ಎಕ್ಸ್‌ಕ್ಲೂಸಿವ್: ಬೆಂಗಳೂರಿನಲ್ಲಿ ಕಾಣಿಸಿಕೊಂಡ ವೆರ್ನಾ ಪ್ರತಿಸ್ಪರ್ಧಿ ಕಿಯಾ ಸೆರಾಟೊ ಸೆಡಾನ್...
ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸಂಸ್ಥೆಯು ಮೊದಲ ಹಂತದಲ್ಲಿಯೇ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದೆ.
ಹತ್ತಾರು ವಿಶೇಷತೆಗಳೊಂದಿಗೆ ಭಾರತದಲ್ಲಿ ಮೊದಲ ಬಾರಿಗೆ ತನ್ನ ಹೊಸ ಕಾರು ಉತ್ಪನ್ನಗಳನ್ನು ಮಾರಾಟ ಮಾಡಲು ಬೃಹತ್ ಯೋಜನೆ ರೂಪಿಸುತ್ತಿರುವ ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸಂಸ್ಥೆಯು ಮೊದಲ ಹಂತದಲ್ಲಿಯೇ ವಿವಿಧ ಮಾದರಿಯ ಕಾರು ಉತ್ಪನ್ನಗಳನ್ನು ಪರಿಚಯಿಸುವ ತವಕದಲ್ಲಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್ ಮತ್ತು ಐಷಾರಾಮಿ ಕಾರುಗಳನ್ನು ಸಿದ್ದಗೊಳಿಸಿದೆ. ಹೀಗಾಗಿ ಹೊಸ ಕಾರುಗಳ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಇದೀಗ ಹ್ಯುಂಡೈ ವೆರ್ನಾ, ಹೋಂಡಾ ಸಿಟಿ, ಮಾರುತಿ ಸಿಯಾಜ್, ಟೊಯೊಟಾ ಯಾರಿಸ್‌ಗೆ ಪ್ರತಿಸ್ಪರ್ಧಿಯಾಗಬಲ್ಲ ಸೆರಾಟೊ ಸೆಡಾನ್ ಕಾರನ್ನು ಸಹ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಬೆಂಗಳೂರಿನ ಕೊರಮಂಗಲದ ಬಳಿ ಇಂದು ಕಿಯಾ ಸೆರಾಟೊ ಸೆಡಾನ್ ಕಾರುಗಳು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಸೆಡಾನ್ ಪ್ರಿಯರನ್ನು ಆಕರ್ಷಣೆ ಮಾಡಿದ್ದಲ್ಲದೇ ಹಲವರು ಹೊಸ ಕಾರಿನ ಕುರಿತು ಮಾಹಿತಿ ತಿಳಿದುಕೊಳ್ಳಲು ಯತ್ನಿಸಿದ್ದು ಕಂಡುಬಂತು.

ಹೊಸ ಕಾರಿನ ಹೊರ ವಿನ್ಯಾಸಗಳು ಬಹುತೇಕ ವೆರ್ನಾ ಮಾದರಿಯಲ್ಲೇ ಸಿದ್ದವಾಗಿದ್ದು, ಸಿಗ್ನಿಚರ್ ಬಟರ್ ಪ್ಲೈ ಗ್ರೀಲ್, ಮುಂಭಾಗದಲ್ಲಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಮತ್ತು ಸ್ಲಿಕ್ ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ಹೊಂದಿರುವುದು ಕಂಡುಬಂದಿದೆ.

ಜೊತೆಗೆ ಕಾರಿನ ಮುಂಭಾಗದ ವಿನ್ಯಾಸಗಳಿಗೆ ಸ್ಪೋರ್ಟಿ ಲುಕ್ ನೀಡಲಾಗಿದ್ದು, ವಿನೂತನ ಮಾದರಿಯ ಫ್ರಂಟ್ ಬಂಪರ್, ದೊಡ್ಡಗ್ರಾತದ ಸೆಂಟರ್ ಏರ್ ಡ್ಯಾಮ್, ಬಂಪರ್‌ನಲ್ಲೂ ಏರ್ ವೆಂಟ್ ಸೌಲಭ್ಯವು ಕಿಯಾ ಸೆರಾಟೊ ಕಾರಿನ ಪ್ರಮುಖ ವಿನ್ಯಾಸಗಳಾಗಿವೆ.

ಇನ್ನು ಕಿಯಾ ಹೊಸ ಸೆಡಾನ್ ಕಾರುಗಳಲ್ಲಿ ಒದಗಿಸಲಾಗಿರುವ 17-ಇಂಚಿನ ಅಲಾಯ್ ಚಕ್ರಗಳು, ಗಮನಸೆಳೆಯುವ ಡೋರ್ ಹ್ಯಾಂಡಲ್ ವಿನ್ಯಾಸ, ಟರ್ನ್ ಸಿಗ್ನಲ್ ORVMs ಸೌಲಭ್ಯ, ವಿಸ್ತರಿತ ಬೂಟ್ ಸ್ಪೆಸ್ ಕಾರಿನ ಮೌಲ್ಯವನ್ನು ಹೆಚ್ಚಿಸಿವೆ.

ಹಾಗೆಯೇ ಕಾರಿನ ಒಳವಿನ್ಯಾಸಗಳು ಸಹ ಆಕರ್ಷಕವಾಗಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಎಲೆಕ್ಟ್ರಿಕ್ ಸನ್‌ರೂಫ್ ಸೌಲಭ್ಯ ಪಡೆದುಕೊಂಡಿದೆ.

ಸುರಕ್ಷೆತೆಗಾಗಿ ಸೆರಾಟೊ ಕಾರಿನಲ್ಲಿ ಎಬಿಎಸ್, ಇಬಿಟಿ, ಸೆಂಟ್ರಲ್ ಲಾಕಿಂಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, 6 ಏರ್‌ಬ್ಯಾಗ್ ಮತ್ತು ಹಿಲ್ ಅಸಿಸ್ಟ್ ಸೇರಿಸಿರುವುದು ಹೊಸ ಕಾರಿನ ಆಯ್ಕೆಗೆ ಪ್ಲಸ್ ಪಾಯಿಂಟ್ ಆಗಲಿವೆ.

ಎಂಜಿನ್ ಸಾಮರ್ಥ್ಯ
ಕಿಯಾ ಸೆರಾಟೊ ಕಾರುಗಳು 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಇಲ್ಲವೇ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದಿರಲಿವೆ.

ಕಾರಿನ ಬೆಲೆಗಳು
ಸೆರಾಟೊ ಕಾರಿನ ಬಹುತೇಕ ತಾಂತ್ರಿಕ ಅಂಶಗಳು ವೆರ್ನಾ ಮಾದರಿಯಲ್ಲೇ ಇದ್ದು, ಕೆಲವು ಪ್ರಿಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಕಾರಿನ ಬೆಲೆಯು ಎಕ್ಸ್‌ಶೋರಂಗಳ ಪ್ರಕಾರ ರೂ. 9 ಲಕ್ಷದಿಂದ 14 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಭಾರತೀಯ ಮಾರುಕಟ್ಟೆ ಇದೇ ಮೊದಲ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭ ಮಾಡುತ್ತಿರುವ ಕಿಯಾ ಮೋಟಾರ್ಸ್ ಸಂಸ್ಥೆಯು 2019ರ ಆರಂಭದಲ್ಲಿ ತನ್ನ ಮೊದಲ ಕಾರು ಮಾದರಿಯ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ಸೆಡಾನ್ ಸೆರಾಟೊ, ಐಷಾರಾಮಿ ಕಾರು ಸ್ಟಿಂಗರ್ ಹಾಗೂ 11 ಸೀಟರ್ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.


Click it and Unblock the Notifications








