TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ದೇಶದಲ್ಲೆ ವೇಗವಾಗಿ ಮಾರಾಟಗೊಳ್ಳುತ್ತಿರುವ ಕಾರು ಮಾರುತಿ ಸ್ವಿಫ್ಟ್..
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಮೊದಲನೆಯ ತಲೆಮಾರಿನ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಿ ಯಶಸ್ಸನ್ನು ಕಂಡಿತ್ತು. ಈ ನಿಟ್ಟಿನಲ್ಲಿ ಸಂಸ್ಥೆಯು 2018ರಲ್ಲಿ ನಡೆದ ಅಟೋ ಎಕ್ಸ್ ಪೋ ಮೇಳದಲ್ಲಿ ತಮ್ಮ ಮೂರನೆಯ ತಲೆಮಾರಿನ ಸ್ವಿಫ್ಟ್ ಕಾರನ್ನು ಬಿಡುಗಡೆಗೊಳಿಸಿತ್ತು.
ತನ್ನ ಹಳೆಯ ಮಾದರಿಯಂತೆಯೆ ಗ್ರಾಹಕರಲ್ಲಿ ವಿಶ್ವಾಸವನ್ನು ಬೆಳೆಸಿಕೊಂಡು ಬರುತ್ತಿರುವ ಸ್ವಿಫ್ಟ್ ಕಾರು ಬಿಡುಗಡೆಗೊಂಡ 145 ದಿನಗಳಲ್ಲಿ ಸುಮಾರು 1 ಲಕ್ಷ ಯೂನಿಟ್‍ಗಿಂತ ಹೆಚ್ಚಾಗಿ ಮಾರಾಟಗೊಂಡು, ದೇಶದಲ್ಲೆ ವೇಗವಾಗಿ ಮಾರಾಟಗೊಂಡ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಐದನೇ ತಲೆಮಾರಿನ ಹೆರ್ಟೆಕ್ಟ್ (Heartect) ತಳಹದಿಯಲ್ಲಿ ನೂತನ ಸ್ವಿಫ್ಟ್ ನಿರ್ಮಾಣ ಮಾಡಲಾಗಿದ್ದು, ಇದು ಹೆಚ್ಚು ಶಕ್ತಿಶಾಲಿ, ಬಿಗಿತವನ್ನು ಪಡೆಯಲಿದೆ. ಜೊತೆಗೆ ಅತ್ಯುತ್ತಮ ಚಾಲನಾ ಅನುಭವದೊಂದಿಗೆ ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.
ಎಂಜಿನ್ ಸಾಮರ್ಥ್ಯ
ಹೊಸ ಸ್ವಿಫ್ಟ್ ವಿನೂತನ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಪೆಟ್ರೋಲ್ ಆವೃತ್ತಿಗಳು 83 ಬಿಎಚ್‌ಪಿ ಮತ್ತು 115ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡೀಸೆಲ್ ಆವೃತ್ತಿಯು 74 ಬಿಎಚ್‌ಪಿ ಮತ್ತು 190 ಎನ್ಎಂ ಟಾರ್ಕ್ ಉತ್ಪಾದಿಸುತ್ತವೆ.
ಜೊತಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, ಡಿಜೈರ್ ಮತ್ತು ಬಲೆನೊ ಕಾರುಗಳಿಂತಲೂ ಹೆಚ್ಚು ಆಕರ್ಷಣೆ ಪಡೆದುಕೊಂಡಿದೆ.
ಕಾರಿನ ಒಳ ಮತ್ತು ಹೊರ ವಿನ್ಯಾಸ ಸ್ಪೋರ್ಟಿ ಇಂಟಿರಿಯರ್ ಲುಕ್ ಪಡೆದಿರುವ ಹೊಸ ಸ್ವಿಫ್ಟ್ ಕಾರುಗಳು ಅತ್ಯಾಕರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.
ಇನ್ನು ಸ್ಮಾರ್ಟ್ ಕನೆಕ್ಟಿವಿಟಿಗೂ ಹೊಸ ಕಾರುಗಳಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, 7 ಇಂಚಿನ ಇನ್ಪೋಟೈನ್‌ಮೆಂಟ್, ಆಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, ಮಿರರ್ ಲಿಂಕ್ ಮತ್ತು ಕ್ಲೈಮೆಟ್ ಕಂಟ್ರೋಲರ್ ಸಿಸ್ಟಂ ಒದಗಿಸಲಾಗಿದೆ.
ಸುರಕ್ಷಾ ಸಾಧನಗಳು ಎಂಜಿನ್ ಸ್ಟಾರ್ಟ್ ಆ್ಯಂಡ್ ಸ್ಟಾಪ್ ಬಟನ್ ಒದಗಿಸಲಾಗಿದ್ದು, ಆಟೋ ಹೆಡ್‌ಲ್ಯಾಂಪ್, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಆಪರೇಟಿಂಗ್ ರಿಯರ್ ವ್ಯೂವ್ ಮಿರರ್, ಎಬಿಎಸ್ ಸೇರಿದಂತೆ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವಿದೆ.
2018ರ ಸ್ವಿಫ್ಟ್ ಕಾರಿನ ಬೆಲೆಗಳನ್ನು ದೆಹಲಿ ಎಕ್ಸ್ ಶೋರಂ ಪ್ರಕಾರ ಆರಂಭಿಕ ಕಾರು ಮಾದರಿಯನ್ನು ರೂ. 4.99 ಲಕ್ಷಕ್ಕೆ ಮತ್ತು ಟಾಪ್ ಕಾರು ಮಾದರಿಯನ್ನು ರೂ. 8.39 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಹೊಸ ಕಾರುಗಳನ್ನು ಅಭಿವೃದ್ಧಿ ಮಾಡಿದೆ.