ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್ಸ್3 ಪೆಟ್ರೋಲ್ ವೇರಿಯಂಟ್ ಕಾರು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತನ್ನ ಎಕ್ಸ್3 ಐಷಾರಾಮಿ ಎಸ್‍‍ಯುವಿ ಕಾರಿನ ಪೆಟ್ರೋಲ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 59.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍‍ಡಬ್ಲ್ಯೂ ತನ್ನ ಎಕ್ಸ್3 ಐಷಾರಾಮಿ ಎಸ್‍‍ಯುವಿ ಕಾರಿನ ಪೆಟ್ರೋಲ್ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 59.90 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್3 ಪೆಟ್ರೋಲ್ ವೇರಿಯಂಟ್ ಕಾರು..

ಹೊಸದಗಿ ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್ಸ್3 ಪೆಟ್ರೋಲ್ ವೇರಿಯಂಟ್ ಕಾರು - ಮಿನೆರಲ್ ವೈಟ್, ಸೊಫಿಸ್ಟೊ ಗ್ರೇ, ಬ್ಲಾಕ್ ಸಫೈರ್ ಮತ್ತು ಫಿಟೊನಿಕ್ ಬ್ಲೂ ಎಂಬ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಕಾರಿನಲ್ಲಿರುವ ಸೀಟ್ ಅನ್ನು ವೆರ್ನಾಸ್ಕ ಬಿಜ್ ಮತ್ತು ವೆರ್ನಾಸ್ಕ ಮೋಚಾ ಎಂಬ ಲೆದರ್‍‍ನಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್3 ಪೆಟ್ರೋಲ್ ವೇರಿಯಂಟ್ ಕಾರು..

ಎಂಜಿನ್ ಸಾಮರ್ಥ್ಯ

ಬಿಎಮ್‍‍ಡಬ್ಲ್ಯೂ ಎಕ್ಸ್3 ಎಕ್ಸ್ ಡ್ರೈವ್30ಐ, 2 ಲೀಟರ್, 4 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 252ಬಿಹೆಚ್‍‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪೀಡ್ ಆಟೋಮ್ಯಾಟಿಕ್ ಸ್ಟೆಪ್ಟ್ರೋನಿಕ್ ಸ್ಪೋರ್ಟ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್3 ಪೆಟ್ರೋಲ್ ವೇರಿಯಂಟ್ ಕಾರು..

ಬಿಎಮ್‍‍ಡಬ್ಲ್ಯೂ ಎಕ್ಸ್3 ಕಾರಿನಲ್ಲಿ ಅಡಾಪ್ಟೀವ್ ಎಲ್ಇಡಿ ಹೆಡ್‍ಲೈಟ್ಸ್ ಮತ್ತು ಎಲ್ಇಡಿ ಫಾಗ್ ಲ್ಯಾಂಪ್ ಅನ್ನು ಹೆಕ್ಸಾಗನಲ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಹಿಂಭಾಗದಲ್ಲಿ ಎಲ್ಇಡಿ ಟೈಲ್‍ ಲೈಟ್ಸ್, ಲೋ ಸ್ಲಂಗ್ ರೂಫ್ ಸ್ಪಾಯ್ಲರ್ ಮತ್ತು ಎಕ್ಸಾಸ್ಟ್ ಟೈಲ್ ಪೈಪ್ ಲೈನ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್3 ಪೆಟ್ರೋಲ್ ವೇರಿಯಂಟ್ ಕಾರು..

ಇದಲ್ಲದೆ ಎಕ್ಸ್3 ಕಾರಿನಲ್ಲಿ ಬಿಎಮ್‍‍ಡಬ್ಲ್ಯೂ ಡಿಸ್ಪ್ಲೇ ಕೀ, ಲೈಟ್ ಕಾರ್ಪೆಟ್, ರೀಯರ್ ವ್ಯೂ ಕ್ಯಾಮೆರಾ, ಪಾರ್ಕ್ ಅಸ್ಸಿಸ್ಟ್, ಸ್ಮಾರ್ಟ್‍‍ಫೋನ್ ಹೋಲ್ಡರ್ ಮತ್ತು ವೈರ್‍‍ಲೆಸ್ ಚಾರ್ಜಿಂಗ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್3 ಪೆಟ್ರೋಲ್ ವೇರಿಯಂಟ್ ಕಾರು..

ಬಿಎಮ್‍‍ಡಬ್ಲ್ಯೂ ಎಕ್ಸ್3 ಕಾರು 10.25 ಇಂಚಿನ ಟಚ್‍‍ಸ್ಕ್ರೀನ್ ಇನ್ಸ್ಟ್ರೂಮೆಂಟ್ ಡಿಸ್ಪ್ಲೇ, ಬಿಎಮ್‍‍ಡಬ್ಲ್ಯೂ ಐಡ್ರೈವ್, ಬಿಎಮ್‍‍ಡಬ್ಲ್ಯೂ ನ್ಯಾವಿಗೇಶನ್, ಹರ್ಮಾನ್ ಕರ್ಡಾನ್ 600 ವ್ಯಾಟ್ಸ್ ಹೈ-ಎಂಡ್ ಸೌಂಡ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಬಿಎಮ್‍‍ಡಬ್ಲ್ಯೂ ಆಪ್ಸ್ ಮತ್ತು ಬ್ಲೂಟೂತ್ ಹಾಗು ಯುಎಸ್‍ಬಿ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್3 ಪೆಟ್ರೋಲ್ ವೇರಿಯಂಟ್ ಕಾರು..

ಹಿಂದಿನ ತಲೆಮಾರಿನ ಎಕ್3 ಕಾರಿಗಿಂತ 55 ಕಿಲೀಗ್ರಾಂ ತೂಕ ಹೆಚ್ಚಿದ್ದು, ವೀಲ್‍‍ಬೇಸ್ ಅನ್ನು ಕೂಡ ವಿಶಾಲಗೊಳಿಸಲಾಗಿದೆ. ಜೊತೆಗೆ ಹೆಡ್ಸ್ ಅಪ್ ಡಿಸ್ಪ್ಲೇ, 360 ಡಿಗ್ರಿ ಕ್ಯಾಮೆರಾ ಮತ್ತು 40:20:20 ಸ್ಪ್ಲಿಟ್ ರಿಯರ್ ಸೀಟ್ ಅನ್ನು ಕೂಡ ಪಡೆದುಕೊಂಡಿದೆ.

ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್3 ಪೆಟ್ರೋಲ್ ವೇರಿಯಂಟ್ ಕಾರು..

ಹೊಸದಾಗಿ ಬಿಡುಗಡೆಗೊಂಡ ಬಿಎಮ್‍‍ಡಬ್ಲ್ಯೂ ಎಕ್ಸ್3 ಪೆಟ್ರೋಲ್ ವೇರಿಂಟ್ ಕಾರುಗಳ ಖರೀದಿಗಾಗಿ ಗ್ರಾಹಕರು ಹತ್ತಿರದ ಡೀಲರ್ ಅನ್ನು ಸಂಪರ್ಕಿಸಬೇಕಾಗಿದ್ದು, ಈ ಕಾರು ಮಾರುಕಟ್ತೆಯಲ್ಲಿ ಈಗಾಗಲೆ ಲಭ್ಯವಿರುವ ಮರ್ಸಿಡಿಸ್ ಬೆಂಜ್ ಜಿಎಲ್‍ಸಿ300 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಹೆಚ್ಎಸ್‍ಇ ಕಾರುಗಳಿಗೆ ಪೈಪೋಟಿ ನೀಡಲಿದೆ.

More from DriveSpark

Article Published On: Tuesday, June 12, 2018, 15:36 [IST]
English summary
2018 BMW X3 Petrol Variant Launched In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+