ಆಡಿ ಕಾರುಗಳ ಮೇಲೆ ಭಾರಿ ಡಿಸ್ಕೌಂಟ್..!!
ಆಡಿ ಇಂಡಿಯಾ ತಮ್ಮ ಕಾರುಗಳಾ ಮೇಲೆ ಭಾರಿ ಡಿಸ್ಕೌಂಟ್ ಅನ್ನು ಪ್ರಕಟಿಸಿವೆ. ಈ ಡಿಸ್ಕೌಂಟ್ ಜೂನ್‍ವರೆಗು ಲಭ್ಯವಿರಲಿದೆ. ಸೀಮಿತ ಅವಧಿಯ ಈ ಆಫರ್‍ನಲ್ಲಿ ರೂ 2.47 ಲಕ್ಷದಿಂದ 10 ಲಕ್ಷದ ವರಗು ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ.
ಆಡಿ ಇಂಡಿಯಾ ತಮ್ಮ ಕಾರುಗಳಾ ಮೇಲೆ ಭಾರಿ ಡಿಸ್ಕೌಂಟ್ ಅನ್ನು ಪ್ರಕಟಿಸಿವೆ. ಈ ಡಿಸ್ಕೌಂಟ್ ಜೂನ್‍ವರೆಗು ಲಭ್ಯವಿರಲಿದೆ. ಸೀಮಿತ ಅವಧಿಯ ಈ ಆಫರ್‍ನಲ್ಲಿ ರೂ 2.47 ಲಕ್ಷದಿಂದ 10 ಲಕ್ಷದ ವರಗು ಡಿಸ್ಕೌಂಟ್ ಅನ್ನು ಪಡೆಯಬಹುದಾಗಿದೆ. ನೀವು ಆಡಿ ಕಾರನ್ನು ಕೊಳ್ಳುವ ಆಲೋಚನೆಯಲ್ಲಿದ್ದೀರಾ? ಹಾಗಾದರೆ ಯಾವ ಕಾರುಗಳ ಮೇಲೆ ಎಷ್ಟು ಡಿಸ್ಕೌಂಟ್ ಸಿಗಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಆಡಿ ಸಂಸ್ಥೆಯ ಸೆಡಾನ್ ಕಾರುಗಳ ಸರಣಿಯಲ್ಲಿರುವ ಏ3, ಏ4, ಏ6 ಮತ್ತು ಕ್ಯೂ ಸಿರೀಸ್ ಎಸ್‍ಯುವಿ ಕಾರಗುಗಳ ಸರಣಿಯಲ್ಲಿರು ಎಂಟ್ರಿ ಲೆವೆಲ್ ಕಾರುಗಳ ಮೇಲೆ ಈ ಆಫರ್ ಸಿಗಲಿದೆ. ಆಡಿ ಏ3 ಕಾರು ಪ್ರಸ್ಥುತ ಮಾರುಕಟ್ಟೆಯಲ್ಲಿ ರೂ 33.1 ಲಕ್ಷಕ್ಕೆ ಮಾರಾಟವಾಗುತ್ತಿದ್ದರೆ ಈ ಆಫರ್‍ನಲ್ಲಿ ರೂ 27.99 ಲಕ್ಷಕ್ಕೆ ದೊರೆಯುತ್ತದೆ.

ಇದೇ ಮಾದರಿಯಲ್ಲಿ ಆಡಿ ಎ4 ಕೂಡ ಮಾರುಕಟ್ಟೆಯಲ್ಲಿ ರೂ 41.47 ಲಕ್ಷಕ್ಕೆ ಮಾರಾಟವಾಗುತ್ತಿದ್ದರೆ, ಈ ಡಿಸ್ಕೌಂಟ್ ಆಫರ್‍ನಲ್ಲಿ ರೂ 35.99 ಲಕ್ಷಕ್ಕೆ ಗ್ರಾಹಕರೂ ಖರೀದಿಸಬಹುದಾಗಿದೆ. ಅಂದರೆ ಸುಮಾರು ರೂ 5.5 ಲಕ್ಷದ ವರೆಗು ಕಡಿತ.

ಆಡಿ ಏ ಸಿರೀಸ್ ಕಾರುಗಳ ಸರಣಿಯಲ್ಲಿನ ಹೈ ಎಂಡ್ ಸೆಡಾನ್ ಎ6 ಕಾರಿನ ಮೇಲೆ ಭಾರಿ ಡಿಸ್ಕೌಂಟ್ ದೊರೆಯುತ್ತಿದೆ. ಈ ಕಾರು ಮಾರುಕಟ್ಟೆಯಲ್ಲಿ ರೂ 56.99 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದರೆ, ಇನ್ನು ಈ ಆಫರ್‍ನಲ್ಲಿ ರೂ 46.99 ಲಕ್ಷಕ್ಕೆ ಅಂದರೆ ಸುಮಾರು 9.7 ಲಕ್ಷದ ಬೆಲೆ ಕಡಿತವನ್ನು ಪಡೆಯಬಹುದಾಗಿದೆ.

ಎಂಟನೆಯ ತಲೆಮಾರಿನ ಆಡಿ ಏ6 ಕಾರುಗಳು 2019ರಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಇದೇ ಮೇ-ಜೂನ್ 2018 ಆಫರ್‍ಗಳ ಕಾಲದಲ್ಲಿ ಆಡಿ ಕ್ಯೂ 3 ಕಾರುಗಳ ಮೇಲೆ ಕೂಡ ಡಿಸ್ಕೌಂಟ್ ಲಭ್ಯವಿದೆ.

ಆಡಿ ಕ್ಯೂ3 ಈಗ ಮಾರುಕಟ್ಟೆಯಲ್ಲಿ ರೂ 34.73 ಲಕ್ಷಕ್ಕೆ ಮಾರಾಟಗೊಳ್ಳುತ್ತಿದ್ದರೆ, ಈ ಆಫರ್‍ನಲ್ಲಿ ರೂ 2.74 ಲಕ್ಷ ಬೆಲೆ ಕಡಿತದಲ್ಲಿ ಅಂದರೆ ರೂ 31.99 ಲಕ್ಷಕ್ಕೆ ಗ್ರಾಹಕರು ಖರೀದಿಸಬಹುದಾಗಿದೆ.


Click it and Unblock the Notifications








