ಇಂದಿನಿಂದ ಹೊಸ ಕಾರು ಮತ್ತು ಬೈಕ್‍‍ ಖರೀದಿಯ ಬೆಲೆ ಹೆಚ್ಚಳ.. ಕಾರಣ ಏನು ಗೊತ್ತಾ.?

ನೀವು ಹೊಸ ಕಾರು ಅಥವಾ ಬೈಕು ಖರೀದಿಸಲು ಯೋಜಿಸುತ್ತಿದ್ದರೆ, ಹೆಚ್ಚು ಪಾವತಿಸಲು ಸಿದ್ಧರಾಗಿರಿ. ಹೌದು, ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬೆಲೆಗಳು ಸೆಪ್ಟೆಂಬರ್ 1, 2018 ರಿಂದ ಏರಿಕೆಯಾಗಲಿದೆ. ಸೆಪ್ಟೆಂಬರ್ 1 2018 ರಿಂದ ಎಲ್ಲ ಹೊಸ ಕಾರುಗಳು

By Rahul Ts

ನೀವು ಹೊಸ ಕಾರು ಅಥವಾ ಬೈಕು ಖರೀದಿಸಲು ಯೋಜಿಸುತ್ತಿದ್ದರೆ, ಹೆಚ್ಚು ಪಾವತಿಸಲು ಸಿದ್ಧರಾಗಿರಿ. ಹೌದು, ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬೆಲೆಗಳು ಸೆಪ್ಟೆಂಬರ್ 1, 2018 ರಿಂದ ಏರಿಕೆಯಾಗಲಿದೆ. ಸೆಪ್ಟೆಂಬರ್ 1 2018 ರಿಂದ ಎಲ್ಲ ಹೊಸ ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ದೀರ್ಘಕಾಲದ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿರುವುದರಿಂದ ಬೆಲೆಗಳು ಹೆಚ್ಚಾಗಿದೆ.

ಇಂದಿನಿಂದ ಹೊಸ ಕಾರು ಮತ್ತು ಬೈಕ್‍‍ಗಳ ಬೆಲೆ ಹೆಚ್ಚಳ.. ಕಾರಣ ಏನು ಗೊತ್ತಾ.?

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಐಆರ್‍‍ಡಿಎ (ಇನ್ಶುರನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ) ಎಲ್ಲಾ ಹೊಸ ನಾಲುಕು ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ದೀರ್ಘಾವಧಿಯ ಥರ್ಡ್ ಪಾರ್ಟಿ ವಿಮೆ ಕಡ್ಡಾಯ ಮಾಡಿದೆ. ಆದ್ದರಿಂದ, ದೀರ್ಘಾವಧಿಯ ವಿಮೆ ವೆಚ್ಚವನ್ನು ಸೇರಿಸುವುದರೊಂದಿಗೆ, ಕಾರುಗಳು ಮತ್ತು ಬೈಕುಗಳ ಒಟ್ಟಾರೆ ಬೆಲೆ ಹೆಚ್ಚಾಗುತ್ತದೆ.

ಇಂದಿನಿಂದ ಹೊಸ ಕಾರು ಮತ್ತು ಬೈಕ್‍‍ಗಳ ಬೆಲೆ ಹೆಚ್ಚಳ.. ಕಾರಣ ಏನು ಗೊತ್ತಾ.?

ಹೊಸ ನಿಯಮದಂತೆ, ಎಲ್ಲಾ ವಿಮಾ ಕಂಪೆನಿಗಳು ಮೂರು-ವರ್ಷದ ಮೋಟರ್ ಥರ್ಡ್-ಪಾರ್ಟಿ ವಿಮಾವನ್ನು ಹೊಸ ಕಾರುಗಳಿಗೆ ಮತ್ತು ದ್ವಿಚಕ್ರ ವಾಹನಗಳ ಐದು ವರ್ಷ ವಿಮಾ ಪಾಲಿಸಿಯನ್ನು ಮಾತ್ರ ನೀಡಬೇಕು. ಪ್ರಸ್ತುತ, ಮೋಟರ್ ವಿಭಾಗದಲ್ಲಿ ತೃತೀಯ ನೀತಿ ಮತ್ತು ಪ್ಯಾಕೇಜ್ ವಿಮಾ ಪಾಲಿಸಿ ಎಂಬ ಎರಡು ವಿಧದ ನೀತಿಗಳಿವೆ.

ಇಂದಿನಿಂದ ಹೊಸ ಕಾರು ಮತ್ತು ಬೈಕ್‍‍ಗಳ ಬೆಲೆ ಹೆಚ್ಚಳ.. ಕಾರಣ ಏನು ಗೊತ್ತಾ.?

ಹೊಸ ನಿಯಮದ ಪ್ರಕಾರ 1,000 ಗಿಂತ ಕಡಿಮೆ ಇರುವ ಕಾರುಗಳಿಗೆ ರೂ, 5286 ವಿಮೆ, 1,000-1,500ಸಿಸಿ ಕಾರುಗಳಿಗೆ ರೂ, 9534 ವಿಮೆ ಮತ್ತು 1,500 ಗಿಂತ ಹೆಚ್ಚಿರಿವ ಕಾರುಗಳಿಗೆ ರೂ. 24,305 ಸಾವಿರದ ಮೂರು ವರ್ಷದ ಥರ್ಡ್ ಪಾರ್ಟಿ ವಿಮೆಯ ವೆಚ್ಚವಾಗುತ್ತದೆ.

ಇಂದಿನಿಂದ ಹೊಸ ಕಾರು ಮತ್ತು ಬೈಕ್‍‍ಗಳ ಬೆಲೆ ಹೆಚ್ಚಳ.. ಕಾರಣ ಏನು ಗೊತ್ತಾ.?

ಮತ್ತೊಂದು ಕಡೆ 75ಸಿಸಿ ಗಿಂತ ಕಡಿಮೆ ಇರುವ ಹೊಸ ಬೈಕ್‍‍ಗಳಿಗೆ ರೂ, 1045, 75-150ಸಿಸಿ ಹೊಸ ದ್ವಿಚಕ್ರ ವಾಹನಗಳಿಗೆ ರೂ. 3,285, 150-350ಸಿಸಿ ಎಂಜಿನ್ ಹೊಸ ಬೈಕ್‍‍ಗಳಿಗೆ ರೂ. 5,453 ಮತ್ತು 350ಸಿಸಿ ಗಿಂತಾ ಹೆಚ್ಚು ಎಂಜಿನ್‍‍ಗಳಿಗೆ ರೂ. 13,034 ಐದು ವರ್ಷದ ವಿಮೆಯ ವೆಚ್ಚವಾಗುತ್ತದೆ.

ಇಂದಿನಿಂದ ಹೊಸ ಕಾರು ಮತ್ತು ಬೈಕ್‍‍ಗಳ ಬೆಲೆ ಹೆಚ್ಚಳ.. ಕಾರಣ ಏನು ಗೊತ್ತಾ.?

ಆದರೆ ಸಮಗ್ರ ವಿಮೆಯ ವಿಚಾರಕ್ಕೆ ಬಂದಾಗ, ನಾಲ್ಕು-ಚಕ್ರ ಖರೀದಿದಾರರಿಗೆ ಒಂದು ವರ್ಷ ಅಥವಾ ಮೂರು ವರ್ಷದ ನೀತಿ ನಡುವೆ ಆಯ್ಕೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಆದರೆ ದ್ವಿಚಕ್ರ ವಾಹನ ಖರೀದಿದಾರರು ತಪ್ಪದೇ ಐದು ವರ್ಷಗಳ ಸಮಗ್ರ ವಿಮಾ ಪಾಲಿಸಿಯನ್ನು ಖರೀದಿಸಬೇಕು.

ಇಂದಿನಿಂದ ಹೊಸ ಕಾರು ಮತ್ತು ಬೈಕ್‍‍ಗಳ ಬೆಲೆ ಹೆಚ್ಚಳ.. ಕಾರಣ ಏನು ಗೊತ್ತಾ.?

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಕಡ್ಡಾಯ ವಿಮೆಯ ನಿಯಮವನ್ನು ಅನುಷ್ಠಾನಗೊಳಿಸುವುದು ಗ್ರಾಹಕನಿಗೆ ಒಳ್ಳೆಯದು, ಯಾವುದೇ ಅಪಘಾತದ ಸಂದರ್ಭದಲ್ಲಿ ವಾಹನ ಮತ್ತು ಮಾಲೀಕರನ್ನು ರಕ್ಷಿಸುತ್ತದೆ. ಆದರೆ ಹೊಸ ಕಾರುಗಳು ಮತ್ತು ದ್ವಿಚಕ್ರಗಳ ಬೆಲೆಗಳ ಹೆಚ್ಚಳದಿಂದ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಹೊಸ ವಿಮಾ ನಿಯಮದ ಕಾರಣದಿಂದಾಗಿ ವಾಹನವನ್ನು ಕೊಳ್ಳಲು ಸ್ವಲ್ಪ ಕಷ್ಟವಾಗಬಹುದು.

More from DriveSpark

Article Published On: Saturday, September 1, 2018, 10:21 [IST]
English summary
Car And Bike Prices To Go Up From September 1, 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+