರ್ ಸ್ಪೋರ್ಟ್ ಕಾರುಗಳು ಹಳೆಯ ಮಾದರಿಗಿಂತ ನವೀಕರಿಸಲಾದ ವಿನ್ಯಾಸವನ್ನು ಪಡೆದಿದ್ದು, ತಾಂತ್ರಿಕತೆಯಲ್ಲಿ ಯಾವುದೆ ಬದಲಾವಣೆಗಳನ್ನು ಪಡೆದಿಲ್ಲ ಎನ್ನಬಹುದು.

ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍ಲಿಫ್ಟ್ ಕಾರುಗಳು 3.0 ಲೀಟರ್ ವಿ6 ಮಿಲ್ ಡೀಸೆಲ್ ಎಂಜಿನ್ ಸಹಾಯದಿಂದ 255 ಬಿಹೆಚ್‍ಪಿ ಮತ್ತು 600ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮತ್ತು 4.4 ಲೀಟರ್ ಮಿಲ್ ಎಂಜಿನ್‍ಗಳು 335 ಹೆಚ್‍ಪಿ ಮತ್ತು 740ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

ಇನ್ನು ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍ಲಿಫ್ಟ್ ಕಾರುಗಳು 3.0 ಲೀಟರ್ ಸೂಪರ್‍ಚಾರ್ಜ್ಡ್ ವಿ6 ಮೋಟರ್ ಎಂಜಿನ್‍ಗಳು 335 ಹೆಚ್‍ಪಿ ಮತ್ತು 450ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5.0 ಲೀಟರ್ ವಿ8 ಸೂಪರ್‍ಚಾರ್ಜ್ಡ್ ಎಂಜಿನ್‍ಗಳು 518ಎನ್ಎಂ ಮತ್ತು 625 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇನ್ನು ಈ ಎರಡು ಎಂಜಿನ್‍ಗಳನ್ನು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಾರಿನ ಹೊರಭಾಗದಲ್ಲಿ ಪಿಕ್ಸೆಲ್ ಲೇಸರ್ ಎಲ್ಇಶಿ ಲೈಟ್ಸ್, ಅಟ್ಲಾಸ್ ಮೆಶ್ ಗ್ರಿಲ್ ಮತ್ತು ನವೀಕರಿಸಲಾದ ಬಂಪರ್‍ಗಳನ್ನು ಅಳವಡಿಸಲಾಗಿದ್ದು, ಇನ್ನು ಹಿಂಭಾಗದಲ್ಲಿ ಎಲ್ಇಡಿ ಟೈಲ್ ಲೈಟ್ಸ್, ಟಾಪರ್ಡ್ ರೇಕ್ ಮತ್ತು ರೀಯರ್ ವಿಂಡ್‍ಸ್ಕ್ರೀನ್ ಅನ್ನು ಅಳವಡಿಸಲಾಗಿದೆ.

ಇನ್ನು ಕಾರಿನ ಒಳಭಾಗದಲ್ಲಿ 10 ಇಂಚಿನ ಟಚ್ ಪ್ರೋ ಇನ್ಫೋಟೈನ್ಮೆಂಟ್ ಸಿಸ್ಟಂ, ಹಾಟ್ ಸ್ಟೋನ್ ಮಸಾಜ್ ಮತ್ತು ಹೀಟಿಂಗ್ ಫಂಕ್ಷನ್‍ಗಳನ್ನು ಪಡೆದ ಸೀಟ್‍ಗಳು, ಸೂಚನೆಯಿಂದ ನಿಯಂತ್ರಿಸಬಹುದಾದ ಸನ್‍ಬ್ಲೈಂಡ್ಸ್, ಏರ್ ಕ್ಯಾಬಿನ್ ಐಒನೈಸೇಷನ್, ಮತ್ತು ಕ್ರೂಸ್ ಕಂಟ್ರೋಲ್ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಹೊಸದಾಗಿ ಬಿಡುಗಡೆಗೊಂಡ ರೇಂಜ್ ರೋವರ್ ಸ್ಪೋರ್ಟ್ ಮತ್ತು ರೇಂಜ್ ರೋವರ್ ಫೇಸ್‍ಲಿಫ್ಟ್ ಕಾರುಗಳು ಮಾರುಕಟ್ಟೆಯಲ್ಲಿ ಈಗಾಗಲೆ ಮಾರಾಟಕ್ಕಿರುವ ಆಡಿ ಕ್ಯೂ7, ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಮತ್ತು ಬಿಎಂಡಬ್ಲ್ಯೂ ಎಕ್ಸ್5 ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿವೆ.


Click it and Unblock the Notifications








