ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಆಡಿ ಸಂಸ್ಥೆಯು ತಮ್ಮ ಎಸ್‍‍ಯುವಿ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ಯೂ3 ಮತ್ತು ಕ್ಯೂ7 ಕಾರುಗಳ ಡಿಸೈನ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

By Rahul Ts

ಆಡಿ ಸಂಸ್ಥೆಯು ತಮ್ಮ ಎಸ್‍‍ಯುವಿ ಕಾರುಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ಯೂ3 ಮತ್ತು ಕ್ಯೂ7 ಕಾರುಗಳ ಡಿಸೈನ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಆಡಿ ಕ್ಯೂ3 ಡಿಸೈನ್ ಎಡಿಷನ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 40.76 ಲಕ್ಷಕ್ಕೆ ಮತ್ತು ಕ್ಯೂ7 ಡಿಸೈನ್ ಎಡಿಷನ್ ಕಾರು ರೂ. 82.37 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ.

ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಹೊಸ ಆಡಿ ಕ್ಯೂ3 ಮತ್ತು ಕ್ಯೂ7 ಡಿಸೈನ್ ಎಡಿಷನ್ ಕಾರು ನವೀಕರಿಸಲಾದ ವಿನ್ಯಾಸವನ್ನು ಪಡೆದಿದ್ದು, ಎರಡೂ ಕಾರುಗಳು ಹೊಸ ವೈಶಿಷ್ಟ್ಯತೆಗಳನ್ನು ಸಹ ಪಡೆದುಕೊಂಡಿದೆ. ಆಡಿ ಕ್ಯೂ 3 ಡಿಸೈನ್ ಎಡಿಷನ್ ಕಾರಿನಲ್ಲಿ ಫುಲ್ ಪೆಯಿಂಟ್ ಫಿನಿಷ್, ರಿಯರ್ ಕ್ರಿಸ್ಟಲ್ ಕ್ಲಿಯರ್ ಟೈಲ್ ಲ್ಯಾಂಪ್ಸ್, ಕ್ವಾಟ್ರೊ ಎಂಟ್ರಿ ಲೈಟ್ಸ್, ದೇಹ ಬಣ್ಣದ ಕೀ ಕವರ್ ಮತ್ತು ಸೀಟ್‍‍ಗಳನ್ನು ನೆಫ್ಫಾ ಲೆದರ್‍‍ನಿಂದ ಸಜ್ಜುಗೊಳಿಸಲಾಗಿದೆ.

ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಹಾಗೆಯೆ ಆಡಿ ಕ್ಯೂ7 ಡಿಸೈನ್ ಎಡಿಷನ್ ಕಾರಿನಲ್ಲಿ ರಿಯರ್ ಸೀಟ್ ಎಂಟರ್ಟೈನ್ಮೆಂಟ್, ಆಡಿ ಕೂಲ್ ಬ್ಯಾಗ್, ಡಿ ಪಿಲ್ಲರ್‍‍ನ ಮೇಲೆ ಆಡಿ ಲೋಗೊ ಮತ್ತು ಗಾಢ ಬಣ್ಣದ ಟೈಲ್ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ.

ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಆಡಿ ಕ್ಯೂ3 ಮತ್ತು ಕ್ಯೂ7 ಡಿಸೈನ್ ಎಡಿಷನ್‍ನೊಂದಿಗೆ 2018ರಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾರುಗಳು ಬಿಡುಗಡೆಗೊಂಡಿದ್ದು, ನಮ್ಮ ಉತ್ಪನ್ನ ಕೊಡುಗೆಯನ್ನು ವೈವಿಧ್ಯಗೊಳಿಸುವ ನಮ್ಮ ಬದ್ಧತೆಯ ಮತ್ತೊಂದು ಪರಿಪೂರ್ಣ ಉದಾಹರಣೆಯನ್ನು ನಾವು ಪ್ರದರ್ಶಿಸುತ್ತೇವೆ.

ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಹೊಸ ಮತ್ತು ವಿಶೇಷ ವೈಶಿಷ್ಟ್ಯತೆಗಳೊಂದಿಗೆ, ಈ ಉತ್ಪನ್ನಗಳನ್ನು ನಮ್ಮ ಗ್ರಾಹಕರು ವಿಶೇಷವಾದ ಶೈಲಿಯಲ್ಲಿ ಓಡಿಸಲು ಬಯಸುವವರಿಗಾಗಿ ಕೊಡುಗೆಯಾಗಿ ನೀಡಲಾಗುತ್ತದೆ. ಎಂದು ಆಡಿ ಇಂಡಿಯಾದ ಅಧ್ಯಕ್ಷರಾದ ರಾಹಿಲ್ ಅನ್ಸಾರಿ ಹೇಳಿಕೊಂಡಿದ್ದಾರೆ.

ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಎಂಜಿನ್ ಸಾಮರ್ಥ್ಯ

ಆಡಿ ಕ್ಯೂ3 ಡಿಸೈನ್ ಎಡಿಷನ್ ಕಾರು 2.0 ಲೀಟರ್ ಟಿಡಿಐ ಕ್ವಾಟ್ರೊ ಎಂಜಿನ್ ಸಹಾಯದಿಂದ 184ಬಿಹೆಚ್‍‍ಪಿ ಮತ್ತು 380ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 7 ಸ್ಪೀಡ್ ಎಸ್-ಟ್ರಾನಿಕ್ ಅಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಆಡಿ ಕ್ಯೂ7 ಡಿಸೈನ್ ಎಡಿಷನ್ ಕಾರು 40 ಟಿಎಫ್‍ಐ ಮತ್ತು 45 ಟಿಡಿಐ ಎಂಬ ಎರಡು ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಡಿ ಕ್ಯೂ7 40 ಟಿಎಫ್‍ಎಸ್‍ಐ 2.0 ಲೀಟರ್ ಕ್ವಾಟ್ರೊ ಎಂಜಿನ್ ಸಹಾಯದಿಂದ 252ಬಿಹೆಚ್‍‍ಪಿ ಮತ್ತು 370ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಹೊಸ ಎಡಿಷನ್‍‍ನಲ್ಲಿ ಬಿಡುಗಡೆಗೊಂಡ ಆಡಿ ಕ್ಯೂ3 ಮತ್ತು ಕ್ಯೂ7 ಕಾರುಗಳು..

ಹಾಗೆಯೆ ಆಡಿ ಕ್ಯೂ7 45 ಟಿಡಿಐ ವೇರಿಯಂಟ್ ಕಾರು 3.0 ಲೀಟರ್ ಕ್ವಾಟ್ರೊ ಎಂಜಿನ್ ಸಹಾಯದಿಂದ 249ಬಿಹೆಚ್‍‍ಪಿ ಮತ್ತು 600ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು ಎರಡು ಎಂಜಿನ್ ಅನ್ನು 8 ಸ್ಪೀಡ್ ಟಿಪ್ಟ್ರಾನಿಕ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

More from DriveSpark

Article Published On: Wednesday, July 18, 2018, 10:01 [IST]
English summary
Audi Q3 And Q7 Design Edition Launched In India.
Read more on audi suv luxury cars q3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+