ಈ ಎಸ್‍ಯುವಿ ಕಾರುಗಳ ಮೇಲೆ ನಂಬಲಾಗದ ಡಿಸ್ಕೌಂಟ್..!!
ಹಬ್ಬದ ಋತುವಿನಲ್ಲಿ ಬಹುತೇಕ ಮಂದಿ ಹೊಸ ಕಾರನ್ನು ಖರೀದಿಸಲು ಕಾತುರರಾಗಿರುತ್ತಾರೆ, ಏಕೆಂದರೆ ಇದೇ ಸಮಯದಲ್ಲಿ ವಾಹನ ತಯಾರಕ ಸಂಸ್ಥೆಗಳು ತಮ್ಮ ವಾಹನಗಳ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಈ ಬಾರಿ ಕೂಡಾ ವಾಹನ ತಯಾರಕ ಸಂಸ್ಥೆಗಳು ತಮ್ಮ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ.

ಆಗಸ್ಟ್ ತಿಂಗಳಿನಲ್ಲಿ ಕೇರಳದಲ್ಲಿ ಉಂಟಾದ ಭೀಕರ ಪ್ರವಾಹದ ಕಾರಣ ಎಲ್ಲಾ ವಾಹನ ತಯಾರಕ ಸಂಸ್ಥೆಗಳ ಮಾರಾಟದ ಸಂಖ್ಯೆಯು ಕಡಿಮೆ ಆಗಿದೆ. ಈ ನಿಟ್ಟಿನಲ್ಲಿ ವಾಹನ ತಯಾರಕ ಸಂಸ್ಥೆಗಳು ತಮ್ಮ ಕಾರುಗಳ ಮೇಲೆ ರಿಯಾಯಿತಿಯನ್ನು ನೀಡುತ್ತಿದೆ. ಹಾಗದರೆ ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿ ಸಿಗಲಿದೆ ಎಂದು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಲಿದ್ದೇವೆ..

ಸ್ಯಾಂಗ್ಯೊಂಗ್ ರೆಕ್ಸ್ಟಾನ್
ಸ್ಯಾಂಗ್ಯೊಂಗ್ ರೆಕ್ಸ್ಟಾನ್ ಒಂದು ಪ್ರೀಮಿಯಮ್ ಎಸ್‍ಯುವಿ ಆಗಿದ್ದು, ಈ ವಾಹನವನ್ನು ನೀವು ಭಾರತದಲ್ಲಿ ಮಹೀಂದ್ರಾ ಡೀಲರ್‍ಗಳ ಮುಖಾಂತರ ಖರೀದಿಸಬಹುದಾಗಿದೆ. ರೆಕ್ಸ್ಟಾನ್ ಕಾರು ಭಾರತದಲ್ಲಿ ಜನಪ್ರಿಯತೆಯನ್ನು ಹುಟ್ಟುಹಾಕದ ಕಾರಣ ಅಧಿಕ ಸಂಖ್ಯೆಯಲ್ಲಿ ಮಾಟವಾಗಲಿಲ್ಲ. ಇದೀಗ ಸಂಸ್ಥೆಯು ಈ ಕಾರಿನ ಮೇಲೆ ಬರೊಬ್ಬರಿ ಸುಮಾರು 8 ಲಕ್ಷದ ರಿಯಾಯಿತಿಯನ್ನು ನೀಡುತ್ತಿದೆ.

ಮಹೀಂದ್ರಾ ಎಕ್ಸ್‌ಯುವಿ500
ಎಕ್ಸ್‌ಯುವಿ500 ಮಹೀಂದ್ರಾ ಸಂಸ್ಥೆಯಲ್ಲಿನ ಪ್ರೀಮಿಯಂ ಎಸ್‍ಯುವಿ ಕಾರಾಗಿದ್ದು, ಇದು ಸನ್‍ರೂಫ್ ಮತ್ತು ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂನಂತಹ ಹಲವಾರು ಫೀಚರ್‍ಗಳನ್ನು ಒಳಗೊಂಡಿದೆ. ಈ ಕಾರಿನ ಪ್ರೀ-ಫೇಸ್‍ಲಿಫ್ಟ್ ಮಾದರಿಯ ಮೇಲೆ ಸಂಸ್ಥೆಯು ಸುಮಾರು 1 ಲಕ್ಷದ ರಿಯಾಯಿತಿಯನ್ನು ನೀಡುತ್ತಿದ್ದು, ಈ ಆಫರ್ ಆಟೋಮ್ಯಾಟಿಕ್ ವೇರಿಯಂಟ್‍ಗಳಲ್ಲಿ ಲಭ್ಯವಿರುವುದಿಲ್ಲ.

ಹ್ಯುಂಡೈ ಟಸ್ಕನ್
ಜೀಪ್ ಕಂಪಾಸ್ ಕಾರಿಗೆ ಪೈಪೋಟಿ ನೀಡಲು ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಟಸ್ಕನ್ ಕಾರನ್ನು ಬಿಡುಗಡೆಗೊಳಿಸಿತ್ತು. ಹ್ಯುಂಡೈ ಟಕ್ಸನ್ ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಲಭ್ಯವಿದ್ದು, 4x2 ಹಾಗು 4x4 ವೇರಿಯಂಟ್‍ಗಳಲ್ಲಿ ದೊರೆಯಲಿದೆ. ಹ್ಯುಂಡೈ ಸಂಸ್ಥೆಯು ತಮ್ಮ ಮಾರಾಟವನ್ನು ಅಧಿಕಗೊಳಿಸಲು ಟಸ್ಕನ್ ಕಾರಿನ ಮೇಲೆ ರೂ.1.5 ಲಕ್ಷದ ರಿಯಾಯಿತಿಯನ್ನು ನೀಡುತ್ತಿದೆ.

ಹೋಂಡಾ ಬಿಆರ್-ವಿ
ಹೋಂಡಾ ಬಿಆರ್-ವಿ ಏಳು ಆಸನವುಳ್ಳ ಎಸ್‍ಯುವಿ ಕಾರಾಗಿದ್ದು, ಹೋಂಡಾ ಸಿಟಿ ಕಾರಿನಂತೆಯೆ ಒಳವಿನ್ಯಾಸವನ್ನು ಪಡೆದುಕೊಂಡಿದೆ. ಈ ಕಾರು ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಸಂಸ್ಥೆಯು ಈ ಕಾರಿನ ಮೇಲೆ ರೂ.1 ಲಕ್ಷದ ರಿಯಾಯಿತಿ ಮತ್ತು ರೂ. 65,000 ಸಾವಿರದ ಎಕ್ಸ್ಚೇಂಜ್ ಬೆನಿಫೀಟ್ ಅನ್ನು ನೀಡುತ್ತಿದೆ.

ನಿಸ್ಸಾನ್ ಟೆರ್ರಾನೊ
ಭಾರತದಲ್ಲಿ ನಿಸ್ಸಾನ್ ಟೆರ್ರಾನೊ ಸಂಸ್ಥೆಯಲ್ಲಿನ್ ಏಕೈಕ್ ಕಾರಾಗಿದ್ದು, ಐಷಾರಾಮಿ ಒಳವಿನ್ಯಾಸವನ್ನು ಪಡೆದುಕೊಂಡಿದೆ. ಅತ್ಯುತ್ತಮವಾದ ಕ್ವಾಲಿಟಿಯನ್ನು ಒದಗಿಸಬಲ್ಲ ಈ ಕಾರನ್ನು ಸಂಸ್ಥೆಯು ತಮ್ಮ ಮಾರಾಟವನ್ನು ಅಧಿಕಗೊಳಿಸಲು ರೂ 75,000 ಸಾವಿರದ ರಿಯಾಯಿತಿಯನ್ನು ನೀಡುತ್ತಿದೆ.

ಮಹೀಂದ್ರಾ ಸ್ಕಾರ್ಪಿಯೊ
ಸ್ಕಾರ್ಪಿಯೊ ಮಹೀಂದ್ರಾ ಸಂಸ್ಥೆಯಲ್ಲಿನ ಉತ್ತಮವಾದ ಮತ್ತು ಬೆಸ್ಟ್ ಸೆಲ್ಲಿಂಗ್ ಎಸ್‍ಯುವಿ ಕಾರಾಗಿದ್ದು, 4x2 ಮತ್ತು 4x4 ಡ್ರೈವ್ ಸಿಸ್ಟಮ್‍ಗಳಲ್ಲಿ ಲಭ್ಯವಿದೆ. ಮಹೀಂದ್ರಾ ಸ್ಕಾರ್ಪಿಯೊ ಕಾರು 2.2 ಲೀಟರ್ಸ್ ಎಮ್‍ಹಾವ್ಕ್ ಡೀಸೆಲ್ ಎಂಜಿನ್ ಅನ್ನು ಕಾರಿನ ಎಲ್ಲಾ ವೇರಿಯಂಟ್‍ಗಳಲ್ಲಿ ಅಳವಡಿಸಲಾಗಿದ್ದು, ಬೇಸ್ ವೇರಿಯಂಟ್‍ನಲ್ಲಿ 2.5 ಲೀಟರ್ ಎಮ್2ಡಿಐಸಿಆರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಸಂಸ್ಥೆಯು ಈ ಕಾರಿನ ಮೇಲೆ ರೂ. 70,000 ಸಾವಿರದ ರಿಯಾಯಿತಿಯನ್ನು ನೀಡುತ್ತಿದೆ.

ಮಹೀಂದ್ರಾ ಟಿಯುವಿ300 ಮತ್ತು ಟಿಯುವಿ300 ಪ್ಲಸ್
ಮಹೀಂದ್ರಾ ಟಿಯುವಿ300 ಐದು ಆಸನವುಳ್ಳ ಮತ್ತು ಟಿಯುವಿ300 ಪ್ಲಸ್ ಏಳು ಆಸನವುಳ್ಳ ಎಸ್‍ಯುವಿ ಕಾರಾಗಿದ್ದು, ಟಿಯುವಿ300 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು ಟಿಯುವಿ300 ಪ್ಲಸ್ 2.2 ಲೀಟರ್ ಡೀಸೆಲ್ ಎಂಜಿನ್ ಅನ್ನು ಒದಗಿಸಲಾಗಿದೆ. ಸಂಸ್ಥೆಯು ಈ ಎರಡೂ ಕಾರುಗಳ ಮೇಲೆ ರೂ. 65,000 ಸಾವಿರದ ರಿಯಾಯಿತಿಯನ್ನು ನೀಡುತ್ತಿದೆ.

ಟಾಟಾ ಹೆಕ್ಸಾ
ಪ್ರೀಮಿಯಂ 7 ಸೀಟರ್ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹೆಕ್ಸಾ ಕಾರು ಜೆಬಿಎಲ್ 16 ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಮತ್ತು ಮೂನ್ ಏಂಬಿಯನ್ಸ್ ಲೈಟಿಂಗ್ ಎಂಬ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದ್ದು, ಮ್ಯಾನುವಲ್ ಮತ್ತು ಆಟೋಮ್ಯಾತಿಕ್ ವೇರಿಯಂಟ್‍ಗಳಲ್ಲಿ ಲಭ್ಯವಿದೆ. ಟಾಟಾ ಮೋಟಾರ್ಸ್ ಈ ಕಾರಿನ ಮೇಲೆ ರೂ 70,000 ಸಾವಿರದ ರಿಯಾಯಿತಿಯನ್ನು ನೀಡುತ್ತಿದೆ.

ರೆನಾಲ್ಟ್ ಡಸ್ಟರ್
ಡಸ್ಟರ್ ಕಾರು ಸಂಸ್ಥೆಯಲ್ಲಿನ ಆಲ್ ವ್ಹೀಲ್ ಡ್ರೈವ್ ಅನ್ನು ಪಡೆದಿರುವ ಕಾಂಪ್ಯಾಕ್ಟ್ ಎಸ್‍ಯುವಿ ಕಾರಾಗಿದ್ದು, 85 ಬಿಹೆಚ್‍ಪಿ ಮತ್ತು 110ಬಿಹೆಚ್‍ಪಿ ಸಾಮರ್ಥ್ಯವನ್ನು ಒದಗಿಸುವ ಎರಡು ಎಂಜಿನ್‍ಗಳನ್ನು ಅಳವಡಿಸಲಾಗಿದೆ. ರೆನಾಲ್ಟ್ ಸಂಸ್ಥೆಯು ಈ ಕಾರಿನ ಮೇಲೆ ರೂ. 65,000 ಸಾವಿರದ ರಿಯಾಯಿತಿಯನ್ನು ನೀಡುತ್ತಿದೆ.

ವಿ.ಸೂ : ಮೇಲೆ ಹೇಳಿರುವ ರಿಯಾಯಿತಿ ದರಗಳು ನಗರದಿಂದ ನಗರಕ್ಕೆ ಬದಲಾವಣೇಗಳಾಗುವ ಸಾಧ್ಯತೆಗಳಿದ್ದು, ಹೆಚ್ಚಿನ ಮಾಹಿತಿಗಾಗಿ ನಿಮ ಹತ್ತಿರದ ಡೀಲರ್‍ಗಳ ಬಳಿ ಚರ್ಚಿಸಿದ ನಂತರವೇ ಮುಂದಿನ ವ್ಯವಹಾರ ಕೈಗೊಳ್ಳಿ.
Source: cartoq


Click it and Unblock the Notifications








