ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಹಿಂದಿನ ಕೇಂದ್ರದ ಪ್ಲ್ಯಾನ್ ಏನು?
ಸತತ ಮೂರು ತಿಂಗಳಿನಿಂದ ಏರಿಕೆಯಾಗುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಂದಾಗಿ ವಾಹನ ಸವಾರರು ಕಂಗೆಟ್ಟು ಹೊಗಿದ್ದು, ಕೊನೆಗೂ ಬೆಲೆ ಇಳಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕೇಂದ್ರ ಸರ್ಕಾರದ ಅಬಕಾರಿ ಸುಂಕವನ್ನು ರೂ.1.50 ಇಳಿಕೆ ಮಾಡಿರುವುದಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಮಹತ್ವದ ಮಾಹಿತಿ ನೀಡಿದ್ದು, ಇದರೊಂದಿಗೆ ತೈಲ ಕಂಪನಿಗಳು ಸಹ ಇಂಧನಗಳ ಮೇಲೆ ಗರಿಷ್ಠ ರೂ.1 ಇಳಿಕೆ ಮಾಡಿವೆ.

ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ರೂ.2.50 ಕಡಿತವಾಗಲಿದ್ದು, ತಕ್ಷಣದಿಂದಲೇ ನೂತನ ದರ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಆದೇಶ ನೀಡಿದ್ದು, ಏರಿಕೆಯಾಗುತ್ತಿರುವ ಇಂಧನ ಬೆಲೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಸತತ ಬೆಲೆ ಏರಿಕೆಗೆ ಕಡಿವಾಣ ಹಾಕುವ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹಣಕಾಸು ಇಲಾಖೆಯ ಜೊತೆಗಿನ ಸಭೆ ನಂತರ ಬೆಲೆ ಇಳಿಕೆ ನಿರ್ಧಾರ ಕೈಗೊಳ್ಳಲಾಗಿದ್ದು, ಜನಸಾಮಾನ್ಯರಿಗೆ ಹೊರೆಯಾಗದಿರಲು ಆರ್ಥಿಕ ಸಂಕಷ್ಟದ ನಡುವೆಯೂ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ರಾಜ್ಯ ಸರ್ಕಾರಗಳು ಬೆಲೆ ಕಡಿಮೆ ಮಾಡಲಿ..!
ಇಂಧನಗಳ ಬೆಲೆ ಕಡಿತಗೊಳಿಸಿದ ನಂತರ ಸುದ್ಧಿಗೊಷ್ಠಿಯಲ್ಲಿ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಕೇಂದ್ರ ಸರ್ಕಾರವು ಕೈಗೊಂಡಿರುವ ಕ್ರಮವನ್ನು ಆಯಾ ರಾಜ್ಯ ಸರ್ಕಾರಗಳು ಸಹ ಕೈಗೊಳ್ಳುವುದು ಅವಶ್ಯಕತೆ ಇದೆ ಎಂದು ಸಲಹೆ ನೀಡಿದ್ದಾರೆ.

ರೂ.10.500 ಕೋಟಿ ಹೊರೆ
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆಯಿಂದಾಗಿ ಪ್ರಸಕ್ತ ವರ್ಷ ಕೇಂದ್ರಕ್ಕೆ ರೂ.10.500 ಕೋಟಿ ಹೊರೆ ಬೀಳಲಿದೆ ಎಂದಿರುವ ಕೇಂದ್ರ ಹಣಕಾಸು ಸಚಿವರು, ಜನಸಾಮಾನ್ಯರಿಗೆ ಬಿಸಿತುಪ್ಪವಾಗುತ್ತಿರುವ ಇಂಧನ ಬೆಲೆಗಳ ಇಳಿಕೆ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಇದೇ ವೇಳೆ ಕೇಂದ್ರ ಸರ್ಕಾರದ ಹಣಕಾಸು ಸ್ಥಿರತೆ ಬಗ್ಗೆಯೂ ಮಾತನಾಡಿದ ಅರುಣ್ ಜೇಟ್ಲಿಯವರು ಬಹುತೇಕ ಆರ್ಥಿಕ ದತ್ತಾಂಶಗಳು ಸ್ಥಿರವಾಗಿದ್ದು, ಮೊದಲ ತ್ರೈಮಾಸಿಕ ವರ್ಷದ ಫಲಿತಾಂಶಗಳು ಶೇ.8.2ರಷ್ಟು ಬೆಳವಣಿಗೆಯಲ್ಲಿದ್ದರೆ, ಹಣದುಬ್ಬರವು ಶೇ.4ಕ್ಕಿಂತಲೂ ಕಡಿಮೆಯಿದೆ ಎಂದಿದ್ದಾರೆ.

ತೈಲ ಬೆಲೆ ಏರಿಕೆಗೆ ಕೇಂದ್ರ ಕಾರಣವಲ್ಲ..!
ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ತೈಲ ಬೆಲೆಯು 76 ಡಾಲರ್ ನಲ್ಲಿ ಮಾರಾಟವಾಗುತ್ತಿದೆ. ಇದಲ್ಲದೇ ಅಮೆರಿಕ ಚೀನಾ ವಾಣಿಜ್ಯ ಸಮರ, ಇರಾನ್ ನಿಂದ ತೈಲ ಖರೀದಿಗೆ ನಿರ್ಬಂಧ ಹೇರಿದ ಪರಿಣಾಮವೇ ಡಾಲರ್ ಮುಂದೆ ರೂಪಾಯಿ ದುರ್ಬಲವಾಗುತ್ತಿದ್ದು, ರೂಪಾಯಿ ಮೌಲ್ಯ 73 ರೂ. ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ದಿನನಿತ್ಯ ಏರಿಕೆಯಿಂದಾಗಿ ಕಂಗಾಲಾಗಿದ್ದ ಗ್ರಾಹಕರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದ್ದು, ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ರಾಜ್ಯದಲ್ಲೂ ದರ ಕಡಿಮೆ ಆಗುತ್ತಾ?
ಇನ್ನು ಕಳೆದ ಬಜೆಟ್ ವೇಳೆ ಸಿಎಂ ಕುಮಾರಸ್ವಾಮಿಯವರು ಪೆಟ್ರೋಲ್ ಮೇಲೆ ರೂ. 1.14 ಮತ್ತು ಡೀಸೆಲ್ ಮೇಲೆ ರೂ. 1.12 ಅಬಕಾರಿ ಸುಂಕವನ್ನು ಹೆಚ್ಚಳಗೊಳಿಸಿ ಕೆಲವು ದಿನಗಳ ನಂತರ 2 ರೂ. ಕಡಿತಗೊಳಿಸಿದ್ದರು. ಈಗ ಪುನಃ ದರಗಳನ್ನು ಕಡಿಮೆಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಜೊತೆಗೆ ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್‌ನಲ್ಲೂ ಸಹ ಪೆಟ್ರೋಲ್ ದರವನ್ನು 2 ರೂ. ಕಡಿಮೆಗೊಳಿಸಿದ್ದವು. ಆದ್ರೆ ಕೇಂದ್ರ ಸಲಹೆಯೆಂತೆ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯದಲ್ಲಿ ಮತ್ತು ರೂ. 2.50 ಕಡಿಮೆಗೊಳಿಸಿ ಆದೇಶ ನೀಡಿವೆ.
ಭಾರತದಲ್ಲೇ ಸಿದ್ದವಾಗುತ್ತಿರುವ ಹ್ಯುಂಡೈ ಸಂಸ್ಥೆಯ ಅತಿ ಮೈಲೇಜ್ ನೀಡಬಲ್ಲ ಕೋನಾ ಎಲೆಕ್ಟಿಕ್ ಕಾರಿನ ಫೋಟೋ ಗ್ಯಾಲರಿ..


Click it and Unblock the Notifications