ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಎಕ್ಸ್1 ಪೆಟ್ರೋಲ್ ಕಾರು ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಮೊದಲ ಬಾರಿಗೆ ತನ್ನ ಹೊಸ ಕಾರು ಸರಣಿಯಲ್ಲಿ ಬಿಎಸ್-6 ಸೌಲಭ್ಯಗಳನ್ನು ಒದಗಿಸಿದೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ದೇಶದಲ್ಲಿ ಸದ್ಯ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಬಿಎಸ್ 4 ಮತ್ತು ಅದಕ್ಕೂ ಹೆಚ್ಚಿನ ಮಟ್ಟದ ವೈಶಿಷ್ಟ್ಯತೆಯುಳ್ಳ ವಾಹನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಮಾತ್ರವೇ ಅವಕಾಶವಿದ್ದು, 2019ರ ಮಾರ್ಚ್ ಅಂತ್ಯಕ್ಕೆ ಬಿಎಸ್ 4 ವಾಹನಗಳು ಉತ್ಪಾದನೆ ಮತ್ತು ಮಾರಾಟ ಕೂಡಾ ನಿಷೇಧಗೊಳ್ಳಲಿದೆ. ಹೀಗಾಗಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಬಿಎಸ್ 6 ಎಂಜಿನ್ ಪ್ರೇರಿತ ವಾಹನಗಳನ್ನು ಪರಿಚಯಿಸಲು ಮುಂದಾಗುತ್ತಿದ್ದು, ಇದೀಗ ಬಿಎಂಡಬ್ಲ್ಯು ಸಂಸ್ಥೆಯು ಸಹ ತನ್ನ ಮೊದಲ ಬಿಎಸ್ 6 ಎಂಜಿನ್ ಮಾದರಿಯ ಎಕ್ಸ್1 ಕಾರನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ಬಿಎಸ್-4 ಎಂಜಿನ್ ಮಾದರಿಗಿಂತಲೂ ಭಿನ್ನ ಎನ್ನಿಸುವ ಬಿಎಸ್-6 ಎಂಜಿನ್ ಪ್ರೇರಿತ ಕಾರುಗಳಲ್ಲಿ ಸೌಲಭ್ಯಗಳು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಒದಗಿಸಲಿದ್ದು, ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿಯೂ ಸಹ ಬಿಎಸ್-6 ಎಂಜಿನ್ ಕಾರುಗಳು ಬಿಎಸ್-4 ಕಾರುಗಳಿಂತಲೂ ಸೂಕ್ಷವಾಗುತ್ತವೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ಹೀಗಾಗಿಯೇ ಕೇಂದ್ರ ಸರ್ಕಾರವು 2019ರ ಏಪ್ರಿಲ್‌ನಿಂದಲೇ ಬಿಎಸ್-6 ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಕಡ್ಡಾಯಗೊಳಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಮತ್ತು ವೊಲ್ವೊ ಸಂಸ್ಥೆಗಳು ಈಗಾಗಲೇ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳ ಮಾರಾಟಕ್ಕೆ ಚಾಲನೆ ನೀಡಿವೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ಸದ್ಯ ಬಿಎಂಡಬ್ಲ್ಯು ಬಿಡುಗಡೆ ಮಾಡಿರುವ ಬಿಎಸ್-6 ಎಂಜಿನ್ ಪ್ರೇರಿತ ಎಕ್ಸ್1 ಎಸ್‌ಡ್ರೈವ್20ಐ ಎಸ್‌ಯುವಿ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 37.50 ಲಕ್ಷಕ್ಕೆ ನಿಗದಿಪಡಿಸಿಲಾಗಿದ್ದು, ಎಕ್ಸ್1 ಪೆಟ್ರೋಲ್ ವರ್ಷನ್‌ನಲ್ಲಿ ಬಿಎಸ್-6 ವೈಶಿಷ್ಟ್ಯತೆಗಳನ್ನು ಜೋಡಣೆ ಮಾಡಿ ಬಿಡುಗಡೆಗೊಳಿಸಲಾಗಿದೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಎಸ್‌ಡ್ರೈವ್20ಐ ವೆರಿಯೆಂಟ್ ಕಾರುಗಳು ಎಕ್ಸ್‌ಲೈನ್ ಮಾದರಿಗಳಲ್ಲೇ ವಿಶೇಷ ಎನ್ನಿಸಲಿದ್ದು, ಚೆನ್ನೈನಲ್ಲಿರುವ ಬಿಎಂಡಬ್ಲ್ಯು ಬೀಡಿಭಾಗಗಳ ಜೋಡಣಾ ಘಟಕದಲ್ಲಿ ಈ ಹೊಸ ಕಾರಿನ ಎಂಜಿನ್ ಅನ್ನು ಸಿದ್ದಗೊಳಿಸಲಾಗಿದೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ತಾಂತ್ರಿಕವಾಗಿ ಈ ಹಿಂದಿನ ಮಾದರಿಯೆಂತೆ ಸೌಲಭ್ಯಗಳನ್ನು ಹೊಂದಿದ್ದರು ಸಹ ಹಲವು ವಿಶೇಷತೆಗಳಿಂದ ಕೂಡಿರುವ ಹೊಸ ಎಕ್ಸ್1 ಕಾರುಗಳು ಎಂಜಿನ್ ಕಾರ್ಯ ದಕ್ಷತೆಯಲ್ಲಿ ಗುರುತರ ಬದಲಾಣೆ ಹೊಂದಿದ್ದು, ಇದು ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಲಿವೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

2.0-ಲೀಟರ್, ಫೌರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಎಕ್ಸ್1 ಕಾರುಗಳು 7-ಸ್ಪೀಡ್ ಸ್ಟೆಪ್ಟ್ರೋನಿಕ್ ಸ್ಪೋರ್ಟ್ ಡ್ಯುಯಲ್ ಕ್ಲಚ್ ಆಟೋಗೇರ್‌ಬಾಕ್ಸ್‌ನೊಂದಿಗೆ 189-ಬಿಎಚ್‌ಪಿ ಮತ್ತು 280-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಈ ಮೂಲಕ ಗಂಟೆಗೆ 224ಕಿ.ಮಿ ಟಾಪ್ ಸ್ಪೀಡ್ ಹೊಂದಿರುವ ಎಕ್ಸ್1 ಕಾರುಗಳಲ್ಲಿ 18-ಇಂಚಿನ ಅಲಾಯ್ ಚಕ್ರಗಳು, ಪ್ಯಾನೊರಮಿಕ್ ಸನ್‌ರೂಫ್, ಆ್ಯಂಬಿಯೆಂಟ್ ಲೈಟಿಂಗ್ ಸೌಲಭ್ಯವನ್ನು ಹೊಂದಿರಲಿದೆ.

ಭಾರತದಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಬಿಎಂಡಬ್ಲ್ಯು ಎಕ್ಸ್1 ಕಾರು ಬಿಡುಗಡೆ

ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್, ಎಬಿಎಸ್, ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಕಾರ್ನಿಂಗ್ ಬ್ರೇಕ್ ಕಂಟ್ರೋಲ್ ಮತ್ತು ಸೈಡ್ ಇಂಪ್ಯಾಕ್ಟ್ ಪ್ರೋಟೆಕ್ಷನ್ ಸೌಲಭ್ಯ ಸೇರಿದಂತೆ ಹಲವು ವಿಶ್ವದರ್ಜೆ ಸುರಕ್ಷಾ ವೈಶಿಷ್ಟ್ಯತೆ ಹೊಂದಿದ್ದು, ಹೊಸ ಮಾದರಿಯ ಎಂಜಿನ್ ಹಿನ್ನೆಲೆಯಲ್ಲಿ ಮರ್ಸಿಡಿಸ್ ಬೆಂಝ್ ಜಿಎಲ್ಎ, ಆಡಿ ಕ್ಯೂ3 ಮತ್ತು ವೊಲ್ವೊ ಎಕ್ಸ್‌ಸಿ 40 ಕಾರುಗಳಿಗೆ ಪೈಪೋಟಿ ನೀಡುವ ನೀರಿಕ್ಷೆಯಿದೆ.

Article Published On: Thursday, October 4, 2018, 19:21 [IST]
English summary
BMW X1 Launched With BS-VI Compliant Petrol Engine; Priced At Rs 37.50 Lakh.
Read more on bmw new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+