ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಮಧ್ಯೆ ಪ್ರಕಟಣೆಯ ಯುದ್ಧ..!!

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಗಳಾದ ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಕಂಪೆನಿಗಳ ನಡುವೆ ಟ್ವಿಟರ್ ವೇದಿಕೆಯಲ್ಲಿ ಒಂದು ಸಣ್ಣ ಯುದ್ಧ ನಡೆದಿದೆ. ಎರಡು ಸಂಸ್ಥೆಗಳ ಮಧ್ಯೆ ಸರಾಸರಿಯಾಗಿ ನಡೆದ ಮಾತಿನ ಯುದ್ಧವನ್ನು ತಮಾಷೆಯ ಜಗಳವೆಂದೆ ಹೇಳಬ

By Rahul Ts

ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಗಳಾದ ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಕಂಪೆನಿಗಳ ನಡುವೆ ಟ್ವಿಟರ್ ವೇದಿಕೆಯಲ್ಲಿ ಒಂದು ಸಣ್ಣ ಮಾತಿನ ಯುದ್ಧ ನಡೆದಿದೆ. ಎರಡು ಸಂಸ್ಥೆಗಳ ಮಧ್ಯೆ ಸರಾಸರಿಯಾಗಿ ನಡೆದ ಮಾತಿನ ಯುದ್ಧವನ್ನು ತಮಾಷೆಯ ಜಗಳವೆಂದೆ ಹೇಳಬಹುದು.

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಮಧ್ಯೆ ಪ್ರಕಟಣೆಯ ಯುದ್ಧ..!!

ಕೋಪದಿಂದಾಗಲಿ ತಮಾಷೆಗಾಗಲಿ ಟ್ವಿಟರ್ ಮೂಲವಾಗಿ ನಡೆದ ಸಂಭಾಷಣೆಯು ಬಹಳ ಆಸಕ್ತಿಕರವಾಗಿ ಬದಲಾಗಿದೆ. ಅದಾಗ್ಯೂ, ಈ ಸಣ್ಣ ಮಾತಿನ ಯುದ್ಧವು ಬಿಎಮ್‍‍ಡಬ್ಲ್ಯೂ ಮತ್ತು ಆಡಿ ಎರಡು ಸಂಸ್ಥೆಗಳ ಅನುಯಾಯಿಗಳಿಗೆ ಒಳ್ಳೇಯ ವಿನೋದವನ್ನು ನೀಡಿದೆ. ಆಸಲಿಗೆ ನಡೆದುದ್ದಾರೂ ಏನು ಎಂದು ಇಲ್ಲಿ ತಿಳಿಯಿರಿ..

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಮಧ್ಯೆ ಪ್ರಕಟಣೆಯ ಯುದ್ಧ..!!

ಬಿಎಮ್‍‍ಡಬ್ಲ್ಯೂ ಕಳೆದ ವಾರ ತಮ್ಮ ಎಫ್82 ಎಮ್4 ಕಾರಿನ ಕುರಿತು ಟ್ವಿಟರ್‍‍ನಲ್ಲಿ ಪೋಸ್ಟ್ ಮಾಡಿತು. ಅಧ್ಭುತವಾದ ಈ ಫೋಟೊನ ಬ್ಯಾಗ್ರೌಂಡ್‍‍ನಲ್ಲಿ ಬೆಂಕಿಯ ಕಿಡಿಗಳು ಮತ್ತು ಫೈರ್ ವರ್ಕ್ಸ್ ಗಳನ್ನು ಬಳಸಿ ಅತ್ಯಂತ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿತ್ತು. ಮತ್ತು ಈ ಟ್ವೀಟ್‍‍ಗೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ಲಭ್ಯವಾಯಿತು.

ಬಿಎಮ್‍‍ಡಬ್ಲ್ಯೂ ಅದೇ ದಿನದಂದು ಆಡಿ ಟ್ವೀಟ್‍‍ಗೆ ಬದಲಾಗಿ, "ಹಿಂಭಾಗದಲ್ಲಿ ಆಗಾಗ ನೋಡುತ್ತಲೇ ಇದ್ದೇವೆ, ಕೆಲವು ಬಾರಿ ರಿಯರ್ ವ್ಯೂ ಮಿರರ್‍‍ನಲ್ಲಿ ಈ ವೃತ್ತಗಳು (ಆಡೀ ಲೋಗೊ) ಕಂಡುಬರುತ್ತಲೇ ಇರುತ್ತವೆ" ಎಂದು ಕೌಂಟರ್ ನೀಡಿದೆ. ನಿಜಕ್ಕೆ ಹೇಳುವುದಾದರೆ ಎರಡು ಸಂಸ್ಥೆಗಳ ಮಧ್ಯೆ ಆರೋಗ್ಯಕರವಾದ ಟ್ವಿಟರ್ ವಾದನೆಯು ನಡೆದಿದೆ. ಈ ಎರಡು ಸಂಸ್ಥೆಗಳ ಮಧ್ಯೆ ನಡೆದ ಸಂಭಾಷಣೆಯನ್ನು ಆ ಯಾ ಕಂಪೆನಿಗಳ ಅನುಯಾಯಿಗಳು ಮತ್ತೊಂತು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಒಬ್ಬರಿಗೊಬ್ಬರು ಬಹಿರಂಗವಾಗಿ ಹೀಯಾಳಿ ಮಾಡಿಕೊಳ್ಳುವುದು ಇದೇನು ಮೊದಲ ಬಾರಿಯಲ್ಲ. ಮಾರುಕಟ್ಟೆಯಲ್ಲಿ ತಮ್ಮ ಗುರುತುವಿಕೆಯನ್ನು ತೋರಿಸಿಕೊಳ್ಳಲು ಎರಡು ಸಂಸ್ಥೆಗಳು ಕೂಡಾ ಒಂದರ ಮೇಲೊಂದು ವಿಮರ್ಶೆಯನ್ನು ಮಾಡಿಕೊಂಡಿದೆ.

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಮಧ್ಯೆ ಪ್ರಕಟಣೆಯ ಯುದ್ಧ..!!

ಅಮೇರಿಕಾದಲ್ಲಿನ ಕ್ಯಾಲಿಫೋರ್ನಿಯಾನಲ್ಲಿನ ಶಾಂಟಾ ಮೊನಿಕಾದಲ್ಲಿ "ಬಿಎಮ್‍‍ಡಬ್ಲ್ಯೂ ಈಗ ನಿನ್ನ ಸಮಯ" ಎಂದು ಆಡಿ ಹೊಸ ಎ4 ಸೆಡಾನ್ ಕಾರಿನ ಪ್ರಕಟಣೆಯ ಫಲಕವನ್ನು ವ್ಯವಸ್ತೆ ಮಾಡಿದೆ. ಆದರೆ, ಕೇವಲ ಕೆಲ ದಿನಗಳ ವ್ಯವಧಿಯಲ್ಲಿಯೆ ಆಡಿ ಪ್ರಕಟೆಯ ಪಕ್ಕದಲ್ಲೆ "ಚೆಕ್‍ಮೇಟ್" ಎಂಬ ವಿಧಾವಾದ ಸಮಾಧಾನದಿಂದ ಬಿಎಮ್‍‍ಡಬ್ಲ್ಯೂ ಭಾರಿ ಪ್ರಕಟನೆಯ ಫಲಕವನ್ನು ಪ್ರದರ್ಶಿಸಿದೆ.

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಮಧ್ಯೆ ಪ್ರಕಟಣೆಯ ಯುದ್ಧ..!!

ಅಲ್ಲಿಗೆ ಕೊನೆಗೊಳ್ಳದೆ, ಕೆಲ ದಿನಗಳಿಗೆ ಮತ್ತೊಂದು ಬಾರಿ ಪ್ರಕಟಣೆಯ ಫಲಕಗಳನ್ನು ತಯಾರಿಸಿಕೊಳ್ಳಲು ಅವಕಾಶ ಮಾಡಿಕೊಂಡಿತು. ಆಡಿ ತಮ್ಮ ಆರ್8 ಸೂಪರ್ ಕಾರು ಹೊಂದಿರುವ ಪ್ರಕಟಣೆಯ ಫಲಕವನ್ನು ಬಿಎಮ್‍‍‍ಡಬ್ಲ್ಯೂ ಗಿಂತಾ ದೊಡ್ಡ ಬೋರ್ಡ್ ಅನ್ನು ಪಕ್ಕದಲ್ಲೆ ವ್ಯವಸ್ಥೆ ಮಾಡಿ ಅದರ ಮೇಲೆ, " ನಿಮ್ಮ ಕೆಲಸದವನೊಂದಿಗೆ ನಿಮಗೆ ಕೆಲಸವೇನು" ಎಂಬ ಮರು ಉತ್ತರವನ್ನು ನೀಡಿದೆ.

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಮಧ್ಯೆ ಪ್ರಕಟಣೆಯ ಯುದ್ಧ..!!

ಎರಡು ಸಂಸ್ಥೆಗಳ ಮಧ್ಯೆ ಪ್ರಕಟಣೆಯ ಯುದ್ಧ ದೊಡ್ಡದಾಗಿ ಏರ್‍ ಬಲೂನ್‍‍ನ ಮುಖಾಂತರ ಪ್ರಕಟಣೆಯನ್ನು ಮಾಡಲು ಶುರು ಮಾಡಿದೆ. ಆಡಿ ಸಂಸ್ಥೆಗೆ ಪ್ರತ್ಯುತ್ತರವಾಗಿ, ಭಾರೀ ಪರಿಣಮದಲ್ಲಿ ಒಂದು ದೊಡ್ಡ ಗಾತ್ರದ ಏರ್ ಬಲೂನಿನ ಮೇಲೆ ಬಿಎಮ್‍‍ಡಬ್ಲ್ಯೂ ತಮ ಫಾರ್ಮುಲಾ1 ರೇಸ್ ಕಾರನ್ನು ಪ್ರಿಂಟ್ ಮಾಡಿಸಿ, " ಗೇಮ್ ಓವರ್" ಎಂದು ನೀಡಿದೆ.

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಮಧ್ಯೆ ಪ್ರಕಟಣೆಯ ಯುದ್ಧ..!!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಆಡಿ ಮತ್ತು ಬಿಎಮ್‍‍ಡಬ್ಲ್ಯೂ ಸಂಸ್ಥೆಗಳಿಗೆ ಪ್ರಪಂಚ ವ್ಯಾಪ್ತಿಯಾಗಿ ಅಭಿಮಾನಿಗಳಿದ್ದಾರೆ. ಹೊಸದಾಗಿ ನಡೆದ ಟ್ವಿಟರ್ ಸಂಭಾಷಣೇಯಲ್ಲಿ ಸಾಮಾಜಿಕ ಜಾಲತಾಣದ ಮೂಲವಾಗಿ ಎಲ್ಲರ ದೃಷ್ಟಿಯನ್ನು ಸೆಳೆದಿದೆ. ಎರಡು ಜರ್ಮನ್ ಮೂಲದ ಸಂಸ್ಥೆಗಳ ನಡುವೆ ನಡೆದ ಸಂಭಾಷಣೆಯು ಈ ಮಟ್ಟಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಬಿಸಿಯನ್ನು ಹುಟ್ಟಿಸಿದೆ.

Article Published On: Tuesday, August 28, 2018, 17:22 [IST]
English summary
Audi And BMW Engage In A Small Twitter Fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+