ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

By Praveen Sannamani

ಹ್ಯುಂಡೈ ಇಂಡಿಯಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕ್ರೇಟಾ ಫೇಸ್‌ಲಿಫ್ಟ್ ಎಸ್‌ಯುವಿ ಕಾರುಗಳನ್ನ ಕಳೆದ 2 ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದು, ವಿಶೇಷ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳೊಂದಿಗೆ ಮಾರಾಟಕ್ಕಿರುವ ಹೊಸ ಕಾರುಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ. ಕೇವಲ 2 ತಿಂಗಳ ಅವಧಿಯಲ್ಲಿ ಬರೋಬ್ಬರಿ 40 ಸಾವಿರ ಕಾರುಗಳಿಗೆ ಬುಕ್ಕಿಂಗ್ ಸಲ್ಲಿಕೆಯಾಗಿದ್ದು, ಹೊಸ ಕಾರು ಖರೀದಿಗಾಗಿ ಗ್ರಾಹಕರು ಕನಿಷ್ಠ ಅಂದ್ರು 2 ರಿಂದ 3 ತಿಂಗಳ ಕಾಲ ಕಾಯಲೇಬೇಕು.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಹ್ಯುಂಡೈ ಫೇಸ್‌ಲಿಫ್ಟ್ ಕಾರುಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 9.43 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 15.03 ಲಕ್ಷಕ್ಕೆ ಖರೀದಿಗೆ ಲಭ್ಯವಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿದ್ದವಾಗಿರುವ ಹೊಸ ಕಾರುಗಳು ವಿಟಾರಾ ಬ್ರೇಝಾ ಕಾರುಗಳ ಮಾರಾಟಕ್ಕೆ ಭಾರೀ ಹೊಡೆತ ನೀಡುತ್ತಿದೆ. ಇದಕ್ಕೆ ಮತ್ತೊಂದು ನಿದರ್ಶನ ಅಂದ್ರೆ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಇದುವರೆಗೆ ಸುಮಾರು 1.50 ಲಕ್ಷ ಗ್ರಾಹಕರು ಮಾಹಿತಿ ಪಡೆದಿದ್ದರೇ 40 ಸಾವಿರ ಗ್ರಾಹಕರು ರೂ.50 ಸಾವಿರ ಮುಂಗಡ ನೀಡಿ ಕಾರು ಖರೀದಿಗಾಗಿ ತುದಿಗಾಲ ಮೇಲೆ ನಿಂತಿದ್ದಾರೆ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಕ್ರೇಟಾ ಫೇಸ್‌‌ಲಿಫ್ಟ್ ಕಾರುಗಳು ಪೆಟ್ರೋಲ್ ಎಂಜಿನ್ ಮತ್ತು ಡೀಸೆಲ್ ಎಂಜಿನ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಇವುಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಆವೃತ್ತಿಯಲ್ಲಿ 6 ವೆರಿಯೆಂಟ್‌ಗಳು ಮತ್ತು ಡೀಸೆಲ್ ಆವೃತ್ತಿಯಲ್ಲಿ 7 ವೆರಿಯೆಂಟ್‌ಗಳನ್ನು ಪರಿಚಯಿಸಲಾಗಿದೆ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಕಾರಿನ ಬೆಲೆಗಳು(ಎಕ್ಸ್‌ಶೋರಂ)

ಪೆಟ್ರೋಲ್ ಆರಂಭಿಕ ಆವೃತ್ತಿ- ರೂ.9.43 ಲಕ್ಷ

ಪೆಟ್ರೋಲ್ ಟಾಪ್ ಎಂಡ್ ಆವೃತ್ತಿ-ರೂ.13.59 ಲಕ್ಷ

ಡೀಸೆಲ್ ಆರಂಭಿಕ ಆವೃತ್ತಿ- ರೂ. 9.99 ಲಕ್ಷ

ಡಿಸೆಲ್ ಟಾಪ್ ಎಂಡ್ ಆವೃತ್ತಿ- ರೂ.15.03 ಲಕ್ಷ

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಎಂಜಿನ್ ಸಾಮರ್ಥ್ಯ

ಈ ಹಿಂದಿನಂತೆಯೇ 1.4-ಲೀಟರ್ ಡೀಸೆಲ್, 1.6-ಲೀಟರ್ ಪೆಟ್ರೋಲ್ ಮತ್ತು 1.6-ಡೀಸೆಲ್ ಎಂಜಿನ್‌ಗಳನ್ನು ಹೊಂದಿದ್ದು, ಇದರಲ್ಲಿ 1.4-ಲೀಟರ್ ಪೆಟ್ರೋಲ್ ಎಂಜಿನ್‌ಗಳು 88.7-ಬಿಎಚ್‌ಪಿ, 1.6-ಲೀಟರ್ ಪೆಟ್ರೋಲ್ ಎಂಜಿನ್‌ಗಳು 121-ಬಿಎಚ್‌ಪಿ ಮತ್ತು 1.6-ಲೀಟರ್ 126-ಬಿಎಚ್‌ಪಿ ಉತ್ಪಾದನಾ ಗುಣ ಪಡೆದಿವೆ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಇದರಲ್ಲಿ 1.4-ಲೀಟರ್ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದಿದ್ದು, ಇನ್ನುಳಿದ 1.6-ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ 6-ಸ್ಪೀಡ್ ಆಟೋ ಮ್ಯಾಟಿಕ್ ಒದಗಿಸಲಾಗಿದೆ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಹೊಸ ಕಾರುಗಳ ಪರ್ಫಾಮೆನ್ಸ್ ಹೆಚ್ಚಿಸಲು ಕ್ಲಾಸ್ ಲೀಡಿಂಗ್ ಎನ್‌ವಿಹೆಚ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇವು ಆರಾಮದಾಯಕ ಕಾರು ಚಾಲನೆಗೆ ಸಹಕಾರಿಯಾಗಿದೆ. ಆದ್ರೆ ಟಾಪ್ ಎಂಡ್ ಮಾದರಿಯಾದ ಎಸ್ಎಕ್ಸ್(ಒ) ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಬದಲಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರುವುದು ಗ್ರಾಹಕರ ಆಯ್ಕೆಗೆ ಕೊಂಚ ಹಿನ್ನಡೆಯಾಗಬಹುದು.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಒಂದು ವೇಳೆ ಟಾಪ್ ಎಂಡ್ ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಆವೃತ್ತಿಯನ್ನು ಆಯ್ಕೆ ಮಾಡುವುದಾದ್ರೆ ಅದಕ್ಕೂ ಒಂದು ಅವಕಾಶವಿದ್ದು, ಇದಕ್ಕಾಗಿ ಎಲೆಕ್ಟ್ರಾನಿಕ್ ಸನ್‌ರೂಫ್ ಮತ್ತು ವೈರ್‌ಲೇಸ್ ಚಾರ್ಜಿಂಗ್ ಸೌಲಭ್ಯಗಳು ಕಳೆದುಕೊಳ್ಳಬೇಕಾಗುತ್ತೆ. ಇಲ್ಲವೇ ಈ ಸೌಲಭ್ಯಗಳು ಬೇಕೆ ಬೇಕು ಎಂದಲ್ಲಿ ಮ್ಯಾನುವಲ್ ಆವೃತ್ತಿಯನ್ನು ಆಯ್ಕೆ ಮಾಡುವುದು ಅನಿವಾರ್ಯ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಇನ್ನು ಕಾರಿನ ಡಿಸೈನ್ ಕುರಿತು ಹೇಳುವುದಾದರೇ, ಹೊಸ ಕಾರುಗಳಲ್ಲಿ ವಿನ್ಯಾಸ ಮಾಡಲಾಗಿರುವ ಕಾಸ್ ಕ್ಲ್ಯಾಡಿಂಗ್ ಫ್ರಂಟ್ ಗ್ರಿಲ್, ನ್ಯೂ ಫ್ರಂಟ್ ಬಂಪರ್, ಹೊಸ ವಿನ್ಯಾಸ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್, ಡ್ಯುಯಲ್ ಟೋನ್ ಇಂಟಿರಿಯರ್ ಸೌಲಭ್ಯ ಪಡೆದಿದೆ.

ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..
ಹೊಸ ಕಾರುಗಳಲ್ಲಿನ ರಿಯಲ್ ಬಂಪರ್ ಕೂಡಾ ಆಕರ್ಷಣೆಯಾಗಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 7-ಇಂಚಿನ್ ಇನ್ಪೋಟೈನ್‌ಮೆಂಟ್, ಬೆಸ್ ವೆರಿಯೆಂಟ್‌ಗಳಿಂದಲೇ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೈಡ್ ಸೀಟುಗಳು, ಆರ್ಮ್ ರೆಸ್ಟ್ ವಿನ್ಯಾಸವು ಗಮನ ಸೆಳೆಯುತ್ತೆ.
ಹ್ಯುಂಡೈ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಮುಗಿಬಿದ್ದ ಎಸ್‌ಯುವಿ ಪ್ರಿಯರು..

ಖರೀದಿಗೆ ಲಭ್ಯವಿರುವ ಬಣ್ಣಗಳು

ಒಟ್ಟು 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಕ್ರೇಟಾ ಫೇಸ್‌ಲಿಫ್ಟ್ ಕಾರುಗಳನ್ನು ವೈಟ್, ಆರೇಂಜ್, ಬ್ಲ್ಯಾಕ್, ಸಿಲ್ವರ್ ಬ್ಲ್ಯೂ, ರೆಡ್, ವೈಟ್ ಆ್ಯಂಡ್ ಬ್ಲ್ಯಾಕ್(ಡ್ಯುಯಲ್ ಟೋನ್) ಮತ್ತು ಆರೇಂಜ್ ಆ್ಯಂಡ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿ ಮಾಡಬಹುದು.

Article Published On: Wednesday, August 1, 2018, 16:11 [IST]
English summary
Hyundai Creta Facelift Receives Over 40,000 Bookings In Two Months.
Read more on hyundai suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+