ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎಷ್ಟಿದೆ ಅಂತಾ ನಾವು ಹೇಳುವುದಕ್ಕಿಂತ ಅದನ್ನು ಅನುಭವಿಸಿದವರಿಗಷ್ಟೇ ಗೊತ್ತು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದ್ದು, ಇಂತಹ ವೇಳೆ ರಾಜ್ಯದ ಉಪಮುಖ್ಯಮಂತ್ರಿಗಳಾದ ಜಿ.ಪರಮೇಶ್ವರ್ ಅವರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯ ನಡುವೆಯೂ ಉಪಮುಖ್ಯಮಂತ್ರಿಗಳಾದ ಜಿ.ಪರಮೇಶ್ವರ್ ಅವರು ಪ್ರತಿ ಕಾರ್ಯಕ್ರಮಕ್ಕೂ ಝಿರೋ ಟ್ರಾಫಿಕ್ ಸೌಲಭ್ಯವನ್ನು ಉಪಯೋಗಿಸಿಕೊಳ್ಳುತ್ತಿರುವುದು ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಉಲ್ಬಣವಾಗುವಂತೆ ಮಾಡಿರುವುದು ವಾಹನ ಸವಾರರು ಪರದಾಡುವಂತಾಗಿದೆ.

ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ಬೆಂಗಳೂರಿನಲ್ಲಿ ದಿನಂಪ್ರತಿ 5 ಬಾರಿಯಾದ್ರು ಝಿರೋ ಟ್ರಾಫಿಕ್ ಸೌಲಭ್ಯವನ್ನು ಬಳಸಿಕೊಳ್ಳುವ ಡಿಸಿಎಂ ಸಾಹೇಬ್ರು, ನಗರದ ಪ್ರಮುಖ ರಸ್ತೆಗಳಲ್ಲಿ ಭಾರೀ ವಾಹನ ದಟ್ಟಣೆ ಕಾರಣವಾಗುತ್ತಿರುವುದು ಜನಸಾಮಾನ್ಯರಿಗೆ ಅಷ್ಟೇ ಅಲ್ಲ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ಈ ಬಗ್ಗೆ ಡಿಸಿಎಂ ಅವರಿಗೆ ಪ್ರಶ್ನೆ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಉದ್ದಟತನದ ಉತ್ತರ ನೀಡಿರುವ ಜಿ.ಪರಮೇಶ್ವರ್ ಅವರು ಝಿರೋ ಟ್ರಾಫಿಕ್ ಸೌಲಭ್ಯವು ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ, ಡಿಸಿಎಂಗಳಿಗೆ ಮತ್ತು ಗೃಹ ಸಚಿವರಿಗೂ ಇದೆ. ಹೀಗಾಗ ನನಗೆ ಸಿಗುತ್ತಿರೋ ಸೌಲಭ್ಯವನ್ನು ಬಿಟ್ಟುಕೊಡಲ್ಲ ಅಂತಾ ಗರ್ವದಿಂದಲೇ ಉತ್ತರಿಸಿದರು.

ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ಮಾಧ್ಯಮದವರಿಗೇನು ಹೊಟ್ಟೆಉರಿ..!

ಝಿರೋ ಟ್ರಾಫಿಕ್‌ನಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದಿದ್ದಕ್ಕೆ ಸಿಡುಕಿನಿಂದಲೇ ಉತ್ತರಿಸಿದ ಡಿಸಿಎಂ ಸಾಹೇಬ್ರು, ನಾನು ಝಿರೋ ಟ್ರಾಫಿಕ್‌ನಲ್ಲಿ ಓಡಾಡಿದ್ರೆ ಮಾಧ್ಯಮದವರಿಗೇನು ಹೊಟ್ಟೆಉರಿ ಅಂತಾ ತಮ್ಮ ಅಧಿಕಾರದ ದರ್ಪ ಮೆರೆದಿದ್ದಾರೆ.

ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ಡಿಸಿಎಂಗಳಿಗೆ ಝಿರೋ ಟ್ರಾಫಿಕ್ ಅಗತ್ಯ ಇದೆ ಎನ್ನುವುದರಿಂದಲೇ ಈ ಅವಕಾಶ ನೀಡಲಾಗಿದೆ. ಈ ಹಿಂದಿನ ಗೃಹ ಸಚಿವರು ಬೇಡ ಎಂದಿದ್ದರು. ಹಾಗಂತ ನಾನು ಸಹ ಬೇಡ ಎನ್ನಬೇಕಿಲ್ಲ. ನನಗೆ ಇರುವ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇನೆ ಅಷ್ಟೇ ಅಂತಾ ಸಮರ್ಥನೆ ನೀಡಿದ್ದಾರೆ.

ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ನಿಮಯದ ಪ್ರಕಾರ, ಇದು ಅವರಿಗೆ ಕೊಡಲಾಗಿರುವ ವಿಶೇಷ ಸೌಲಭ್ಯವಾದ್ರು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳಕೊಳ್ಳಬೇಕಾದ ಡಿಸಿಎಂ ಸಾಹೇಬ್ರು, ಹೋದಲ್ಲಿ ಬಂದಲ್ಲಿ ಝಿರೋ ಟ್ರಾಫಿಕ್ ಮಾಡ್ತಾ ಇರುವುದು ಮಾತ್ರ ವಾಹನ ಸವಾರಿಗೆ ಕಿರಿಕಿರಿಯಾಗುತ್ತಿರುವುದು ಮಾತ್ರ ಸುಳ್ಳಲ್ಲ.

MOST READ: ಕೇವಲ 40 ರೂಪಾಯಿಗೆ ಪೆಟ್ರೋಲ್‍ ಮಾರಲು ಮುಂದಾಗಿರುವ ಬಾಬಾ ಷರತ್ತು ಏನು.?

ಏನ್ ಸರ್ ನಿಮಗೆ ಝಿರೋ ಟ್ರಾಫಿಕ್ ಅವಶ್ಯಕತೆ ಇದೆಯಾ ಅಂತಾ ಕೇಳಿದ್ರೆ ಹೀಗಾ ಹೇಳೋದು..!

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯಿಂದಾಗಿ ಅದೆಷ್ಟೋ ಜನ ಈ ಊರಿನ ಸಹವಾಸವೇ ಬೇಡಾ ಅಂತಾ ತಮ್ಮ ಹಳ್ಳಿಗಳತ್ತ ವಾಪಸ್ ಹೋಗಿ ಆಗಿದೆ. ಇದೀಗ ಇಲ್ಲೊಬ್ಬ ಸಾಫ್ಟ್‌ವೇರ್ ಉದ್ಯೋಗಿಗೂ ಅದರ ಬಿಸಿತಟ್ಟಿದ್ದು, ಲಕ್ಷ ಲಕ್ಷ ಸಂಬಳದ ಉದ್ಯೋಗವನ್ನೇ ಬಿಟ್ಟು ತನ್ನ ಹಳ್ಳಿಯತ್ತ ವಾಪಸ್ ಹೊರಟ್ಟಿದ್ದಾನೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ಪ್ರತಿ ವರ್ಷ ಸಾವಿರಾರು ಐಟಿ ಉದ್ಯೋಗಗಳನ್ನು ಸೃಷ್ಠಿಸುವ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೇಳತಿರದು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿಯಿದ್ದು, ಇದರಿಂದ ಬೇಸತ್ತಿರುವ ಐಟಿ ಉದ್ಯೋಗಿಯಾಗಿರುವ ರೂಪೇಶ್ ಕುಮಾರ್ ವರ್ಮಾ ಐಟಿ ಸಿಟಿ ಬೆಂಗಳೂರಿಗೆ ಗುಡ್ ಬೈ ಹೇಳುತ್ತಿದ್ದಾನೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ರಾಜಸ್ತಾನದ ನಿಫಾಲಿ ಮೂಲದ ಸಾಫ್ಟ್​ವೇರ್​ ಇಂಜಿನಿಯರ್‌ ಆಗಿರುವ​ ರೂಪೇಶ್​ ಕುಮಾರ್​ ವರ್ಮಾ, ಬೆಂಗಳೂರಿಗೆ ಬಂದು ನೆಲೆಸಿ 8 ವರ್ಷಗಳಾಗಿವೆಯೆಂತೆ. ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದಾಗಿ ವರ್ಮಾ ಬೇಸತ್ತಿದ್ದು, ಸಾಫ್ಟ್​ವೇರ್​ ಉದ್ಯೋಗವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ಈ ಹಿನ್ನಲೆಯಲ್ಲಿ ಬೆಂಗಳೂರಿನ ಓಲ್ಡ್​ ಏರ್​ಪೋರ್ಟ್​ ಮತ್ತು ಸರ್ಜಾಪುರ ರಸ್ತೆ ಬಳಿ ಇರುವ ಎಂಬಸಿ ಗಾಲ್ಫ್​ ಲಿಂಕ್ಸ್​ ಸಂಸ್ಥೆಗೆ ಹೋಗಲು ಕುದುರೆ ಸವಾರಿ ಮಾಡಿದ್ದಾರೆ. ಜತೆಗೆ 'ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಇದು ಅಂತಿಮ ದಿನ' ಎಂಬ ಫಲಕವನ್ನೂ ಹಿಡಿದು ವರ್ಮಾ ಸಾಗಿದ್ದು ಹಲವರಿಗೆ ಕುತೂಹಲ ಹುಟ್ಟಿಸಿದ್ದು ಮಾತ್ರ ಸುಳ್ಳಲ್ಲ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ಇನ್ನು ಬೆಂಗಳೂರು ಬಿಟ್ಟು ರಾಜಸ್ತಾನಕ್ಕೆ ವಾಪಸ್ ಹೋಗುತ್ತಿರುವ ರೂಪೇಶ್ ಕುಮಾರ್ ಅವರು ತಮ್ಮದೇ ಊರಿನಲ್ಲಿ ಕೆಲವು ಸ್ನೇಹಿತರ ಜೊತೆಗೂಡಿ ಸ್ವಂತ ಉದ್ಯಮವೊಂದನ್ನು ಆರಂಭಿಸುವ ಗುರಿಹೊಂದಿದ್ದು, 8 ವರ್ಷಗಳ ಕಾಲ ಟ್ರಾಫಿಕ್ ಸಮಸ್ಯೆಯಲ್ಲೇ ಜೀವನ ಕಳೆದ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.

MOST READ: ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ಐಟಿ ಉದ್ಯೋಗಗಳನ್ನು ಸೃಷ್ಠಿಸುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ವಾಹನ ಸಂಖ್ಯೆಯು ಸಹ ಅದೇ ಪ್ರಮಾಣದಲ್ಲಿ ಹೆಚ್ಚಿದ್ದು ಇದರ ಬಗ್ಗೆ ಕಳವಳ ವ್ಯಕ್ತಪಡಿಸುವ ರೂಪೇಶ್ ಕುಮಾರ್ ವರ್ಮಾ, ಬೆಂಗಳೂರು ನನಗೆ ಎಲ್ಲಾ ಕೊಟ್ಟಿದೆ ಆದ್ರೆ ಟ್ರಾಫಿಕ್ ಸಮಸ್ಯೆ ಮಾತ್ರ ನನ್ನ ಜೀವನದಲ್ಲಿ ಜಿಗುಪ್ಸೆ ತರಿಸಿದೆ ಎಂದಿದ್ದಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ಇದೇ ಕಾರಣಕ್ಕೆ ಕುದುರೆ ಮೇಲೆ ಸವಾರಿ ಮಾಡುತ್ತಾ ತನ್ನ ಸಹದ್ಯೋಗಿಗಳಿಗೆ ಶಾಕ್ ನೀಡಿದ ರೂಪೇಶ್ ಕುಮಾರ್ ವರ್ಮಾ ಅವರು, ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಸ್ವಂತ ಊರಿನಲ್ಲಿಯೇ ಯಾವುದಾರೂ ಸಣ್ಣ ಉದ್ಯಮವನ್ನು ಆರಂಭಿಸುವ ಕನಸಿನೊಂದಿಗೆ ಬೆಂದಕಾಳೂರನ್ನು ಬಿಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಬೆಂಗಳೂರು ಟ್ರಾಫಿಕ್‌ಗೆ ಬೇಸತ್ತು ಟೆಕ್ಕಿ ಮಾಡಿದ್ದೇನು?

ಇನ್ನು ಕೆಲಸದ ಒತ್ತಡ, ಕೌಟುಂಬಿಕ ಜಂಜಾಟಗಳ ನಡುವೆ ಬೆಂಗಳೂರಿನಂತಹ ನಗರಗಳಲ್ಲಿ ವಿಲಾಸಿ ಜೀವನಕ್ಕಿಂತ ಮಾನಸಿಕ ಕಿರಿಕಿರಿಯೇ ಹೆಚ್ಚಾಗುತ್ತಿದ್ದು, ಉತ್ತಮ ಸಂದೇಶದೊಂದಿಗೆ ಬಿಕ್ಕಟ್ಟಿನ ವಾತಾರಣಕ್ಕೆ ಗುಡ್ ಬೈ ಹೇಳಿರುವ ರೂಪೇಶ್ ಕುಮಾರ್ ವರ್ಮಾ ಅವರು ದೃಡ ನಿರ್ಧಾರಗಳೊಂದಿಗೆ ಭವಿಷ್ಯದ ದಿನಗಳತ್ತ ಹೆಜ್ಜೆಹಾಕುತ್ತಿರುವುದು ಉತ್ತಮ ನಡೆ ಎನ್ನಬಹುದು.

Most Read Articles

ಎಂಪಿವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಮಹೀಂದ್ರಾ ಮರಾಜೊ ಕಾರಿನ ಫೋಟೋ ಗ್ಯಾಲರಿ..!

Kannada
Read more on traffic rules off beat
English summary
Deputy Chief Minister Dr.G.Parameshwara Has Defended His Zero Traffic Facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X