ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಹ್ಯುಂಡೈ ತನ್ನ ಐ20 ಆಕ್ಟಿವಾ ಫೇಸ್‌ಲಿಫ್ಟ್ ಹ್ಯಾಚ್ ಬ್ಯಾಕ್ ಸುಧಾರಿತ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗಿದ್ದು, ಫೆಬ್ರುವರಿ 7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಕಾರು ಮಾದರಿಯು ಅನಾವರಣಗೊಳ್ಳಲಿದೆ.

By Praveen

Recommended Video

Auto Rickshaw Explodes In Broad Daylight

ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿ ಹ್ಯುಂಡೈ ತನ್ನ ಐ20 ಆಕ್ಟಿವಾ ಫೇಸ್‌ಲಿಫ್ಟ್ ಹ್ಯಾಚ್ ಬ್ಯಾಕ್ ಸುಧಾರಿತ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗಿದ್ದು, ಫೆಬ್ರುವರಿ 7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್ ಪೋದಲ್ಲಿ ಹೊಸ ಕಾರು ಮಾದರಿಯು ಅನಾವರಣಗೊಳ್ಳಲಿದೆ.

ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಹ್ಯುಂಡೈ ಐ20 ಆಕ್ಟಿವಾ ಫೇಸ್‌ಲಿಫ್ಟ್ ಹ್ಯಾಚ್‌ಬ್ಯಾಕ್ ಕಾರಿನ ಬಿಡುಗಡೆಗೂ ಮುಂಚಿತವಾಗಿ ನವೀಕರಿಸಿದ ಕಾರನ್ನು ಪರೀಕ್ಷೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ತೆಗೆದ ರಹಸ್ಯ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಈ ಹಿಂದೆ ಫೇಸ್‌ಲಿಫ್ಟ್ ಆಕ್ಟಿವಾ ಐ20 ಕಾರಿನ ಪರೀಕ್ಷೆಯನ್ನು ನಡೆಸಿದ್ದ ಹ್ಯುಂಡೈ ಇಂಡಿಯಾ ಸಂಸ್ಥೆಯು ಹಿಂದಿನ ಮಾದರಿಗಿಂತ ಹೆಚ್ಚು ಬದಲಾವಣೆ ತಂದಿದ್ದು, ಬರಲಿರುವ ಫೋರ್ಡ್ ಫ್ರಿ ಸ್ಟೈಲ್ ಕ್ರಾಸ್ ಓವರ್ ಕಾರಿನ ಜೊತೆ ತೀವ್ರ ಪ್ರತಿಸ್ಪರ್ಧಿ ನಡೆಸಲಿದೆ.

ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಮುಂಭಾಗದ ಬಂಪರ್ ಮತ್ತು ನವೀಕರಿಸಿದ ಹೆಡ್ ಲೈಟ್‌ಗಳು ಈ ಫೇಸ್‌ಲಿಫ್ಟ್ ಕಾರಿನಲ್ಲಿ ಬದಲಾವಣೆ ಮಾಡಲಾಗಿದ್ದು, ಕಾರಿನ ಬದಿ ಹಾಗು ಚಾವಣಿ ಯಾವುದೇ ಬದಲಾವಣೆ ಕಂಡಿಲ್ಲ.

ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಆದ್ರೆ ಆಕ್ಟಿವಾ ಐ20 ಫೇಸ್ ಲಿಫ್ಟ್ ಕಾರಿನ ಮುಂಭಾಗದಲ್ಲಿ ಇತ್ತೀಚಿಗೆ ಬಿಡುಗಡೆಯಾದ ಗ್ರಾಂಡ್ ಐ10 ಮತ್ತು ಎಕ್ಸ್ಎಂಟ್ ಫೇಸ್ ಲಿಫ್ಟ್ ಕಾರುಗಳಲ್ಲಿ ಇರವಂತಹ ಮರುವಿನ್ಯಾಸಗೊಂಡಿರುವ ಫ್ಯಾಮಿಲಿ ಗ್ರಿಲ್ ಈ ಕಾರಿನಲ್ಲೂ ಕಾಣಬಹುದಾಗಿದೆ.

ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಹೊಸ ಕಾರಿನ ಚಿತ್ರಗಳು ಗಮನಿಸಿದರೆ, ಸಾಮಾನ್ಯವಾಗಿ ಉನ್ನತ ಶ್ರೇಣಿಯ ಕಾರುಗಳಲ್ಲಿ ನೀಡಲಾಗುವ ಡೈಮಂಡ್ ಕಟ್ ಮಿಶ್ರಲೋಹದ ಚಕ್ರಗಳನ್ನು ಈ ಹೊಸ ಕಾರು ಹೊಂದಿದೆ.

ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಹೊಂದಲಿರುವ ಐ20 ಆಕ್ಟಿವಾ ಫೇಸ್‌ಲಿಫ್ಟ್ ಕಾರು ಮಾದರಿಗಳು, ಪೆಟ್ರೋಲ್ ಆವೃತ್ತಿಯಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಡೀಸೆಲ್ ಆವೃತ್ತಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿದೆ.

ಬಿಡುಗಡೆಗೆ ಸಿದ್ದವಾದ ಹ್ಯುಂಡೈ ವಿನೂತನ ಐ20 ಆಕ್ಟಿವಾ ಫೇಸ್‌ಲಿಫ್ಟ್

ಇನ್ನು ಹೊಸ ಕಾರು ಸುಧಾರಿ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆಯಬಹುದು ಎನ್ನಲಾಗಿದ್ದು, ಇದನ್ನು ಹೊರತುಪಡಿಸಿ ಈ ಫೇಸ್‌ಲಿಫ್ಟ್ ಕಾರಿನ ಒಳಭಾಗವು ಯಾವುದೇ ಬದಲಾವಣೆ ಕಂಡುಬಂದಿಲ್ಲ.

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Saturday, February 3, 2018, 10:59 [IST]
English summary
Hyundai i20 Active (Crossover) Facelift Launch Details Revealed.
Read more on hyundai auto expo 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+