ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

By Praveen Sannamani

ಬಹುನೀರಿಕ್ಷಿತ ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಹೊಸ ಕಾರಿನ ಬೆಲೆಗಳನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ಡಿಸ್ಕವರಿ ಸ್ಟೋರ್ಟ್ ಕಾರುಗಳಿಗೆ ರೂ. 49 ಲಕ್ಷ ಹಾಗೂ ರೇಂಜ್ ರೋವರ್ ಇವೋಕ್ ಕಾರುಗಳಿಗೆ ರೂ. 51.06 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಸದ್ಯ ಆಟೋ ಉದ್ಯಮದಲ್ಲಿ ಅತಿ ವಿನೂತನ ಎಂಜಿನ್ ಮಾದರಿಯೆಂದೆ ಬಿಂಬಿತವಾಗಿರುವ ಇಂಜಿನಿಯಂ ಸೌಲಭ್ಯವನ್ನು ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಕಾರುಗಳಲ್ಲಿ ಅಳವಡಿಸಲಾಗಿದ್ದು, ಹೊಸ ಎಂಜಿನ್‌ಗಳು ಕಾರಿನ ಪರ್ಫಾಮೆನ್ಸ್, ಇಂಧನ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ನೆರವಾಗಲಿವೆ.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಇಂಜಿನಿಯಂ ಪೆಟ್ರೋಲ್ ಎಂಜಿನ್‌ಗಳು ಗೋಬಲ್ ಎಮಿಷನ್ ರೆಗ್ಯುಲೆಷನ್ ಕಾಯ್ದೆ ಅನ್ವಯ ಸಿದ್ದಗೊಂಡಿದ್ದು, ಮಾಲಿನ್ಯ ತಡೆಯುವಲ್ಲಿ ಇವು ಪ್ರಮುಖ ಪಾತ್ರವಹಿಸಲಿವೆ. ಹೀಗಾಗಿ ಹೊಸ ಕಾರುಗಳ ದಕ್ಷತೆ ಹೆಚ್ಚಿದ್ದು, ಐಷಾರಾಮಿ ಪ್ರಯಾಣಕ್ಕೂ ಸಹಕಾರಿಯಾಗಿವೆ.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಇನ್ನು ಡಿಸ್ಕವರಿ ಸ್ಪೋರ್ಟ್ ಇಂಜಿನಿಯಂ ಪೆಟ್ರೋಲ್ ಆವೃತ್ತಿಯಲ್ಲಿ ಎಸ್ಇ ಮತ್ತು ಹೆಚ್ಎಸ್ಇ ಟ್ರಿಮ್ಸ್ ಎನ್ನುವ ಕಾರು ಆವೃತ್ತಿಗಳಿದ್ದು, ಇವೋಕ್ ಇಂಜಿನಿಯಂ ಪೆಟ್ರೋಲ್ ಆವೃತ್ತಿಯಲ್ಲೂ ಎಸ್ಇ ಮತ್ತು ಹೆಚ್ಎಸ್ಇ ಡೈನಾಮಿಕ್ ಟ್ರಿಮ್ ಎನ್ನುವ ಎರಡು ಆವೃತ್ತಿಗಳನ್ನು ಆಯ್ಕೆ ಮಾಡಬಹುದಾಗಿದೆ.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

2.0-ಲೀಟರ್ ಇಂಜಿನಿಯಂ ಪೆಟ್ರೋಲ್ ಎಂಜಿನ್ ಹೊಂದಿರುವ ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಕಾರುಗಳು 247-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಹೊಸ ಕಾರುಗಳಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ ಮಾಡಲಾಗಿದೆ.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಅಲ್ಯುಮಿನಿಯಂನಿಂದ ಸಿದ್ದವಾಗಿರುವ ಇಂಜಿನಿಯಂ ಎಂಜಿನ್‌ಗಳು ಕಾರಿನ ಇಂಧನ ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಕಾರಿನ ಹಾರ್ಸ್ ಪವರ್ ಉತ್ಪಾದನೆಗೂ ಸಹಾಯ ಮಾಡುತ್ತೆ.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಇನ್ನು ಕಾರಿನ ವಿನ್ಯಾಸಗಳು ಮತ್ತು ಸೌಲಭ್ಯಗಳು ವಿಶ್ವದರ್ಜೆ ಗುಣಮಟ್ಟ ಹೊಂದಿದ್ದು, ಕಾರಿನ ಹೊರಮೈಯಲ್ಲಿ ಅಡಾಪ್ಟಿವ್ ಎಲ್ ಇಡಿ ಹೆಡ್ ಲೈಟ್ ಜೊತೆಗೆ ಎಲ್ ಇಡಿ ಸಿಗ್ನೇಚರ್ ಲೈಟಿಂಗ್ ಸೇವೆಗಳು ಇರಲಿದೆ. ಇನ್ನು ಆಕ್ಸ್ ಫ್ರಡ್ ಲೆಥರ್ ಸೀಟುಗಳು ಕೂಡಾ ಇರಲಿದೆ. ಇನ್ನುಳಿದಂತೆ ಹೊಸತಾದ 825 ಡಬ್ಲ್ಯು ಮೆರಿಡಿಯನ್ ಸೌರಂಡ್ ಸೌಂಡ್ ಸಿಸ್ಟಂ, ಹೆಡ್ ಅಪ್ ಡಿಸ್ ಪ್ಲೇ, ಇನ್ ಕಂಟ್ರೋಲ್ ಆಪ್ ಮತ್ತು ಪವರ್ ಗೆಸ್ಚರ್ ಟೈಲ್ ಗೇಟ್ ಸೇವೆಗಳು ಸಹ ಇರಲಿದೆ.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಮತ್ತೊಂದು ವಿಶೇಷತೆ ಏನೆಂದರೇ ಕೀ ಲೆಸ್ ಎಂಟ್ರಿ ಟೆಕ್ನಾಲಜಿ ಅನ್ನು ಅಳವಡಿಕೆ ಮಾಡಲಾಗಿದ್ದು, ಆಧುನಿಕ ಮಾದರಿಯ ಎಲ್ಲಾ ಸುರಕ್ಷಾ ಸೌಲಭ್ಯಗಳನ್ನು ರೋಂಜ್ ರೋವರ್ ಇವೋಕ್ ಲ್ಯಾಂಡ್ ಮಾರ್ಕ್ ಎಡಿಷನ್‌ನಲ್ಲಿ ಇರಿಸಲಾಗಿದೆ ಎನ್ನಬಹುದು.

ರೇಂಜ್ ರೋವರ್ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಇಂಜಿನಿಯಂ ಪೆಟ್ರೋಲ್ ವರ್ಷನ್ ಬಿಡುಗಡೆ

ಈ ಬಗ್ಗೆ ಮಾತನಾಡಿದ ಜೆಎಲ್ಆರ್ ಇಂಡಿಯಾ ಲಿಮಿಟೆಡ್ ಎಂಡಿ ರೋಹಿತ್ ಸೂರಿ 'ಈ ಹಿಂದೆಯೇ ವೆಲಾರ್ ಕಾರುಗಳಲ್ಲಿ ಪರಿಚಯಿಸಲಾಗಿದ್ದ ವಿಶ್ವದರ್ಜೆಯ ಇಂಜಿನಿಯಂ ಪೆಟ್ರೋಲ್ ಎಂಜಿನ್‌ಗಳನ್ನು ಬಳಕೆ ಮಾಡಲಾಗಿದ್ದು, ಇದೀಗ ಇವೋಕ್ ಮತ್ತು ಡಿಸ್ಕವರಿ ಸ್ಟೋರ್ಟ್ ಕಾರುಗಳಲ್ಲೂ ಅದೇ ಮಾದರಿಯನ್ನು ಪರಿಚಯಿಸುತ್ತಿರುವುದು ಸಂತಸ ತಂದಿದೆ' ಎಂದಿದ್ದಾರೆ.

More from DriveSpark

Article Published On: Friday, May 25, 2018, 19:52 [IST]
English summary
Range Rover Evoque & Discovery Sport Ingenium Petrol Launched; Prices Start At Rs 49.20 Lakh.
Read more on range rover luxury cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+