ಹೊಸ ವೈಶಿಷ್ಟ್ಯತೆಗಳನ್ನು ಪಡೆದ ಹ್ಯುಂಡೈ ಎಲಾಂಟ್ರಾ ಕಾರು
ದಕ್ಷಿಣ ಕೊರಿಯ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ಸದ್ದಿಲ್ಲದೇ ತಮ್ಮ ಎಲಾಂಟ್ರಾ ಕಾರಿಗೆ ಹೊಸ ಫೀಚರ್‍ಗಳನ್ನು ಮತ್ತು ಹೊಸ ಉಪಕರಣಗಳನ್ನು ಅಳವಡಿಸುವ ಯೋಜನೆಯಲ್ಲಿದೆ. ಪ್ರಸ್ಥುತ ತಲೆಮಾರಿನ ಎಲಾಂಟ್ರಾ ಕಾರು 2016ರಲ್ಲಿ ಬಿಡುಗಡೆಗೊಂಡಿದ್ದು, ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಹ್ಯುಂಡೈ ಎಲಾಂಟ್ರಾ ಕಾರು ಈಗಾಗಲೆ ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಸಂಸ್ಥೆಯು ಇದೀಗ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸಲು ಮುಂದಾಗಿದೆ. ಈ ಅಪ್ಡೇಟ್‍ನಿಂದಾಗಿ ಈ ಕಾರಿನ ಮಾರಾಟವನ್ನು ಇನ್ನಷ್ಟು ಅಧಿಕಗೊಳಿಸಲು ಹ್ಯುಂಡೈ ತವಕದಲ್ಲಿದೆ.

ಹೊಸ ವೈಶಿಷ್ಟ್ಯತೆಗಳನ್ನು ಕೇವಲ ಎಲಾಂಟ್ರ ಕಾರಿನ ಟಾಪ್ ವೇರಿಯಂಟ್ ಆದ ಎಸ್ಎಕ್ಸ್(ಒ)ನಲ್ಲಿಮಾತ್ರ ಲಭ್ಯವಿರಲಿದೆ. ಈ ಬಾರಿ ಹೊಸದಾಗಿ ಫ್ರಂಟ್ ಪಾರ್ಕಿಂಗ್ ಸೆನ್ಸಾರ್ಸ್, ಎಮರ್ಜನ್ಸಿ ಸ್ಟಾಪ್ ಸಿಗ್ನಲ್, ವೈರ್‍ಲೆಸ್ ಚಾರ್ಜಿಂಗ್, ಆಟೋ ಲಿಂಕ್ ಕನೆಕ್ಟಿವಿಟಿ ಮತ್ತು ಸ್ಲೈಡಿಂಗ್ ಆರ್ಮ್‍ರೆಸ್ಟ್ ಅನ್ನು ಅಳವಡಿಸಲಾಗಿದೆ.

ಹೊಸ ವೈಶಿಷ್ಟ್ಯತೆಗಳನ್ನು ಹೊರತು ಪಡಿಸಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್ಸ್, ಕೀಲೆಸ್ ಎಂಟ್ರಿ, ಪುಶ್ ಸ್ಟಾರ್ಟ್ ಬಟನ್, ಸನ್ರೂಫ್, ಶಾರ್ಕ್-ಫಿನ್ ಆಂಟೆನಾ, 10 ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ಸ್, ಡ್ಯುಯಲ್ ಜೋನ್ ಕ್ಲಮೇಟ್ ಕಂಟ್ರೋಲರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಹಾಗು ಸೆನ್ಸಾರ್ಸ್, ಲೆಧರ್ ಸೀಟ್ಸ್ ಮತ್ತು 10 ಸ್ಪೋಕ್ ಅಲಾಯ್ ಚಕ್ರಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಇಷ್ಟೆ ಅಲ್ಲದೇ ಎಲಾಂಟ್ರಾ ಕಾರು ಆಪಲ್ ಕಾರ್‍ಪ್ಲೇ ಮತು ಆಂಡ್ರಾಯ್ಡ್ ಆಟೊ ಕನೆಕ್ಟಿವಿಟಿಯನ್ನು ಹೊಂದಿರುವ 8 ಇಂಚಿನ ಟಚ್‍ಸ್ರ್ಕೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಹಾಗು ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍ಬ್ಯಾಗ್ಸ್, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್, ಹಿಲ್ ಸ್ಟಾರ್ಟ್ ಅಸ್ಸಿಸ್ಟ್ ಕಂಟ್ರೋಲ್ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ತಾಂತ್ರಿಕವಾಗಿ ಹ್ಯುಂಡೈ ಎಲಾಂಟ್ರಾ ಕಾರು ಪೆಟ್ರೋಲ್ ಹಾಗು ಡೀಸೆಲ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಪೆಟ್ರೋಲ್ ಆಧಾರಿತ ಕಾರುಗಳು 2.0 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 150ಬಿಹೆಚ್‍ಪಿ ಮತ್ತು 191ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಇನ್ನು ಡೀಸೆಲ್ ಆಧಾರಿತ ಎಲಾಂಟ್ರಾ ಕಾರುಗಳು 1.6 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 126ಬಿಹೆಚ್‍ಪಿ ಮತ್ತು 260ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎರಡೂ ಎಂಜಿನ್‍ಗಳನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹ್ಯುಂಡೈ ಸಂಸ್ಥೆಯು ತಮ್ಮ ಹೊಸ ತಲೆಮಾರಿನ 2019ರ ಎಲಾಂಟ್ರಾ ಕಾರನ್ನು ಯುಎಸ್ಎನಲ್ಲಿ ಅನಾವರಾಣಗೊಳಿಸಿದ್ದು, ಮತ್ತಷ್ಟು ಆಕರ್ಷಕ ವಿನ್ಯಾಸ ಮತ್ತು ಸ್ಪೋರ್ಟಿ ಲುಕ್ ಅನ್ನು ಹೊಂದಿರಲಿದೆ. ಈ ಕಾರು ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಎರಡನೆಯ ಅರ್ಧವಾರ್ಷಿಕ ಅವಧಿಯಲ್ಲಿ ಬಿಡಗಡೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಅಪ್ಡೇಟೆಡ್ ಹ್ಯುಂಡೈ ಎಲಾಂಟ್ರಾ ಕಾರುಗಳ ಬೆಲೆಯಲ್ಲಿ ಕೂಡಾ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿರುವುದಿಲ್ಲ ಎನ್ನಲಾಗಿದೆ. ಹ್ಯುಂಡೈ ಎಲಾಂಟ್ರಾ ಕಾರು ಪ್ರಸ್ಥುತ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.13.61 ಲಕ್ಷದಿಂದ ಪ್ರಾರಂಭಿಕ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.
2019ರಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಹ್ಯುಂಡೈ ಎಲಾಂಟ್ರಾ ಕಾರಿನ ಚಿತ್ರಗಳು ಇಲ್ಲಿದೆ ನೋಡಿ..


Click it and Unblock the Notifications








