ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

By Praveen Sannamani

ಹ್ಯುಂಡೈ ಸಂಸ್ಥೆಯು ಮಾರುತಿ ಸುಜುಕಿ ನಂತರ ಭಾರತದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ಬೃಹತ್ ಆಟೋ ಉತ್ಪಾದನಾ ಸಂಸ್ಥೆಯಾಗಿ ಜನಪ್ರಿಯತೆ ಸಾಧಿಸಿದ್ದು, ಅಗ್ಗದ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಕಾರುಗಳನ್ನ ಅಭಿವೃದ್ಧಿ ಮಾಡುವಲ್ಲಿ ಹ್ಯುಂಡೈ ಈಗಾಗಲೇ ಯಶಸ್ವಿಯಾಗಿದೆ. ಹೀಗಾಗಿಯೇ ತನ್ನ ಜನಪ್ರಿಯ ಸ್ಯಾಂಟ್ರೋ ಕಾರುಗಳನ್ನು ಮತ್ತೆ ಮರುಬಿಡುಗಡೆಗಾಗಿ ಸಿದ್ದಗೊಳಿಸುತ್ತಿದ್ದು, ಇದೇ ವೇಳೆ ಗ್ರಾಹಕರ ನೆಚ್ಚಿನ ಇಯಾನ್ ಕಾರುಗಳ ಮಾರಾಟವನ್ನು ಹಿಂಪಡೆಯುವ ಸುಳಿವು ನೀಡಿದೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಹೌದು, ಹ್ಯುಂಡೈ ಸಂಸ್ಥೆಯು ಸದ್ಯ ಎಂಟ್ರಿ ಲೆವಲ್ ಹ್ಯಾಚ್‌ಬ್ಯಾಕ್ ಮಾದರಿಯಾದ ಇಯಾನ್ ಕಾರುಗಳ ಮಾರಾಟದಲ್ಲಿ ಅಷ್ಟಾಗಿ ಪ್ರಗತಿ ಕಂಡುಬರದ ಹಿನ್ನೆಲೆಯಲ್ಲಿ ಇಯಾನ್ ಕಾರುಗಳ ಮಾರಾಟವನ್ನು ಕೈಬಿಡಲು ನಿರ್ಧರಿಸಲಾಗಿದ್ದು, ಆ ಸ್ಥಾನಕ್ಕೆ ನ್ಯೂ ಜನರೇಷನ್ ಸ್ಯಾಂಟ್ರೋ ಕಾರುಗಳು ಲಗ್ಗೆಯಿಡಲಿವೆ ಎನ್ನುವ ಮಹತ್ವದ ಮಾಹಿತಿ ಲಭ್ಯವಾಗಿದೆ. ಇದೇ ಕಾರಣಕ್ಕೆ ಇಯಾನ್ ಕಾರುಗಳ ಮಾರಾಟ ಮೇಲೆ ಅಷ್ಟಾಗಿ ಗಮನಹರಿಸದ ಹ್ಯುಂಡೈ ಸಂಸ್ಥೆಯು ನ್ಯೂ ಸ್ಯಾಂಟ್ರೋ ಮೂಲಕ ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುವ ನೀರಿಕ್ಷೆಯಲ್ಲಿದೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಪ್ರಸ್ತುತ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 3.33 ಲಕ್ಷದಿಂದ ರೂ.4.07 ಲಕ್ಷ ಬೆಲೆ ಹೊಂದಿರುವ ಇಯಾನ್ ಕಾರುಗಳು, 998ಸಿಸಿ ಪೆಟ್ರೋಲ್ ಎಂಜಿನ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 20.3 ಕಿ.ಮಿ ಮೈಲೇಜ್ ಸಾಮರ್ಥ್ಯವನ್ನು ಪಡೆದುಕೊಂಡಿವೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಆದರೂ ಮಾರುಕಟ್ಟೆಯಲ್ಲಿ ಕಾರು ಖರೀದಿದಾರರ ಬೇಡಿಕೆಗಳು ಬದಲಾಗುತ್ತಿದ್ದು, ಇದೇ ಉದ್ದೇಶದಿಂದ ಮಾರಾಟದಿಂದ ಕೈಬಿಡಲಾಗಿದ್ದ ಸ್ಯಾಂಟ್ರೋ ಕಾರುಗಳು ಮಹತ್ವದ ಬದಲಾವಣೆಗಳೊಂದಿಗೆ ಮರಳಿ ಮಾರುಕಟ್ಟೆಗೆ ತರಲಾಗುತ್ತಿದೆ. ಹೊಸ ಸ್ಯಾಂಟ್ರೋ ಕಾರುಗಳು ಹಳೆಯ ಸ್ಯಾಂಟ್ರೋ ಕಾರುಗಳಿಂತ ಸಾಕಷ್ಟು ಬದಲಾಗಿದ್ದು, ಇದು ದೇಶದಲ್ಲಿ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ತವಕದಲ್ಲಿದೆ ಎನ್ನಬಹುದು.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ನ್ಯೂ ಸ್ಯಾಂಟ್ರೋ ಬಿಡುಗಡೆ ಯಾವಾಗ?

ಹೊಸ ಸ್ಯಾಂಟ್ರೊ ಕಾರುಗಳನ್ನು ಎಹೆಚ್2 ಎಂಬ ಕೋಡ್ ವಲ್ಡ್ ಹೆಸರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದ್ದು, ಚೆನ್ನೈ ಹೊರವಲಯದಲ್ಲಿ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಬಗೆಗೆ ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ಕೈಗೊಂಡಿದೆ. ಈ ನಡುವೆ ಹೊಸ ಸ್ಯಾಂಟ್ರೊ ಕಾರುಗಳಿಗೆ ವಿನೂತನವಾದ ಹೆಸರಿನೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದ್ದು, ಹೊಸ ಕಾರಿನ ಹೆಸರು ಅಕ್ಟೋಬರ್ 4ರಂದು ಹ್ಯುಂಡೈ ಸಂಸ್ಥೆಯು ಬಹಿರಂಗಗೊಳಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಸ್ಟಾಟ್ ಟೆಸ್ಟಿಂಗ್ ವೇಳೆ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ ಉತ್ತಮ ಪ್ರದರ್ಶನ ತೊರುತ್ತಿದ್ದು, ಅಧಿಕ ಮೈಲೇಜ್ ಮತ್ತು ಅತ್ಯುತ್ತಮ ಬ್ರೇಕಿಂಗ್ ಸೌಲಭ್ಯಗಳು ಗ್ರಾಹಕರ ನಂಬಿಕೆಗೆ ವಿಶ್ವಾಸರ್ಹವಾಗಿವೆ ಎಂಬ ಮಾಹಿತಿಗಳು ದೊರೆತಿವೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಮಧ್ಯಮ ವರ್ಗಗಳ ಸ್ನೇಹಿಯಾಗಿರುವ ಉತ್ತಮ ಹ್ಯಾಚ್‌ಬ್ಯಾಕ್ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಶಕ್ತವಾಗಿರುವ ನೆಕ್ಸ್ಟ್ ಜನರೇಷನ್ ಹ್ಯುಂಡೈ ಸ್ಯಾಂಟ್ರೊ, 800 ಸಿಸಿ ಪೆಟ್ರೋಲ್ ಎಂಜಿನ್ ಇಲ್ಲವಾದ್ರೆ 1.0-ಲೀಟರ್ ಎಂಜಿನ್ ಪಡೆದುಕೊಳ್ಳಲಿದೆ. ಆದರೇ ಹೊಸ ಕಾರುಗಳಲ್ಲಿ ಡಿಸೇಲ್ ಆವೃತ್ತಿಯನ್ನು ಪರಿಚಯಿಸದಿರಲು ಹ್ಯುಂಡೈ ನಿರ್ಧರಿಸಿದೆ ಎನ್ನಲಾಗಿದೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಇದರ ಜೊತೆಗೆ ಎಎಂಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಕೂಡಾ ಹೊಂದುವ ಸಾಧ್ಯತೆಗಳಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಐ10 ಮಾದರಿಯಲ್ಲೇ ಒಳ ವಿನ್ಯಾಸದ ಸೌಲಭ್ಯಗಳನ್ನು ಪಡೆಯಲಿವೆ ಎನ್ನಲಾಗುತ್ತಿದೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಪ್ರಯಾಣಿಕ ಸುರಕ್ಷತೆಗಾಗಿ ಹೊಸ ಕಾರುಗಳಲ್ಲಿ ಎಬಿಎಸ್ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯಗಳನ್ನು ಸಹ ಆಯ್ಕೆ ರೂಪದಲ್ಲಿ ನೀಡಲಿದ್ದು, ಪಾರ್ಕಿಂಗ್ ಸೆನ್ಸಾರ್, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ವಿಶೇಷ ವಿನ್ಯಾಸದ ಟಾಲಿ ಬಾಯ್ ಡಿಸೈನ್ ಹೊಂದಿರಲಿವೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ (ಅಂದಾಜು)

ಸ್ಯಾಂಟ್ರೊ ಹೊಸ ಕಾರುಗಳನ್ನ ದೀಪಾವಳಿ ಹೊತ್ತಿಗೆ ಬಿಡುಗೊಳಿಸುವ ಬಗ್ಗೆ ಮಾಹಿತಿಗಳಿದ್ದು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರಂ ಪ್ರಕಾರ ರೂ.4 ಲಕ್ಷದಿಂದ ರೂ. 4.60 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಇಯಾನ್ ಕಾರುಗಳ ಮಾರಾಟಕ್ಕೆ ಗುಡ್‌ ಬೈ ಹೇಳುತ್ತಿರುವ ಹ್ಯುಂಡೈ ಮುಂದಿನ ಪ್ಲ್ಯಾನ್ ಏನು?

ಹೀಗಾಗಿ ಹ್ಯುಂಡೈ ಸಂಸ್ಥೆಯು ಮುಂದಿನ ಎರಡು ತಿಂಗಳ ಅವಧಿಗೆ ಮಾತ್ರವೇ ಇಯಾನ್ ಕಾರುಗಳ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡುವ ಸಾಧ್ಯತೆಗಳಿದ್ದು, ನ್ಯೂ ಸ್ಯಾಂಟ್ರೋ ಕಾರುಗಳ ಮೇಲೆ ಹೆಚ್ಚಿನ ಗಮನ ಹರಿಸಲಿದೆ ಎನ್ನಬಹುದು.

Article Published On: Monday, August 6, 2018, 10:57 [IST]
English summary
New Hyundai Santro Will Be A Replacement To The Entry-Level Eon Hatchback.
Read more on hyundai santro hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+