2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

2018 ಆಗಸ್ಟ್ ತಿಂಗಳಿನ ಕಾರು ಉತ್ಪಾದಕ ಸಂಸ್ಥೆಯ ಮಾರಾಟದ ಅಂಕಿ ಅಂಶವು ಇದೀಗ ಬಹಿರಂಗೊಂಡಿದೆ. ಆಗಸ್ಟ್ ತಿಂಗಳಿನಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ದೇಶಿಯ ಕಾರು ಮಾರುಕಟ್ಟೆಯು ಸ್ವಲ್ಪ ಮಟ್ಟಿಗೆ ಕುಸಿದಿದೆ ಎಂದೇ ಹೇಳಬಹುದು. ಆದರೂ ವ

By Rahul Ts

2018 ಆಗಸ್ಟ್ ತಿಂಗಳಿನ ಕಾರು ಉತ್ಪಾದಕ ಸಂಸ್ಥೆಯ ಮಾರಾಟದ ಅಂಕಿ ಅಂಶವು ಇದೀಗ ಬಹಿರಂಗೊಂಡಿದೆ. ಆಗಸ್ಟ್ ತಿಂಗಳಿನಲ್ಲಿ ಕೇರಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ದೇಶಿಯ ಕಾರು ಮಾರುಕಟ್ಟೆಯು ಸ್ವಲ್ಪ ಮಟ್ಟಿಗೆ ಕುಸಿದಿದೆ ಎಂದೇ ಹೇಳಬಹುದು. ಆದರೂ ವಾಹನ ಸಂಸ್ಥೆಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚಿನ ಮಾರಾಟವನ್ನು ಮಾಡಲು ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಹಾಗದರೆ 2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಉತ್ಪಾದಕ ಸಂಸ್ಥೆಗಳು ಎಷ್ಟು ವಾಹನಗಳನ್ನು ಮಾರಾಟಗೊಳಿಸಿದೆ ಎಂಬುದರ ಬಗ್ಗೆ ಕೆಳಗಿನ ಸ್ಲೈಡರ್‍‍ಗಳಲ್ಲಿ ತಿಳಿಯಿರಿ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಮಾರುತಿ ಸುಜುಕಿ

ಏಶಿಯಾದ ಮೂರನೆಯ ಬಹು ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾದ ಮಾರುತಿ ಸುಜುಕಿ ಆಗಸ್ಟ್ ತಿಂಗಳಿನಲ್ಲಿ ಕಡಿಮೆ ಮಟ್ಟದ ಮಾರಾಟವನ್ನು ಕಂಡಿದೆ. ಶೇಕದ 51ರಷ್ಟು ಮಾರ್ಕೆಟ್ ಶೇರ್ ಅನ್ನು ಹೊಂದಿರುವ ಈ ಸಂಸ್ಥೆಯು 2017ರ ಆಗಸ್ಟ್ ತಿಂಗಳಿನಲ್ಲಿ 1,63,701 ವಾಹನಗಳನ್ನು ಮಾರಾಟ ಮಾಡಿದ್ದು, 2018ರ ಆಗಸ್ಟ್ ತಿಂಗಳಿನಲ್ಲಿ 1,58,189 ವಾಹನಗಳನ್ನು ಮಾರಾಟ ಮಾಡಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

2017 ಆಗಸ್ಟ್ ನಲಿ ಮಾರಾಟಗೊಳಿಸಿದಕ್ಕಿಂತಾ 2018ರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಶೇಕಡ 3.4ರಷ್ಟು ಕಡಿಮೆ ಮಾರಾಟವನ್ನು ಮಾಡಿದೆ. ಅದರಲ್ಲಿ 1,47,700 ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟಗೊಂಡರೆ, ಇನ್ನು ಉಳಿದ 10,489 ವಾಹನಗಳನ್ನು ಇನ್ನಿತರೆ ದೇಶದ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಮಹೀಂದ್ರಾ

ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು 2017ರ ಆಗಸ್ಟ್ ತಿಂಗಳಿನಲ್ಲಿ 42,207 ಕಾರುಗಳನ್ನು ಮಾರಟ ಮಾಡಿದರೆ 2018ರ ಆಗಸ್ಟ್ ತಿಂಗಳಿನಲ್ಲಿ 48,324 ಕಾರುಗಳನ್ನು ಮಾರಾಟ ಮಾಡಿದೆ. 2017ರ ಆಗಸ್ಟ್ ತಿಂಗಳಿಗಿಂತಾ 2018ರ ಆಗಸ್ಟ್ ತಿಂಗಳಿನಲ್ಲಿ ಸುಮಾರು ಶೇಕಡ 14ರಷ್ಟು ಅಧಿಕವಾಗಿ ಸಂಸ್ಥೆಯು ತಮ್ಮ ವಾಹನಗಳನ್ನು ಅಧಿಕವಾಗಿ ಮಾರಾಟ ಮಾಡಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

2018 ಆಗಸ್ಟ್ ತಿಂಗಳಿನಲ್ಲಿ ಮಾರಾಟಗೊಂಡ 42,207 ಕಾರುಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 39615 ಕಾರುಗಳನ್ನು ಮಾರಾಟ ಮಾಡಿ ಇನ್ನುಳಿದ 2,951 ವಾಹನಗಳನ್ನು ಇನ್ನಿರೆ ದೇಶಗಳ ಮಾರುಕಟ್ಟೆಗೆ ರಫ್ತು ಮಾಡಿದೆ. ಇದಲ್ಲದೇ ಮಹೀಂದ್ರಾ ಸಂಸ್ಥೆಯು ಹೊಸದಾಗಿ ತಮ್ಮ ಮರಾಜೊ ಎಮ್‍ಪಿವಿ ಕಾರನ್ನು ಬಿಡುಗಡೆಗೊಳಿಸಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕವಾದ ಮಾರಾಟದ ಪಲಿತಾಂಶವನ್ನು ಪಡೆಯುವ ತವಕದಲ್ಲಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಟಾಟಾ ಮೋಟಾರ್ಸ್

ಮಹೀಂದ್ರಾ ಸಂಸ್ಥೆಯಂತೆಯೆ ಟಾಟಾ ಮೋಟಾರ್ಸ್ ಸಂಸ್ಥೆ ಕೂಡಾ ಹೆಚ್ಚಿನ ಮಾರಾಟವನ್ನು ಕಂಡಿದೆ. 2017ರಲ್ಲಿ ಸಂಸ್ಥೆಯು 45,906 ವಾಹನಗಳನ್ನು ಮಾರಾಟ ಮಾಡಿದ್ದರೆ, ಇನ್ನು 2018ರ ಆಗಸ್ಟ್ ತಿಂಗಳಿನಲ್ಲಿ 58,262 ವಾಹನಗಳನ್ನು ಮಾರಾಟ ಮಾದಿದೆ. ಅಂದರೇ 2017ರ ಆಗಸ್ತ್ ತಿಂಗಳ ಮಾರಾಟಕ್ಕಿಂತಾ 2018ರ ಆಗಸ್ಟ್ ತಿಂಗಳಿನಲ್ಲಿ ಶೇಕಡ 28ರಷ್ಟು ಅಧಿಕವಾಗಿ ಮಾರಾಟಗೊಳಿಸಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಫೋರ್ಡ್ ಇಂಡಿಯಾ

ಫೋರ್ಡ್ ಇಂಡಿಯಾ ಸಂಸ್ಥೆಯು 2017ರ ಆಗಸ್ಟ್ ತಿಂಗಳಿನಲ್ಲಿ 15,740 ಕಾರುಗಳನ್ನು ಮಾರಾಟ ಮಾಡಿದರೆ, ಇನ್ನು 2018ರ ಆಗಸ್ಟ್ ತಿಂಗಳಿನಲ್ಲಿ 20,648 ಕಾರುಗಳನ್ನು ಮಾರಾಟ ಮಾಡಿದೆ. ಅಂದರೇ 2017ರ ಆಗಸ್ಟ್ ಗಿಂತಾ ಈ ಆಗಸ್ಟ್ ತಿಂಗಳಿನಲ್ಲಿ ಸುಮಾರು ಶೇಕಡ 31.2ರಷ್ಟು ಅಧಿಕವಾದ ಮಾರವನ್ನು ಕಂಡಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಮಾರಾಟಗೊಂಡ 20648 ಕಾರುಗಳಲಿ, ಫೋರ್ಡ್ ಇಂಡಿಯಾ ಸಂಸ್ಥೆಯು 8042 ಕಾರುಗಳನ್ನು ದೇಶಯವಾಗಿ ಮಾರಾಟ ಮಾದಿದರೆ ಇನ್ನುಳಿದ 12042 ಕಾರುಗಳನ್ನು ಇನ್ನಿತರೆ ದೇಶಗಳಿಗೆ ರಫ್ತು ಮಾಡಲಾಗಿದೆ. ಅಂದರೇ ದೇಶಿಯ ಮಾರುಕಟ್ಟೆಗಿಂತಾ ಇನ್ನಿತರೆ ದೇಶಗಳಲ್ಲಿ ಫೋರ್ಡ್ ಇಂಡಿಯಾ ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಟೊಯೊಟಾ ಇಂಡಿಯಾ

ಟೊಯೊಟಾ ಇಂಡಿಯಾ ಸಂಸ್ಥೆಯು 2017ರ ಆಗಸ್ಟ್ ತಿಂಗಳಿನಲ್ಲಿ 13,081 ಕಾರುಗಳನ್ನು ಮಾರಾಟ ಮಾಡಿದರೆ 2018ರ ಆಗಸ್ಟ್ ತಿಂಗಳಿನಲ್ಲಿ 14,581 ಕಾರುಗಳನ್ನು ಮಾರಾಟಮಾದಿದೆ. ಅಂದರೇ 2017ರ ಆಗಸ್ತ್ ತಿಂಗಳಿಗಿಂತಾ 17ರಷ್ಟು ಹೆಚ್ಚು ಮಾರಾಟದ ಮೊತ್ತವನ್ನು ಟೊಯೊಟಾ ಇಂಡಿಯಾ ಪಡೆದುಕೊಂಡಿದೆ. ಮಾರಾಟಗೊಂಡ 14,581 ಕಾರುಗಳಲ್ಲಿ 14,100 ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಇನ್ನುಳಿದ 481 ಕಾರುಗಳನ್ನು ಇನ್ನಿತರೆ ದೇಶಗಳಿಗೆ ರಫ್ತು ಮಾಡಲಾಗಿದೆ.

2018 ಆಗಸ್ಟ್ ತಿಂಗಳಿನಲ್ಲಿ ಯಾವ ಕಾರು ಎಷ್ಟು ಮಾರಾಟಗೊಂಡಿದೆ ಗೊತ್ತಾ.?

ಹ್ಯುಂಡೈ ಕಾರ್ಸ್ ಇಂಡಿಯಾ

ಹ್ಯುಂಡೈ ಕಾರ್ಸ್ ಇಂಡಿಯಾ 2017ರ ಆಗಸ್ಟ್ ತಿಂಗಳಿನಲ್ಲಿ 59,905 ಕಾರುಗಳನ್ನು ಮಾರಾಟ ಮಾಡಿದ್ದು, 2018ರ ಆಗಸ್ಟ್ ತಿಂಗಳಿನಲ್ಲಿ 61,912 ಕಾರುಗಳನ್ನು ಮಾರಾಟ ಮಾಡಿದೆ. ಅಂದರೇ 2017ರ ಆಗಸ್ಟ್ ತಿಂಗಳಿಗಿಂತ 2018ರ ಆಗಸ್ಟ್ ತಿಂಗಳಿನಲ್ಲಿ ಶೇಕಡ 3.4ರಷ್ಟು ಅಧಿಕ ಮಾರಾಟವನ್ನು ಮಾಡಿದೆ.

Article Published On: Wednesday, September 5, 2018, 12:12 [IST]
English summary
Car Sales Report August 2018: Kerala Floods Affect Leading Brands Including Maruti
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+