ಆಗಸ್ಟ್ ಇಂದ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್‍ಗಳು ಲಭ್ಯ.. ಎಲ್ಲೆಲ್ಲಿ.?
ಹಲವು ಸುತ್ತಿನ ಮಾತುಕತೆಯ ನಂತರ ಭಾರತ ಸರ್ಕಾರವು ಕ್ವಾಡ್ರಿ ಸೈಕಲ್ ಮಾದರಿಗಳಿಗೆ ಅನುಮತಿ ನೀಡಿದೆ. ಹೀಗಾಗಿ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್‌ಗಳನ್ನು ಪರಿಚಯಿಸಲು ಬಜಾಜ್ ಯೋಜನೆ ರೂಪಿಸಿದೆ.
ಹಲವು ಸುತ್ತಿನ ಮಾತುಕತೆಯ ನಂತರ ಭಾರತ ಸರ್ಕಾರವು ಕ್ವಾಡ್ರಿ ಸೈಕಲ್ ಮಾದರಿಗಳಿಗೆ ಅನುಮತಿ ನೀಡಿದೆ. ಹೀಗಾಗಿ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್‌ಗಳನ್ನು ಪರಿಚಯಿಸಲು ಬಜಾಜ್ ಯೋಜನೆ ರೂಪಿಸಿದ್ದು, ಇದೇ ವರ್ಷದ ಕೊನೆಯಲ್ಲಿ ಹೊಸ ವಾಹನಗಳು ಖರೀದಿಗೆ ಲಭ್ಯವಾಗಲಿವೆ.

ಇಷ್ಟು ದಿನಗಳ ಕಾಲ ಭಾರತದಲ್ಲೇ ಅಭಿವೃದ್ಧಿಗೊಂಡ ವಿದೇಶಿ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟವಾಗುತ್ತಿದ್ದ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್‌ಗಳು ಇದೀಗ ಭಾರತದಲ್ಲೇ ಖರೀದಿಗೆ ಲಭ್ಯವಾಗುತ್ತಿದ್ದು, ಬೇಡಿಕೆಯ ಒತ್ತಾಯದ ಮೆರೆಗೆ ಮುಂದಿನ ತಿಂಗಳಿನಿಂದ ಕೇರಳ ಹಾಗು ನೈರುತ್ಯ ಭಾರತದ ಪ್ರಾಂತ್ಯಗಳಲ್ಲಿ ಮಾತ್ರ ಲಭ್ಯವಿರಲಿದೆ.

ಪ್ರಸ್ಥುತ ಬಜಾಜ್ ಕ್ಯೂಟ್ ಕ್ವಾಡ್ರಿಸೈಕಲ್‍ಗಳ ಬೆಲೆಯು ಬಜಾಜ್ ಸಂಸ್ಥೆಯು ಬಹಿರಂಗಗೊಳಿಸಲಿಲ್ಲವಾದರೂ, ವಿದೇಶದ ಮಾರುಕಟ್ಟೆಯಲ್ಲಿ ರೂ. 3 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಬಜಾಜ್ ಸಂಸ್ಥೆಯು ಈ ವಾಹನವನ್ನು ಈಗಾಗಲೇ ವಿವಿಧ ರಾಷ್ಟ್ರಗಳಿಗೆ ರಫ್ತು ಕೂಡಾ ಮಾಡುತ್ತಿದ್ದು, ಪ್ರತಿ ತಿಂಗಳಿಗೆ 5000 ಯೂನಿಟ್ ಕ್ಯೂಟ್ ಕ್ವಾಡ್ರಿಗಳನ್ನು ಉತ್ಪಾದಿಸುತ್ತಿದೆ.

ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು 217ಸಿಸಿ 4 ಸ್ಟ್ರೋಕ್ಸ್ ಮತ್ತು ಸಿಂಗಲ್ ಸಿಲಿಂಡರ್ , ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13 ಬಿಹೆಚ್‍ಪಿ ಮತ್ತು 20 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಕ್ಯೂಟ್ ಕ್ವಾಡ್ರಿ ಸೈಕಲ್‌ಳು ಗರಿಷ್ಠವಾಗಿ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 2752-ಎಮ್ಎಮ್ ಉದ್ದ, 1312- ಎಮ್ಎಮ್ ಅಗಲ ಮತ್ತು 1650-ಎಮ್ಎಮ್ ಎತ್ತರವನ್ನು ಪಡೆದಿದ್ದು ಜೊತೆಗೆ ಸಿಎನ್‍ಜಿ ವರ್ಷನ್‍ನಲ್ಲಿ ಕೂಡಾ ಲಭ್ಯವಿರಲಿದೆ.

ಪುಣೆಯಲ್ಲಿನ ಬಜಾಜ್ ಆಟೋ ಆಧಾರಿತ ಕಾರ್ಖಾನೆಯಲ್ಲಿ ವಾರ್ಷಿಕವಾಗಿ ಸುಮಾರು 60,000 ಯೂನಿಟ್ ಕ್ಯೂಟ್ ಕ್ವಾಡ್ರಿಸಕಲ್ ವಾಹನವನ್ನು ಉತ್ಪಾದಿಸುತ್ತಿದ್ದು, ಬಜಾಜ್ ಆಟೋ ಸಂಸ್ಥೆಯು ಈಗಾಗಲೆ ಲ್ಯಾಟಿನ್ ಅಮೇರಿಕಾ,ಯೂರೋಪ್ ಮತ್ತು ಆಫ್ರಿಕಾ ದೇಷಗಳಲ್ಲಿ 2015ರಿಂದಲೂ ಮಾರಾಟ ಮಾಡುತ್ತಿದೆ.

ಬಜಾಜ್ ಆಟೊ ಪ್ರಕಾರ ಕ್ಯೂಟ್ ಕ್ವಾಡ್ರಿಸೈಕಲ್‍ಗಳು ಕೇವಲ ವಾಣಿಜ್ಯ ಉಪಯೋಗಕ್ಕೆ ಮಾತ್ರ ಉಪಯೋಗಿಸಬಹುದಾಗಿದೆ. ತಾಂತ್ರಿಕವಾಗಿ ಮೊದಲಿಗೆ ಕೇರಳ ಹಾಗು ನೈರುತ್ಯ ಭಾರತದ ಪ್ರಾಂತ್ಯಗಳಲ್ಲಿ ಬಿಡುಗಡೆಗೊಳಿಸಲಿದ್ದು, 35 ರಿಂದ 40 ಕ್ಯೂಟ್ ಅನ್ನು ಕೇರಳದ ಡೀಲರ್‍ಗಳಿಗೆ ರವಾನಿಸಲಾಗುತ್ತದೆ.

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ
ಇಷ್ಟು ದಿನಗಳ ಕಾಲ ಭಾರತದಲ್ಲೇ ಅಭಿವೃದ್ಧಿಗೊಂಡ ವಿದೇಶಿ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟವಾಗುತ್ತಿದ್ದ ಬಜಾಜ್ ಕ್ಯೂಟ್ ಕ್ವಿಡ್ರಿಸೈಕಲ್‌ಗಳು ಇದೀಗ ಭಾರತದಲ್ಲೇ ಖರೀದಿಗೆ ಲಭ್ಯವಾಗುತ್ತಿದ್ದು, ಒಂದು ವೇಳೆ ಈ ವಿನೂತನ ವಾಹನವು ಆಕರ್ಷಕ ಬೆಲೆಗಳಲ್ಲಿ ಬಿಡುಗೊಂಡಿದ್ದೆ ಆದರಲ್ಲಿ ಆಟೋ ರಿಕ್ಷಾಗಳು ಮೂಲೆಗುಂಪಾಗೊದು ಮಾತ್ರ ಖಚಿತ ಎಂದು ಹೇಳಲಾಗುತ್ತಿದೆ.


Click it and Unblock the Notifications








