ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಹೆದ್ದಾರಿಗಳಲ್ಲಿ ಕ್ಯೂ ನಿಂತು ಟೋಲ್ ಕಟ್ಟುವ ಕಿರಿಕಿರಿಯನ್ನು ತಪ್ಪಿಸಲು ಕೆಂದ್ರ ಸರ್ಕಾರವು ಫಾಸ್ಟ್ ಟ್ಯಾಗ್ ಎಂಬ ವ್ಯವಸ್ಥೆಯನ್ನು ಜಾರಿ ಮಾಡಿರುವ ವಿಷಯ ನಮಗೆಲ್ಲಾ ತಿಳಿದೆಯೆ ಇದೆ. ಆದ್ರೆ ಇದೀಗ ಇದರಲ್ಲೂ ಮೋಸದ ವ್ಯವಹಾರ ನಡೆಯುತ್ತಿದೆ ಅಂದ್ರೆ ನೀವು ನಂಬಲೇಬೇಕು.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಹೌದು, ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವೇಳೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ತರಲಾಗಿದ್ದು, ನಾಲ್ಕು ಚಕ್ರದ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕೆಂಬ ನಿಯಮವನ್ನು ಕೂಡಾ ಜಾರಿಗೆ ಮಾಡುತ್ತಿದೆ. ಆದ್ರೆ ಇದರಲ್ಲೂ ಮೋಸ ವ್ಯವಹಾರ ನಡೆಯುತ್ತಿರುವುದು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಹಾಗಾದ್ರೆ ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಯಾವ ರೀತಿ ಮೋಸ ನಡೆಯುತ್ತಿದೆ ಎಂದು ತಿಳಿಯುವುದಕ್ಕೆ ಮುನ್ನ ಫಾಸ್ಟ್ ಟ್ಯಾಗ್ ಲಭ್ಯತೆ ಹಾಗೂ ಬಳಕೆ ಮಾಡುವುದು ಹೇಗೆ? ಎಂಬುದನ್ನು ತಿಳಿಯೋಣ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಫಾಸ್ಟ್ ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲೇ ಕರೆನ್ಸಿ ಹಾಕಿಸಿಕೊಳ್ಳುವ ಮೂಲಕ ಟೋಲ್ ಪಾವತಿ ಮಾಡುವ ಒಂದು ವಿಧಾನವಾಗಿದ್ದು, ಹೊಸ ವ್ಯವಸ್ಥೆಯಿಂದ ಹಲವಾರು ಲಾಭಗಳಿವೆ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಹೊಸ ವ್ಯವಸ್ಥೆಯಿಂದ ನೀವು ಟೋಲ್‌ ಕೇಂದ್ರಗಳಲ್ಲಿ ಹಣ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದ್ದು, ಒಂದು ಭಾರೀ ನೀವು ನೋಂದಣಿ ಮಾಡಿಕೊಂಡಿದಲ್ಲಿ ಐದು ವರ್ಷ ಕಾಲ ನೀವು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಫಾಸ್ಟ್‌ಟ್ಯಾಗ್ ಪಡೆಯುವುದು ಹೇಗೆ?

ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು. ಜೊತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಜೊತೆಗೆ ನಿಮ್ಮ ಹತ್ತಿರದ ಎಸ್‌ಬಿಐ, ಐಸಿಐಸಿಐ, ಆಕ್ಸಿಸ್ ಮತ್ತು ಫೆಡರಲ್ ಬ್ಯಾಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್‌ಗಳು ಲಭ್ಯವಾಗಲಿದ್ದು, ಇದಕ್ಕಾಗಿ ನೀವು ಕೆಲವು ಸೂಕ್ತ ದಾಖಲೆ ಸಲ್ಲಿಸುವುದು ಅವಶ್ಯಕತೆಯಿದೆ. ಈ ಮೂಲಕ ಮುಂದಿನ ನಾಲ್ಕು ತಿಂಗಳಲ್ಲಿ ಪ್ರತಿಯೊಂದು ವಾಹನವು ಸಹ ಫಾಸ್ಟ್‌ಟ್ಯಾಗ್ ಹೊಂದಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಫಾಸ್ಟ್ ಟ್ಯಾಗ್‌ನಿಂದ ಪ್ರಯೋಜನಗಳು ಯಾವುವು?

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಇದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ, ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್ ಪಡೆಯುವ ಅವಕಾಶವಿರುತ್ತೆ. ಹೀಗಿರುವಾಗ ಮೋಸದ ವ್ಯವಹಾರವು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಮೋಸ ವ್ಯವಹಾರ..!

ತಮಿಳುನಾಡಿದ ತೂತುಕೂಡಿ ಮೂಲದ ಟ್ರಕ್ ಮಾಲೀಕ ಗಣೇಶ್ ಎನ್ನುವವರು ಮೊನ್ನೆಯಷ್ಟೇ ಸರಕು ಸಾಗಾಣಿಕೆ ಕೆಲಸವನ್ನು ಮುಗಿಸಿ ತಮ್ಮ 3 ಟ್ರಕ್‍ಗಳನ್ನು ದೀಪಾವಳಿ ಹಬ್ಬದ ಪ್ರಯುಕ್ತ ಯಾವುದೇ ಆರ್ಡರ್‍‍ಗಳನ್ನು ಸ್ವೀಕರಿಸದೆ ಯಾರ್ಡ್‍ನಲ್ಲಿ ಪಾರ್ಕ್ ಮಾಡಿದ್ದರು.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಆದ್ರೆ ಅದೇ ದಿನದಂದು ಅವರಿಗೆ ಒಂದು ಮೇಸೆಜ್ ಬಂದಿದ್ದು, ಟೋಲ್ ಬಿಲ್ ಸಂದೇಶ ಸ್ವೀಕರಿಸಿದ್ದಾರೆ. ಆದ್ರೆ ಟ್ರಕ್ ಮಾತ್ರ ಪಾರ್ಕಿಂಗ್‌ನಲ್ಲೇ ಇವೆ. ಹಾಗಾದ್ರೆ ಯಾರಾದರು ಟ್ರಕ್ ಕದ್ದಿದ್ದಾರೆಯೇ ಎಂಬ ಸಂಶಯದಿಂದ ಟ್ರಕ್‍ಗಳನ್ನು ಪಾರ್ಕಿಂಗ್ ಮಾಡಲಾಗಿದ್ದ ಪ್ರದೇಶಕ್ಕೆ ಹೋಗಿ ನೋಡಿದಾಗ ಟ್ರಕ್‍ಗಳು ಅಲ್ಲಿಯೇ ಇದ್ದವು.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ವಾಹನಗಳು ಇಲ್ಲಿಯೇ ಇರುವಾಗ ಇಂತಹ ಸಂದೇಶವು ಹೇಗೆ ಬರಲು ಸಾಧ್ಯ ಎನ್ನುವ ಮತ್ತೊಂದು ಸಂಶಯದಿಂದ ತಮ್ಮ ಫಾಸ್ಟ್ ಟ್ಯಾಗ್ ಕಾರ್ಡ್ ಅನು ಯಾರಾದರೂ ತೆಗೆದುಕೊಂಡು ಹೋಗಿದ್ದಾರಾ ಎಂದು ಹೋಗಿ ನೋಡಿದಾಗಲೂ ಸಹ ಆ ಕಾರ್ಡ್ ಕೂಡಾ ಮನೆಯಲ್ಲಿಯೇ ಇತ್ತು.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಆಂಧ್ರಪ್ರದೇಶದ ಗಡಿ ಟೋಲ್ ದಾಟಿದ ಸಂದೇಶ

ಗಣೇಶ್ ಅವರ ಟ್ರಕ್‍ಗಳನ್ನು ತಮಿಳು ನಾಡಿನಲ್ಲಿನ ಯಾರ್ಡ್‌ನಲ್ಲಿ ಪಾರ್ಕಿಂಗ್ ಮಾಡಲಾಗಿದ್ದು, ಆದ್ರೆ ಆಂಧ್ರಪ್ರದೇಶದಲ್ಲಿನ ಗಡಿ ಭಾಗವೊಂದರ ಟೋಲ್ ಒಂದನ್ನು ದಾಟಿರುವ ಬಗ್ಗೆ ಸಂದೇಶ ಬಂದಿದೆ.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಈ ರೀತಿ ತಪ್ಪು ಹಣ ಕಟ್ ಆಗಿರುವ ಕಾರಣ, ಇದಕ್ಕೆ ಕಾರಣವೇನು ಎಂಬ ಮಾಹಿತಿಯನ್ನು ತಿಳಿಯಲು ತಮಗೆ ಆ ಫಾಸ್ಟ್ ಟ್ಯಾಗ್ ಕಾರ್ಡನ್ನು ನೀಡಿದ ಇಕುಡಾಸ್ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿದಾಗ, ಅವರು ಇದನ್ನು ರಾಷ್ಟ್ರೀಯ ಹೆದ್ದಾರಿಯ ಕಚೇರಿಗೆ ನಿಮ್ಮ ವಾಹನದ ದಾಖಲೆಗಳೊಂದಿಗೆ ದೂರು ನೀಡಲು ಹೇಳಿದ್ದರು.

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ಬ್ಯಾಂಕ್‍ನ ಗ್ರಾಹಕ ಪ್ರತಿನಿಧಿಯು ಹೇಳಿದ ಹಾಗೆಯೇ ಗಣೇಶ್ ಅವರು, ತಮಗೆ ಬಂದ ಆ ಸಂದೇಶದ ಸ್ಕ್ರೀನ್ ಶಾಟ್, ಪಾರ್ಕಿಂಗ್ ಮಾಡಲಾಗಿದ್ದ ವಾಹನಗಳ ಫೋಟೊ, ಮತ್ತು ಎಷ್ಟು ಬಾರಿ ಎಷ್ಟು ಹಣ ಕಟ್ ಆಗಿದೆ ಹಾಗೂ ವಾಹನಗಳ ದಾಖಲೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ಕಚೇರಿಗೆ ಹೋಗುತ್ತಾರೆ.

ದಾಖಲೆಗಳನ್ನು ಪರಿಶೀಲಿಸಿದ ನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಇದು ತಾಂತ್ರಿಕ ದೋಷದಿಂದ ಆಗಿದ್ದು ಎಂಬ ಹಾರಿಕೆ ಉತ್ತರ ನೀಡಿ ಶೀಘ್ರವೇ ಅವರ ಹಣವನ್ನು ಹಿಂತಿರುಗಿಸುವುದಾಗಿ ಹೇಳಿ ಕಳುಹಿಸಿದ್ದಾರೆ. ಹೀಗಾಗಿ ಅನುಕೂಲಕತೆಗಿಂತ ಹೆಚ್ಚು ದುರಪಯೋಗವಾಗುವ ಫಾಸ್ಟ್ ಟ್ಯಾಗ್‍ನ ಮಾಹಿತಿಯನ್ನು ಯಾರೊಂದಿಗು ಹಂಚಿಕೊಳ್ಳದೇ ಇರುವುದೇ ಉತ್ತಮ.

More from DriveSpark

Article Published On: Wednesday, November 14, 2018, 15:17 [IST]
English summary
Damage for digital india money in fast tag card looted.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+