ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

By Praveen Sannamani

ಸದ್ಯ ಆಟೋ ಮೊಬೈಲ್ ಉದ್ಯಮದಲ್ಲಿ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್(ಎಎಂಟಿ) ಕಾರುಗಳತ್ತ ಗ್ರಾಹಕರು ಹೆಚ್ಚಿನ ಒಲವು ಹೊಂದುತ್ತಿದ್ದು, ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ ಮಾರುತಿ ಸುಜುಕಿ ನಿರ್ಮಾಣದ ಎಎಂಟಿ ಕಾರುಗಳ ಮಾರಾಟದಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದು. ಹಾಗಾದ್ರೆ ಆಟೋ ಮ್ಯಾಟಿಕ್ ಕಾರುಗಳ ಖರೀದಿಯಿಂದ ಏನೆಲ್ಲಾ ಲಾಭವಿವೆ? ಈ ಬಗ್ಗೆ ನಿಮ್ಮ ಡ್ರೈವ್ ಸ್ಪಾರ್ಕ್ ಕೆಲವು ಮಹತ್ವದ ಸಂಗತಿಗಳನ್ನು ಇಲ್ಲಿ ಚರ್ಚಿಸುತ್ತಿದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

ಸುದ್ದಿ ಮಾಧ್ಯಮಯೊಂದರ ಪ್ರಕಾರ, 2014ರಲ್ಲಿ ಮೊದಲ ಬಾರಿಗೆ ಅಗ್ಗದ ಬೆಲೆಯ ಸೆಲೆರಿಯೊ ಕಾರುಗಳಲ್ಲಿ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಿದ್ದ ಮಾರುತಿ ಸುಜುಕಿಯು ಆರಂಭದಲ್ಲಿ 5 ರಿಂದ 6 ಸಾವಿರ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಇದೀಗ ಬದಲಾದ ಮಾರುಕಟ್ಟೆ ಸನ್ನಿವೇಶದಲ್ಲಿ ಆಟೋಮ್ಯಾಟಿಕ್ ಕಾರುಗಳ ಬೇಡಿಕೆಗೆ ಏರು ಗತಿಯಲ್ಲಿದ್ದು, 2017-18ರ ಆರ್ಥಿಕ ವರ್ಷದ ಅವಧಿಯಲ್ಲೇ ಮಾರುತಿ ಸುಜುಕಿ ಬರೋಬ್ಬರಿ 1.50 ಲಕ್ಷ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳನ್ನು ಮಾರಾಟ ಮಾಡಿದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

ಆಟೋ ಮ್ಯಾಟಿಕ್ ಕಾರುಗಳಿಗೆ ನಗರ ಪ್ರದೇಶದಲ್ಲೇ ಹೆಚ್ಚಿನ ಬೇಡಿಕೆಯಿದ್ದು, ತಗ್ಗುತ್ತಿರುವ ಬೆಲೆಗಳು ಮತ್ತು ಟ್ರಾಫಿಕ್ ದಟ್ಟಣೆಯಲ್ಲಿ ಸುಖಕರ ಪ್ರಯಾಣಕ್ಕಾಗಿ ಬಹುತೇಕ ನಗರಪ್ರದೇಶದ ಗ್ರಾಹಕರು ಆಟೋಮ್ಯಾಟಿಕ್ ವರ್ಷನ್‌ಗಳತ್ತ ಆಕರ್ಷಕರಾಗುತ್ತಿದ್ದಾರೆ. ಹಾಗಾದ್ರೆ ಆಟೋಮ್ಯಾಟಿಕ್ ಕಾರುಗಳ ಖರೀದಿಯಿಂದ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವ ಬಗ್ಗೆ ಇಲ್ಲಿ ಹೆಚ್ಚಿನ ವಿವರಣೆ ನೀಡಲಾಗಿದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

ಆಟೋಮ್ಯಾಟಿಕ್ ಕಾರುಗಳ ಪ್ಲಸ್ ಪಾಯಿಂಟ್

ಎಎಂಟಿ ಅಂದರೆ ಏನು? ಸಾಮಾನ್ಯ ಮ್ಯಾನುವಲ್ ಗೇರ್ ಬಾಕ್ಸ್‌ಗಿಂತಲೂ ಇದು ಹೇಗೆ ಭಿನ್ನ? ಎಂಬಿತ್ಯಾದಿ ಪ್ರಶ್ನೆಗಳ ಕುರಿತಾಗಿ ವಾಹನ ಪ್ರಿಯರಲ್ಲಿ ಗೊಂದಲ ಇದ್ದೆ ಇರುತ್ತದೆ. ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು (ಎಸ್‌ಎಟಿ) ಸುಲಭವಾಗಿ ಕ್ಲಚ್‌ಲೆಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಎಂದು ಕರೆಯುತ್ತೇವೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

ಭಾರತದಲ್ಲಿ ಈ ಹಿಂದೆ ಮಾರುತಿ ಸುಜುಕಿ ಸಂಸ್ಥೆಯು ಸೆಲೆರಿಯೊ ಕಾರುಗಳಲ್ಲಿ ಎಎಂಟಿ ಪರಿಚಯಿಸಿ ವಾಹನೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಎಬ್ಬಿಸಿತ್ತು. ತದನಂತರದಲ್ಲಿ ಬಿಡುಗಡೆಯಾಗಿರುವ ಬಹುತೇಕ ಕಾರುಗಳಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಜೊತೆಗೆ ಎಎಂಟಿ ಕೂಡಾ ಲಭ್ಯವಾಗುತ್ತಿರುವುದು ಗಮನಾರ್ಹ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

ಇನ್ನೊಂದು ಪ್ರಮುಖ ಅಂದ್ರೆ ಎಎಂಟಿ ಸೌಲಭ್ಯವಿರುವ ಕಾರುಗಳ ಬಳಕೆಯು ಇಂಧನ ದಕ್ಷತೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುತ್ತೆ ಎನ್ನುವ ಬಗ್ಗೆ ಹಲವರಲ್ಲಿ ಗೊಂದಲವಿದೆ. ಆದ್ರೆ ಈ ಬಗ್ಗೆ ಚಿಂತೆ ಬೇಡವೇ ಬೇಡ. ಎಎಂಟಿ ಬಳಕೆಯು ಇಂಧನ ಕಾರ್ಯಕ್ಷಮತೆ ಮೇಲೆ ಯಾವುದೇ ಪರಿಣಾಮ ಬೀರದು.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

ಇದೇ ಕಾರಣಕ್ಕಾಗಿ ಇಟಲಿಯ ಮಾಗ್ನೆಟ್ಟಿ ಮರೆಲ್ಲಿ ಪೂರೈಕೆ ಮಾಡುತ್ತಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಕಂಡುಬರುತ್ತಿದೆ. ಇದೀಗ ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳಿಗಾಗಿ ಮುಂದಿನ ಪುಟಗಳತ್ತ ಮುಂದುವರಿಯಿರಿ...

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

1. ಕ್ಲಚ್ ಇದೆ, ಕ್ಲಚ್ ಪೆಡಲ್ ಇಲ್ಲ

ನೀವು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌‍‌ನಲ್ಲಿ ಕ್ಲಚ್ ಇರಲ್ಲ ಅಂದುಕೊಂಡಿದ್ದರೆ ತಪ್ಪಾದಿತ್ತು. ನಿಸ್ಸಂಶವಾಗಿಯೂ ಇದರಲ್ಲಿ ಕ್ಲಚ್ ಇದ್ದು, ಕ್ಲಚ್ ಪೆಡಲ್ ಮಾತ್ರ ಕಂಡುಬರುವುದಿಲ್ಲ. ಇದು ನಿಮ್ಮ ಪಯಣವನ್ನು ಹೆಚ್ಚು ಆರಾದಾಯಕವಾಗಿಸಲಿದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

2. ವೆಚ್ಚ ಕಡಿಮೆ

ವರದಿಯೊಂದರ ಪ್ರಕಾರ 1986ರ ಫೆರಾರಿ ರೇಸ್ ಕಾರುಗಳಲ್ಲಿ ಇದೇ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತಿತ್ತು. ಇದಕ್ಕೆ ಕಡಿಮೆ ವೆಚ್ಚ ತಗುಲುತ್ತಿದ್ದು, ಹೆಚ್ಚು ಅನುಕೂಲಕರವೆನಿಸಿದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

3. ಎಎಂಟಿ ಕಿಟ್

ಮಗದೊಂದು ಪ್ರಮುಖ ವೈಶಿಷ್ಟ್ಯವೆಂದರೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೂ ಎಎಂಟಿ ಕಿಟ್ ಆಳವಡಿಸಬಹುದಾಗಿದೆ.

4. ಫಾಕ್ಟರಿ ಫಿಟ್ಟಿಂಗ್

ಮೇಲೆ ತಿಳಿಸಲಾದ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಫಾಕ್ಟರಿಯಿಂದ ಮಾತ್ರ ಜೋಡಣೆ ಮಾಡಲು ಸಾಧ್ಯ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

5. ಎರಡು ಪ್ರಮುಖ ಘಟಕಗಳು

ಎಎಂಟಿ ಎರಡು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ. ಅವುಗಳೆಂದರೆ, ಹೈಡ್ರಾಲಿಕ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

6. ಗೇರ್ ಬದಲಾವಣೆ

ಎಎಂಟಿ ವರ್ಷನ್ ಮ್ಯಾನುವಲ್ ಗೇರ್ ಬಾಕ್ಸ್ ಮೇಲೆ ಅವಲಂಬಿತವಾಗಿದ್ದು, ಆಟೋ ಮೋಡ್‌ನಲ್ಲಿ (ಡ್ರೈವ್) ಸ್ವಯಂಚಾಲಿತವಾಗಿ ಗೇರ್‌ಗಳು ಬದಲಾಗುತ್ತಿರುತ್ತವೆ. ಇದು ಸ್ಪೋರ್ಟ್ಸ್ ಮೋಡ್ (ಮ್ಯಾನುವಲ್) ಸಹ ಪಡೆದುಕೊಂಡಿದ್ದು, ಇಲ್ಲಿ ಚಾಲಕ ಮ್ಯಾನುವಲ್ ಆಗಿ ಗೇರ್ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ಲಸ್ (ಗೇರ್ ಹೆಚ್ಚಿಸಲು) ಮತ್ತು ಮೈನಸ್ (ಗೇರ್ ಕಡಿಮೆ ಮಾಡಲು) ನೀಡಲಾಗಿದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

7. ಹೆಚ್ಚು ಅನುಕೂಲಕರ

ವಾಹನ ತಜ್ಞರ ಪ್ರಕಾರ ಎಎಂಟಿ ಬಳಕೆಯು ಚಾಲಕ ಹಾಗೂ ತಯಾರಕರ ದೃಷ್ಟಿಕೋನದಲ್ಲೂ ಹೆಚ್ಚು ಅನುಕೂಲಕರವಾಗಿದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಸಂಪೂರ್ಣ ವಿಭಿನ್ನ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

8. ಮ್ಯಾಗ್ನೆಟ್ಟಿ ಮರೆಲ್ಲಿ

ಇಟಲಿ ಮೂಲದ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಭಾರತಕ್ಕೆ ಎಂಎಂಟಿ ವ್ಯವಸ್ಥೆಯನ್ನು ಒದಗಿಸುತ್ತದೆ. ಸಂಸ್ಥೆಯ ಪ್ರಕಾರ 2020ರ ವೇಳೆಯಾಗುವಾಗ ದೇಶದ 20ರಷ್ಟು ಪ್ರಯಾಣಿಕ ವಾಹನಗಳು ಎಎಂಟಿ ಮಾದರಿಗಳನ್ನು ಒಳಗೊಂಡಿರಲಿದೆ.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

9. ಇಂಧನ ದಕ್ಷತೆ

ಎಎಂಟಿ ವರ್ಷನ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತ್ರ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಬಳಕೆಯಿಂದಾಗಿ ಶೇಕಡಾ 10ರಷ್ಟು ಇಂಧನ ಕ್ಷಮತೆ ಕಡಿಮೆ ಕೂಡಾ ಆಗಬಹುದು.

ಮ್ಯಾನುವಲ್‌ಗಿಂತ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿದೆ ಭಾರೀ ಬೇಡಿಕೆ

10. ಬೆಲೆ ವ್ಯತ್ಯಾಸ ಎಎಂಟಿ ವರ್ಷನ್ ಸಾಮಾನ್ಯ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ 40ರಿಂದ 50 ಸಾವಿರ ರು.ಗಳಷ್ಟು ದುಬಾರಿಯೆನಿಸಲಿದೆ. ಆದರೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಬಂದಲ್ಲಿ ಆಟೋಮ್ಯಾಟಿಕ್ ಕಾರುಗಳ ಬೆಲೆಯು ಮ್ಯಾನುವಲ್ ಕಾರುಗಳ ಬೆಲೆಗಳಂತೆಯೇ ಲಭ್ಯವಾಗಬಹುದು.

Kannada
Read more on auto news
English summary
Automatic car sales see big jump, Maruti sales rose 28 times in four years.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more