ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಕಳೆದ ಒಂದು ತಿಂಗಳಿನಿಂದ ದೇಶದೆಲ್ಲೆಡೆ ಇಂಧನ ಬೆಲೆಗಳಲ್ಲಿ ಕಡಿಮೆಯಾಗಿದೆ, ಕೆಂದ್ರ ಸರ್ಕಾರವು ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡುಕೊಳ್ಳುತ್ತಿರುವ ಕಾರಣ ಬೆಲೆ ಕಡಿಮೆ ಆಗಿದೆ ಎಂದು ಕೂಡಾ ಹಲವರಿಗೆ ತಿಳಿದೆ ಇದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಮೇ ತಿಂಗಳಿನಲ್ಲಿ ಅಮೆರಿಕಾ ಇರಾನ್ ದೇಶದೊಂದಿಗೆ ನಡೆಸುತ್ತಿದ್ದ ನ್ಯೂಕ್ಲಿಯರ್ ಪವರ್ ಡೀಲ್ ಅನ್ನು ವಾಪಸ್ ಹಿಂತೆಗೆದುಕೊಂಡಿದ್ದು, ಇದೀಗ ಯುನೈಟೆಡ್ ಸ್ಟೇಟ್ಸ್ ಸರ್ಕಾರವು ಎಲ್ಲಾ ಮೂಲೆಗಳಿಂದ ಇರಾನ್ ಸರ್ಕಾರವನ್ನ ಹತ್ತಿಕ್ಕಲು ಹಲವಾರು ಸವಾಲುಗಳನ್ನು ಎದುರಿಸುವಂತೆ ಮಾಡುತ್ತಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಇದರಲ್ಲಿ ಬಹು ಮುಖ್ಯವಾದಾದು ಇರಾನ್ ದೇಶದಿಂದ ಇನ್ನಿತರೆ ದೇಶದವರು ಕಚ್ಚಾ ತೈಲವನ್ನ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಆದೇಶಿಸಲಾಗಿದ್ದು, ಜೊತೆಗೆ ಈ ಆದೇಶವನ್ನು ಉಲ್ಲಂಘಿಸುವ ರಾಷ್ಟ್ರಗಳಲ್ಲಿ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಅಮೆರಿಕ ಸರ್ಕಾರ ಎಚ್ಚರಿಸಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ನಮ್ಮ ದೇಶಕ್ಕೆ ಕಚ್ಚಾ ತೈಲವನ್ನು ಕಳುಹಿಸುವ ಪ್ರಮುಖ ದೇಶಗಳಲ್ಲಿ ಇರಾನ್ ಮೂರನೆಯ ಸ್ಥಾನದಲ್ಲಿದ್ದು, ಇದೀಗ ಟ್ರಂಪ್ ಆದೇಶದಂತೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ದೇಶದಲ್ಲಿ ಮತ್ತೊಮೆ ಇಂಧನ ಬೆಲೆಯಲ್ಲಿ ಏರಿಕೆಯಾಗಲಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಕಚ್ಚಾ ತೈಲವನ್ನು ಆಮದು ಮಾಡುವುದನ್ನು ನಿಲ್ಲಿಸಬೇಕು ಎಂದು ನವೆಂಬರ್ 4, 2018ರ ವರೆಗು ಗಡುವನ್ನು ನೀಡಲಾಗಿತ್ತು, ಆದರೂ ಸಹ ಭಾರತ ಸೇರಿದಂತೆ ಇನ್ನಿತರೆ ದೇಶಗಳು ಇರಾನ್ ಸರ್ಕಾರದ ನೆರವಿನೊಂದಿಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲಿಸಲಿಲ್ಲ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಯುಎಸ್ ಸರ್ಕಾರವು ತೆಗೆದುಕೊಂಡ ಈ ನಿರ್ಧಾರದಿಂದ ಇಂಧನದ ಬೇಡಿಕೆಯು ಹೆಚ್ಚಿರುವ ದೇಶಗಳಲ್ಲಿ ತೊಂದರೆ ಉಂಟಾಗುತ್ತದೆ. ಏಕೆಂದರೆ ಇಂಧನ ಆಧಾರಿತ ವಾಹನಗಳೇ ಹೆಚ್ಚು ಚಲಿಸುತ್ತಿರುವ ಕಾರಣ ಬೇಡಿಕೆಯು ಕೂಡಾ ಹೆಚ್ಚುತ್ತಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಈಗಾಗಲೆ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಚೀನಾ, ಜಪಾನ್, ಸೌತ್ ಕೊರಿಯಾ, ಇಟಾಲಿ, ಟರ್ಕಿ, ಗ್ರೀಸ್, ಭಾರತ ಮತ್ತು ತೈವಾನ್ ದೇಶಗಳಿಗೆ ಕಚ್ಚಾ ತೈಲವನ್ನು ಆಮದು ಮಾಡುವುದನ್ನ ನಿಲ್ಲಿಸಲು ಅಮೆರಿಕಾ ಆದೇಶಿಸಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಆದರೆ ಈ ದೇಶಗಳಲ್ಲಿ ಇಂಧನಗಳ ಬೇಡಿಕೆಯು ಹೆಚ್ಚಾಗಿಯೆ ಇರುವ ಕಾರಣ ಬೇರೆ ದಾರಿ ಇಲ್ಲದೇ ಯುಎಸ್ ಸರ್ಕಾರ ನೀಡಿದ ಗಡುವಿನ ನಂತರವೂ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಆದುದರಿಂದ ಈ ಎಂಟು ರಾಷ್ಟ್ರಗಳಿಗೆ 6 ತಿಂಗಳವರೆಗೆ ವಿನಾಯಿತಿಯನ್ನು ನೀಡಲಾಗುತ್ತಿದ್ದು, 6 ತಿಂಗಳ ಬಳಿಕ ಸಂಪೂರ್ಣವಾಗಿ ಇರಾನ್ ದೇಶದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂಬ ಅಮೆರಿಕಾ ಆದೇಶಕ್ಕೆ ಮೋದಿ ಕ್ಯಾರೇ ಎಂದಿಲ್ಲ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಭಾರತದಲ್ಲಿ ದಿನದಿಂದ ದಿನಕ್ಕೆ ಇಂಧನದ ಬೇಡಿಕೆಯು ಹೆಚ್ಚುತ್ತಲೇ ಇದೆ, ಆದುದರಿಂದ ಯುಎಸ್ ಸರ್ಕಾರ ನೀಡಿದ ಆದೇಶದ ಮೆರೆಗೆ ಪ್ರಧಾನಿ ಮೋದಿಯವರು ಯಾವ ರೀತಿಯ ನಿರ್ಣಯವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಕಾಯ್ದು ನೋಡಬೇಕಿದ್ದು, ಇರಾನ್ ದೇಶದಿಂದ ಒಮ್ಮೆ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದಲ್ಲಿ, ಮತ್ತೊಮ್ಮೆ ಇಂಧನದ ಬೆಲೆಯು ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಲಾಗುತ್ತಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

2018ರ ಅಕ್ಟೋಬರ್ ತಿಂಗಳಿನಲ್ಲಿ ಭಾರತವು ಇರಾನ್ ದೇಶದಿಂದ 2.57 ಮಿಲಿಯನ್ ಟನ್‍ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದರೆ, ಇನ್ನು 2017ರಲ್ಲಿ ಸುಮಾರು 1.89 ಮಿಲಿಯನ್ ಟನ್‍ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿತ್ತು. ಅಂದರೆ ಕಳೆದ ವರ್ಷಕ್ಕಿಂತಾ ಈ ವರ್ಷದ ಆಕ್ಟೋಬರ್‍‍ನಲ್ಲಿ ಶೇಕಡ 36ರಷ್ಟು ಹೆಚ್ಚಾಗಿ ಆಮದು ಮಾಡಿಕೊಂಡಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

2018ರ ಮೊದಲ ಅರ್ಧ ಹಣಕಾಸು ವರ್ಷದಲ್ಲಿ (ಎಪ್ರಿಲ್-ಅಕ್ಟೋಬರ್) ಭಾರತವು ಇರಾನ್‍ನಿಂದ ಬರೊಬ್ಬರಿ 17.62 ಮಿಲಿಯನ್ ಟನ್‍ಗಳ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗಿದ್ದು, 2017ರ ಹಣಾಕಾಸು ವರ್ಷದಲ್ಲಿ ಮಾಡಿಕೊಂಡ ಆಮದುಗಿಂತಾ ಶೇಕಡಾ 38.41ರಷ್ಟು ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗಿದೆ.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಈ ವರ್ಷದ ದಸರಾ ಹಬ್ಬದ ಮುಂಚೆ ದೇಶದಲ್ಲಿ ಇಂಧನದ ಬೆಲೆಯು ಹಲವಾರು ಪ್ರಮುಖ ನಗರಗಳಲ್ಲಿ ರೂ. 93ಕ್ಕೆ ದಾಟಿತ್ತು, ಹಬ್ಬದ ನಂತರ ಇಲ್ಲಿಯ ವರೆಗು ಇಂಧನದ ಬೆಲೆಯು ಕಡಿಮೆ ಆಗಿದೆ. ಇನ್ನು ಇರಾನ್ ದೇಶದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೆ ಆದಲ್ಲಿ ಮತ್ತೊಮ್ಮೆ ಬೇಡಿಕೆಗೆ ಅನುಗುಣವಾಗಿ ಇಂಧನ ಬೆಲೆಯಲ್ಲಿ ಏರಿಕೆಯಾದರೂ ಆಗಬಹುದು.

ದೊಡ್ಡಣ್ಣನಿಗೆ ಸವಾಲು - ಇಂಧನ ಬೆಲೆ ಇಳಿಕೆ ಹಿಂದಿನ ಮೋದಿ ತಾಕತ್ತು..!

ಸದ್ಯ ದೇಶದಲ್ಲಿ ಇಂಧನ ಬೆಲೆ ಇಳಿಕೆಯ ವಿಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ಮೋದಿಯವರು ಹೆಚ್ಚಿನ ಸ್ಥಾನಗಳನ್ನ ಗಳಿಸಲು ಬೆಲೆ ಇಳಿಕೆ ತಂತ್ರವನ್ನ ಅನುಸರಿಸುತ್ತಿದ್ದಾರೆ ಎಂದು ಪ್ರತಿ ಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಹಾಗಾದರೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು.?

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಿದ ಮೊದಲ ಐಷಾರಾಮಿ ಎಸ್‍ಯುವಿ ಆಲ್ಟುರಾಸ್ ಜಿ4 ಕಾರಿನ ಚಿತ್ರಗಳು ಇಲ್ಲಿದೆ ನೋಡಿ..

More from DriveSpark

Article Published On: Monday, November 26, 2018, 13:51 [IST]
English summary
Amid us sanctions indias crude oil imports from iran increased 36 percent in 2018 october.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+