ಬಿಡುಗಡೆಗೊಂಡ ಆಡಿ ಕ್ಯೂ5 ಪೆಟ್ರೋಲ್ ವರ್ಷನ್ ಕಾರು.. ಬೆಲೆ ಎಷ್ಟು.??
ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆದಿ ಈ ಹಿಂದೆಯೆ ತಮ್ಮ ಕ್ಯೂ 5 ಕಾರಿನ ಡೀಸೆಲ್ ಮಾದರಿಯ ಕಾರನ್ನು ಬಿಡುಗಡೆಗೊಳಿಸಿದ್ದು, ಇಂದು ಅದೇ ಕಾರಿನ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದೆ.
ಜರ್ಮನ್ ಮೂಲದ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆದಿ ಈ ಹಿಂದೆಯೆ ತಮ್ಮ ಕ್ಯೂ 5 ಕಾರಿನ ಡೀಸೆಲ್ ಮಾದರಿಯ ಕಾರನ್ನು ಬಿಡುಗಡೆಗೊಳಿಸಿದ್ದು, ಇಂದು ಅದೇ ಕಾರಿನ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಬಿಡುಗಡೆಗೊಂಡ ಈ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.55.27 ಲಕ್ಷಕ್ಕೆ ನಿಗದಿಪದಿಸಲಾಗಿದೆ.

ಕಾರಿನ ವಿನ್ಯಾಸ
ಬಿಡುಗಡೆಗೊಂಡ ಆಡಿ ಕ್ಯೂ5 ಕಾರಿನ ಮುಂಭಾಗದಲ್ಲಿ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಪಡೆದುಕೊಂಡಿದ್ದು, ಡೀಸೆಲ್ ಮಾದರಿಯ ಕಾರಿನಲ್ಲಿ ಬಳಸಲಾದ ಅಲಾಯ್ ಚಕ್ರಗಳನ್ನು ಪಡೆದಿದೆ. ಆದರೆ ಇದರಲ್ಲಿ ಬಳಸಲಾದ 45 ಟಿಎಸ್‍ಎಸ್‍ಐ ಬ್ಯಾಡ್ಜಿಂಗ್ ಡೀಸೆಲ್ ವರ್ಷನ್ ಕಾರಿಗಿಂತ ವಿಭಿನ್ನವಾಗಿ ಕಾಣಿಸಲಿದೆ.

ಎಂಜಿನ್ ಸಾಮರ್ಥ್ಯ
ಆಡಿ ಕ್ಯೂ 5 ಪೆಟ್ರೋಲ್ ವರ್ಷನ್ ಕಾರು 2 ಲೀಟರ್ ಟರ್ಬೋಚಾರ್ಜ್ಡ್ ಟಿಎಫ್ಎಸ್‍ಐ ಪೆಟ್ರೋಲ್ ಎಂಜಿನ್ ಸಹಾಯದಿಂದ 248ಬಿಹೆಚ್‍ಪಿ ಮತ್ತು 370ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು,7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಆಡಿ ಸಂಸ್ಥೆಯ ಕ್ವಾಟ್ರೋ ಆಲ್ ವ್ಹೀಲ್ ಡ್ರೈವ್ ಅನ್ನು ಸಹ ಪಡೆದುಕೊಂಡಿದೆ.

ಇನ್ನು ಕಾರಿನ ಒಳಭಾಗದಲ್ಲಿ ಡೀಸೆಲ್ ಮಾದರಿಯ ಕಾರಿನ ವಿನ್ಯಾಸವನ್ನು ಬಳಸಲಾಗಿದ್ದು, ಕಾರಿನ ಡ್ಯಾಶ್‍ಬೋರ್ಡ್ ಮತ್ತು ಸೆಂಟರ್ ಕಂಸೋಲ್ ಅನ್ನು ಕಪ್ಪು ಮತ್ತು ಡ್ಯುಯಲ್ ಟೋನ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇದಲ್ಲದೆ 8.3 ಇಂಚಿನ ನ್ಯಾವಿಗೇಶನ್ ಮತ್ತು ರೋಟರಿ ಕ್ನಾಬ್ ಕಂಟ್ರೋಲ್ ಅನ್ನು ಒಳಗೊಂಡ ಡಿಸ್ಪ್ಲೇಯನ್ನು ಅಳವಡಿಸಲಾಗಿದೆ.

ಇವುಗಳಲ್ಲದೆ ಮ್ಯಾಪ್, ರಿಯಲ್ ಟೈಮ್ ಫ್ಯುಯಲ್ ಕಂಸಂಪ್ಷನ್, ಕಾಂಟ್ಯಾಕ್ಟ್ಸ್, ಮ್ಯೂಸಿಕ್, ಯಾವರೇಜ್ ಸ್ಪೀಡ್ ಮತ್ತು ಇನ್ನಿತರೆ ಆಯ್ಕೆಗಳನ್ನು ತೋರಿಸಬಲ್ಲ 12.3 ಇಂಚಿನ ಆಡಿ ವರ್ಚುವಲ್ ಕಾಕ್‍ಪಿಟ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಗಿದೆ.

ಆಡಿ ಕ್ಯೂ5 ಪೆಟ್ರೋಲ್ ವರ್ಷನ್ ಕಾರುಗಳಲ್ಲಿ ಬ್ಯಾಂಗ್ & ಒಲುಫ್ಸೆನ್ 3ಡಿ ಸೌಂಡ್ ಸಿಸ್ಟಮ್, ವೈರ್‍ಲೆಸ್ ಚಾರ್ಜಿಂಗ್, ಸ್ಮಾರ್ಟ್‍ಫೊನ್ ಇಂಟಿಗ್ರೇಶನ್, ಇಂಟೆಲಿಜೆಂಟ್ ವಾಯ್ಸ್ ಡೈಲಾಗ್ ಸಿಸ್ಟಮ್, 10ಜಿಬಿ ಸ್ಟೋರೇಜ್ ಸ್ಪೇಸ್, 3 ಜೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟೋಲ್, ಹೆಡ್ಸ್ ಅಪ್ ಡಿಸ್ಪ್ಲೇ ಮತ್ತು ಲೆದರ್‍ನಿಂಡ ಸಜ್ಜುಗೊಂಡ ಸೀಟ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಇನ್ನು ಪ್ರಾಯಾಣಿಕರ ಸುರಕ್ಷತೆಗಾಗಿ 8 ಏರ್‍ಬ್ಯಾಗ್‍ಗಳು, ಅಡಾಪ್ಟೀವ್ ಕ್ರೂಸ್ ಕಂಟ್ರೋಲ್, ಆಕ್ಟೀವ್ ಲೇನ್ ಅಸ್ಸಿಸ್ಟ್, ಪಾರ್ಕ್ ಅಸ್ಸಿಸ್ಟ್, ಕೊಲ್ಲಿಷನ್ ಅವಾಯ್ಡನ್ಸ್ ಅಸ್ಸಿಸ್ಟ್, ಬ್ಲೈಂಡ್ ಸ್ಪಾಟ್ ವಾರ್ನಿಂಗ್, ಆಡಿ ಪಾರ್ಕಿಂಗ್ ಸಿಸ್ಟಮ್, ರಿಯರ್ ವ್ಯೂ ಕ್ಯಾಮೆರಾ ಮತ್ತು ಇನ್ನಿತರೆ ಸುರಕ್ಶಾ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಐಷಾರಾಮಿ ಕಾರು ತಯಾರಕ ಸಂಸ್ಥೆ ಇಂದು ತಮ್ಮ ಕ್ಯೂ5 ಕಾರಿನ ಪೆಟ್ರೋಲ್ ಮಾದರಿಯನ್ನು ಬಿಡುಗಡೆಗೊಳಿಸಿದ್ದು, ಪ್ರಸ್ಥುತ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್‍ಸಿ, ಬಿಎಮ್‍ಡಬ್ಲ್ಯೂ ಎಕ್ಸ್3 ಮತ್ತು ಲೆಕ್ಸಸ್ ಎನ್‍ಎಕ್ಸ್ 300ಹೆಚ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








