ಈ ವರ್ಷ ಭಾತರದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಕಡಿಮೆಯಂತೆ
ಸತತ ಮೂರು ತಿಂಗಳುಗಳಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳ ಬೆಲೆಯಲ್ಲಿ ಏರುಪೇರುಗಳನ್ನು ಕಾಣುತ್ತಿದ್ದು, ಇದರಿಂದ ಬೇಸತ್ತ ಗ್ರಾಹಕರು ಇನ್ನೂ ಇಂಧನ ಆಧಾರಿತ ವಾಹನಗಳ ಮೇಲೆಯೆ ಒಲವನ್ನು ತೋರುತ್ತಿದ್ದಾರೆ ಎನ್ನುವುದಕ್ಕೆ ಇಂದಿನ ಈ ಲೇಖನವೇ ಸಾಕ್ಷಿ.

ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ವಾಹನ ತಯಾರಕ ಸಂಸ್ಥೆಗಳು ಸುಪ್ರೀಂ ಕೋರ್ಟ್‍ನ ಆದೇಶದಂತೆ 2020ರ ನಂತರ ರಸ್ತೆಗಳಲ್ಲಿ ಬಹುತೇಕ ಎಲೆಕ್ಟ್ರಿಕ್ ವಾಹನಗಳು ಚಲಸಿಬೇಕೆಂಬ ಆದೇಶವನ್ನು ಸ್ವೀಕರಿಸಿ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಲು ಮುಂದಾಗುತ್ತಿವೆ.

ಆದ್ರೆ ಈಗಿನಿಂದಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ತಿರಸ್ಕರಿಸುತ್ತಿರುವ ಜನರು, ಇನ್ನು ಮುಂದಕ್ಕೆ ವಿದ್ಯುತ್ ವಾಹನಗಳನ್ನು ಖರೀದಿಸಲು ಯಾವ ರೀತಿ ಅಂಗೀಕರಿಸಲು ಮುಂದಾಗುತ್ತಾರೊ ಎಂದು ತಿಳಿಯದಾಗಿದೆ.

2016-17ರಲ್ಲಿ 25,000 ಸಾವಿರ ಎಲೆಕ್ಟ್ರಿಕ್ ವಾಹನಗಳು ಮಾರಟವಾಗಿದ್ದರೆ ಇನ್ನು 2017-18ರ ಅವಧಿಯಲ್ಲಿ ಒಟ್ಟಾರೆಯಾಗಿ ದೇಶದಲ್ಲಿ 56,000 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕಿಂತಾ ಶೇಕಡ ಸುಮಾರು 124ರಷ್ಟು ಅಧಿಕ ಮಾರಾಟವನ್ನು ಕಂಡಿದೆ.

ಎಲೆಕ್ಟ್ರಿಕ್ ಕಾರುಗಳ ಮಾರಾಟವು ಈ ವರ್ಷದಲ್ಲಿ ಕಡಿಮೆ ಎಂದೇ ಹೇಳಬಹುದು, ಏಕೆಂದರೆ ಸೊಸೈಟಿ ಆಫ್ ಮ್ಯಾನುಫ್ಯಾಕ್ಚುರರ್ಸ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಮಾಹಿತಿಗಳ ಪ್ರಕಾರ 2016-17ರಲ್ಲಿ 2000 ಎಲೆಕ್ಟ್ರಿಕ್ ಕಾರುಗಳು ಮಾರಾಟಗೊಂಡಿದ್ದರೆ ಇನ್ನು 2017-18ರಲ್ಲಿ 1200 ಎಲೆಕ್ಟ್ರಿಕ್ ಕಾರುಗಳು ಮಾತ್ರ ಮಾರಾಟವಾಗಿದೆ.

ಆದ್ರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಕಳೆದ ವರ್ಷಕ್ಕಿಂತಾ ಈ ವರ್ಷ ಉತ್ತಮವಾದ ಮಾರಾಟವನ್ನು ಕಂಡಿದೆ ಎಂದು ಹೇಳಬಹುದು. ಏಕೆಂದರೆ 2016-17ರಲ್ಲಿ 23,000 ಸಾವಿರ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದರೆ, ಇನ್ನು 2017-18ರಲ್ಲಿ 54,800 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟವಾಗಿದೆ.

ಪ್ರಸ್ಥುತ ಭಾರತದಲ್ಲಿ ಹಲವಾರು ಎಲೆಕ್ಟ್ರಿಕ್ ವಾಹನಗಳು ಚಲಿಸುತ್ತಿದೆಯಾದರೂ ಅವುಗಳಿಗೆ ಸರಿಯಾದ ಸಂಖ್ಯೆಯಲ್ಲಿ ಚಾರ್ಜಿಂಗ್ ಸ್ಟೇಷನ್‍ಗಳು ಸಿಗುತ್ತಿಲ್ಲ, ಸಿಕ್ಕರೂ ಒಂದು ಕಾರಿನ ಪೂರ್ತಿ ಚಾರ್ಜ್‍ಗಾಗಿ ಸುಮಾರು 6-8 ಗಂಟೆಗಳ ಕಾಲ ಕಾಯಬೇಕಾಗುತ್ತದೆ.

ಇದು ಮಾತ್ರವಲ್ಲದೇ ಇಂಧನ ಆಧಾರಿತ ವಾಹನಗಳ ಬೆಲೆಗಿಂತಾ ಎಲೆಕ್ಟ್ರಿಕ್ ವಾಹನಗಳ ಬೆಲೆಯು ಅಧಿಕವೆಂದು ಹೇಳಬಹುದು. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿಯ ಬೆಲೆಯನ್ನು ಕಡಿಮೆ ಮಾಡದಿದ್ದಲ್ಲಿ ಮತ್ತು ಇನ್ನು ಹೆಚ್ಚು ಚಾರ್ಜಿಂಗ್ ಸ್ಟೇಷನ್‍ಗಳನ್ನು ತೆರೆಯದಿದ್ದಲ್ಲಿ ಈಗಿರುವ ಎಲೆಕ್ಟ್ರಿಕ್ ವಾಹನಗಳ ಮಾರಾಟದ ಸಂಖ್ಯೆಗಿಂತಾ ಇನ್ನೂ ಕಡಿಮೆಯಾಗುವುದಂತು ಪಕ್ಕ.


Click it and Unblock the Notifications








