ಜನಪ್ರಿಯ ಹ್ಯುಂಡೈ ಗ್ರ್ಯಾಂಡ್ ಐ10 ಹ್ಯಾಚ್‌ಬ್ಯಾಕ್ ಖರೀದಿ ಮತ್ತಷ್ಟು ದುಬಾರಿ..!
ಸದ್ಯ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಉತ್ಪನ್ನಗಳ ಮೇಲಿನ ಬೆಲೆ ಏರಿಕೆ ಮಾಡುತ್ತಿದ್ದು, ಹ್ಯುಂಡೈ ಇಂಡಿಯಾ ಸಹ ಗ್ರ್ಯಾಂಡ್ ಐ10 ಕಾರುಗಳ ಮೇಲಿನ ಬೆಲೆ ಹೆಚ್ಚಳ ಮಾಡಿರುವುದು ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಹೊಸ ಬೆಲೆಗಳು ಮುಂಬರುವ ಆಗಸ್ಟ್ 1ರಿಂದಲೇ ಹೊಸ ದರ ಪಟ್ಟಿ ಅನ್ವಯವಾಗಲಿದ್ದು, ಹ್ಯುಂಡೈ ಸಂಸ್ಥೆಯ ಅಧಿಕೃತ ಮಾಹಿತಿ ಪ್ರಕಾರ ಗ್ರ್ಯಾಂಡ್ ಐ10 ಕಾರಿನ ಬೆಲೆಯನ್ನು ಶೇ. 3ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ ಪ್ರತಿ ಕಾರಿನ ಬೆಲೆಯು ರೂ.30 ರಿಂದ 35 ಸಾವಿರ ಹೆಚ್ಚುವರಿ ಬೆಲೆ ಹೊಂದಿರಲಿವೆ.

ಹ್ಯುಂಡೈ ಸಂಸ್ಥೆಯು ಸದ್ಯ ಗ್ರ್ಯಾಂಡ್ ಐ10 ಕಾರುಗಳ ಮಾರಾಟ ಮುನ್ನಡೆ ಸಾಧಿಸುತ್ತಿದ್ದು, ಟಾಪ್ 10 ಕಾರುಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಹೀಗಿರುವಾಗಲೇ ಹ್ಯುಂಡೈ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ.

ಹೆಚ್ಚುತ್ತಿರುವ ಬೀಡಿಭಾಗಗಳ ಬೆಲೆಗಳು ಮತ್ತು ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಜುಲೈ ಅಂತ್ಯದ ತನಕ ಮಾತ್ರವೇ ಹಳೆಯ ದರಗಳಲ್ಲೇ ಗ್ರ್ಯಾಂಡ್ ಐ10 ಕಾರುಗಳನ್ನ ಖರೀದಿ ಮಾಡಬಹುದುದಾಗಿದೆ.

ಅಗಸ್ಟ್ 1ರಿಂದ ಹೊಸ ದರಗಳು ಅನ್ವಯವಾಗಲಿದ್ದು, ಸದ್ಯ ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಗ್ರ್ಯಾಂಡ್ ಐ10 ಕಾರುಗಳು ಆರಂಭಿಕವಾಗಿ ರೂ. 4.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 7.52 ಲಕ್ಷಕ್ಕೆ ಮಾರಾಟವಾಗುತ್ತಿದೆ.

ಬೆಲೆ ಹೆಚ್ಚವಾದ ನಂತರ ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 4.99 ಲಕ್ಷ ದಿಂದ ರೂ. 7.85 ಲಕ್ಷಕ್ಕೆ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಗ್ರ್ಯಾಂಡ್ ಐ10 ಕಾರುಗಳಲ್ಲಿ ಒಟ್ಟು 12 ವೆರಿಯೆಂಟ್‌ಗಳೊಂದಿಗೆ 7 ವಿವಿಧ ಬಣ್ಣಗಳ ಆಯ್ಕೆಯನ್ನ ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
1.2-ಲೀಟರ್ ಪೆಟ್ರೋಲ್ ಮತ್ತು 1.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿರುವ ಗ್ರ್ಯಾಂಡ್ ಐ10 ಕಾರುಗಳು 5-ಸ್ಪೀಡ್ ಆಟೋಮ್ಯಾಟಿಕ್ ಮತ್ತು 4-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದು, ಚಾಲಕ ಮತ್ತು ಮುಂಭಾಗದ ಸಹ ಪ್ರಯಾಣಿಕನ ಬಳಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವನ್ನು ಪಡೆದುಕೊಂಡಿದೆ.

ಜೊತೆಗೆ ಸುರಕ್ಷಾ ಸೌಲಭ್ಯಗಳ ವಿಭಾಗದಲ್ಲೂ ಇತರೆ ಹ್ಯಾಚ್‌ಬ್ಯಾಕ್ ಕಾರುಗಳಿಂತ ಭಿನ್ನವಾಗಿರುವ ಗ್ರ್ಯಾಂಡ್ ಐ10 ಕಾರುಗಳು ಎಬಿಎಸ್, ಫಾಗ್ ಲ್ಯಾಂಪ್, ಆ್ಯಂಟಿ ಥೆಫ್ಟ್ ಸಿಸ್ಟಂ ಸೇರಿದಂತೆ 256-ಲೀಟರ್ ಬೂಟ್ ಸ್ಪೆಸ್‌ನೊಂದಿಗೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಲಿದೆ.

ಆದರೇ ಸದ್ಯದ ಪರಿಸ್ಥಿತಿಯಲ್ಲಿ ಗ್ರ್ಯಾಂಡ್ ಐ10 ಕಾರುಗಳ ಖರೀದಿಯು ಮತ್ತಷ್ಟು ದುಬಾರಿಯಾಗುತ್ತಿದ್ದು, ಹೋಂಡಾ, ಆಡಿ, ಮರ್ಸಿಡಿಸ್ ಬೆಂಝ್ ಮತ್ತು ಜೆಎಲ್ಆರ್ ಸಂಸ್ಥೆಯು ಬೆಲೆ ಮಾಡಿದ ಬೆನ್ನಲ್ಲೇ ಹ್ಯುಂಡೈ ಸಂಸ್ಥೆ ಕೂಡಾ ತನ್ನ ಜನಪ್ರಿಯ ಕಾರಿನ ಬೆಲೆಯನ್ನು ಹೆಚ್ಚಳ ಮಾಡಿದೆ ಎನ್ನಬಹುದು.


Click it and Unblock the Notifications








