ಬೆಂಗಳೂರಿನಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯೂ 6 ಸಿರೀಸ್ ಜಿಟಿ
ಐಷಾರಾಮಿ ಕಾರುಗಳ ಉತ್ಪನ್ನಗಳಿಗಾಗಿಯೇ ಹೆಸರುವಾಸಿಯಾದ ಜರ್ಮನ್ ಮೂಲದ ಬಿಎಂಡಬ್ಲ್ಯು ಸಂಸ್ಥೆಯು ತನ್ನ ಹೊಸ 6 ಸರಣಿಯ ಜಿಟಿ ಕಾರ್ ಅನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದೆ.
ಐಷಾರಾಮಿ ಕಾರುಗಳ ಉತ್ಪನ್ನಗಳಿಗಾಗಿಯೇ ಹೆಸರುವಾಸಿಯಾದ ಜರ್ಮನ್ ಮೂಲದ ಬಿಎಂಡಬ್ಲ್ಯು ಸಂಸ್ಥೆಯು ತನ್ನ ಹೊಸ 6 ಸರಣಿಯ ಜಿಟಿ ಕಾರ್ ಅನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬೆಲೆಯನ್ನು ರೂ. 58.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಿಎಂಡಬ್ಲ್ಯೂ 6 ಸಿರೀಸ್ ಕಾರಿನ ವಿನ್ಯಾಸ
ಬಿಎಂಡಬ್ಲ್ಯೂ 6 ಸರಣಿಯ ಜಿಟಿ ಕಾರು ತನ್ನ 5 ಸರಣಿಯ ಜಿಟಿ ಕಾರಿನ ವಿನ್ಯಾಸವನ್ನೇ ಆಧರಿಸಿದ್ದು, 630ಐ ಎಂಬ ವೇರಿಯಂಟ್‍ನಲ್ಲಿ ಬಿಡುಗಡೆಗೊಂಡಿದೆ. ಹೊಸ ವಿನ್ಯಾಸವು ಎಲ್ಇಡಿ ಹೆಡ್‍ಲೈಟ್ ಕೂಡ 5 ಸಿರೀಸ್ ಜಿಟಿ ಕಾರನ್ನೇ ಆಧರಿಸಿದೆ.

5 ಸಿರೀಸ್ ಕಾರಿಗಿಂತ ಭಿನ್ನವಾಗಿರುವ ಕೌಪ್-ಇಷ್ ವಿನ್ಯಾಸವನ್ನು ಬೂಟ್ ಲಿಡ್ ನಲ್ಲಿ ಇರಿಸಲಾಗಿದ್ದು, ಜೊತೆಗೆ ರೂಫ್ ಫ್ಲೋ ವಿಂಗ್ ಅನ್ನು ಸಹ ಹೊಂದಿರಲಿದೆ.

ಕಾರಿನ ಒಳವಿನ್ಯಾಸ
ಕಾರಿನ ಒಳವಿನ್ಯಾಸವು ಲೆದರ್‍ನಿಂದ ಸಜ್ಜುಗೊಂಡಿದ್ದು, ಬಿಎಂಡಬ್ಲ್ಯು 6 ಸಿರೀಸ್ ಜಿಟಿ ಕಾರುಗಳ ತಾಂತ್ರಿಕ ಅಂಶಗಳನ್ನು ಸಜ್ಞೆಗಳ ಮೂಲಕ ಕಂಟ್ರೋಲ್ ಮಾಡಬಹುದಾದ 10.25ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೆಯನ್ನು ಹೊಂದಿರಲಿವೆ.

ಇದಲ್ಲದೇ ಹೆಡ್-ಅಪ್ ಡಿಸ್ಪ್ಲೆ, 4 ಜೋನ್ ಆಟೊಮ್ಯಾಟಿಕ್ ವಾತಾವರಣ ನಿಯಂತ್ರಣ, ಎಲ್ಇಡಿ ಮೂಡ್ ಲೈಟಿಂಗ್ ಮತ್ತು ಸುತ್ತುವರೆದ ಸೌಂಡ್ ಸಿಸ್ಟಮ್ ಅನ್ನು ಹೊಂದಿದೆ.

ಎಂಜಿನ್ ಸಾಮರ್ಥ್ಯ
ಹೊಸ 6 ಸಿರೀಸ್ ಜಿಟಿ ಕಾರು ಟರ್ಬೊಚಾರ್ಜ್ಡ್ 2.0 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 254 ಬಿಹೆಚ್ ಪಿ ಮತ್ತು 400ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಾಗೆಯೇ ಈ ಎಂಜಿನ್ ಅನ್ನು 8- ಸ್ಪೀಡ್ ಗೇರ್ ಬಾಕ್ಸಿಗೆ ಜೋಡಿಸಲಾಗಿದ್ದು, ಜೊತೆಗೆ ಈ ಕಾರು ಕೇವಲ 6.3 ಸೆಕೆಂಡ್‌ಗಳಲ್ಲಿ 0-100 ಕಿಮಿ ವೇಗ ಪಡೆಯುವುದಲ್ಲದೇ 250ಕಿಮಿ(ಪ್ರತಿ ಗಂಟೆ) ಟಾಪ್ ಸ್ಪೀಡ್ ಅನ್ನು ಹೊಂದಿದೆ.

6 ಸಿರೀಸ್ ಜಿಟಿ ಕಾರು 5,901ಎಂಎಂ ಉದ್ದ, 1,902ಎಂಎಂ ಅಗಲ, 1,538ಎಂಎಂ ಎತ್ತರ ಮತ್ತು 3,070ಎಂಎಂ ವೀಲ್ ಬೇಸ್ ಆಕಾರವನ್ನು ಪಡೆದಿದ್ದು, 600 ಲೀಟರ್‍ಗಳಷ್ಟು ಶೇಖರಣಾ ಸಾಮರ್ಥ್ಯದ ಬೂಟ್ ಸ್ಪೆಸ್ ಹೊಂದಿದೆ.

ತನ್ನ ಹಳೆಯ ಮಾದರಿಯನ್ನು ಆಧರಿಸುವ 6 ಸರಣಿಯ ಜಿಟಿ ಸೆಡಾನ್ ಕಾರುಗಳು ವಿನ್ಯಾಸ, ಆಕಾರ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಂಡಿದ್ದು, ಮರ್ಸಿಡಿಸ್ ಇ-ಕ್ಲಾಸ್ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ.


Click it and Unblock the Notifications








