ಭಾರತದಲ್ಲಿ 80 ಲಕ್ಷ ಕಾರುಗಳನ್ನು ಉತ್ಪಾದಿಸಿದ ಹ್ಯುಂಡೈ..
ದೇಶಿಯ ಮಾರುಕಟ್ಟೆಯಲ್ಲಿನ ಎರಡನೆಯ ಅತೀ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ 80 ಲಕ್ಷ ಕಾರುಗಳನ್ನು ಮಾರಾಟ ಮಾಡಿವೆ. ಕೊರಿಯನ್ ಮೂಲದ ಕಾರು ತಯಾರಕ ಸಂಸ್ಥೆ ಹ್ಯುಂಡೈ 8 ಮಿಲಿಯನ್ ಯೂನಿಟ್ ಕಾರುಗಳನ್ನು ತಯಾರಿಸಿದೆ.
ದೇಶಿಯ ಮಾರುಕಟ್ಟೆಯಲ್ಲಿನ ಎರಡನೆಯ ಅತೀ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ 80 ಲಕ್ಷ ಕಾರುಗಳನ್ನು ಮಾರಾಟ ಮಾಡಿವೆ. ಕೊರಿಯನ್ ಮೂಲದ ಕಾರು ತಯಾರಕ ಸಂಸ್ಥೆ ಹ್ಯುಂಡೈ 8 ಮಿಲಿಯನ್ ಯೂನಿಟ್ ಕಾರುಗಳನ್ನು ತಯಾರಿಸಿದೆ.

ಹ್ಯುಂಡೈ ಸಂಸ್ಥೆಯು 1996ರಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, 2006ರ ವೇಳೆಗೆ 1 ಮಿಲಿನಯ್ ಕಾರುಗಳನ್ನು ಮಾರಾಟ ಮಾಡಿತ್ತು. ನಂತರದ 12 ವರ್ಷಗಳಲ್ಲಿ ಧಾಖಲೆಯ ಮಾರಾಟವನ್ನು ಮಾಡಿದ್ದು, 19 ವರ್ಷದ 6 ತಿಂಗಳಿನಲ್ಲಿ ಸಂಸ್ಥೆಯು 80 ಲಕ್ಷ ಎಂದರೆ 8 ಮಿಲಿಯನ್ ಕಾರುಗಳನ್ನು ಉತ್ಪಾದಿಸಿವೆ.

ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ಕಾಲಿಟ್ಟು 20 ವರ್ಷಗಳಾಗಿದ್ದು, 53,00,967 ಯೂನಿಟ್ ಕಾರುಗಳನ್ನು ಮಾರಾಟಗೊಳಿಸಿ, 27,03,581 ಯೂನಿಟ್ ಕಾರುಗಳನ್ನು ಇನ್ನಿತರೆ ದೇಶಗಳಿಗೆ ರಫ್ತು ಮಾಡಿವೆ.

ಅಂಕಿ ಅಂಶಗಳ ಪ್ರಕಾರ ಹ್ಯುಂಡೈ ಸಂಸ್ಥೆಯು 2006 ರಲ್ಲಿ 10 ಲಕ್ಷ, 2008ರಲ್ಲಿ 20 ಲಕ್ಷ, 2010 ರಲ್ಲಿ 30 ಲಕ್ಷ, 2012ರಲ್ಲಿ 40 ಲಕ್ಷ, 2013ರಲ್ಲಿ 50 ಲಕ್ಷ, 2015ರಲ್ಲಿ 60 ಲಕ್ಷ ಕಾರುಗಳನ್ನು ಮಾರಾಟ ಮಾಡಿವೆ.

ಹ್ಯುಂಡೈ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ಕ್ರೆಟಾ, ಐ20 ಮತ್ತು ಗ್ರ್ಯಾಂಡ್ ಐ10 ಕಾರುಗಳು ಹೆಚ್ಚು ಮಾರಾಟಗೊಳ್ಳುತ್ತಿವೆ. ಭಾರತದ ಮಾರುಕಟ್ಟೆಯಲ್ಲಿ ಹ್ಯುಂಡೈ ಸಂಸ್ಥೆಯು ಶೇಕಡ 17ರಷ್ಟು ಮಾರುಕಟ್ಟೆಯ ಶೇರ್ ಅನ್ನು ಪಡೆದಿದೆ.

ಹ್ಯುಂಡೈ ಸಂಸ್ಥೆಯು ಈ ವರ್ಷ ಎಲಾಂಟ್ರಾ ಮತ್ತು ಟಸ್ಕನ್ ಪ್ರೀಮಿಯಮ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಇದಲ್ಲದೆ ಸಂಸ್ಥೆಯು ಗ್ರ್ಯಾಂಡ್ ಐ10 ಮತ್ತು ಎಕ್ಸ್ ಸೆಂಟ್ ಕಾರುಗಳ ಸ್ಪೆಷಲ್ ಎಡಿಶನ್ ಅನ್ನು ಕೂಡ ಬಿಡುಗಡೆಗೊಳಿಸಿದೆ.

ಪ್ರಸ್ಥುತ ಮಾರುಕಟ್ಟೆಯಲ್ಲಿ ಹ್ಯುಂಡಯ್ ಸಂಸ್ಥೆಯು ಇಯಾನ್, ಗ್ರ್ಯಾಂಡ್ ಐ10, ಎಲೈಟ್ ಐ20 ಮತ್ತು ಐ20 ಆಕ್ಟಿವ್, ಎಕ್ಸ್ ಸೆಂಟ್ ಕಾಂಪ್ಯಾಕ್ಟ್ ಸೆಡಾನ್, ವೆರ್ನಾ, ಎಲಾಂಟ್ರಾ ಹಾಗು ಕ್ರೆಟಾ ಮತ್ತು ಟಸ್ಕನ್ ಎಂಬ 9 ಮಾಡಲ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಮುಂದಿನ ವರ್ಷ ಮುಂದಿನ ತಲೆಮಾರಿನ ಸ್ಯಾಂಟ್ರೊ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಹ್ಯುಂಡೈ ತಮ್ಮ ಜನಪ್ರಿಯ ಕ್ರೆಟಾ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಕೆಲ ದಿನಗಳ ಹಿಂದಷ್ಟೆ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 9.43 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಹೊಸದಾಗಿ ಬಿಡುಗಡೆಗೊಂಡ ಈ ಕಾರು ಹೊಸ ವಿನ್ಯಾಸ ಮತ್ತು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಈ ಹಿಂದಿನಂತೆಯೇ 1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಇದರಲ್ಲಿ 1.4-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದ್ದು, ಇನ್ನುಳಿದ 1.6-ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಒದಗಿಸಲಾಗಿದೆ.


Click it and Unblock the Notifications








